ಸಂವಿಧಾನ ಜಾಗೃತಿಗೆ ವಿಶೇಷ ಉಪನ್ಯಾಸ

0
10

ಬಳ್ಳಾರಿ,ಮಾ.06: ಜಿಲ್ಲೆಯಲ್ಲಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸೋಮವಾರದಂದು ನಗರದ ರೇಡಿಯೋ ಪಾರ್ಕ್‍ನ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ ಕಾಲೇಜ್) ಮತ್ತು ಮೊದಲನೇ ರೈಲ್ವೇ ಗೇಟ್ ಹತ್ತಿರದ ಮಹಮ್ಮದೀಯ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.
ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಐ)ದ ಪ್ರಭಾರಿ ಪ್ರಾಂಶುಪಾಲರಾದ ಮಹಮದ್ ರಿಜ್ವನ್ ಖಾನ್ ಅವರು ಮಾತನಾಡಿ, ಸಂವಿಧಾನವು ಬಹಳ ಮಹತ್ವ ಪೂರ್ಣವಾಗಿದ್ದು, ಎಲ್ಲರೂ ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಸಂವಿಧಾನದಿಂದಾಗಿ ನಮ್ಮ ದೇಶದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸ್ವಾತಂತ್ರ್ಯ, ಸಮಾನತೆ ಹಕ್ಕುಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ನಮಗೆ ಕೊಟ್ಟಿದೆ. ಎಲ್ಲರೂ ಸಮಾನವಾಗಿ ಬದುಕಿನ ನೆಲೆ ಕಂಡುಕೊಳ್ಳಲು ಸಹಾಯಕವಾಗಿದೆ ಎಂದು ತಿಳಿಸಿದರು. ಬಳಿಕ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಳಿಕ ಮಹಮ್ಮದಿಯ ಕಾಲೇಜಿನ ಪ್ರಾಂಶುಪಾಲರಾದ ಮೈಮುದಾ ಅವರು ಮಾತನಾಡಿ, ಎಲ್ಲಾ ಮಹಿಳೆಯರು ಸಂವಿಧಾನವನ್ನು ಅರಿತುಕೊಳ್ಳಬೇಕು. ಸಂವಿಧಾನದಿಂದಾಗಿ ನಮ್ಮ ದೇಶದಲ್ಲಿ ನಾವು ನೀವು ವಿದ್ಯಾಭ್ಯಾಸ ಹಾಗೂ ಅಧಿಕಾರ ಸಮಾನತೆಯನ್ನು ಪಡೆಯುವಂತವರಾಗಿದ್ದೇವೆ. ಸಂವಿಧಾನವು ಎಲ್ಲರಿಗೂ ಸಮಾನವಾಗಿ ಬದುಕಿನ ನೆಲೆ ಕಂಡುಕೊಳ್ಳಲು ಸಹಾಯಕವಾಗಿದೆ ಎಂದು ತಿಳಿಸಿದರು. ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯವರಾದ ಕಲ್ಗುಡಿ ಬಸವರಾಜ, ರುದ್ರಚಾರ್, ಬಸವರಾಜ.ಎನ್ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here