ಜಿಂದಾಲ್ ಸಂಸ್ಥೆಯಿಂದ ಒಂದು ಸಾವಿರದ ಎರಡು ನೂರು ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆಗೆ ಚಾಲನೆ ಹೆಮ್ಮೆಯ ವಿಷಯ: ಉಪ ನಿರ್ದೇಶಕ ಡಾ.ಅನಿಲ್,

0
206

ಸಂಡೂರು: ಡಿ:16: ಪಟ್ಟಣದ ಗುರು ಭವನದಲ್ಲಿ ಜೆ.ಎಸ್.ಡಬ್ಲ್ಯೂ ಫೌಂಡೇಶನ್ ವತಿಯಿಂದ ಆಯೋಜಿಸಲಾದ ನಿ-ಕ್ಷಯ ಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ಜರುಗಿತು,ಕಾರ್ಯಕ್ರಮದ ಉದ್ಘಾಟನೆಗಾಗಿ ಆಗಮಿಸಿದ ಡಾ.ಅನಿಲ್,ಉಪ ನಿರ್ದೇಶಕರು,ರಾಜ್ಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಆರೋಗ್ಯ ಸೌಧ,ಬೆಂಗಳೂರು ಇವರು ಇಂತಹ ಒಂದು ಮಹತ್ವದ ಕಾರ್ಯದಲ್ಲಿ ಭಾಗಿಯಾಗಿದ್ದು ಹೆಮ್ಮೆಯಾಗಿದೆ, ಇಷ್ಟು ರೋಗಿಗಳನ್ನು ದತ್ತು ಸ್ವೀಕಾರ ಮಾಡಿಕೊಂಡಿದ್ದು ಜಿಂದಾಲ್ ಸಂಸ್ಥೆಯ ಹೆಗ್ಗಳಿಕೆ ಎಂದು ನುಡಿದರು,

ಈ ಸಂದರ್ಭದಲ್ಲಿ ಅಧ್ಯಕ್ಷೆ ವಹಿಸಿದ್ದ ಜೆ.ಎಸ್.ಡಬ್ಲ್ಯೂ ಫೌಂಡೇಶನ್ ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಟ್ ಅವರು ಮಾತನಾಡಿ “ಕ್ಷಯರೋಗ ಮುಕ್ತ ಬಳ್ಳಾರಿ” ಮಾಡಲು ನಮಗೆ ದೊರೆತ ಭಾಗ್ಯವೆ ಸರಿ, ರೋಗ ಗುಣಮುಖವಾಗಲು ಪೌಷ್ಟಿಕ ಆಹಾರದ ಅವಶ್ಯಕತೆ ಇರುತ್ತದೆ, ಕೈಜೋಡಿಸಲು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ ಅವರು ಬೇಡಿಕೆಯನ್ನು ಇಟ್ಟರು, ಪೂರ್ಣ ಜಿಲ್ಲೆಯ ಎಲ್ಲಾ ರೋಗಿಗಳನ್ನು ದತ್ತು ತೆಗೆದುಕೊಂಡು ಒಂದು ವರ್ಷ ಪೂರ್ತಿ ಬರುವ ರೋಗಿಗಳಿಗೆ ಆರು ತಿಂಗಳ ಕಾಲ ಕಿಟ್ ನೀಡಲು ಸಂಸ್ಥೆ ಮುಂದಾಗಿದೆ, ಇದೊಂದು ಮಹತ್ತರವಾದ ಕಾರ್ಯ, ರೋಗಿಗಳು ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರ ಸೇವಿಸಿ ಬೇಗ ಗುಣಮುಖರಾಗಲಿ, ಮತ್ತು ಮಂದಿನ ದಿನಗಳು ಸಾರ್ವಜನಿಕರಿಗೆ ಸೇವೆ ನೀಡಲು ಅವಕಾಶ ಸಿಗಲಿ ಎಂದು ಹಾರೈಸಿದರು,

ಕೈಜೋಡಿಸಿದ್ದಕ್ಕೆ ಡಾ.ಇಂದ್ರಾಣಿ ಅವರು ಫೌಂಡೇಶನ್‌ಗೆ ಕೃತಜ್ಞತೆಗಳನ್ನು ತಿಳಿಸಿದರು, ಕಾರ್ಯಕ್ರಮದಲ್ಲಿ ಸಿ.ಎಸ್.ಆರ್ ಮುಖ್ಯಸ್ಥ ಪೆದ್ದನ್ನ,ಪ್ರಕಾಶ್,ರಾಜೇಂದ್ರ, ಡಬ್ಲ್ಯೂ. ಹೆಚ್.ಓ ಕನ್ಸಲ್ಟಂಟ್ ಡಾ.ಹಂಸವೇಣಿ ಮಾತನಾಡಿದರು,

ಈ ಸಂದರ್ಭದಲ್ಲಿ ಡಾ.ಸಂಗೀತಾ, ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಭರತ್ ಕುಮಾರ್,ಡಾ.ಅಕ್ಷಯ್,ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಜಿಲ್ಲಾ ಟಿ.ಬಿ ಘಟಕದ ಗಿರೀಶ್ ಕುಮಾರ್, ಉದಯ್ ಕುಮಾರ್, ಪಂಪಾಪತಿ,ಅರ್ಚನಾ,ಕೇಶವ,ಬಸವರಾಜ,ಚಂದ್ರು,ಮರೇಗೌಡ,ಸುನಿತಾ,ಅನುಷಾ,ಆಶಾ ಕಾರ್ಯಕರ್ತೆಯರು ಮತ್ತು150 ಕ್ಕೂ ಹೆಚ್ಚು ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವರು ಹಾಜರಿದ್ದರು

LEAVE A REPLY

Please enter your comment!
Please enter your name here