ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಜಿಂದಾಲ್ ಗೆ ಭೂಮಿ ನೀಡಬೇಕು: ಶಾಸಕ ಈ ತುಕಾರಾಂ ಆಗ್ರಹ

0
124

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಸ್ಥಾಪನೆಗೊಂಡಿರುವ ಜಿಂದಾಲ್ ಕಂಪನಿಗೆ ಪಕ್ಷಭೇದ ಮರೆತು ಎಲ್ಲರೂ ಕಾನೂನಾತ್ಮಕ ಬೆಂಬಲ ನೀಡುವುದು ಅಗತ್ಯವಾಗಿದೆ
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಜಿಂದಾಲ್ ಕಂಪನಿಗೆ ಭೂ ಪರಭಾರೆ ಮಾಡುವ ಕಾರ್ಯ ಹಲವು ವರ್ಷಗಳಿಂದ ಬಾಕಿ ಉಳಿದಿದೆ ಹಿಂದುಳಿದ ಕಲ್ಯಾಣ ಕರ್ನಾಟಕ ಮತ್ತು ಬಳ್ಳಾರಿ ಭಾಗದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಜಿಂದಾಲ್ ಗೆ ಭೂಮಿ ಪರಭಾರೆ ಮಾಡಬೇಕೆಂದು ಶಾಸಕರ ಆಗ್ರಹಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

2007ರಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಲೀಸ್ ಕಮ್ ಸೇಲ್ ಡೀಡ್ ಪ್ರಕಾರ ಜಿಂದಾಲ್ ಕಂಪನಿಗೆ 3667 ಎಕರೆ ಪ್ರದೇಶವನ್ನು ಕೊಡುವುದಾಗಿ ಒಪ್ಪಿಕೊಂಡಿತ್ತು ಹಾಗೂ ಉಪ ಮುಖ್ಯಮಂತ್ರಿಗಳಾಗಿ ಇಂದು ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಅಧಿಕಾರದಲ್ಲಿದ್ದರು ಎಂದರು.

72 ಸಾವಿರ ಕೋಟಿ ಬಂಡವಾಳವನ್ನು ಹೂಡಿ, ವಾರ್ಷಿಕವಾಗಿ 7000 ಕೋಟಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುವ ಜಿಂದಾಲ್ ಕಂಪನಿಯವರು ಈ ಭಾಗದ ಜನರಿಗೆ ಸಹಕಾರಿ ಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು.

1991 ರಲ್ಲಿ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ತಂದ ದಿವಂಗತ ಪಿವಿ ನರಸಿಂಹ ರಾವ್ ನೇತೃತ್ವದ ಆರ್ಥಿಕ ಸುಧಾರಣಾ ಕ್ರಮಗಳ ಫಲವಾಗಿ ಜಿಂದಾಲ್ ಕಂಪನಿಯು ಸಂಡೂರಿನ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ ಉಕ್ಕು ಕಾರ್ಖಾನೆ ಸ್ಥಾಪನೆ ಯಾಗಲು ಕಾರಣವಾಯಿತು ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮದಲ್ಲಿ ಕೈಗಾರಿಕೆಗಳ ಸ್ಥಾಪನೆ ಕೂಡ ಸೇರಿದೆ.
ಜಿಂದಾಲ್ ಸಂಸ್ಥೆಯು ನೂತನ ತಂತ್ರಜ್ಞಾನ ಮತ್ತು ಪರಿಣಾಮಕಾರಿ ಪ್ರಕ್ರಿಯೆಗಳನ್ನು ಅನ್ವಯಿಸಿ ವಿಶ್ವದರ್ಜೆಯ ಉಕ್ಕು ಸ್ಥಾವರ ನಿರ್ಮಿಸಿ ಇಂದು 12 ಮಿಲಿಯನ್ ಟನ್ ನಿಂದ 24 ಮಿಲಿಯನ್ ಟನ್ ಸಾಮರ್ಥ್ಯದ ಸ್ಥಾವರ ನಿರ್ಮಾಣಕ್ಕೆ ಯೋಜನೆ ರೂಪಿಸಿದೇ 1994 ರಿಂದ ಜಿಂದಾಲ್ ಸಂಸ್ಥೆಯು ಕಳೆದ 21 ವರ್ಷಗಳಲ್ಲಿ ರಾಜ್ಯದ ಬೊಕ್ಕಸಕ್ಕೆ 95 ಸಾವಿರ ಕೋಟಿ ತೆರಿಗೆ ಪಾವತಿಸಿದೆ ಹಾಗೂ ಜಿಂದಾಲ್ ಸ್ಥಾವರವು 25 ಸಾವಿರಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗಾವಕಾಶಗಳನ್ನು
ಸೃಷ್ಟಿಸಿದೆ ಪರೋಕ್ಷವಾಗಿ ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಈ ಕಂಪನಿಯಿಂದ ಉಪಯೋಗವಾಗಿದೆ ಎಂದು ನುಡಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಜನರು ಈ ಭೂ ಪರಭಾರೆ ವಿಚಾರದಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ . ಬಿಜೆಪಿ ಪಕ್ಷದಲ್ಲಿದ್ದ ಪ್ರಭಾವಿಗಳು ಜಿಲ್ಲೆಯ ಸಾವಿರಾರು ಎಕರೆ ಪ್ರದೇಶವನ್ನು ಬ್ರಹ್ಮಿಣಿ ಸ್ಟೀಲ್ಸ್ ಸ್ಟೀಲ್ ಸ್ಥಾಪಿಸುವುದಾಗಿ ಖರೀದಿಸಿದ ಭೂಮಿಯನ್ನು ನಂತರ ಖಾಸಗಿ ಕಂಪನಿಗಳಿಗೆ ಮಾರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಅದಲ್ಲದೆ ಆರೆಸೆಲ್ ಮಿತ್ತಲ್ ಹಾಗೂ ಕೇಂದ್ರ ಸರ್ಕಾರದ ಒಡೆತನದ ಎನ್ಎಂ ಡಿಸಿ ಕಂಪನಿಯವರು ಖರೀದಿಸಿರುವ ರೈತರ ಭೂಮಿಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ ಹಾಗಿದ್ದಮೇಲೆ ಆ ಭೂಮಿಯನ್ನು ರೈತರಿಗೆ ಹಿಂದಿರುಗಿಸಿ ಎಂದು ಆಡಳಿತ ಪಕ್ಷಕ್ಕೆ ಸವಾಲು ಹಾಕಿದರು.

