“ಚಾಲಕರ ಲಕ್ಷ ನಡಿಗೆ ಶಾಸಕರ ಮನೆಯ ಕಡೆಗೆ” ಹೋರಾಟ ಯಶಸ್ವಿ.

0
156

ವಿಜಯನಗರ:-17 ವಿಜಯನಗರ(ಹೊಸಪೇಟೆ)ಯ ಎಲ್ಲಾ ಆಟೋರಿಕ್ಷಾ , ಟಾಟಾ ಎಸಿ , ಟ್ಯಾಕ್ಸಿ ಹಾಗೂ ಇನ್ನಿತರ ವಾಣಿಜ್ಯ ವಾಹನ ಚಾಲಕ ಬಂಧುಗಳು ದಿನಾಂಕ 17/02/2021 ರಂದು ಪೆಟ್ರೋಲ್ ಡೀಸೆಲ್ LPG ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಹಾಗೂ ಹೊಸಪೇಟೆಯ ಗ್ಯಾಸ್ ಬಂಕ್ ನಲ್ಲಿ ಅನಧಿಕೃತವಾಗಿ ಹೆಚ್ಚು ಬೆಲೆಗೆ ಎಲ್ಪಿಜಿ ಗ್ಯಾಸ್ ಮಾರಾಟ ಮಾಡುವುದನ್ನು ವಿರೋಧಿಸಿ ಹೋರಾಟವನ್ನು ಹಮ್ಮಿಕೊಂಡಿತ್ತು.


ಹಾಗೂ ಮಾರ್ಚ್ ತಿಂಗಳಲ್ಲಿ ನಡೆಯಲಿರುವ 2021 ರಾಜ್ಯ ಬಜೆಟ್ ನಲ್ಲಿ 1000 ಕೋಟಿ ಹಣವನ್ನು ಚಾಲಕರ ಕಲ್ಯಾಣ ಮಂಡಳಿಗೆ ನೀಡಲು ಆಗ್ರಹಿಸಿ ಹೊಸಪೇಟೆಯ ಡಾ || ಬಿ.ಆರ್. ಅಂಬೇಡ್ಕರ್ ವೃತ್ತದಿಂದ ವಿಜಯನಗರ ಕ್ಷೇತ್ರದ ಮಾನ್ಯ ಶಾಸಕರ ರಾಣಿಪೇಟೆ ಮನೆಯವರಿಗೆ “ಚಾಲಕರ ಲಕ್ಷ ನಡಿಗೆ ಶಾಸಕರ ಮನೆಯ ಕಡೆಗೆ” ಎಂಬ ಘೋಷಣೆಯೊಂದಿಗೆ ಚಾಲಕರ ಪಾದಯಾತ್ರೆ ಹೊಸಪೇಟೆಯ ‘ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್’ ‘ಹಾಗೂ ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘ’ ಹೊಸಪೇಟೆ ತಾಲೂಕು ಸಮಿತಿಯ ನೇತೃತ್ವದಲ್ಲಿ ಹೋರಾಟವನ್ನು ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಆಟೋರಿಕ್ಷಾ , ಟಾಟಾ ಎ.ಸಿ , ಟ್ಯಾಕ್ಸಿ ಹಾಗೂ ಟಾಟಾ ಮ್ಯಾಜಿಕ್ ವಾಹನದ ಚಾಲಕರು ಹಾಗೂ ಸಂಘಟನೆಗಳ ಮುಖಂಡರಾದ ಕೆ.ಎಂ.ಸಂತೋಷ್ ಕುಮಾರ್ ಬಿ.ಎಸ್.ಯಮುನಪ್ಪ , ಎಸ್. ಅನಂತಶಯನ , ಗುರುರಾಜ್ , ಶರೀಫ್ ಸಾಬ್ , ಮಹಮದ್ , ಬಾಷಾ ಸಮೀರ್ , ಹುಸೇನ್ ಸಾಬ್ .ಹಾಗೂ ಇತರೆ ಮುಖಂಡರು ಭಾಗವಹಿಸಿದ್ದರು.

ಹೋರಾಟದಲ್ಲಿ ಬಾಗವಹಿಸಿದ ಎಲ್ಲರಿಗೂ
ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳು

ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ ಯೂನಿಯನ್‌ (ರಿ)
ಹಾಗೂ
ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘ (ರಿ)
ಹೊಸಪೇಟೆ ತಾಲೂಕು ಸಮಿತಿಯ ಪದಾಧಿಕಾರಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.

ವರದಿ:ಮಹಮದ್ ಗೌಸ್

LEAVE A REPLY

Please enter your comment!
Please enter your name here