ವಿದ್ಯಾರ್ಥಿಗಳು ರಸ್ತೆ ದಾಟುವಾಗ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸ ಬೇಕು; ಮುಖ್ಯ ಪೇದೆ ನೂರ್ ಅಹಮದ್,

0
144

ಸಂಡೂರು: ಜ:17: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಲಿಸ್ ಇಲಾಖೆ,ಆರೋಗ್ಯ ಇಲಾಖೆ ಮತ್ತು ಜೆ.ಎಸ್.ಡಬ್ಲ್ಯೂ ಫೌಂಡೇಶನ್‌ನ ಆಸ್ಪೈರ್ ಸಂಸ್ಥೆಯ ಸಹಯೋಗದಲ್ಲಿ ರಸ್ತೆ ಸುರಕ್ಷಿತ ಸಪ್ತಾಹ ಮತ್ತು ಮಾದಕ ದ್ರವ್ಯ ವಿರೋಧಿ ದಿನ ಕುರಿತು ಅರಿವಿನ ಕಾರ್ಯಕ್ರಮ ಆಯೋಜಿಸಲಾಗಿತ್ತು,

ಕಾರ್ಯಕ್ರಮ ಉದ್ದೇಶಿಸಿ ತೋರಣಗಲ್ಲು ಪೊಲೀಸ್ ಠಾಣೆಯ ಮುಖ್ಯ ಪೇದೆ ನೂರ್ ಅಹಮದ್ ಅವರು ವಿದ್ಯಾರ್ಥಿ ರಸ್ತೆ ಸುರಕ್ಷಿತೆ ನಿಯಮಗಳನ್ನು,ಮತ್ತು ಸಿಗ್ನಲ್ ನಿಯಮ ಪಾಲನೆ ಕುರಿತು ಮಾಹಿತಿ ನೀಡಿದರು,ಹಾಗೇ 18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡುವುದು ಅಪರಾಧ, ದಂಡ ಮತ್ತು ಶಿಕ್ಷೆ ನೀಡುವ ಕುರಿತು ಮಾಹಿತಿ ನೀಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾದಕ ದ್ರವ್ಯ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು,

ಸಿ.ಆರ್.ಪಿ ಯಾಸ್ಮಿನ್ ಜುಂಗಲ್ ನಾಯ್ಕಿ ಅವರು ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಮಾಹಿತಿ ನೀಡಿದರು,ಹಾಗೇ ಶಾಲೆಯ ಮುಖ್ಯ ಶಿಕ್ಷಕ ಬಂದೇ ನವಾಜ್ ಅವರು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವಂತೆ ಕಿವಿ ಮಾತು ಹೇಳಿದರು, ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಚಿತ್ರಕಲೆ ಬಿಡಿಸಿದ ನಂದಿನಿ ಮತ್ತು ಅಂಬಿಕಾ ಅವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು,

ಕಾರ್ಯಕ್ರಮವನ್ನು ಮ್ಯಾಜಿಕ್ ಬಸ್‌ನ ಎ.ಇ ಸುರೇಶ್ ಮತ್ತು ಎಲ್.ಎಸ್.ಇ ಮಲ್ಲೇಶಪ್ಪ ಅವರು ನಡೆಸಿಕೊಟ್ಟರು,

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ರಜನಿ,ಪಾರ್ವತಿ,ನಾಗವೇಣಿ,ಪ್ರಭಾ,ಮಹಾಲಕ್ಷ್ಮಿ,ಶರೀಫ್,ಕವಿತಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here