ಬಳ್ಳಾರಿ ಲೋಕಸಭೆ ಚುನಾವಣೆ-2024ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ್ ಗೆಲುವು

0
241

ಬಳ್ಳಾರಿ,ಜೂ.04: ಬಳ್ಳಾರಿ-09 (ಪ.ಪಂ) ಲೋಕಸಭೆ ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಮಂಗಳವಾರ ಹೊರಬಿದ್ದಿದ್ದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಮ್ ಅವರು 7,30,845 ಮತಗಳನ್ನು ಪಡೆದು ಭರ್ಜರಿ 98,992 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಮ್ ಅವರ ಪ್ರತಿಸ್ಪರ್ಧಿಯಾದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಬಿ.ಶ್ರೀರಾಮುಲು ಅವರು 6,31,853 ಮತಗಳನ್ನು ಪಡೆದಿದ್ದಾರೆ.
ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿ ವಾಲ್ಮೀಕಿ ಕೃಷ್ಣಪ್ಪ ಅವರು 5,911 ಮತ ಗಳಿಸಿದರೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಸಿ.ಚನ್ನವೀರ ಅವರು 3,797, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷದ ಅಭ್ಯರ್ಥಿ ಎ.ದೇವದಾಸ್ 1,741, ಪ್ರಹರ್ ಜನಶಕ್ತಿ ಪಾರ್ಟಿಯ ಅಭ್ಯರ್ಥಿ ಮಂಜುನಾಥ ಗೋಸಲ ಅವರು 1,322, ನವಭಾರತ ಸೇನಾ ಪಕ್ಷದ ಅಭ್ಯರ್ಥಿ ಜಿ.ಸ್ವಾಮಿ ಅವರು 944, ಪಕ್ಷೇತರ ಅಭ್ಯರ್ಥಿಗಳಾದ ಅರುಣ್ ಎಸ್.ಹಿರೇಹಾಳ್ ಅವರು 1,282, ಕಂಡಕ್ಟರ್ ಪಂಪಾಪತಿ ಅವರು 2,460 ಮತ್ತು ವೀರೇಶ ಅವರು 1,870 ಮತ ಗಳಿಸಿದ್ದಾರೆ. ನೋಟಾಗೆ 7,889 ಮತಗಳು ದಾಖಲಾಗಿವೆ.

ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಒಟ್ಟು 3436 ಮತಗಳು ಚಲಾಯಿಸಲಾಗಿದ್ದು, ಈ ಪೈಕಿ 81 ಮತಗಳು ತಿರಸ್ಕøತಗೊಂಡಿವೆ. ಕಾಂಗ್ರೆಸ್‍ನ ಈ. ತುಕಾರಾಮ್ ಗೆ 1264 ಅಂಚೆ ಮತಗಳು ಬಂದಿವೆ. ಉಳಿದಂತೆ ವಾಲ್ಮೀಕಿ ಕೃಷ್ಣಪ್ಪ-10, ಬಿ. ಶ್ರೀರಾಮುಲು-2040, ಸಿ.ಚನ್ನವೀರ-03, ಎ. ದೇವದಾಸ್-02, ಮಂಜುನಾಥ ಗೋಸಾಲ-03, ಜಿ. ಸ್ವಾಮಿ-04, ಅರುಣ್ ಎಸ್ ಹಿರೇಹಾಳ್-01, ಕಂಡಕ್ಟರ್ ಪಂಪಾಪತಿ-02 ಹಾಗೂ ವೀರೇಶ್ ಗೆ 08 ಮತಗಳು ಬಂದಿವೆ. ಅಂಚೆ ಮತದಲ್ಲಿ 18 ಮತಗಳು ನೋಟಾ ಗೆ ಚಲಾವಣೆಗೊಂಡಿವೆ.

ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತದಾನ ವಿವರ:

88-ಹಡಗಲಿ:
ಈ.ತುಕಾರಾಮ್ (ಕಾಂಗ್ರೆಸ್)-76,486
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-648
ಬಿ.ಶ್ರೀರಾಮುಲು(ಬಿಜೆಪಿ)-68,229
ಸಿ.ಚನ್ನವೀರ(ಕೆಆಆರ್‍ಎಸ್)-466
ಎ.ದೇವದಾಸ್(ಎಸ್‍ಯುಸಿಐ)-189
ಮಂಜುನಾಥ ಗೋಸಲ(ಪಿಜೆಪಿ)-129
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -103
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-136
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-268
ವೀರೇಶ(ಪಕ್ಷೇತರ)-216
ನೋಟಾ-817
ಒಟ್ಟು ಮತಗಳು-148951

89-ಹಗರಿಬೊಮ್ಮನಹಳ್ಳಿ:
ಈ.ತುಕಾರಾಮ್(ಕಾಂಗ್ರೆಸ್)-97,103
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-771
ಬಿ.ಶ್ರೀರಾಮುಲು(ಬಿಜೆಪಿ)-84,903
ಸಿ.ಚನ್ನವೀರ(ಕೆಆಆರ್‍ಎಸ್)-486
ಎ.ದೇವದಾಸ್(ಎಸ್‍ಯುಸಿಐ)-166
ಮಂಜುನಾಥ ಗೋಸಲ(ಪಿಜೆಪಿ)-209
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -107
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-149
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-326
ವೀರೇಶ(ಪಕ್ಷೇತರ)-220
ನೋಟಾ-956
ಒಟ್ಟು ಮತಗಳು-1,85,396.

