ಜನರ ಸಮಸ್ಯೆಗಳಿಗೆ ದನಿಯಾದ ಸರಕಾರ ವಿವಿಧೆಡೆ ತಹಸೀಲ್ದಾರರ ಗ್ರಾಮವಾಸ್ತವ್ಯ;ಜನರ ಸಮಸ್ಯೆಗಳಿಗೆ ಸ್ಪಂದನೆ

0
95

ಬಳ್ಳಾರಿ,ಫೆ.20 :ಸರಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೊಸಪೇಟೆ ತಾಲೂಕಿನ ತಿಮ್ಮಲಾಪುರದಲ್ಲಿ ಗ್ರಾಮವಾಸ್ತವ್ಯ ನಡೆಸಿ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸ್ಪಂದಿಸಿದಂತೆ ಆಯಾ ತಾಲೂಕಿನ ತಹಸೀಲ್ದಾರರು ಸಹ ತಮ್ಮ ತಮ್ಮ ತಾಲೂಕುಮಟ್ಟದಲ್ಲಿಯೂ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಗ್ರಾಮವಾಸ್ತವ್ಯ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ಶನಿವಾರ ಸ್ಪಂದಿಸುವ ಮೂಲಕ ಗಮನಸೆಳೆದಿದ್ದಾರೆ.

ಬಳ್ಳಾರಿ ತಾಲೂಕಿನ ದಮ್ಮೂರು ಕಗ್ಗಲ್‍ಗಳಲ್ಲಿ ತಾಲೂಕಿನ ತಹಸೀಲ್ದಾರರು ಹಾಗೂ ಅಧಿಕಾರಿಗಳು.ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿಯಲ್ಲಿ ಬಳ್ಳಾರಿ ಸಹಾಯಕ ಆಯುಕ್ತರು,ತಹಸೀಲ್ದಾರರು ಹಾಗೂ ಅಧಿಕಾರಿಗಳು, ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಯ ತುಮಟಿ ಗ್ರಾಮದಲ್ಲಿ ತಾಲೂಕಿನ ತಹಶೀಲ್ದಾರರು ಮತ್ತು ಅಧಿಕಾರಿಗಳು, ಹೆಚ್.ಬಿ.ಹಳ್ಳಿ ತಾಲೂಕಿನ ತಂಬ್ರಹಳ್ಳಿ ಹೋಬಳಿಯ ತೆಲಗೋಳಿ ಗ್ರಾಮದಲ್ಲಿ ತಾಲೂಕಿನ ತಹಶೀಲ್ದಾರರು ಮತ್ತು ಅಧಿಕಾರಿಗಳು, ಹಡಗಲಿಯ ಕಾಲ್ವಿ ಗ್ರಾಮದಲ್ಲಿ ಹಡಗಲಿ ತಹಸೀಲ್ದಾರರು ಮತ್ತು ಅಧಿಕಾರಿಗಳು, ಕುರುಗೋಡು ತಾಲೂಕಿನ ಗೆಣಕಿಹಾಳು ಗ್ರಾಮದಲ್ಲಿ ತಾಲೂಕಿನ ತಹಶೀಲ್ದಾರರು ಹಾಗೂ ಇವರ ಜತೆಗೆ ಅಧಿಕಾರಿಗಳು, ಕಂಪ್ಲಿ ತಾಲೂಕಿನ ನಂ.2 ಮುದ್ದಾಪುರದಲ್ಲಿ ತಹಸೀಲ್ದಾರರು ಮತ್ತು ಅಧಿಕಾರಿಗಳು.
ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಲೋಕಿಕೆರೆ ಗ್ರಾಮದಲ್ಲಿ ತಹಸೀಲ್ದಾರರು ಹಾಗೂ ಅಧಿಕಾರಿಗಳು, ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ತಾಲೂಕಿನ ತಹಸೀಲ್ದಾರರು ಮತು ಅಧಿಕಾರಿಗಳು, ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ಮತ್ತಿಹಳ್ಳಿ ಗ್ರಾಮದಲ್ಲಿ ಹಡಗಲಿಯ ಸಹಾಯಕ ಆಯುಕ್ತರು ಮತ್ತು ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುವುದರ ಮುಖಾಂತರ ಜನರ ಸಮಸ್ಯೆಗಳಿಗೆ ದನಿಯಾಗಿದ್ದಾರೆ.

ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು,ತಹಸೀಲ್ದಾರರು ಹಾಗೂ ಅಧಿಕಾರಿಗಳು ಸಂಜೆಯವರೆಗೆ ಜನರ ಅಹವಾಲುಗಳನ್ನು ಆಲಿಸಿದರು. ನಂತರ ಗ್ರಾಮೀಣ ಪ್ರತಿಭೆ ಹಾಗೂ ಕಲೆಗೆ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಡಿಸಿ ತಿಮ್ಮಲಾಪುರದ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದರೇ,ಆಯಾ ತಾಲೂಕುಗಳ ಗ್ರಾಮಗಳಲ್ಲಿ ತಹಸೀಲ್ದಾರರು ರಾತ್ರಿ ವಾಸ್ತವ್ಯ ಮಾಡಿದ್ದಾರೆ.

LEAVE A REPLY

Please enter your comment!
Please enter your name here