ಆನೆಗಳ ನಡುವೆ ಇರುವೆಯ ಹೆಜ್ಜೆ ನನ್ನದು ; ಕೆ ಎಸ್ ದಿವಾಕರ್

0
344

ಸಂಡೂರು: ಸಾರ್ವರ್ತಿಕ ವಿಧಾನಸಭಾ ಚುನಾವಣೆಯ ಕೆ ಆರ್ ಪಿ ಪಿ ಪಕ್ಷದ ಅಭ್ಯರ್ಥಿ ಸಮಾಜಸೇವಕ, ಕನಸುಗಾರ, ಛಲಗಾರ ಕೆ ಎಸ್ ದಿವಾಕರ್ ಅವರು 2014ರ ವಿಧಾನಸಭೆ
ಚುನಾವಣೆಯಲ್ಲೇ ಟಿಕೆಟ್ ಬಯಸಿ ಕ್ಷೇತ್ರಾದ್ಯಂತ ಸಂಘಟನೆಯನ್ನು ಮಾಡುತ್ತ ಪಕ್ಷವನ್ನು ಗಟ್ಟಿಗೊಳಿಸಿ ತಾಪಂ,ಹಾಗೂ ಜಿಪಂ ಚುನಾವಣೆಗಳ ಮುಂದಾಳತ್ವವನ್ನು ವಹಿಸಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಟಿಕೆಟ್ ಬಯಸಿದ್ದರು, ಆಗ ವಿಧಾನಸಭೆ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಿಂದಲೂ ಟಿಕೆಟ್ ದೊರಕಲಿಲ್ಲ.
ಈ ಚುನಾವಣೆಯಲ್ಲಾದರೂ ಬಿಜೆಪಿ ಪಕ್ಷದಿಂದ ಟಿಕೆಟ್ ದೊರಕಬಹುದು ಎಂಬ ಆಸೆಯೂ ಇತ್ತು ಆದರೆ ಪಕ್ಷದಲ್ಲಿ ಇವರ ಸಂಘಟನೆ, ಬೆಳವಣಿಗೆಗಳನ್ನು ನೋಡಿ ಮುಂದಿನ ದಿನಗಳಲ್ಲಿ ಎಲ್ಲಿ ನಮಗೆ ಪ್ರತಿಸ್ಪರ್ದಿ ಹಾಗುತ್ತಾನೇನೋ ಎಂಬ ಭಯ, ಮತ್ತು ದೂರಾಲೋಚನೆಯಿಂದ ಕೆಲ ಪ್ರಭಾವಿ(? )ನಾಯಕರು ದಿವಾಕರ್ ಗೆ ಟಿಕೆಟ್ ಸಿಗದಂತೆ ಮಾಡಿದರು

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಮತದಾರರಿಗೆ ಚಿರಪರಿಚಿತರಾಗಿರುವ ಕೆ ಎಸ್ ದಿವಾಕರ್ ಕೆ ಆರ್ ಪಿ ಪಿ ಪಕ್ಷದಿಂದ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಪ್ರಚಾರ ಭರಾಟೆಯ ನಡುವೆ ಅಸಂಖ್ಯಾತ ಬೆಂಬಲಿಗರೊಂದಿಗೆ ಸದ್ದಿಲ್ಲದೆ ಹಳ್ಳಿಗಳಲ್ಲಿನ ಗಲ್ಲಿಗಲ್ಲಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಂಡೂರು ಪಟ್ಟಣದಲ್ಲಿನ ಮನೆಯನ್ನೇ ಕಾರ್ಯಸ್ಥಾನ ಮಾಡಿಕೊಂಡಿರುವ ಅವರು ‘ಹಾಯ್ ಸಂಡೂರ್’ ಪತ್ರಿಕೆಗೆ ನೀಡಿದ ಸಂದರ್ಶನ..

◆ನಿಮ್ಮ ನೆಚ್ಚಿನ ಸಾಮಾಜಿಕ ಕ್ಷೇತ್ರದಲ್ಲಿ ಜನಸೇವೆ ಮಾಡುವ ಬದಲು ರಾಜಕೀಯಕ್ಕೆ ಏಕೆ ಬಂದಿರಿ?

ಸಾಮಾಜಿಕ ಕ್ಷೇತ್ರಗಳಲ್ಲಿ ಇರುವವರು ಅಲ್ಲಿಯೇ ಇದ್ದು ಸೇವೆ ಮಾಡಬೇಕು ಎಂಬ ಸೀಮಿತ ನಿಲುವಿನಾಚೆಗೆ ಎಲ್ಲರೂ ಆಲೋಚಿಸಬೇಕು. ಸಮಾಜ ಸೇವಕನಾಗಿ, ಕಾರ್ಯಕರ್ತನಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ರಾಜಕೀಯದ ಮೂಲಕ ಇನ್ನು ಹೆಚ್ಚಿನ ಜನಸೇವೆ ಮಾಡಲು ಬಯಸಿದೆ.

◆ನಿಮ್ಮದು ಬಿಜೆಪಿ ವಿರುದ್ಧ ಬಂಡಾಯವೇ?

