ಬಿಜೆಪಿಯವರದ್ದು ಪ್ರಚೋದನಕಾರಿಯ ಸಮಾವೇಶಗಳು : ಶಾಸಕ ಈ.ತುಕಾರಾಂ

0
147

ಕುರುಗೋಡು:ಫೆ,24: ಸಂಡೂರಿನಲ್ಲಿ ನಡೆದ ಅಮಿತ್ ಶಾ ಅವರ ಸಮಾವೇಶದ ಪ್ರಕಾರತೆ ಬಿಜೆಪಿಗೆ ಬಿಳಬಹುದು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪ್ರಭಾವ ಬೀರುವ ಪ್ರಶ್ನೆನೇ ಇಲ್ಲ ಎಂದು ಶಾಸಕ ಈ.ತುಕಾರಾಂ ಗುಡುಗಿದರು.

ಪಟ್ಟಣ ಸಮೀಪದ ಏಳುಬೆಂಚಿ ಗ್ರಾಮದಲ್ಲಿ 2021-22 ನೇ ಸಾಲಿನ ಆರ್ ಎಂಎಸ್ಎ ಯೋಜನೆಯಡಿ ಸುಮಾರು 119.22 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪ್ರೌಢಶಾಲೆಯ ಸುಸಜ್ಜಿತ 10 ಕಟ್ಟಡಗಳನ್ನು ಶುಕ್ರವಾರ ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಸಂಡೂರಿಗೆ ಅಮಿತ್ ಶಾ ಅವರು ತರಾತುರಿಯಲ್ಲಿ ಬಂದು ತರಾತುರಿಯಲ್ಲೇ ಇಲ್ಲಿಂದ ಕಾಲ್ಕಿತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ಇಂತಹ ಸಮಾವೇಶಗಳ ಮೂಲಕ ರಾಜ್ಯದಲ್ಲಿ ಪ್ರಚೋದನಕಾರಿ ಮತ್ತು ಕಾನೂನು ಕದಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಯವರು ನೀಡಿದ್ದ ಪ್ರಣಾಳಿಕೆಯ 600ರಲ್ಲಿ ಬರೀ 45 ಭರವಸೆಗಳನ್ನು ಈಡೇರಿಸಿದ ಸಾಧನೆ ಮಾಡಿದ್ದಾರೆ. ಜನಪರ ಕಾರ್ಯಗಳನ್ನು ಮಾಡದೇ, ಜನರನ್ನು ಪ್ರಚೋದಿಸುವ ಕಾಯಕವಾಗಿದೆ. ಜಿಲ್ಲಾ ಖನಿಜ ನಿಧಿಯಲ್ಲಿ ಶೇ.60 ರಷ್ಟು ಅನುದಾನವನ್ನು ಸಂಡೂರು ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಬೇಕು. ಆದರೆ, ಸಂಡೂರಿಗೆ ಡಿಎಂಎಫ್ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈಗಾಗಲೇ ಸದನದಲ್ಲಿ ಧ್ವನಿ ಎತ್ತಲಾಗಿದೆ. ಅಖಂಡ ಬಳ್ಳಾರಿ ಜಿಲ್ಲೆ ಒಡೆದ ನಂತರ ವಿಜಯನಗರ ಜಿಲ್ಲೆಗೆ ಶೇ.12 ರಷ್ಟು ಮಾತ್ರ ಅನುದಾನ ಒದಗಬೇಕು. ಆದರೆ, ತಮ್ಮದೇ ಸರ್ಕಾರ ಇರುವುದರಿಂದ ವಿಜಯನಗರ ಜಿಲ್ಲೆಗೆ ಬಳ್ಳಾರಿ ಜಿಲ್ಲಾ ಖನಿಜ ನಿಧಿಯಲ್ಲಿ ಶೇ.28ರಷ್ಟು ಅನುದಾನವನ್ನು ಆನಂದ್ ಸಿಂಗ್ ತೆಗೆದುಕೊಳ್ಳುತ್ತಿರುವುದು ಯಾವ ನ್ಯಾಯ. ಇಂತಹ ಬಿಜೆಪಿಗೆ ಅಧಿಕಾರ ಕೊಡಬಾರದು ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ನಾವು ಯುಗಾದಿಯ ಹೊಸ್ತಿನಲ್ಲಿದ್ದೇವೆ. ಮಳೆ, ಬೆಳೆ ಕೊಡಲಿ. ಶಿಕ್ಷಣಕ್ಕೆ ಮೊದಲಕ್ಕೆ ಆಧ್ಯತೆ ನೀಡಲಾಗಿದೆ. ಸಮಾಜಕ್ಕೆ ಶಿಕ್ಷಣ ಮತ್ತು ಆರೋಗ್ಯ ಮುಖ್ಯವಾಗಿದೆ. ದಾನ ಧರ್ಮದಿಂದ ಹೆಸರನ್ನು ಹಚ್ವಹಸುರಾಗಿ ಉಳಿಸಿಕೊಳ್ಳಬೇಕು. ರಾಜಕೀಯದಲ್ಲಿ ಜನ್ಮ ನೀಡಿದ ಕ್ಷೇತ್ರದ ಜನರ ಸೇವೆಯನ್ನು ಮನೆಯ ಮಗನಾಗಿ ಮಾಡುತ್ತಿರುವೆ. ಮುಂದಿನ ದಿನದಲ್ಲಿ ಏಳುಬೆಂಚಿಯಲ್ಲಿ ಮಿನಿ ಎಪಿಎಂಸಿ ಸ್ಥಾಪಿಸಲಾಗುವುದು. 