ತೋರಣಗಲ್ಲು ಗ್ರಾಮವನ್ನು 2025ಕ್ಕೆ ಕ್ಷಯರೋಗ ಮುಕ್ತ ಗ್ರಾಮವಾಗಿ ರೂಪಿಸಲು ಕೈಜೋಡಿಸೋಣ; ಗ್ರಾ.ಪಂ.ಅದ್ಯಕ್ಷೆ ಮಹೇಶ್ವರಿ ಕಟ್ಟೆಪ್ಪ.

0
123

ಸಂಡೂರು:ಸೆ:05:- 2025 ಕ್ಕೆ ಕ್ಷಯರೋಗ ಮುಕ್ತ ಗ್ರಾಮವಾಗಿ ರೂಪಿಸಲು ಇಲಾಖೆಯೊಂದಿಗೆ ಕೈಜೋಡಿಸೋಣ ಎಂದು ತೋರಣಗಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹೇಶ್ವರಿ ಕಟ್ಟೆಪ್ಪ ಕರೆ ನೀಡಿದರು, ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯತಿಯ ಯು.ಭೂಪತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಪಿ.ಡಿ.ಓ ಮತ್ತು ಟಿ.ಬಿ ನಿರ್ಮೂಲನೆ ಫ್ರಂಟ್ ಲೈನ್ ವರ್ಕರ್ಸ್ ಗೆ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ,ಬಳ್ಳಾರಿ ಮತ್ತು ಮೈರಾಡ ಟಿಬಿ ರೀಚ್ ಸಂಸ್ಥೆ, ಡಣಾಪುರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ತೊರಣಗಲ್ ಇವರ ಸಂಯುಕ್ತ ಆಶ್ರಯದಲ್ಲಿ ಕ್ಷಯರೋಗ ಮುಕ್ತ ಗ್ರಾಮ ಪಂಚಾಯತಿ ಮಾಡುವಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಪಾತ್ರ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಾಗಾರ ಉದ್ಘಾಟನೆ ಮಾಡಿ ಮಾತನಾಡಿದರು.

ಕಾರ್ಖಾನೆಗಳು ಇರುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಶ್ವಾಸಕೋಶದ ಮತ್ತು ಶ್ವಾಸಕೋಶೇತರ ಕ್ಷಯರೋಗಕ್ಕೆ ತುತ್ತಾಗುವ ಸಂಭವ ತುಂಬಾ ಇದೆ, ಕ್ಷಯರೋಗ ಮುಕ್ತ ಮಾಡಲು ನಾವು ತುಂಬಾ ಶ್ರಮಿಸಬೇಕಿದೆ, ರೋಗ ಲಕ್ಷಗಳು ಇರುವವರನ್ನು ತಪಾಸಣೆಗೆ ಒಳಪಡಿಸಬೇಕು, ಮತ್ತೊಂದೆಡೆ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಿದೆ, ಉತ್ತಮ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಹಾರ ಸೇವನೆಯು ಮುಖ್ಯ, ಕ್ಷಯರೋಗ ನಿರ್ಮೂಲನೆಯಲ್ಲಿ ಮೈರಾಡ ಸಂಸ್ಥೆಯು ಕೈಜೋಡಿಸಿರುವುದು ಸಂತಸದ ವಿಷಯ ಎಂದು ತಿಳಿಸಿದರು,

ಪಿ.ಡಿ.ಓ ಹನುಮಂತಪ್ಪ ಮಾತನಾಡಿ ತೋರಣಗಲ್ಲು ಪಂಚಾಯತಿಗೆ 28 ಜನ ಸದಸ್ಯರು ಇದ್ದು ತರಬೇತಿಗೆ ಹೆಚ್ಚು ಸದಸ್ಯರು ಭಾಗವಹಿಸದಿರುವುದು ಬೇಸರವಾಗಿದೆ 28 ಸದಸ್ಯರ ಪೈಕಿ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಭಾಗವಹಿಸಿದ್ದು ತರಬೇತಿ ಹಮ್ಮಿಕೊಂಡ ವಿಚಾರ ತಿಳಿಸಲಾಗಿತ್ತು, ನಾವು ಇಂದು ತಿಳಿದು ಕೊಂಡ ವಿಚಾರಗಳನ್ನು ಮುಂದಿನ ಸಭೆಗಳಲ್ಲಿ ಚರ್ಚಿಸಲಾಗುವುದೆಂದು ತಿಳಿಸಿದರು, ತರಬೇತಿಯಲ್ಲಿ ಕ್ಷಯರೋಗ ಲಕ್ಷಣಗಳು ಇರುವವರನ್ನು ಕಫ ಪರೀಕ್ಷೆ, ಎಕ್ಸ್ ರೇ ಪರೀಕ್ಷೆ, ಟ್ರೂನಾಟ್ ಪರೀಕ್ಷೆ, ಕಲ್ಚರ್ ಪರೀಕ್ಷೆಗಳು, ಮತ್ತು ಈಗಾಗಲೇ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಪರಿವಾರದವರನ್ನು ತಪಾಸಣೆಗೆ ಒಳಪಡಿಸುವ ಬಗ್ಗೆ ಚರ್ಚಿಸಲಾಯಿತು, ತರಬೇತಿ ನೀಡಲು ಅರೋಗ್ಯ ಇಲಾಖೆಯ ಜಿಲ್ಲಾ ತಂಡದ ಸಣ್ಣಕೇಶವ, ಪಂಪಾಪತಿ, ಮಲ್ಲಿಕಾರ್ಜುನ, ತಾಲೂಕಿನಿಂದ ಗೋಪಾಲ್, ಶಿವಪ್ಪ, ಶಕೀಲ್ ಅಹಮದ್, ರಾಜು, ರಾಜಶೇಖರ್, ಮೈರಾಡ ಸಂಸ್ಥೆಯ ಮಂಜುನಾಥ್,ರಮೇಶ, ಆಶಾ ಕಾರ್ಯಕರ್ತೆ ನೀಲಮ್ಮ, ಯರ್ರಮ್ಮ, ಅಂಗವಾಡಿ ಕಾರ್ಯಕರ್ತೆ ಶ್ವೇತಾ, ಶಂಕ್ರಮ್ಮ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here