ಪದವೀಧರರು ಬಿಜೆಪಿ ಅಭ್ಯರ್ಥಿಗೆ ಪ್ರಥಮ ಪ್ರಾಸಸ್ತ್ಯದ ಮತ ನೀಡಿ:ಅರುಣ್ ಶಹಪುರ್

0
19

ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಪ್ರೌಢಶಾಲಾ ಶಿಕ್ಷಕರ ಮೂಲವೇತನವನ್ನು 4500 ರಿಂದ 17000 ವರೆಗೆ ಹೆಚ್ಚಿಸುವಂತಹ ಮಹತ್ತರ ಕಾರ್ಯವನ್ನು ಮಾಡಿದ್ದು, ನಿರಂತರವಾಗಿ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರದ ವಿಧಾನಸಭಾ ಪರಿಷತ್ ಸದಸ್ಯರು ಕಾರ್ಯನಿರ್ವಹಿಸಿದ್ದಾರೆ ಅದಕ್ಕೆ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಅಮರನಾಥ ಪಾಟೀಲ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕು ಎಂದು ಮಾಜಿ ಎಂ.ಎಲ್.ಸಿ. ಅರುಣ್ ಶಹಪುರ್ ಮನವಿ ಮಾಡಿದರು.

ಅವರು ಇಂದು ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಖಾಸಗಿ ಅನುದಾನ ರಹಿತ ಶಾಲೆಗಳನ್ನು, ಐಟಿಐ, ಡಿಪ್ಲೋಮಾ, ಕಾನೂನು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿದಂತಹ ಹೆಮ್ಮೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ, ನಿರಂತರವಾಗಿ ಬಿ.ಎಡ್., ಡಿ.ಎಡ್. ಕಾಲೇಜುಗಳನ್ನು ಸಹ ಅನುದಾನಕ್ಕೆ ಒಳಪಡಿಸಿದ್ದು ಬಿಜೆಪಿ ಸರ್ಕಾರ, ನಿರಂತರವಾಗಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಅದ ಕೊಡುಗೆಯನ್ನು ಕೊಟ್ಟಿದ್ದೇವೆ, ಅಲ್ಲದೆ 5ನೇ, 6ನೇ ವೇತನ ಆಯೋಗವನ್ನು ರಚಿಸಿ ಅದರಂತೆ ವೇತನ ನೀಡಿದ್ದೇವೆ, ಈಗ 7ನೇ ವೇತನ ಆಯೋಗ ರಚನೆಯಾಗಿತ್ತು, ಅದರೆ ಸರ್ಕಾರ ಇಲ್ಲವಾದ ಪರಿಣಾಮ ಅದು ಅನುಷ್ಠಾನವಾಗಲಿಲ್ಲ, ಮುಂದಿನ ದಿನಗಳಲ್ಲಿ ಅ ಕಾರ್ಯವನ್ನು ಮಾಡುತ್ತೇವೆ, ಕಾಂಗ್ರೇಸ್ ಸರ್ಕಾರ ಎಂದಿಗೂ ಸರ್ಕಾರಿ ಶಿಕ್ಷಕರ ಪದವೀಧರರ ಬಗ್ಗೆ ನಿರ್ಲಕ್ಷ್ಯ ತೋರಿದ್ದನ್ನು ಕಾಣುತ್ತೇವೆ, ಯುವ ನಿಧಿ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಅರ್ಜಿ ಹಾಕಿದವರಿಗೆ ಮಾತ್ರ ಎಂದರು, ಯಾರು ಅರ್ಜಿ ಹಾಕಲಿಲ್ಲ, ಯುವನಿಧಿ ಪಡೆಯಲಿಲ್ಲ, ಪದವಿಧರರಿಗೆ ಉದ್ಯೋಗ ಕೊಡುವ ಎಲ್ಲಾ ಪ್ರಯತ್ನ ಮಾಡಿದೆ, ಅತಿಥಿ ಉಪನ್ಯಾಸಕರಿಗೆ 11 ಸಾವಿರದಿಂದ 32 ಸಾವಿರದ ವರೆಗೆ ವೇತನ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ, ಅವರ 8 ಅವಧಿಯನ್ನು 15 ಅವಧಿಗೆ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ, ಅದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯ ಮೂಲಕ ಉತ್ತಮ ಶಿಕ್ಷಣ ಕೊಡುವ ಪ್ರಯತ್ನ ಮಾಡಿದ್ದೇವೆ, ಅದರೆ ಕಾಂಗ್ರೇಸ್ ಸರ್ಕಾರ ಮಕ್ಕಳಿಗೆ ಭಯದಲ್ಲಿ ಪರೀಕ್ಷೆ ಬರೆಯುವಂತೆ ಮಾಡಿ 20 ಗ್ರೇಸ್ ಅಂಕ ಕೊಡುವ ಮೂಲಕ ಉತ್ತೀರ್ಣ ಮಾಡಿದ್ದು ಎಷ್ಟು ಸರಿ, ಇಂತಹ ಅವೈಜ್ಞಾನಿಕ ನೀತಿಗಳನ್ನು ತರುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ತಂದ ಕೀರ್ತಿ ಕಾಂಗ್ರೇಸ್ ಸರ್ಕಾರದ್ದಾಗಿದೆ, ಅದ್ದರಿಂದ ವಿಧಾನಪರಿಷತ್ತಿನ ಅಭ್ಯರ್ಥಿ ಅಮರನಾಥ ಪಾಟೀಲ್ ಅವರಿಗೆ ಮತ ಹಾಕುವ ಮೂಲಕ ಉತ್ತಮ ಶಿಕ್ಷಣಕ್ಕೆ ನಾಂದಿಹಾಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮುಖಂಡರಾಧ ರಾಮಘಡ ರಘು, ಪ್ರವೀಣ್, ಕರಡಿಯರ್ರಿಸ್ವಾಮಿ, ದರೋಜಿರಮೇಶ್, ಪುರುಷೋತ್ತಮ, ರಮೇಶ್ ಗದ್ಲಿ, ರಮೇಶ್, ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here