ಮಕ್ಕಳಿಗೆ ಕೋವಿಡ್ ಭಯ ದೂರ ಮಾಡಲು ಕೋವ್ಯಾಕ್ಸಿನ್ ಸಹಕಾರಿ; ಪ್ರಾಚಾರ್ಯ ವೀರೇಶ್

0
497

ತೋರಣಗಲ್ಲು ಜ 3: ಮಕ್ಕಳಿಗೆ ಕೋವಿಡ್ ಭಯ ದೂರ ಮಾಡಲು ಕೋವ್ಯಾಕ್ಸಿನ್ ಸಹಕಾರಿಯಾಗಲಿದೆ ಎಂದು ಅಲ್ಪ ಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ವೀರೇಶ್ ಅವರು ತೋರಣಗಲ್ಲು ಗ್ರಾಮದ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15-18 ವಯಸ್ಸಿನ ಮಕ್ಕಳಿಗಾಗಿ “ಕಿರಿಯರಿಗೆ ಕೋವ್ಯಾಕ್ಸಿನ್ ಲಸಿಕಾಕರಣ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು, ಮಕ್ಕಳು ಸಕ್ರಿಯವಾಗಿ ಭಾಗವಹಿಸಿ ಲಸಿಕೆ ಪಡೆದಿದ್ದಾರೆ ಎರಡು ದಿನದ ಹಿಂದೆ ಆರೋಗ್ಯ ಅಧಿಕಾರಿಗಳು ಮಕ್ಕಳಿಗೆ ಲಸಿಕೆ ಬಗ್ಗೆ ಮನವರಿಕೆ ಮಾಡಿದ್ದು ಸಹಕಾರಿಯಾಗಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಇಂದು ಗೈರು ಇರುವ 17 ಮಕ್ಕಳಿಗೆ ಮುಂದಿನ ಲಸಿಕಾ ಕಾರ್ಯಕ್ರಮ ದಿನದಂದು ಲಸಿಕೆ ನೀಡಲಾಗುವುದು ಎಂದು ತಿಳಿಸಿದರು, ಹಾಜರಾತಿ ಪ್ರಕಾರ 81 ಮಕ್ಕಳಿದ್ದು ಇಂದು 64 ಮಕ್ಕಳಿಗೆ ಲಸಿಕೆ ಹಾಕಲಾಯಿತು, ಕೆಲವು ಮಕ್ಕಳು ಗೈರು ಆಗಿದ್ದರು, ಶಾಲೆಯ ಪ್ರಾಂಶುಪಾಲರಾದ ವೀರೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ, ಶಾಲೆಯ ಸಹಶಿಕ್ಷಕರಾದ ಲೋಕರೆಡ್ಡಿ, ಬಸವರಾಜ, ಪುಷ್ಪಾ ಮರಡಿ, ಸವಿತಾ,ಗೌಸಿಯಾ ಬೇಗಮ್,ಗೌರಿ, ಅಕ್ಬರ್ ಅಲಿ, ಷಣ್ಮುಖ, ಮತ್ತು ಎಫ್.ಡಿ.ಎ ಹನುಮಂತಪ್ಪ ಆಶಾ ಕಾರ್ಯಕರ್ತೆ ಹನುಮಂತಮ್ಮ, ವಿಜಯಶಾಂತಿ, ರಾಜೇಶ್ವರಿ, ಲಕ್ಷ್ಮಿ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here