ಖಂಡಿತ ಅಲ್ಲ, ಪಕ್ಷದಲ್ಲೇ ಇದ್ದುಕೊಂಡು ಸ್ಪರ್ಧಿಸಿದ್ದರೆ ಅದು ಬಂಡಾಯವಾಗುತ್ತಿತ್ತು. ನಾನು ಪಕ್ಷದಿಂದ ಹೊರಬಂದು ಕೆ ಆರ್ ಪಿ ಪಿ ಪಕ್ಷದಿಂದ ಸ್ಪರ್ಧಿಸಿರುವೆ.

◆ಟಿಕೆಟ್‌ ನೀಡದ ಬಿಜೆಪಿಯ ಮತಗಳನ್ನು ಕಸಿಯುವ’ ಉದ್ದೇಶವಿದೆಯೇ?

ಇಲ್ಲ ಬಿಜೆಪಿಗೆ ರಾಜೀನಾಮೆ ನೀಡಿ ನನ್ನೊಂದಿಗೆ ಬರುತ್ತೇನೆಂದ ಬೆಂಬಲಿಗರನ್ನು ಅಲ್ಲಿಯೇ ಇರಿ ಎಂದಿರುವೆ. ದ್ವೇಷ ರಾಜಕಾರಣ ನನಗೆ ಸರಿಹೊಂದುವುದಿಲ್ಲ.

◆ಹೆಚ್ಚಿನ ಕಾರ್ಯಕರ್ತರ ಬೆಂಬಲವಿಲ್ಲದೆ, ಹೇಗೆ ಚುನಾವಣೆ ಎದುರಿಸುತ್ತೀರಿ?

ರಾಷ್ಟ್ರೀಯ ಪಕ್ಷಗಳಿಗಿರುವಂತೆ ನನಗೆ ಹೆಚ್ಚಿನ ಕಾರ್ಯಕರ್ತರಿಲ್ಲ. ನನಗೆ ಅದಕ್ಕಿಂತಲೂ ಹೆಚ್ಚು ಅಭಿಮಾನಿಗಳು, ಹಿತೈಷಿಗಳಿದ್ದಾರೆ ಇದ್ದಾರೆ ಅವರೊಂದಿಗೆ ಓಡಾಡುತ್ತಿರುವೆ. ಎರಡೂ ಪಕ್ಷಗಳ ಬಗ್ಗೆ ಕಾರ್ಯಕರ್ತರಲ್ಲಿ ಮತ್ತು ಜನರಲ್ಲಿರುವ ಅಸಮಾಧಾನವೇ, ನನ್ನ ಕೈ ಹಿಡಿಯುತ್ತದೆ, ಹಿಂದೆ ಸರಿಯದೇ ಕಣದಲ್ಲಿ ಉಳಿದಿರುವುದರಿಂದ ಹಲವರು ನಿಜವಾದ ನನ್ನನ್ನು ‘ಗಂಡುಮಗ’ ಎಂದಿದ್ದಾರೆ.

◆ಕಾಂಗ್ರೆಸ್-ಬಿಜೆಪಿ ಜೆಡಿಎಸ್ ಪ್ರಚಾರದ ಭರಾಟೆಯ ನಡುವೆ ಜನರನ್ನು ಹೇಗೆ ತಲುಪುತ್ತೀರಿ?

ಮೂರು ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿವೆ. ಅಭಿವೃದ್ಧಿ ಮರೆತಿವೆ, ಪರಸ್ಪರ ನಿಂದನೆ, ಅವಹೇಳನವೇ ವಿಜೃಂಭಿಸುತ್ತಿದೆ. ನನ್ನ ಸೌಮ್ಯವಾದ ವ್ಯಕ್ತಿತ್ವ, ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯ ಮೂಲಕವೇ ಜನ ಗುರುತಿಸಿದ್ದಾರೆ.

◆ಕೆ ಆರ್ ಪಿ ಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಮ್ಮದೂ ವೈಯಕ್ತಿಕ ಪ್ರತಿಷ್ಠೆಯಲ್ಲವೇ?

ಇದು ಒಂದು ಸ್ಪರ್ಧೆ ಅಷ್ಟೆ, ಪ್ರತಿಷ್ಠೆ ಅಲ್ಲ,
ಆನೆಗಳ ನಡುವೆ ಇರುವೆಯ ಹೆಜ್ಜೆ ನನ್ನದು.ಕಳೆದಬಾರಿ ಸಂಡೂರಿನಲ್ಲಿ ಸ್ಪರ್ಧಿಸಲು ಅವಕಾಶ ಸಿಗದೇ ಹೋದಾಗಲೇ ಬಂಡಾಯವೇಳಬಹುದಾಗಿತ್ತು. ಮುಖಂಡರ ಸಲಹೆ ಮೇರೆಗೆ ಸುಮ್ಮನಾಗಿದ್ದೆ. ಈಗ ಜನರ, ಕಾರ್ಯಕರ್ತರ, ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ಪರ್ಧಿಸಿರುವೆ.

