“ಬಿಜೆಪಿಯಲ್ಲಿ ಹಿರಿಯ ನಾಯಕರ ಕಡೆಗಣನೆ”

0
12

ಕೊಟ್ಟೂರು ಪಟ್ಟಣದಲ್ಲಿ ಸೋಮವಾರ ಸಂಜೆ ಬಿಜೆಪಿ ಹಿರಿಯ ಮುಖಂಡ ಶೆಟ್ಟಿ ತಿಂದಪ್ಪ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಪಟ್ಟಣದಲ್ಲಿ ಬಿಜೆಪಿ ಏನಾದರೂ ಇದೆ ಎಂದರೆ ಅದಕ್ಕೆ ಮೂಲ ಬುನಾದಿಯನ್ನು ನಿರ್ಮಾಣ ಮಾಡಿದ್ದೇನೆ. ಸರಿ ಸುಮಾರು 5 ದಶಕಗಳ ಕಾಲ ಪಕ್ಷದಲ್ಲಿ ದುಡಿದ ಕಾರ್ಯ ಕರ್ತರನ್ನು ಕಡೆಗಣನೆ.ಹಾಗೂ ನಿರ್ಲಕ್ಷೆ ಮಾಡ್ತಿದ್ದಾರೆ.

ಆದರೆ ಇತ್ತೀಚೆಗೆ ಪಕ್ಷದಲ್ಲಿ ಹಿರಿಯ ಮುಖಂಡನಾದ ನನ್ನನ್ನು ಕಡೆಗಣಿಸಿ ತಮಗೆ ಬೇಕಾದ ಹಾಗೆ ವರ್ತಿಸುತ್ತಿರುವುದು ವೈಯಕ್ತಿಕವಾಗಿ ಬೇಸರ ತಂದಿದೆ ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಅಗ್ರಪಂಕ್ತಿಯಲ್ಲಿದ್ದ ನನ್ನನ್ನು ತುಳಿದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ನಮ್ಮಗಳ ಅಭಿಪ್ರಾಯ ಪಡೆಯದೇ ಏಕಮುಖವಾಗಿ ವರ್ತಿಸುತ್ತಿರುವುದನ್ನು ನೋಡಿದರೆ ನಮ್ಮಂತವರಿಗೆ ಪಕ್ಷದಲ್ಲಿ ಬೆಲೆಯೇ ಇಲ್ಲದಂತಾಗಿದೆ ಎನ್ನುವುದು ಸಾಬೀತಾಗಿದೆ. ಈ ಹಿಂದೆ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿದ್ದ ಚನ್ನಬಸವನಗೌಡ ಪಾಟೀಲ್‌ರವರನ್ನು ಮತ್ತೊಮ್ಮೆ ಹೊಸ ವಿಜಯನಗರ ಜಿಲ್ಲೆಯ ಬಿಜೆಪಿ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಿರುವುದರಿಂದ ಪಕ್ಷದ ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಲ್ಲಾಹುಣ್ಸಿ ರಾಮಣ್ಣನವರಿಗೆ ಬಿಜೆಪಿ ಟಿಕೆಟ್ ನೀಡಿದಾಗ ಜಿಲ್ಲಾಧ್ಯಕ್ಷರ ಬೇಜವಾಬ್ದಾರಿಯಿಂದ ಹಾಗೂ ಬೂತ್ ಮಟ್ಟದ ಕಾರ್ಯಕರ್ತರಿಲ್ಲದೇ ಸೋಲುಂಟಾಗಿದೆ. ಅಲ್ಲದೇ ಈಗ ಜಿಲ್ಲಾಧ್ಯಕ್ಷರ ನೇಮಕವಾಗಿದ್ದಕ್ಕೆ, ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಅಸಮಾಧಾನ ಭುಗಿಲೆದ್ದಿದೆ. ದಿವಂಗತ ಕೆ.ಎಸ್.ಈಶ್ವರಗೌಡ ಟ್ರಸ್ಟ್ ಮತ್ತು ಬಿಜೆಪಿ ಸಹಯೋಗದಲ್ಲಿ ಜಿಲ್ಲಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದು ಪಕ್ಷಕ್ಕೆ ಮಾಡುವ ಅಪಮಾನವಲ್ಲವೇ? ಇದನ್ನು ಮಾಡುವ ಅವಶ್ಯಕತೆ ಇರಲಿಲ್ಲ. ಬಿಜೆಪಿ ಪಕ್ಷದ ವತಿಯಿಂದ ಮಾಡಬಹುದಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀರಾಮುಲು ಭಾಗಿಯಾಗಿದ್ದಾರೆ. ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿ ಬಿಜೆಪಿ ಇರುವುದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಹಾನಿಯಾಗುವ ದುರಸ್ಥಿಗೆ ಬಂದು ಒದಗಿದೆ. ಇದನ್ನು ಅರಿತು ರಾಜ್ಯ ನಾಯಕರು ವಿಜಯನಗರ ಜಿಲ್ಲೆಯಾದ್ಯಂತ  ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆಯಬೇಕಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದರು.

LEAVE A REPLY

Please enter your comment!
Please enter your name here