ಮರುಟ್ಲ ಗ್ರಾಮದ 44 ಕುಟುಂಬಗಳಿಗೆ 102 ಸೊಳ್ಳೆಪರದೆಗಳನ್ನು ವಿತರಣೆ ಮಾಡಿದ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ

0
121

ಸಂಡೂರು:ಆಗಸ್ಟ್:18; ಮರುಟ್ಲ ಗ್ರಾಮದ 230 ಜನಸಂಖ್ಯೆಯುಳ್ಳ 44 ಕುಟುಂಬಗಳಿಗೆ 102 ಸೊಳ್ಳೆ ಪರದೆಗಳನ್ನು ವಿತರಣೆ ಮಾಡಿದ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳಾದ ಡಾ.ಅಬ್ದುಲ್ಲಾ,
ಸಂಡೂರು ತಾಲೂಕಿನ ಮರುಟ್ಲ ಗ್ರಾಮದಲ್ಲಿ ಕಳೆದ ವರ್ಷ 2020 ರಲ್ಲಿ 6 ಮಲೇರಿಯಾ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿ ಮಲೇರಿಯಾ ನಿಯಂತ್ರಣಕ್ಕೆ ಬಂದಿತ್ತು, ಸೊಳ್ಳೆಗಳ ನಿಯಂತ್ರಣ, ಒಳಾಂಗಣ ಕೀಟನಾಶಕ ಸಿಂಪರಣೆ ಮಾಡಿಸಲಾಗಿತ್ತು,ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಕಾಯಿಲೆ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಈ ಎಲ್ಲಾ ಕ್ರಮಗಳೊಂದಿಗೆ ಇಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಗ್ರಾಮದ 44 ಕುಟುಂಬಗಳಿಗೆ ಆದ್ಯತೆಯ ಮೇರಗೆ 102 ಸೊಳ್ಳೆ ಪರದೆಗಳನ್ನು ವಿತರಣೆ ಮಾಡಲಾಯಿತು,

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಈ ಸೊಳ್ಳೆ ಪರದೆಗಳ ಸದ್ಬಳಕೆಯಾಗಬೇಕು, ರಾತ್ರಿ ವೇಳೆ ಮಾತ್ರವಲ್ಲದೆ ಹಗಲು ವೇಳೆಯಲ್ಲಿ ಸಹ ಮಲಗುವಾಗ ತಪ್ಪದೇ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗ ಬೇಕು, ಸಮೀಕ್ಷೆ ಪ್ರಕಾರ ಕುಟುಂಬ ಮತ್ತು ಮಕ್ಕಳಿಗೆ, ಹಿರಿಯ ನಾಗರೀಕರು ಮಲಗುವ ಆದ್ಯತೆ ಮೇರೆಗೆ ಪರದೆಗಳನ್ನು ವಿತರಿಸಲಾಗಿದೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಲ್ಲರೂ ಗ್ರಾಮದ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳ ಬೇಕು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿ ಕೊಳ್ಳಬೇಕು ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ, ಪೈಲೇರಿಯಾ, ಮೆದುಳು ಜ್ವರ, ಕಾಯಿಲೆಗಳ ರಕ್ಷಣೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು,

ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ಮಾತನಾಡಿ ಕುಗ್ರಾಮವೆಂಬ ಸಂಶಯ ಬೇಡ ಪ್ರತಿ ಗ್ರಾಮಕ್ಕೂ ಆರೋಗ್ಯ ಸೇವೆಗಳನ್ನು ಒದಗಿಸುವ ಸಂಕಲ್ಪ ಆರೋಗ್ಯ ಇಲಾಖೆ ಪಣ ತೊಟ್ಟಿದೆ, ವಾರಕ್ಕೆ ಎರಡು ಬಾರಿ ಮೆಡಿಕಲ್ ಮೊಬೈಲ್ ಯುನಿಟ್ ಗ್ರಾಮಕ್ಕೆ ಬಂದು ಹೋಗಲಿದೆ ಸಮಯ ಹೊಂದಾಣಿಕೆ ಮಾಡಿಕೊಂಡು ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ವಿನಂತಿಸಿದರು ಹಾಗು ಸ್ವತಃ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳು ಗ್ರಾಮಕ್ಕೆ ಬಂದು ಸೊಳ್ಳೆ ಪರದೆಗಳನ್ನು ವಿತರಣೆ ಮಾಡಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸಿದರು,

ಈ ಸಂದರ್ಭದಲ್ಲಿ ಜಿಲ್ಲಾ ಎಂಟೋಮಾಲಾಜಿಸ್ಟ್ ಶ್ರೀಮತಿ ನಂದಾ ಕಡಿ ಅವರು ಸೊಳ್ಳೆ ಜೀವನ ಶೈಲಿಯನ್ನು ಮತ್ತು ನಿಯಂತ್ರಣ ವಿಧಾನಗಳನ್ನು ವಿವರಿಸಿದರು,
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳಾದ ಡಾ.ಅಬ್ದುಲ್ಲಾ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಕುಶಾಲ್ ರಾಜ್, ಎಂಟೋಮಾಲಾಜಿಸ್ಟ್ ನಂದಾ ಕಡಿ, ಡಾ.ನವೀನ್ ಕುಮಾರ್, ತಾಲೂಕು ಮಲೇರಿಯಾ ಮೇಲ್ವಿಚಾರಕ ಸಾಗರ್, ಆರೋಗ್ಯ ನಿರೀಕ್ಷಣಾಧಿಕಾರಿ ಮರಿಬಸವನಗೌಡ, ಗೌರಮ್ಮ,ಸಿ.ಹೆಚ್.ಒ ಲೋಕನಾಯ್ಕ,ಆಶಾ ಕಾರ್ಯಕರ್ತೆ ವನಜಾಕ್ಷಿ, ಹನುಮಂತಮ್ಮ, ಲಕ್ಷ್ಮಿ, ಯರ್ರಮ್ಮ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಶಿಲ್ಪಾ, ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here