ಯಶವಂತನಗರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಮಹಿಳೆಯರ ಪ್ರತಿಭಟನೆ.

0
194

ಸಂಡೂರು:25:ಏ:- ತಾಲೂಕಿನ ಯಶವಂತನಗರ ಗ್ರಾಮದಲ್ಲಿನ ಮಹಿಳೆಯರು ಸೋಮವಾರ ಗ್ರಾಮ ಪಂಚಾಯ್ತಿ ಸದಸ್ಯರುಗಳು ನಮ್ಮ ವಾರ್ಡ್ ನಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಹಾಗೆಯೇ ನಾವು ನಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡಲು ಪಂಚಾಯಿತಿಗೆ ಬಂದಾಗ ಪಿಡಿಒ ಸೇರಿದಂತೆ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರುಗಳು ಇಲ್ಲದೆ ಇರುವುದನ್ನು ಖಂಡಿಸಿ ಪಂಚಾಯತಿ ಮುಂದೆಯೇ ಮಹಿಳೆಯರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಆವರಣದ ಮುಂದೇ ಅಲ್ಲಿಯೇ ಊಟ ಮಾಡುವುದರ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸ್ಥಳೀಯರಾದ ಬೋಸಮ್ಮ, ವಡ್ಡರ ರೇಣುಕಮ್ಮ, ಗಂಡೇಮ್ಮ, ಗಂಗಮ್ಮ, ಕಾಶಮ್ಮ, ಚಿತ್ತರ ಮಾರೆಮ್ಮ, ಪಾರ್ವತಿ, ಉಮಕ್ಕ, ಮಹಾದೇವಿ, ರೇಣುಕ ಇತರೆ 30 ಜನ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಷಯ ಕುರಿತಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಕರೆ ಮಾಡಲಾಗಿ ಕರೆಯನ್ನು ಸ್ವೀಕರಿಸಿ ಉತ್ತರವನ್ನು ನೀಡದೆ ಬೇಜವಾಬ್ದಾರಿತನದಿಂದ ಫೋನ್ ಕಟ್ ಮಾಡುತ್ತಿದ್ದರು.

ಮಾನ್ಯ ದಕ್ಷ ಹಾಗೂ ಪ್ರಾಮಾಣಿಕ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಬಿ.ಎಂ.ದಾರುಕೇಶ್ ಅವರು ಖುದ್ದು ಯಶವಂತನಗರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮದಲ್ಲಿನ ವಾರ್ಡ ನ ಸಮಸ್ಯೆಗಳಿಗೆ ಸ್ಪಂದಿಸಿ,ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಾಬ್ದಾರಿತನದಿಂದ ಕಾರ್ಯ ನಿರ್ವಹಿಸುತ್ತಿರುವ ಪಿಡಿಓ ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರತಿಭಟನಾ ನಿರತ ಮಹಿಳೆಯರು ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here