ಫೆಬ್ರವರಿ 17 ರಿಂದ 23 ರವರೆಗೆ ಸಂಡೂರು ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ

0
27

ಸಂವಿಧಾನ‌ ಅಂಗೀಕಾರಗೊಂಡು ಎಪ್ಪತ್ತೈದು ವರ್ಷ ಪೂರ್ಣಗೊಂಡ ನಿಮಿತ್ಯ ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯದ್ಯಾಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಇದೇ ಫೆಬ್ರವರಿ 17 ರಿಂದ 23 ರವರೆಗೆ ಸಂಡೂರು ತಾಲೂಕಿನಲ್ಲಿ ಸಂಚರಿಸಲಿದ್ದು, ಭವ್ಯ ಸ್ವಾಗತ ನೀಡಬೇಕು ಎಂದು ತಹಶೀಲ್ದಾರ ಜೆ.ಅನಿಲ್ ಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕಾ ಆಡಳಿತದಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಸಂವಿಧಾನ ಜಾಗೃತಿ ಜಾಥಾವು ತಾಲೂಕಿನಲ್ಲಿ ಯಶಸ್ವಿಯಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೀಡಲಾದ ಜವಾಬ್ದಾರಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಿಳಿಸಿದರು.

ಏಳು ದಿನಗಳ ಕಾಲ ಸಂಡೂರು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮ ಪಂಚಾಯತ್ ನಲ್ಲಿ ಸಂಚರಿಸಲಿರುವ ಜಾಗೃತಿ ಜಾಥಾವು ಸಂವಿಧಾನದ ಪೀಠಿಕೆ ವಾಚನ, ಪೀಠಿಕೆ ಪ್ರತಿಜ್ಞೆ ಬೋಧನೆ, ಸಂವಿಧಾನದ ಮೂಲಾಶಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ. ಅಲ್ಲದೆ ಶಾಲಾ-ಮಕ್ಕಳಿಗೆ ಸಂವಿಧಾನ ಕುರಿತು ಆಯೋಜಿಸಿದ ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ. ಗ್ರಾಮದಲ್ಲಿ ತಜ್ಞರಿಂದ ‌ಉಪನ್ಯಾಸ ನಡೆಯಲಿದೆ ಎಂದರು.

ತಾಲೂಕಿನ ಎಲ್ಲಾ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜು ಮಕ್ಕಳು, ನೌಕರರು, ಸಾರ್ವಜನಿಕರು, ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಬೇಕೆಂದು ಅವರು ತಾಲುಕಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.

ನಂತರ ಬಿಇಓ ಡಾ.ಐ ಆರ್ ಅಕ್ಕಿ, ತಾಲೂಕು ಪಂಚಾಯಿತಿ ಇಓ ಸೇರಿದಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘ ಸಂಸ್ಥೆಗಳ ಮುಖಂಡರಾದ ಶಿವಲಿಂಗಪ್ಪ, ನಿಂಗಪ್ಪ ಐಹೊಳೆ,ಸೋಮಪ್ಪ, ರಾಮಕೃಷ್ಣ ಹೆಗಡೆ, ಚನ್ನಬಸವಸ್ವಾಮಿ ಇತರರು ತಮ್ಮ ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಿದರು

ಸಭೆಯಲ್ಲಿ ಸಮಾಜ‌ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್, ಬಿಇಓ ಡಾ. ಐ ಆರ್ ಅಕ್ಕಿ,ಪುರಸಭೆಯ ಮುಖ್ಯಾಧಿಕಾರಿ ಜಯಣ್ಣ, ತಾಲೂಕು ಪಂಚಾಯಿತಿ ಇಓ, ಪರಿಶಿಷ್ಟ ಪಂಗಡ ಇಲಾಖೆಯ ರವಿಕುಮಾರ್, ಸಿಡಿಪಿಓ ಎಳೆನಾಗಪ್ಪ,ಡಾ. ವಲಿಬಾಷ, ಸಂಗಮೇಶ್, ಅರಣ್ಯ ಇಲಾಖೆಯ ದಾದಖಲಂದರ್, ಗಿರೀಶ್, ಸೇರಿದಂತೆ ಇತರೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಇದ್ದರು.

LEAVE A REPLY

Please enter your comment!
Please enter your name here