ಅಯೋಡಿನ್ ಸೂಕ್ಷ್ಮ ಪೋಷಕಾಂಶ ಎಲ್ಲಾ ವಯಸ್ಸಿನವರಿಗೂ ಅವಶ್ಯಕ, ಕೊರತೆ ಉಂಟಾದರೆ ಗಳಗಂಡ ಕಾಯಿಲೆ ಬರುವುದು ಖಚಿತ : ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್,

0
656

ಸಂಡೂರು/ತೋರಣಗಲ್ಲು:ಡಿ:16:- ಸಂಡೂರು ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಅಯೋಡಿನ್ ಕೊರತೆಯ ನ್ಯೂನತೆ ನಿಯಂತ್ರಣ ದಿನ ಮತ್ತು ಸಪ್ತಾಹ ಆಚರಣೆಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲರೂ ಆರೋಗ್ಯವಾಗಿರಲು ಸಮತೋಲನ ಆಹಾರ ಸೇವನೆ ಬಗ್ಗೆ ಗಮನಹರಿಸುವುದು ಅತೀ ಮುಖ್ಯ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್, ವಿಟಮಿನ್ಸ್, ಫ್ಯಾಟ್ಸ್, ಫೈಬರ್ಸ್, ಮಿನರಲ್ಸ್ ಗಳ ಬಗ್ಗೆ ತಿಳಿದು ಕೊಂಡಿರಬೇಕು, ಮ್ಯಾಕ್ರೋನ್ಯೂಟ್ರಿಂಟ್ಸ್ ದೇಹಕ್ಕೆ ಶಕ್ತಿ ಕೊಡುತ್ತವೆ ಹಾಗೆ ಮೈಕ್ರೋನ್ಯೂಟ್ರಿಯಂಟ್ಸ್ ಮಾನಸಿಕ, ಬುದ್ದಿ, ದೈಹಿಕ ಬೆಳವಣಿಗೆ ಅತ್ಯವಶ್ಯಕತೆ ಇದೆ ಐರನ್,ಕ್ಯಾಲ್ಸಿಯಂ, ಪೊಟಾಷಿಯಂ, ಮ್ಯಾಗ್ನಷಿಯಮ್, ಸೋಡಿಯಂ ಇದರಂತೆ ಐಯೋಡಿನ್ ಸಹಾ ಅತೀ ಮಹತ್ವದ ಖನಿಜಾಂಶ ಇದರ ಕೊರತೆ ಯಾದರೆ ದೇಹದಲ್ಲಿ ನ್ಯೂನತೆಗಳು ಉಂಟಾಗುತ್ತವೆ, ಗಳಗಂಡ ಕಾಯಿಲೆ,ಬುದ್ಧಿಮಾಂದ್ಯತೆ, ನೆನಪಿನ ಶಕ್ತಿ ಕುಂಠಿತ, ಕಿವುಡು ತನ, ಮೂಕತನ, ಕುಬ್ಜತನ, ನಡಿಗೆಯ ದೋಷಗಳು, ಮಹಿಳೆಯರಲ್ಲಿ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳು, ಸಂತಾನೋತ್ಪತ್ತಿ ತೊಂದರೆಗಳು ಉಂಟಾಗುತ್ತವೆ, ಇವೆಲ್ಲಕ್ಕೂ ಅಯೋಡಿನ್ ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದೇ ಮಾರ್ಗ, ಅಯೋಡಿನ್ ಯುಕ್ತ ಉಪ್ಪು ಸೇವನೆ ಮಾಡಿದಲ್ಲಿ ಸರಿಯಾದ ಪ್ರಮಾಣದಲ್ಲಿ ಅಯೋಡಿನ್ ಅಂಶ ದೊರೆಯಲಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಲೋಕಲ್ ಕಂಪನಿ ಉಪ್ಪುಮತ್ತು ಅಯೋಡಿನ್ ಮಿಶ್ರಿತ ಸೂರ್ಯ ಮಾರ್ಕಿನ ಉಪ್ಪಿನ ಪಾಕೇಟ್ ಗಳ ಬಗ್ಗೆ ಮಾಹಿತಿ ನೀಡಿದರು, ನೈಸರ್ಗಿಕವಾಗಿ ಅಯೋಡಿನ್ ದೊರೆಯುವ ಆಹಾರ ಪದಾರ್ಥಗಳಾದ ಮೀನು, ಸೀಗಡಿ, ತತ್ತಿ, ಮೊಸರು, ಭೂಮಿಯ ಅಡಿಯಲ್ಲಿ ಬೆಳೆಯುವ ಕ್ಯಾರೆಟ್, ಹಾಲೂಗಡ್ಡೆ, ಹಸಿರು ಸೊಪ್ಪುಗಳ ಬಗ್ಗೆ ಮಾಹಿತಿ ನೀಡಿದರು, ಸೂರ್ಯ ಮಾರ್ಕಿನ ಉಪ್ಪನ್ನು ಮತ್ತು ಇತರೆ ಉಪ್ಪನ್ನು ಅಯೊಡೀನ್ ಅಂಶ ಇರುವ ಬಗ್ಗೆ ಪರೀಕ್ಷೆಯ ಮಾಡುವ ಪ್ರಾತ್ಯಕ್ಷಿಕೆ ಮಾಡಿ ಮಕ್ಕಳಿಗೆ ತೋರಿಸಿ ವಿವರಣೆ ನೀಡಿದರು,