ಜಿಂದಾಲ್ ಕಂಪನಿಯವರು ಸರ್ಕಾರಕ್ಕೆ 20 ಸಾವಿರ ಕೋಟಿ ಬಾಕಿ ಹಣ ನೀಡುವುದು ಇದೆ ಎಂದು ಕಾಂಗ್ರೆಸ್ ಪಕ್ಷದ ಹೆಚ್ ಕೆ ಪಾಟೀಲ್ ರವರು ಹೇಳಿರುವ ದಾಖಲೆ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕ ಆ ವಿಷಯ ಕೋರ್ಟ್ ಮೆಟ್ಟಿಲೇರಿರುವುದರಿಂದ ನ್ಯಾಯಾಲಯ ಹೇಳಿದಂತೆ ನಡೆದುಕೊಳ್ಳಬೇಕಾಗುತ್ತದೆ ಎಂಬ ಜಾಣ ಉತ್ತರ ನೀಡಿದರು. ಉದ್ಯೋಗ ನೀಡುವಿಕೆಯಲ್ಲಿ ತಾರತಮ್ಯವಾಗಿದೆ ಯಾರ್ಯಾರಿಗೆ ಯಾವ ಹುದ್ದೆ ಸಿಕ್ಕಿದೆ ಎಂಬುದನ್ನು ತಿಳಿಸಿ ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಒಂದು ವಾರಗಳ ಕಾಲ ಗಡುವು ತೆಗೆದುಕೊಂಡು ಮಾಹಿತಿ ನೀಡುವುದಾಗಿ ನುಡಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕೆಎಸ್ಎಲ್ ಸ್ವಾಮಿ
ತಾಲೂಕ ಪಂಚಾಯಿತಿ ಅಧ್ಯಕ್ಷ ಫರ್ಜಾನ ಗೌಸ್ ಅಜ್ಮ , ಉಪಾಧ್ಯಕ್ಷೆ ತಿರುಕಮ್ಮ ವೆಂಕಟೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಿತಾ ವಸಂತಕುಮಾರ್, ಜಿಪಂ ಸದಸ್ಯ ಅಕ್ಷಯ ಲಾಡ್, ಜನಾರ್ದನ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿತ್ರಿಕೆ ಸತೀಶ್ ಕುಮಾರ್ , ಏಕಾಂಬ್ರಪ್ಪ, ಆಶಾಲತಾ ಸೋಮಪ್ಪ ಇತರರಿದ್ದರು.

LEAVE A REPLY

Please enter your comment!
Please enter your name here