ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ, ಸ್ವಪ್ರೇರಣೆಯಿಂದ ಕೋವಿಡ್ ಲಸಿಕೆ ಪಡೆಯಿರಿ: ನ್ಯಾ. ಮಲ್ಲಿಕಾರ್ಜುನಗೌಡ

0
119

ರಾಯಚೂರು,ಜ.20 :-ಕೋವಿಡ್ ಇಡೀ ವಿಶ್ವವನ್ನೇ ಬಾಧಿಸುತ್ತಿದ್ದು, ಅನೇಕ ಜನರು ಸಾವಿಗೀಡಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬರು ಸ್ವಪ್ರೇರಣೆಯಿಂದ ಕೋವಿಡ್-19ರ ಲಸಿಕೆ ಪಡೆದುಕೊಂಡರೆ ಕೊರೊನಾ ನಿಯಂತ್ರಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಹೇಳಿದರು.

ಅವರು ಜ.20ರ ಗುರುವಾರ ದಂದು ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಎರಡನೇಯ ಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಸರ್ಕಾರ ಅನೇಕ ಕಾರ್ಯಕ್ರಮಗಳ ಮೂಲಕ ಪ್ರಚಾರ ನಡೆಸುತ್ತಿದೆ. ಪ್ರತಿಯೊಬ್ಬರು ತಪ್ಪದೆ ಲಸಿಕೆ ಪಡೆದುಕೊಳ್ಳಿ ಹಾಗೂ ಸರ್ಕಾರದ ಕೋವಿಡ್ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.

ಕೋವಿಡ್ ಎಲ್ಲರ ದಿನನಿತ್ಯದ ಜೀವನವನ್ನು ಹಾಳು ಮಾಡುತ್ತಿದ್ದು, ಒಂದು ಹಾಗೂ ಎರಡು ಅಲೆ ಬಂದಾಗ ಕೆಲವೊಂದು ಕ್ರಮವನ್ನು ಪಾಲಿಸಿಕೊಂಡು ಬಂದಿದ್ದೇವೆ; ಅವುಗಳನ್ನು ಇನ್ನಷ್ಟು ಎಚ್ಚರಿಕೆಯಿಂದ ಪಾಲಿಸುವುದು ಸೂಕ್ತ. ನಾನು ಸಹ ಎರಡನೇ ಅಲೆಯಲ್ಲಿ ಕೋವಿಡ್‌ಗೆ ತುತ್ತಾಗಿ ಸಾವಿನ ಮನಿಯನ್ನು ತಟ್ಟಿ ಬಂದಿದ್ದೇನೆ, ನನಗೆ ಜಿಲ್ಲೆಯ ವೈದ್ಯರು ಉತ್ತಮ ಚಿಕಿತ್ಸೆಯನ್ನು ನೀಡಿ ನನ್ನನ್ನು ಮತ್ತೆ ಸಮಾಜದ ಕಾರ್ಯವನ್ನು ಮಾಡಲು ಧೈರ್ಯ ಸ್ಥೆöÊರ್ಯವನ್ನು ತುಂಬಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಇತ್ತೀಚಿಗೆ ನಮ್ಮ ಉಚ್ಚ ನ್ಯಾಯಾಲಯ ನೀಡಿದ ಮಾರ್ಗಸೂಚಿಯ ಪ್ರಕಾರ ನ್ಯಾಯಾಲಯದಲ್ಲಿ ಯಾವುದೇ ಕಕ್ಷಿದಾರರಿಗೆ ಒಳಗಡೆ ಪ್ರವೇಶ ನೀಡುತ್ತಿಲ್ಲ. ಮತ್ತು ಸಾಕ್ಷಿಗಳನ್ನು ಸಹ ನಾವು ಪಡೆಯುತ್ತಿಲ್ಲ. ಕಾರಣ ಜನಸಂದಣಿ ಜಾಸ್ತಿ ಆದಷ್ಟು ಕರೋನ ಹರಡುವಿಕೆ ಜಾಸ್ತಿಯಾಗವ ಸಾಧ್ಯತೆ ಇರುವುದರಿಂದ ಇದನ್ನು ತಡೆಗಟ್ಟುವ ಸಲುವಾಗಿ ನಾವು ಜನರನ್ನು ರಕ್ಷಣೆ ಮಾಡಿ, ನ್ಯಾಯಾಲಯದಲ್ಲಿರುವ ಕೇಸುಗಳ ತದನಂತರದಲ್ಲಿ ಇತ್ಯರ್ಥಪಡಿಸಬಹುದು ಎಂಬ ಉದ್ದೇಶದಿಂದ ನಾವು ಸಾಕ್ಷಿಗಳನ್ನು ಪಡೆಯುವುದನ್ನು ತಡೆಹಿಡಿದಿದ್ದೇವೆ ಎಂದರು.

