ಆರೋಗ್ಯವೇ ಬಾಗ್ಯ ಆರೋಗ್ಯವಾಗಿರಲು ಉತ್ತಮ ಆಹಾರ, ಆರೋಗ್ಯ,ಜೀವನ ಶೈಲಿ ಮುಖ್ಯ; ಡಾ.ಗೋಪಾಲ್ ರಾವ್

0
122

ಸಂಡೂರು: ಎ:7: ಆರೋಗ್ಯವೇ ಭಾಗ್ಯ, ಸರ್ವರೂ ಆರೋಗ್ಯವಾಗಿರಲು ಉತ್ತಮ ಆಹಾರ ಸೇವನೆ,ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳುವುದು ಮುಖ್ಯ; ಡಾ. ಗೋಪಾಲ್ ರಾವ್ ಕರೆ ನೀಡಿದರು

ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ “ವಿಶ್ವ ಆರೋಗ್ಯ ದಿನ” ಆಚರಣೆಯ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಅವರು, ಪ್ರತಿಯೊಬ್ಬರೂ ಆರೋಗ್ಯದಿಂದ ಇರಲು ಉತ್ತಮ ಗಾಳಿ, ಶುದ್ಧ ನೀರು, ಉತ್ತಮ ಪೌಷ್ಟಿಕ ಆಹಾರ ಅವಶ್ಯವಾಗಿದ್ದು, ಇದರೊಂದಿಗೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವ ಕಡೆ ಗಮನ ಹರಿಸ ಬೇಕಿದೆ, ಆಧುನಿಕ ನಗರಿಕರಣ, ಕೈಗಾರಿಕೀಕರಣ, ವಾಹನ ದಟ್ಟಣೆ, ಕಲುಷಿತ ವಾತಾವರಣ ಕಲುಷಿತ ನೀರು, ಎಲ್ಲಂದರಲ್ಲಿ ತ್ಯಾಜ್ಯ, ರಾಸಾಯನಿಕಮಯ ಇರುವಂತಹ ಕಲುಷಿತ ವಾತಾವರಣ ಇರುವುದರಿಂದ ಹಾಗೂ ಬ್ಯಾಕ್ಟೀರಿಯಾ, ವೈರಸ್, ಪ್ರೋಟೋಜೋವಾಗಳು ಆರೋಗ್ಯವನ್ನು ಹಾಳು ಮಾಡುತ್ತಿವೆ, ಉತ್ತಮ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕಿದೆ, ಸಾಂಕ್ರಾಮಿಕ ಕಾಯಿಲೆಗಳನ್ನು ನಿಯಂತ್ರಿಸುವುದು, ಅಸಾಂಕ್ರಮಿಕ ಕಾಯಿಲೆಗಳನ್ನು ಹತೋಟಿಯಲ್ಲಿಡುವುದು, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ಸುಧಾರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿವಪ್ಪ ಮಾತನಾಡಿ ಇಂದು 75ನೇ ವರ್ಷದ “ವಿಶ್ವ ಆರೋಗ್ಯ ದಿನಾಚರಣೆ” ಯನ್ನು ಆಚರಿಸುತ್ತಿದ್ದೇವೆ, ಪ್ರತಿವರ್ಷ ಒಂದೊಂದು ಧೇಯವಾಕ್ಯದಡಿ ಕಾರ್ಯ ನಿರ್ವಹಿಸುತ್ತದೆ, ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಧೇಯದೊಂದಿಗೆ ಆಚರಿಸಲಾಗುತ್ತದೆ, ಈ ವರ್ಷದ ಘೋಷಣೆ “ಎಲ್ಲರಿಗೂ ಆರೋಗ್ಯ” ಎನ್ನುವ ವಾಕ್ಯದಂತೆ ಆರೋಗ್ಯವನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಾರ್ಮಸಿ ಅಧಿಕಾರಿ ಮಂಜುನಾಥ್, ಶ್ರುಶ್ರೂಷಣಾಧಿಕಾರಿ ಗೀತಾ,ರೇಷ್ಮಾ, ಮಾಲಾಶ್ರೀ,ಸಂಗೀತಾ, ಶಿವಕುಮಾರ್, ರಾಜೇಶ್,ರಾಮ್ ಬಾಬು, ಸಿದ್ದೇಶ್, ಜನೌಷಧಿ ಕೇಂದದ ಔಷಧಿ ತಜ್ಞರಾದ ಮೇಘನಾಥ್, ಅಬ್ದುಲ್ ಶುಕೂರ್, ಸೋಮಲಿಂಗಪ್ಪ, ಸಾರ್ವಜನಿಕರಾದ ರಮೇಶ್, ಬಿ.ಸೇನಾಪತಿ, ವೀರಭದ್ರಪ್ಪ,ಇ.ವಡಿಗೇರ್,ಮಾರೆಪ್ಪ,ಕರಿಬಸಪ್ಪ,ದೀಪುಮಿಶ್ರ, ರಾಜೇಶ್ ಪಾಂಡೆ, ಸುನಂದಾ, ಹುಲಿಗೆಮ್ಮ ಮತ್ತು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here