ಸಿ.ಬಿ.ಎಸ್.ಇ. ಫಲಿತಾಂಶ 2024 : ಇಂದು ಸಿ.ಬಿ.ಎಸ್.ಇ. ಶಾಲೆಗೆ ಶೇಕಡ 100ರಷ್ಟು ಫಲಿತಾಂಶ.

0
409

ಕೊಟ್ಟೂರು : ಪಟ್ಟಣದ ಪ್ರತಿಷ್ಠಿತ ಇಂದು ಸಿ.ಬಿ.ಎಸ್.ಇ. ಶಾಲೆಯ 2023-24ನೇ ಸಾಲಿನ ಸಿ.ಬಿ.ಎಸ್.ಇ. ಹತ್ತನೇ ತರಗತಿಯ ಪರೀಕ್ಷ ಫಲಿತಾಂಶದಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 30 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ಉಳಿದ 17 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲ ಉತ್ತೀರ್ಣರಾಗಿರುತ್ತಾರೆ.

ವಿದ್ಯಾರ್ಥಿನಿ ಕೆ ಜೆ ಸಿಂಚನ 500ಕ್ಕೆ 475 (95 %) ಅಂಕಗಳನ್ನು ಗಳಿಸುವುದರ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾಳೆ. ವಿದ್ಯಾರ್ಥಿ ಅರ್ಜುನ್ ಕೆ 500ಕ್ಕೆ 448 (89.6 %), ವಿದ್ಯಾರ್ಥಿ ನಿಖಿಲ್ ಶಿವಸಾಲಿ 500 ಕ್ಕೆ 441 (88.2 %), ವಿದ್ಯಾರ್ಥಿನಿ ಅನುಷ ಕೆ ಎಸ್ 500 ಕ್ಕೆ 436 (87.2 %), ವಿದ್ಯಾರ್ಥಿನಿ ಜೀವಿತ ಎಂ 500ಕ್ಕೆ 402 (80.2 %)ಅಂಕಗಳನ್ನು ಪಡೆಯುವುದರ ಮೂಲಕ ಶಾಲೆಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ನಾಲ್ಕು ಮತ್ತು ಐದನೇ ಸ್ಥಾನವನ್ನು ಪಡೆಯುವುದರ ಮೂಲಕ ಶಾಲೆಗೆ ಕೀರ್ತಿತಂದಿರುತ್ತಾರೆ ಎಂದು ಇಂದು ಸಿ.ಬಿ.ಎಸ್.ಇ. ಶಾಲೆಯ ಪ್ರಾಂಶುಪಾಲರು ತಿಳಿಸಿದರು.

ಶಾಲೆಗೆ ಅತ್ಯುತ್ತಮ ಫಲಿತಾಂಶವನ್ನು ನೀಡಿದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಯ ಸಿಬ್ಬಂದಿ ವರ್ಗದವರಿಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಸಮಸ್ತ ವಿದ್ಯಾರ್ಥಿ ಬಳಗದಿಂದ ಶುಭ ಹಾರೈಸುತ್ತಾರೆ.

LEAVE A REPLY

Please enter your comment!
Please enter your name here