ಎಂ.ಎಂ.ಜೆ ಹರ್ಷವರ್ಧನ್ ರವರ 62ನೇ ಜನ್ಮದಿನವನ್ನು ಅಚರಿಸಿದ ಅಭಿಮಾನಿಗಳು

0
223

ಕೊಟ್ಟೂರು: ಜನರ ಕಷ್ಟ ನಷ್ಟಗಳಿಗೆ ಸದಾ ಸ್ಪಂದಿಸುವ ಜಾತ್ಯಾತೀತ ನಾಯಕ ನೇರ ನಡೆ ನುಡಿಯ ವ್ಯಕ್ತಿತ್ವ ಧೀಮಂತ ನಾಯಕ ನಗುಮುಖದ ಒಡೆಯ ನೊಂದವರ ಕಣ್ಣೀರು ಒರೆಸುವ ಹಣತೆ.

ಕೊಟ್ಟೂರಿನ ಹುಲಿಯೇ ಎಂದು ಖ್ಯಾತಿ ಪಡೆದಿರುವ ಶ್ರೀಮದ್ ಉಜ್ಜಯಿನಿ ಸಧರ್ಮ ವಿದ್ಯಾಪೀಠದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ರವರಿಗೆ 62ನೇ ಹುಟ್ಟು ಹಬ್ಬವನ್ನು ನೂರಾರು ಅಭಿಮಾನಿಗಳು ಮಂಗಳವಾರದಂದು ಶುಭಾಶಯಗಳು ಹೊಂದಿಗೆ ಆಚರಿಸಲಾಯಿತು.

“ಹುಟ್ಟು ಹಬ್ಬವನ್ನು ವರ್ಣಿಸಿದ ಸ್ನೇಹಿತನ ಅಭಿಪ್ರಾಯ”

ಸಹಬಾಳ್ವೆ ಸಮೃದ್ಧಿ ಕೂಡುಕುಟುಬದ ವಿಶಾಲಾರ್ಥವನ್ನು ವಿಸ್ತರಿಸುವ ಆಳವಾಗಿಸುವ ದೀಪಾವಳಿ, ಮಕ್ಕಳ ದಿನಾಚರಣೆಯ ಭಾವಸಾಕ್ಷಾತ್ಕಾರದ ಅಮೂಲ್ಯದಿನ ಹಾಗೆಯೇ ಜನಮುಖಿ ಹೋರಾಟ ಅಸೀಮ ನಾಯಕತ್ವಕ್ಕೆ ಹೊಸ ವ್ಯಾಖ್ಯಾನ ಬರೆದ ನಿರ್ಮಲನಗುವಿನ ಹರ್ಷವರ್ಧನರ ಜನುಮದಿನ ಒಂದೇ ದಿನ ಆಗಿರುವದು ತ್ರಿವೇಣಿಸಂಗಮದಂತೆ ಅನೂಹ್ಯ ಯೋಗಾಯೋಗದಂತೆ ಮುಪ್ಪರಿಗೊಂಡಿರುವದು ಮರೆಯಲಾಗದ ಪುಲಕದ ಘಳಿಗೆಗೆ ಸಾಕ್ಷಿಯಾಗುತ್ತಿದೆ.ಹಣತೆ ಛಾಯಿಸುವ ಭರವಸೆಯ ಬೆಳಗು ಮಗುವಿನ ಮುಗ್ಧ ನಗುವನ್ನು ಹರ್ಷವರ್ಧನರ ವ್ಯಕ್ತಿತ್ವಕ್ಕೆ ಸಮೀಕರಿಸಿದರೆ ಉತ್ಪ್ರೇಕ್ಷೆಯಾಗಲಾರದು ಎಂಬ ವಿನೀತಭಾವ ನನ್ನದು.ದನಿಹೀನರ ಕೂಗು ಆಲಿಸುವ ಸಂತೈಸುವ ಜೊತೆಗೆ ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ನಿಷ್ಠುರತೆಯಲ್ಲೂ ನಿಸ್ಪೃಹತೆ ಮೆರೆವ ಇವರ ಜನ್ಮಜನ್ಯ ಗುಣ ಚೇತೋಹಾರಿಯಾಗಿದೆ.ಇವರಲ್ಲಿ ಸದಾ ಜಾಗೃತವಾಗಿರುವ ಸಂಗೀತೋಪಾಸನೆ ದೈತ್ಯ ಓದುವಿಕೆ ಓದಿದನ್ನು ತಾರ್ಕಿಕವಾಗಿ ಅಭಿವ್ಯಕ್ತಿಸುವ ಎಂತಹ ಕ್ಲುಪ್ತ ಕ್ಲಿಷ್ಟ ಸನ್ನಿವೇಷದಲ್ಲಿಯೂ ನಂಬಿದವರ ಪರನಿಲ್ಲುವ ಛಾತಿ ಅನವರತ ಬೆರಗು.
ನಿಮಗೆ ಗುರುರೇಣುಕರು, ಬುದ್ಧ ಬಸವಾದಿ ಪ್ರಮಥರು ಕಾರುಣ್ಯದ ಆಗರ ಕೊಟ್ಟುರೇಶ್ವರರು ಕೃಪೆಗೈಯ್ಯಲಿ.ಆ ಕೃಪೆಯ ಪ್ರತಿಫಲನದಲ್ಲಿ ಸಮಷ್ಟಿಯ ಸದ್ವಿಕಾಸಶೀಲತೆ ಅಡಗಿದೆ.ನಾಡ ಜನತೆಗೆ ಹಬ್ಬದ ಶುಭಾಶಯಗಳು.
ಗೆಳೆಯನಂತಹ ಅಣ್ಣ ಹರ್ಷವರ್ಧನರಿಗೆ ಜನ್ಮದಿನದ ನನ್ನ ಭಾವಪೂರ್ಣ ಪ್ರಣಾಮಗಳು. ಪ್ರಕಾಶ ಅಂಗಡಿ ಮತ್ತಿಹಳ್ಳಿ ಅವರು ಶುಭಾಶಯಗಳು ತಿಳಿಸಿದರು.

ಕೊಟ್ಟೂರಿನ ಸರ್ವ ಜನಾಂಗದ ನಾಯಕ ನಗುಮುಖದ ಒಡೆಯ ಸದಾ ಜನರ ಹಿತವನ್ನು ಬಯಸುವ ಕರುಣಾಮಯಿ ನಮ್ಮೂರಿನ ಎಂ ಎಂ ಜೆ ಹರ್ಷವರ್ಧನ್ ಜನ್ಮ ದಿನದಂದು ಪಟ್ಟಣದ ವಿವಿಧ ಕಡೆ ಇವರ ಹುಟ್ಟು ಹಬ್ಬವನ್ನು ಆಚರಿಸಿದರು ,ಆಟೋ ಚಾಲಕರಿಂದ ,ನೂರಾರು,ಪ್ರಮುಖ ಮುಖಂಡರು, ಆತ್ಮೀಯರು ಸ್ನೇಹಿತರು, ಶುಭಾಶಯ ತಿಳಿಸಿದರು.

LEAVE A REPLY

Please enter your comment!
Please enter your name here