50 ಲಕ್ಷ ವೆಚ್ಚದಲ್ಲಿ ಕುಡತಿನಿ ಬೈಪಾಸ್(ರಿಂಗ್) ರಸ್ತೆ ನಿರ್ಮಿಾಲಾಗುವುದು. ದರೋಜಿಗೆ 5 ಕೋಟಿ ವೆಚ್ಚದ 10 ಹಾಸಿಗೆಯ ಆಸ್ಪತ್ರೆ ಆಗಿದೆ. ಏಳುಬೆಂಚಿಯಲ್ಲಿ 6 ಹಾಸಿಗೆಯ ಆಸ್ಪತ್ರೆ ಮಾಡುವ ಗುರಿ ಹೊಂದಲಾಗಿದೆ. ಮುಂದಿನ ದಿನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆದ್ದರಿಂದ ನಮಗೆ ಭವಿಷ್ಯ ಇರುವುದರಿಂದ ಜನರು ಮತ್ತೊಮ್ಮೆ ಮನೆ ಮಗನಂತೆ ಆಶೀರ್ವಾದ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಪಿಯು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂತೋಷ ಎಸ್.ಲಾಡ್ ಫೌಂಡೇಷನ್ ವತಿಯಿಂದ ಸಹಾಯಧನ ವಿತರಿಸಲಾಯಿತು. ತದನಂತರ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಡಿಎಂಎಫ್ ಯೋಜನೆಯಡಿ ಸುಮಾರು 3.50 ಕೋಟಿ ವೆಚ್ಚದ ಏಳುಬೆಂಚಿ-ಸಿದ್ದಮ್ಮನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಈ.ತುಕಾರಾಂ, ಜೆ.ಎನ್.ಗಣೇಶ್ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಜಡಿಯಪ್ಪ ಆಚಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಂಜುನಾಥ, ಗ್ರಾ.ಪಂ ಅಧ್ಯಕ್ಷೆ ರೇಣುಕಮ್ಮ ಹೇಮಾಚಂದ್ರದಾಸ್, ಉಪಾಧ್ಯಕ್ಷ ಪೊತಲಿಂಗಪ್ಪ , ಸದಸ್ಯರಾದ ಮಂಜುನಾಥ ಗೌಡ ಮುತ್ತು ಸರ್ವ ಸದಸ್ಯರು, ಭುಧಾನಿಗಳಾದ ವೈ ಪಾಲಾಕ್ಷಿ ಗೌಡ, ಕಾಂಗ್ರೆಸ್ ಕಾರ್ಯಕರ್ತರಾದ ಕಾರ್ಯಲಿಂಗನ ಗೌಡ, ಗೊಡೆ ಎರ್ರಿಸ್ವಾಮಿ, ಹನುಮಂತನ ಗೌಡ, ವಿರೇಶಪ್ಪ, ವಾರದ ಮಾರೆಣ್ಣ, ಕೆ.ಶಂಕರ ಗೌಡ, ಬಸವನ ಗೌಡ, ಪ್ರಭು, ಗಾದಿಲಿಂಗಪ್ಪ, ಲಿಂಗಪ್ಪ, ದೊಡ್ಡಪ್ಪ , ಸತ್ಯಪ್ಪ, ಶೇಖರ, ರಾಜಣ್ಣ, ಮೂರ್ತಿ, ಮಧು, ಹನುಮಂತ, ವೆಂಕಟೇಶ, ತಿಮ್ಮಪ್ಪ,ಬಾಬು, ಹರೀಶ ಮುಖ್ಯ ಶಿಕ್ಷಕ ಎಸ್.ಎಮ್. ತಿಪ್ಪೇಸ್ವಾಮಿ, ಸಹಾ ಶಿಕ್ಷಕರಾದ ಶಿವಶರಣಮ್ಮ, ರವಿ ನಾಯಕ, ಸುಕರಾಜು, ಅಮರೇಶ,ಕುಮಾರ್ ನಾಯಕ, ಅತಿಥಿ ಶಿಕ್ಷಕ ಬಸವನ ಗೌಡ ಮತ್ತು ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here