ನ್ಯಾಯಾಲಯದಿAದ ಯಾವುದೇ ವಿಸಿ ಕೇಸ್ ಆಗಲಿ ಮತ್ತು ಎಲ್.ಐ.ಸಿ ಕೇಸ್‌ಗಳಲ್ಲಿ ತಮಗೆ ಕೊಡಬೇಕಾದಂತ ಹಣವನ್ನು ನಮ್ಮ ನ್ಯಾಯಾಲಯದಲ್ಲಿ ಜಮಾ ಆಗಿದ್ರೆ ಅವುಗಳನ್ನು ತಕ್ಷಣವೇ ಕೊಡಬೇಕೆಂದು ನಮ್ಮ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ ನಾನು ಬುಧವಾರ ನಿರ್ದೇಶನ ನೀಡಿದ್ದು, ಕಕ್ಷಿದಾರರು ತಮ್ಮ ಹಣದ ಬಗ್ಗೆ ಯಾವುದೇ ರೀತಿಯ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಮತ್ತು ಯಾವುದೇ ದೂರುಗಳಿದ್ದರೆ ನಿಮ್ಮ ವಕೀಲರ ಮೂಲಕ ತಿಳಿಸಿದಲ್ಲಿ ಅಂತಹ ಕೇಸ್‌ಗಳಿಗೆ ಆದ್ಯತೆ ನೀಡಿ ಅವುಗಳನ್ನು ಇತ್ಯರ್ಥ ಪಡಿಸುತ್ತೇವೆ ಎಂದು ಹೇಳಿದರು.

ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲೆಯ ಕೋವಿಡ್ ಸ್ಥಿತಿಗತಿ,ಸಿದ್ಧತೆ ಹಾಗೂ ಇನ್ನೀತ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಗಿದೆ ಎಂದು ವಿವರಿಸಿದ ನ್ಯಾಯಾಧೀಶರು,ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊವೀಡ್-19ರ ಸಂಬ0ಧಿಸಿದ0ತ ಔಷಧಿಗಳನ್ನು ಖುದ್ದಾಗಿ ನೋಡಿಕೊಳ್ಳಬೇಕು ಮತ್ತು ಯಾವುದೇ ವ್ಯಕ್ತಿಗೆ ಕರೋನ ಲಕ್ಷಣಗಳು ಕಂಡುಬAದಲ್ಲಿ ಅಂಥ ವ್ಯಕ್ತಿಯನ್ನು ಹೊಂ ಕ್ವಾರೆಂಟೈನ್ ಮಾಡಿ ಮನೆಯಲ್ಲೇ ಚಿಕಿತ್ಸೆ ಕೊಡುವುದು ಉತ್ತಮ. ಹೆಚ್ಚಿನ ರೀತಿಯಲ್ಲಿ ಆಕ್ಸಿಜನ್ ಶುದ್ಧವಾಗಿಟ್ಟುಕೊಳ್ಳುವುದು ಒಳ್ಳೆಯದು ಮತ್ತು ಆಸ್ಪತ್ರೆಯಲ್ಲಿ ಬೆಡ್‌ಗಳ ಕುರಿತು ಚರ್ಚೆ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಜನ ಆರ್.ಎ ಸೇರಿದಂತೆ ಇತರರು ಇದ್ದರು.


ಭತ್ತ ಖರೀದಿಗೆ ಫೆ.28ಕೊನೆಯ ದಿನ

ರಾಯಚೂರು,ಜ.20,:- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಖರೀದಿಸಲಾಗುವ ಭತ್ತಕ್ಕೆ ಸಂಬAಧಿಸಿದAತೆ ರೈತರ ನೋಂದಣಿ ದಿನಾಂಕವನ್ನು 2022ರ ಫೆ.28ರವರೆಗೆ ವಿಸ್ತರಿಸಲಾಗಿದೆ.

ಸದರಿ ರೈತರ ನೋಂದಣಿ ಮತ್ತು ಭತ್ತ ಖರೀದಿಗೆ ಸಂಬ0ಧಿಸಿದ0ತೆ ಮಾಹಿತಿಯನ್ನು ಫ್ರೂಟ್ಸ್ ತಂತ್ರಾ0ಶದಲ್ಲಿ ನೋಂದಣಿ ಮಾಡಿಕೊಂಡು ನಂತರ ಭತ್ತ ಖರೀದಿ ಮಾಡಿಕೊಳ್ಳಲಾಗುವುದು.

ಕೋವಿಡ್-19ರಮಾರ್ಗಸೂಚಿಗಳಂತೆ ರೈತರು ನೋಂದಣಿ ಸಮಯದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್ ಧರಿಸಿರಬೇಕು ಎಂದು ಜಿಲ್ಲಾ ಟಾಸ್ಕಾಪೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ಅವಿನಾಶ್ ರಾಜೇಂದ್ರ ಮೆನನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆದರ್ಶ ವಿದ್ಯಾಲಯ: 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ರಾಯಚೂರು,ಜ.20,:-ನಗರದ ಯರಮರಸ್ ಆದರ್ಶ ವಿದ್ಯಾಲಯದ ಮಾದರಿ ಶಾಲೆಯಲ್ಲಿ 2022-23ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲೆಯ ಆಯಾ ಆದರ್ಶ ವಿದ್ಯಾಲಯದಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ವ್ಯಾಸಂಗ ಮಾಡುತ್ತಿರುವ ಶಾಲೆಯ ದೃಢೀಕರಣ ಪತ್ರ, ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರಗಳ ದಾಖಲಾತಿಗಳೊಂದಿಗೆ ಆದರ್ಶ ವಿದ್ಯಾಲಯದ ವೆಬ್‌ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ 2022ರ ಫೆ.9ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8861346398, 7349359537ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here