ಜಿಂದಾಲ್ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

0
914

ಸಂಡೂರು:ಅ: 12: ತೋರಣಗಲ್ಲು ಒ.ಪಿ ಜಿಂದಾಲ್ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ತಜ್ಞರಾದ ಡಾ.ಸುಶ್ರಾವ್ಯ ಮಾತನಾಡಿ ಮಾನಸಿಕ ರೋಗಿಗಳಿಗೆ ಸಾಮಾಜಿಕ ಕಳಂಕ ಕಟ್ಟಬಾರದು ಎಂದು ಸಲಹೆ ನೀಡಿದರು, ಎಲ್ಲರೂ ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳ ಬೇಕು, ಹಲವಾರು ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದಿರಲು ಸಾಮಾಜಿಕ ಕಳಂಕವೇ ಕಾರಣವಾಗಿದೆ, ಜನರು ನೊಂದವರಿಗೆ ನೋಯಿಸಿ ಮಾತನಾಡುವುದರಿಂದ ಸಮಾಜಕ್ಕೆ ಹೆದರಿ ಸೂಕ್ತ ಸಮಯಕ್ಕೆ ಚಿಕಿತ್ಸೆಗೆ ಬರುವುದಿಲ್ಲ, ಸರಿಯಾದ ಚಿಕಿತ್ಸೆ ಪಡೆಯಲು ಜನರಲ್ಲಿ ಅರಿವು ಮೂಡಿಸುವುದೇ ಮುಖ್ಯವಾಗಿದೆ, ಎಲ್ಲಾ ಕಾಯಿಲೆಗಳಂತೆ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆದರೆ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಸಾಧ್ಯ, ಮೆಡಿಕಲ್ ಫೀಲ್ಡ್ನಲ್ಲಿ ಇರುವವರು ಅತೀ ಸುಲಭವಾಗಿ ಮಾನಸಿಕ ಕಾಯಿಲೆಗಳನ್ನು ಪತ್ತೆಬಹುದು ಮತ್ತು ಸೂಕ್ತ ಆಪ್ತ ಸಮಾಲೋಚನೆ ಹಾಗು ಚಿಕಿತ್ಸೆ ಮೂಲಕ ವಾಸಿ ಮಾಡಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯರಾದ ಡಾ.ಎಸ್.ಪಿ ಸಿಂಗ್, ಸೈಕಿಯಾಟ್ರಿಕ್ ವಿಭಾಗದ ಹೆಚ್.ಓ.ಡಿ ಶ್ರೀಮತಿ ರೆಜಿನಾ ಶೋಭಾ ದಾಸ್, ಶ್ರೀಮತಿ ವಿಮಲಾ ತಿಮ್ಮರಾಜು, ಶ್ರೀಮತಿ ಪರಿಮಾಳ ಬಿ.ಆರ್, ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here