“ಕೊಟ್ಟೂರೇಶ್ವರ ಮಹಾ ವಿದ್ಯಾಲಯಿಂದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ”

0
25

ಕೊಟ್ಟೂರು : ಕೊಟ್ಟೂರೇಶ್ವರ ಮಹಾ ವಿದ್ಯಾಲಯಿಂದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಭಾನುವಾರ ರಂದು ಹಮ್ಮಿಕೊಳ್ಳಲಾಯಿತು.

ಈ ಸಮಾರಂಭದ ವಿಶೇಷ ಅಹ್ವಾನಿತರಾಗಿ ಆಗಮಿಸಿದ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾನ್ಯ ಶ್ರೀ ಸಿದ್ದರಾಮ ಕಲ್ಮಠ ಸರ್ ಮಾತನಾಡಿ ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಆದರ್ಶಗಳನ್ನು ಶಿಸ್ತನ್ನು ಸಂಯಮ ಕಲಿಸುವುದರ ಮೂಲಕ ಯಶಸ್ವಿ ಪೌರವನ್ನಾಗಿ ನಿರ್ಮಿಸುತ್ತದೆ ಹಾಗಾಗಿ ಇಂತ ಎನ್ಎಸ್ಎಸ್ ಶಿಬಿರಗಳು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯದಲ್ಲಿ ತೊಡಗುವುದರ ಮೂಲಕ ಪ್ರಜೆಗಳನ್ನು ಜಾಗೃತರನ್ನಾಗಿ ಮಾಡುತ್ತದೆ ಹಾಗಾಗಿ ನಮ್ಮ ಮಹಾವಿದ್ಯಾಲಯದ ಎನ್ಎಸ್ಎಸ್ ಎ ಮತ್ತು ಬಿ ಘಟಕಗಳು ಕನ್ನನಾಯಕನಕಟ್ಟೆ ಮತ್ತು ಕೆ ಅಯ್ಯನಹಳ್ಳಿ ಗ್ರಾಮದಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳು ಉತ್ತಮವಾದಂತಹ ಸ್ವಚ್ಛತೆ ಶ್ರಮದಾನ ಮತ್ತು ಜಾಗೃತಿ ಮೂಡಿಸುವ ಮೂಲಕ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿದೆ ಹಾಗಾಗಿ ಈ ಶಿಬಿರವು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಮ್ ರವಿಕುಮಾರ್ ಮಾತನಾಡಿ ಏನ್ ಎಸ್ ಎಸ್ ಹೊಸ ಆಯಾಮವನ್ನು, ಇತಿಹಾಸವನ್ನು ಸೃಷ್ಟಿಸಿದ್ದಾರೆ ಏಕೆಂದರೆ ಎನ್ಎಸ್ಎಸ್ ಶಿಬಿರಾರ್ಥಿಗಳು ಹೊಸ ಹೆಜ್ಜೆಗಳನ್ನು ಇಟ್ಟಿದ್ದಾರೆ ಗಾಂಧೀಜಿ ಯವರ ಕನಸಿನ ಕೂಸು ರಾಷ್ಟ್ರೀಯ ಸೇವಾ ಯೋಜನೆಯ, ಉದ್ದೇಶಗಳು ಈಡೇರಬೇಕಾದರೆ ಶಿಬಿರಾರ್ಥಿಗಳು ಉತ್ತಮ ಜಾಗೃತಿ ಶ್ರಮದಾನ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ವಹಿಸುವುದರ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಅತ್ಯಂತ ಸೂಕ್ತ ಮತ್ತು ವಾಸ್ತವಿಕ ಇಂಥ ನಿಟ್ಟಿನಲ್ಲಿ ಮಹಾವಿದ್ಯಾಲಯದ ಶಿಬಿರಾರ್ಥಿಗಳು ಉತ್ತಮ ಕಾರ್ಯದಲ್ಲಿ ತೊಡಗಿ ಯಶಸ್ವಿ ಶಿಬಿರವನ್ನು ನಿರ್ವಹಿಸಿದ್ದಾರೆ ಎಂದು ಕರೆ ನೀಡಿದರು.

ನಂತರ ಮಾತನಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಹೇಮಣ್ಣ ಶಿಕ್ಷಕರು ಮಾತನಾಡಿ ನಮ್ಮ ಸರ್ಕಾರಿ ಶಾಲೆಯಲ್ಲಿ ಆಯೋಜನೆ ಮಾಡಿರೋದು ಸೌಭಾಗ್ಯ ಇಂತಹ ಶಿಬಿರದಿಂದ ನಮ್ಮ ಗ್ರಾಮಗಳು ಅತ್ಯಂತ ಜಾಗೃತ ಮತ್ತು ಸ್ವಚ್ಛತೆಯನ್ನ ಮಯುಡಿವೆ ಹಾಗಾಗಿ ಇದರ ಯಶಸ್ಸು ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಸಲ್ಲುತ್ತದೆ. ಶಿಬಿರ ಯಶಸ್ವಿಯಾಗಿದೆ ಎಂದು ಕೊಂಡಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಾಧಾ ಸ್ವಾಮಿ ಕೆ ಪಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳು. ಕೆ ಉಮೇಶ್ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು. ಉಪನ್ಯಾಸಕರಾದ ಸುದರ್ಶನ. ಬಿಎಸ್ ಪಟೇಲ್ . ಶ್ರೀ ರೇವಣ್ಣ ರಮೇಶ ಎಚ್ .ಕೂಡ್ಲಿಗಿ ಕೊಟ್ರೇಶ್. ರಶ್ಮಿ ಕೆ. ಶಿವಕುಮಾರ್ ಓಎಸ್ ಚನ್ನವೀರಪ್ಪ ಊರಿನ ಗ್ರಾಮಸ್ಥರು.ಮೊದಲಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ರಮೇಶ ನಿರ್ವಹಿಸಿದರೆ ವಂದನೆಯ ನ್ನು ಕೂಡ್ಲಿಗಿ ಕೊಟ್ರೇಶ್. ನಿರೂಪಣೆಯನ್ನು ವಿಜಯಲಕ್ಷ್ಮಿ ಸಜ್ಜನ್ ನೆರವೇರಿಸಿದರು.

LEAVE A REPLY

Please enter your comment!
Please enter your name here