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಧರಿಯಪ್ಪ ರಾಥೋಡ್ ಅವರು ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಅರಿವು ಹೆಚ್ಚಾಗುವುದು, ಮತ್ತು ಮಕ್ಕಳು ಆರೋಗ್ಯದ ಕಡೆ ಹೆಚ್ಚು ಗಮನಹರಿಸುತ್ತಾರೆ ಮತ್ತು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದು ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಕರಪತ್ರ ಗಳನ್ನು ತಯಾರಿಸಿ ಬಿಡುಗಡೆ ಮಾಡಲಾಯಿತು ಮತ್ತು ಮಕ್ಕಳಿಗೆ ವಿತರಣೆ ಮಾಡಲಾಯಿತು, ಇದೇ ಕಾರ್ಯಕ್ರಮದಲ್ಲಿ ಪೆನ್ಸಿಲ್ ಅರ್ಟ್ ನಲ್ಲಿ “ಮರ್ಯಾದೆ ಪುರುಷೋತ್ತಮ ಶ್ರೀ ರಾಮ” ಚಿತ್ರ ಬಿಡಿಸಿದ ಕು|| ಸಿ.ಹೆಚ್ ಅಶ್ವಿನಿ ಅವರಿಗೆ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಅಂಗಡಿ ಮಲ್ಲಿಕಾರ್ಜುನಪ್ಪ, ತೋರಣಗಲ್ಲು ಇವರ ವತಿಯಿಂದ 1000/- ಗಳ ನಗದು ಬಹುಮಾನ ವಿತರಿಸಿದರು,

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್, ಶಾಲೆಯ ಮುಖ್ಯ ಗುರುಗಳಾದ ಧರಿಯಪ್ಪ ರಾಥೋಡ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಸಹ ಶಿಕ್ಷಕರಾದ ಶರಣ ಬಸವ, ಉಮಾ, ವಿರುಪಾಕ್ಷಪ್ಪ, ಹಾಗೂ ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಶ್ರೀದೇವಿ, ಹುಲಿಗೆಮ್ಮ,ಆಶಾ, ಕಾವೇರಿ, ರಾಜೇಶ್ವರಿ, ವಿಜಯಶಾಂತಿ,ವೆಂಕಟಲಕ್ಷ್ಮಿ, ತೇಜಮ್ಮ, ಪದ್ಮಾವತಿ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here