◆ಜಿಲ್ಲೆಯ ಚುನಾವಣೆ ಇತಿಹಾಸದಲ್ಲಿ ಪಕ್ಷೇತರರು, ಹಾಗೂ ಹೊಸದಾಗಿ ಸ್ಥಾಪಿಸಿರುವ ಪಕ್ಷದ ಅಭ್ಯರ್ಥಿಗಳು ಗೆದ್ದ ನಿದರ್ಶನವಿಲ್ಲ. ನೀವು ಗೆಲ್ಲುವಿರಾ?

ಖಂಡಿತ ಸಂಡೂರು ಕ್ಷೇತ್ರದಲ್ಲಿ ಇತಿಹಾಸ ಮರುಕಳಿಸುತ್ತದೆ ಈ ಬಾರಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ. ಇದು ನನ್ನ ಪರೀಕ್ಷೆಯ ಸಮಯ.

◆ನಿಮಗೆ ಜನ ಏಕೆ ಮತ ಕೊಡಬೇಕು?

ಕಣದಲ್ಲಿರುವವರಿಗಿಂತ ಐ ಆಮ್ ಗುಡ್, ಅದಕ್ಕೇ ಮತ ಕೊಡಬೇಕು. ಆದರೆ ಚುನಾವಣೆಯಲ್ಲಿ ಇದೊಂದೇ ಅಂಶ ಸಾಕಾಗುವುದಿಲ್ಲ ಎಂಬುದೂ ನನಗೆ ಗೊತ್ತಿದೆ.

◆ತಾಲೂಕಿನಲ್ಲಿ 2.50ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ನೀವು ಎಷ್ಟು ಮತ ಗಳಿಸುತ್ತೀರಿ?

ನಿಖರವಾಗಿ ಗೊತ್ತಿಲ್ಲ. ಆದ್ರೆ 50 ಸಾವಿರ ಮತಗಳ ಅಂತರಗಳಿಂದ ಗೆಲ್ಲುತ್ತೇನೆ ಅಂದಾಜು ಮಾಡಲೂ ಆಗಿಲ್ಲ. ನೂರು ಮತ ಕೊಡಲಿ, ಸಾವಿರ ಮತ ಕೊಡಲಿ, ಲಕ್ಷ ಮತ ಕೂಡಲಿ ಗೌರವದಿಂದ ಸ್ವೀಕರಿಸುತ್ತೇನೆ. ಮತವನ್ನು ದುಡ್ಡಿಗೆ ಮಾರಿಕೊಳ್ಳಬೇಡಿ, ಯೋಗ್ಯವಾದ ವ್ಯಕ್ತಿಗೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತವನ್ನು ಹಾಕಿ ಎಂಬುದೇ ನನ್ನ ಏಕೈಕ ಸಲಹೆ,ಮನವಿ

◆ನಿಮ್ಮ ಅಭಿವೃದ್ಧಿ ಯೋಜನೆಗಳೇನು?

ತಾಲೂಕಿನಲ್ಲಿ ಶಿಕ್ಷಣ ವಲಯಕ್ಕೆ ಪ್ರಮುಖ ಆದ್ಯತೆ, ಅವಸಾನದ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುವುದು, ಹಾಗೂ ವಿದ್ಯಾವಂತ ಯುವಕ/ಯುವತಿಯರಿಗೆ ಕೌಶಲ್ಯದ ಅರಿವು ಮೂಡಿಸಿ ಉದ್ಯೋಗಾವಕಾಶ ಸೃಷ್ಟಿಸುವುದು.
ಶಾಸಕಾಂಗ ಮತ್ತು ಕಾರ್ಯಾಂಗ ಪರಸ್ಪರ ಸೌಹಾರ್ದಯುತ ವಾತಾವರಣದಲ್ಲಿ ತಾಲೂಕಿನ ಸಂಪೂರ್ಣ ಪ್ರಗತಿಗೆ ಪಣ.
ಜಾತಿ, ಮತ, ಪಂಥ, ಹಾಗೂ ದ್ವೇಷ ಮುಕ್ತ ಸಮಾಜದ ನಿರ್ಮಾಣಕ್ಕೆ ಪಣ
ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳ ಏಳಿಗೆಗಾಗಿ ಹಲವು-ಹತ್ತು ಯೋಜನೆಗಳನ್ನು ರೂಪಿಸುವುದು.
ಸಂಡೂರು ವಿಧಾನಸಭಾ ವ್ಯಾಪ್ತಿಯ ಸಾರ್ವಜನಿಕ ವಲಯದ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ
ತಾಲೂಕಿನಲ್ಲಿ ವೈಜ್ಞಾನಿಕ ಕೃಷಿ-ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡುವುದು.
ರೈತರ-ಕಾರ್ಮಿಕರ ಸಂಕಷ್ಟಗಳಿಗೆ ನೆರವಾಗುವುದು, ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಹಿಂದುಳಿದ ಕುಗ್ರಾಮಗಳ ಅಭಿವೃದ್ಧಿ,

LEAVE A REPLY

Please enter your comment!
Please enter your name here