ಮೂಲಭೂತ ಸೌಲಭ್ಯ ನೀಡಿ ವೈಜ್ಞಾನಿಕ ಗಣಿಗಾರಿಕೆ ನಡೆಸಲು ಮನವಿ.

0
109

ಸಂಡೂರು:ಪೆ:03:-ತಾಲೂಕಿನ ರಾಮಘಡ ಬ್ಲಾಕ್ ನಲ್ಲಿ ಬರುವ ‘ರಾಮಘಡ ಐಲಿ ಮೈನ್ಸ್’ (ಎಂ.ಎಲ್ ನಂ.2593)ಪ್ರದೇಶದಲ್ಲಿ ಎಂ ಎಸ್ ಪಿ ಎಲ್ ಬಲ್ಧೋಟಾ ಕಂಪನಿಯು ಗಣಿಗಾರಿಕೆ ಮಾಡಲು ಸಾರ್ವಜನಿಕ ಅಲಿಕೆ ಸಭೆಯನ್ನು ಕರೆದಿದ್ದು ಪ್ರಮುಖವಾಗಿಸ್ಥಳೀಯರಿಗೆ ಉದ್ಯೋಗ, ಆರೋಗ್ಯ, ಶಿಕ್ಷಣದ ಪೂರ್ಣ ವ್ಯವಸ್ಥೆ ಮಾಡುವ ಮೂಲಕ ವೈಜ್ಞಾನಿಕ ಗಣಿಗಾರಿಕೆ ಮಾಡಲು ಅವಕಾಶ ನೀಡಬೇಕು ಎಂದು ಕರವೇ ಅಧ್ಯಕ್ಷ ಪಿ.ರಾಜು ತಿಳಿಸಿದರು.

ಅವರು ತಾಲೂಕಿನ ರಾಮಘಡ ಗಣಿ ಪ್ರದೇಶದಲ್ಲಿ ಎಂ.ಎಲ್.ನಂ. 2593 ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಎಂ ಎಸ್ ಪಿ ಎಲ್. ಬಲ್ಧೋಟಾ ಕಂಪನಿ ಹಾಗೂ ಪರಿಸರ ಇಲಾಖೆಯಿಂದ ಪರಿಸರ ಪರಿಸರ ಸಾರ್ವಜನಿಕರ ಅಲಿಕೆಯ ಸಭೆಯಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿ ಇಂದು ತಾಲೂಕಿನಾದ್ಯಂತ ಗಣಿಗಾರಿಕೆ ನಡೆಯುತ್ತಿದೆ. ಕಾರಣ ಅದು ಬಳ್ಳಾರಿ ಜಿಲ್ಲೆಯ ಜನತೆಯ ಉದ್ಯೋಗದ ಮೂಲವಾಗಿದೆ, ಆದ್ದರಿಂದ ಸಾರ್ವಜನಿಕವಾಗಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು, ಅದರಲ್ಲೂ ಸಂಡೂರು ತಾಲೂಕಿನ ರಾಮಘಡ ಸುತ್ತಲಿನ ಜನತೆಗೆ, ಯುವಕರಿಗೆ, ಅವಕಾಶ ಕಲ್ಪಿಸಬೇಕು, ಗಣಿಗಾರಿಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳದಂತೆ ಕ್ರಮವಹಿಸಿ ವೈಜ್ಞಾನಿಕ ಗಣಿಗಾರಿಕೆ ಮಾಡಬೇಕು, ರಾಷ್ಟ್ರೀಯ ಉದ್ಯಾನವನ ಸ್ಥಾಪಿಸಬೇಕು, ಗ್ರಾಮದ ಶಾಲೆ ಶೋಚಲಯ, ಸಮುದಾಯ ಭವನಗಳ ನಿರ್ಮಾಣ, ಕೃಷಿಕರಿಗೆ ಸಾವಯುವ ಕೃಷಿ ತರಬೇತಿಗೆ ಒತ್ತು ನೀಡಬೇಕು, ಕೃಷಿಹೊಂಡ, ಇಂಗುಗುಂಡಿಗಳ ನಿರ್ಮಾಣ, ಸ್ವ ಉದ್ಯೋಗ ಹೊಂದಲು ತರಬೇತಿ ಮತ್ತು ಅದಕ್ಕೆ ಬೇಕಾದ ಕಂಪ್ಯೂಟರ್, ಹೊಲಿಗೆ ಯಂತ್ರ, ಆಟೋ ಮೊಬೈಲ್ ವ್ಯವಸ್ಥೆ ಮಾಡಬೇಕು, ಸಮುದಾಯ ಆರೋಗ್ಯ ಕೇಂದ್ರ, ಸಂಚಾರಿ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿ ಗಣಿಗಾರಿಕೆ ಮಾಡಿ ಎಂದು ತಿಳಿಸಿದರು.

ಪರಿಸರ ಸಂರಕ್ಷಣಾ ವೇದಿಕೆ ಸತೀಶ್.ಎಂ. ಮಾತನಾಡಿ ಶೈಕ್ಷಣಿಕ, ಸಾಂಸ್ಕೃತಿಕ, ಕೃಷಿ, ಆರೋಗ್ಯ ರಕ್ಷಣೆಯೊಂದಿಗೆ ವೈಜ್ಞಾನಿಕ ಗಣಿಗಾರಿಕೆ ಮಾಡಲು ಯಾವುದೇ ತಕರಾರು ಇರುವುದಿಲ್ಲ, ಆದರೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದರು.

ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪಿ.ರಾಜು ಗಣಿ ಕಾರ್ಮಿಕರ ಸಂಘ, ಜೀವ ವೈವಿಧ್ಯ ಸಮಿತಿ, ರೈತಸಂಘದ ಶ್ರೀಪಾದಸ್ವಾಮಿ,ಕೆ.ಅರ್.ಕುಮಾರಸ್ವಾಮಿ, ಎನ್.ಎಂ.ಡಿ.ಸಿ ಕಾರ್ಮಿಕರ ಸಂಘ, ಕರ್ನಾಟಕ ರಕ್ಷಣಾ ಸೇನೆ, ಡಾ.ಬಿ.ಅರ್.ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಶಿವಲಿಂಗಪ್ಪ, ಜೈಹಿಂದ್ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಡಿ.ಎಫ್.ಸುಬಾನ್,ಇತರೆ ಹಲವಾರು ಸಂಘಟನೆಗಳು, ತಮ್ಮ ಮನವಿಪತ್ರಗಳನ್ನು ಪರಿಸರ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದರು.

LEAVE A REPLY

Please enter your comment!
Please enter your name here