ಪುರಷರ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಅತೀ ಸರಳ,ಶಸ್ತ್ರಚಿಕಿತ್ಸೆ ನಂತರ ಕೆಲವೇ ಗಂಟೆಗಳಲ್ಲಿ ಮನೆಗೆ ಹೋಗಬಹುದು, ನಿತ್ಯ ಕೆಲಸದಲ್ಲಿ ತೊಡಗಿಕೊಳ್ಳಬಹುದು: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
427

ಸಂಡೂರು:ನ:23:- ಇದೇ ನವಂಬರ್ 21 ರಿಂದ‌ ಡಿಸೆಂಬರ್ 4 ರವರೆಗೆ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಎನ್.ಎಸ್.ವಿ ಪಾಕ್ಷಿಕ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ತೋರಣಗಲ್ಲು ರೈಲ್ವೆ ನಿಲ್ದಾಣದ ಹೆಚ್.ಎಲ್.ಸಿ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಈ ಪಾಕ್ಷಿಕದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಕಾರ್ಯಕ್ರಮ ಉತ್ತೇಜಿಸುವುದು, ಪುರುಷರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ತಿಳಿಸುವುದು, ಮೊದಲವಾರ ಎನ್.ಎಸ್.ವಿ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಮತ್ತು ಎರಡನೇ ವಾರ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಶಸ್ತ್ರಚಿಕಿತ್ಸೆಗೆ ಅಳವಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು, ನೋ ಸ್ಕಾಲ್ ಪೆಲ್ ವ್ಯಾಸೆಕ್ಟಮಿ (ಎನ್.ಎಸ್.ವಿ) ಇದು ತುಂಬಾ ಸರಳ, ಗಾಯ ಇಲ್ಲ, ಹೊಲಿಗೆ ಇಲ್ಲ, ಕೆಲವೇ ನಿಮಿಷಗಳಲ್ಲಿ ಮುಗಿದು ಹೋಗುತ್ತದೆ, ಶಸ್ತ್ರಚಿಕಿತ್ಸೆ ನಂತರ ನಿತ್ಯದ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು, ಲೈಂಗಿಕತೆಗೂ ತೊಂದರೆ ಇಲ್ಲ, ಕೆಲವು ದಿನ ಕಾಂಡೋಮ್ ಗಳನ್ನು ಕಡ್ಡಾಯವಾಗಿ ಬಳಸ ಬೇಕು ಏಕೆಂದರೆ ವೀರ್ಯಾಣುಗಳು ವೀರ್ಯ ಕೋಶದಲ್ಲಿ ಇರುವ ಕಾರಣ ಗರ್ಭಧಾರಣೆಯಾಗುವ ಸಂಭವ ಇರುವುದರಿಂದ ಇದನ್ನು ತಡೆಯಲು ಕಾಂಡೋಮ್ (ನಿರೋಧ್) ಬಳಸಬೇಕು, ಎರಡು ಮೂರು ದಿನ ಭಾರವಾದ ವಸ್ತುಗಳನ್ನು ಎತ್ತುವುದನ್ನು ಮಾಡಬಾರದು ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸ ಬೇಕು,ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಿಲ್ಲದ ಮಹಿಳೆಯರು ಅಂದರೆ ಬೊಜ್ಜು, ಮಧುಮೇಹ ಇರುವ ಮಹಿಳೆಯರು,ಇತರೆ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಗಂಡನಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಮನವೊಲಿಸಬೇಕು,ಕುಟುಂಬ ನಿಯಂತ್ರಣ ಸಾಧಿಸಲು ಪುರುಷರು ಸಹ ಪಾಲ್ಗೊಳ್ಳಲು ಮನಸ್ಸು ಮಾಡಬೇಕು ಎಂದು ತಿಳಿಸಿದರು,

ಮಹಿಳೆಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ 250/- ಸಹಾಯಧನ (ಬಿಪಿಎಲ್ ಗೆ 600/-) ನೀಡಲಾಗುತ್ತದೆ, ಆದರೆ ಪುರುಷರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ 1100/- ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ರಾಜೇಶ್ವರಿ, ಕಾವೇರಿ,ಆಶಾ,ಹುಲಿಗೆಮ್ಮ, ಶ್ರೀದೇವಿ, ತೇಜಮ್ಮ, ವಿಜಯಶಾಂತಿ, ಪದ್ಮಾ, ಕಿಶನ್, ರಾಮಾಂಜಿನಪ್ಪ, ರಾಜೇಶ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here