ಶಾಸಕರು ಮತ್ತು ಆಡಳಿತಾಧಿಕಾರಿಗಳ ಮಧ್ಯಸ್ಥಿಕೆ : ಧರಣಿ ಸುಖಾಂತ್ಯ

0
310

ಕೊಟ್ಟೂರು: ವಿವಿಧ ಸಂಘಟನೆಗಳಡಿ ಕೊಟ್ಟೂರು ತಾಲ್ಲೂಕು ಪಂಚಾಯಿತಿ ಕಛೇರಿಯ ಮುಂದೆ ಸತತ ಎರಡು ದಿನಗಳು ಹಗಲು ರಾತ್ರಿ ನಡೆದಿದ್ದ ಧರಣಿ, ಶಾಸಕರು, ತಾಲ್ಲೂಕು ಪಂಚಾಯಿತಿಯ ಆಡಳಿತ ಅಧಿಕಾರಿಗಳ ಮಧ್ಯಪ್ರವೇಶ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅನಾರೋಗ್ಯದ ದೃಷ್ಟಿಯಿಂದ ಶನಿವಾರ ಬೇಡಿಕೆಗಳ ಮನವಿ ಸ್ವೀಕರಿಸಿ ಸುಖಾಂತ್ಯಗೊಂಡಿದೆ.

ಧರಣಿನಿರತರ ಬೇಡಿಕೆಗಳನ್ನು ಆಲಿಸಿ, ಅವರ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ, ಅದರಲ್ಲಿ ಪ್ರಮುಖ ಬೇಡಿಕೆಗಳನ್ನು ಹದಿನೈದು ದಿನಗಳಲ್ಲಿ ಈಡೇರಿಸಲಾಗುವುದು ಎಂದು ತಿಳಿಸುವ ಮೂಲಕ ಧರಣಿ ನಿರತರು ತಮ್ಮ ಧರಣಿಯನ್ನು ಕೈಬಿಟ್ಟರು. ತಾಲ್ಲೂಕು ಪಂಚಾಯಿತಿಯ ಕಾರ್ಯವೈಖರಿಯ ಬೇಡಿಕೆಗಳಾದ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದ ಡಾಟಾ ಎಂಟ್ರಿ ಆಪರೇಟರ್‌ರವರನ್ನು ಕೆಲಸದಿಂದ ವಜಾ ಮಾಡಲಾಗುವುದು. ರೂಪಾ ಅವರ ಮೇಲೆಯೂ ಕೇಳಿಬಂದಿದ್ದ ಭ್ರಷ್ಟಾಚಾರದ ಕೇಳಿಬಂದಿದ್ದರಿಂದ ಇನ್ನು ಮೂರು ವರ್ಷಗಳ ಕಾಲ ಅವರನ್ನು ಈ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸದಂತೆ ಕ್ರಮ ವಹಿಸಲಾಗುವುದು ಹಾಗೆಯೇ ಅವರು ಮುಂಬಡ್ತಿ ಪಡೆದ ವಿಚಾರವನ್ನು ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗುವುದು. ಪ್ರಸ್ತುತ ಕಂದಗಲ್ಲು ಗ್ರಾಮ ಪಂಚಾಯಿತಿಗೆ ಅದೇ ಗ್ರಾಮದ ಪಿ.ಡಿ.ಓ. ಆಗಿರುವವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು. ಈ ಹಿಂದೆ ಬೆಣ್ಣೆ ವಿಜಯಕುಮಾರ್ ಮತ್ತು ಜಿ.ಪರಮೇಶ್ವರ ಇವರು ಕಾರ್ಯನಿರ್ವಾಹಕ ಅಧಿಕಾರಿಗಳಾಗಿರುವಾಗ ಆಗಿರುವ ಭ್ರಷ್ಟಾಚಾರದ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು. ಧರಣಿ ನಿರತರ ಉಳಿದ ಬೇಡಿಕೆಗಳನ್ನು ಅತೀ ತುರ್ತಾಗಿ ಬಗೆಹರಿಸಿಕೊಡುತ್ತೇವೆ ಎಂದು ಮಾತು ನೀಡಿದ ಪ್ರಯುಕ್ತ ಧರಣಿ ನಿರತರು ತಮ್ಮ ನಿರಂತರ ಧರಣಿಗೆ  ಸುಕತ್ಯ ಹಾಡಿದರು.

ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ಉಗ್ರ ಹೋರಾಟ ಮಾಡಲಾಗುವುದೆಂದು ಧರಣಿನಿರತರು ಹೇಳಿದರು. ಧರಣಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದರು.
ಬರಪೀಡಿತ ತಾಲ್ಲೂಕೆಂದು

ಘೋಷಣೆಯಾಗಿರುವ ಪ್ರಯುಕ್ತ ೧೦೦ ದಿನಗಳು ಸಂಪೂರ್ಣ ಮುಗಿದಿದ್ದು, ಹೆಚ್ಚುವರಿಯಾಗಿ ೧೦೦ ದಿನಗಳ ಕೆಲಸ ನೀಡಲು ಮತ್ತು ಈಗಿರುವ ಕೂಲಿಯನ್ನು ೬೦೦/-ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ  ಯೋಜನೆ ಅಡಿಯಲ್ಲಿ ಬರುವುದರಿಂದ  ಹೆಚ್ಚಳ ಮಾಡಲು ಕ್ರಮವಹಿಸಲಾಗುವುದು ಎಂದರು ಉದ್ಯೋಗ ಖಾತ್ರಿಯಲ್ಲಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಖಾತೆದಾರರ ಖಾತೆಗೆ ಜಮಾ ಮಾಡಲು ಕ್ರಮ ವಹಿಸಲಾಗುವುದು. ಎಂದರು. ಧರಣಿ ನಿರತರ ಬೇಡಿಕೆಗಳ ಮೇಲೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಶಾಸಕರು ಈ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಸರಿಯಾಗಿ ಕೆಲಸ ನಿರ್ವಹಿಸಲು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಲ್ಲಾ ಗ್ರಾ.ಪಂ. ಪಿ.ಡಿ.ಓ.ಗಳು, ಎಲ್ಲಾ ಇಲಾಖೆಗಳ ಮೇಲಾಧಿಕಾರಿಗಳು, ಧರಣಿ ಸತ್ಯಾಗ್ರಹದಲ್ಲಿ ಸಾಮೂಹಿಕ ಸಂಘಟನೆಗಳಾದ ಸಿ.ಪಿ.ಐ.ಎಂ.ಎಲ್. ಲಿಬರೇಶನ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ.ರೇಣುಕಮ್ಮ, ಕಿಸಾನ್ ಸಭಾ ಅಧ್ಯಕ್ಷ ರಾಜುಗೌಡ, ತಿಮ್ಮಪ್ಪ, ಕರಿಬಸಮ್ಮ, ಕಲ್ಯಾಣಮ್ಮ, ಡಿ.ಎಸ್.ಎಸ್. ತಾಲೂಕು ಅಧ್ಯಕ್ಷ ಪಿ.ಚಂದ್ರಶೇಖರ್, ಆರ್.ಟಿ.ಐ. ಸಂಘಟನಾ ಕಾರ್ಯದರ್ಶಿ ಮಧುನಾಯ್ಕ, ಮಹಮ್ಮದ್, ಸುವೇಬ್ ಕೆ, ಬಿ ಮಂಜುನಾಥ್,ಅಖಿಲ ಕರ್ನಾಟಕ ಕುಳುವ ಸಂಘದ ರಾಜ್ಯ ಉಪ ಕಾರ್ಯದರ್ಶಿ ಕೆ.ಕೊಟ್ರೇಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ್, ಶಿವರಾಜ್ ಕನ್ನಡಿಗ, ಟಿ ಕೊಟ್ರೇಶ್, ಪ್ರದೀಪ್ ಕುಮಾರ್, ಸಿ.ಪಿ.ಐ.ಎಂ.ಎಲ್. ಕಾರ್ಯಕರ್ತರಾದ ಅಜಿತ್ , ಎಂ.ಯು.ಕರಿಬಸಯ್ಯ, ಗ್ರಾಮ ಘಟಕದ ಅಧ್ಯಕ್ಷ ಕೆ.ಪರುಸಪ್ಪ ತಾಲ್ಲೂಕು ಸಮಿತಿ ಸದಸ್ಯರು ಕೆ.ಕೆಂಚಪ್ಪ, ಸಮಿತಿ ಸದಸ್ಯರಾದ ರೇವಣ್ಣ ಉಜ್ಜಿನಿ, ಸಹಕಾರ್ಯದರ್ಶಿ ಬಿ.ಟಿ.ಹಾಲೇಶ್, ಉದ್ಯೋಗ ಖಾತ್ರಿಯಲ್ಲಿ ಕೂಲಿಕಾರ್ಮಿಕರಾದ ಮಹಿಳೆಯರು ಹಾಜರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here