90-ವಿಜಯನಗರ:
ಈ.ತುಕಾರಾಮ್(ಕಾಂಗ್ರೆಸ್)-89,955
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-550
ಬಿ.ಶ್ರೀರಾಮುಲು(ಬಿಜೆಪಿ)-90,120
ಸಿ.ಚನ್ನವೀರ(ಕೆಆಆರ್‍ಎಸ್)-390
ಎ.ದೇವದಾಸ್(ಎಸ್‍ಯುಸಿಐ)-159
ಮಂಜುನಾಥ ಗೋಸಲ(ಪಿಜೆಪಿ)-252
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -72
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-124
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-276
ವೀರೇಶ(ಪಕ್ಷೇತರ)-201
ನೋಟಾ-1,027
ಒಟ್ಟು ಮತಗಳು-1,83,126.

91-ಕಂಪ್ಲಿ:
ಈ.ತುಕಾರಾಮ್(ಕಾಂಗ್ರೆಸ್)-91,047
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-867
ಬಿ.ಶ್ರೀರಾಮುಲು(ಬಿಜೆಪಿ)-81,468
ಸಿ.ಚನ್ನವೀರ(ಕೆಆಆರ್‍ಎಸ್)-598
ಎ.ದೇವದಾಸ್(ಎಸ್‍ಯುಸಿಐ)-293
ಮಂಜುನಾಥ ಗೋಸಲ(ಪಿಜೆಪಿ)-189
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -117
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-226
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-436
ವೀರೇಶ(ಪಕ್ಷೇತರ)-359.
ನೋಟಾ-1148
ಒಟ್ಟು ಮತಗಳು-1,76,808.

93-ಬಳ್ಳಾರಿ ಗ್ರಾಮೀಣ:
ಈ.ತುಕಾರಾಮ್(ಕಾಂಗ್ರೆಸ್)-1,01,434
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-766
ಬಿ.ಶ್ರೀರಾಮುಲು(ಬಿಜೆಪಿ)-75,556
ಸಿ.ಚನ್ನವೀರ(ಕೆಆಆರ್‍ಎಸ್)-445
ಎ.ದೇವದಾಸ್(ಎಸ್‍ಯುಸಿಐ)-224
ಮಂಜುನಾಥ ಗೋಸಲ(ಪಿಜೆಪಿ)-125
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -116
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-164
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-311
ವೀರೇಶ(ಪಕ್ಷೇತರ)-218.
ನೋಟಾ-923
ಒಟ್ಟು ಮತಗಳು-1,80,302.

94-ಬಳ್ಳಾರಿ ನಗರ:
ಈ.ತುಕಾರಾಮ್(ಕಾಂಗ್ರೆಸ್)-94,628
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-466
ಬಿ.ಶ್ರೀರಾಮುಲು(ಬಿಜೆಪಿ)-80,247
ಸಿ.ಚನ್ನವೀರ(ಕೆಆಆರ್‍ಎಸ್)-264
ಎ.ದೇವದಾಸ್(ಎಸ್‍ಯುಸಿಐ)- 272
ಮಂಜುನಾಥ ಗೋಸಲ(ಪಿಜೆಪಿ)-73
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -65
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-102
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-117
ವೀರೇಶ (ಪಕ್ಷೇತರ)-165.
ನೋಟಾ-1,162
ಒಟ್ಟು ಮತಗಳು-1,77,621

95-ಸಂಡೂರು:
ಈ.ತುಕಾರಾಮ್(ಕಾಂಗ್ರೆಸ್)-95,936
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-911
ಬಿ.ಶ್ರೀರಾಮುಲು(ಬಿಜೆಪಿ)-74,843
ಸಿ.ಚನ್ನವೀರ(ಕೆಆಆರ್‍ಎಸ್)-514
ಎ.ದೇವದಾಸ್(ಎಸ್‍ಯುಸಿಐ)-224
ಮಂಜುನಾಥ ಗೋಸಲ(ಪಿಜೆಪಿ)-183
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -155
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-200
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-355
ವೀರೇಶ(ಪಕ್ಷೇತರ)-275.
ನೋಟಾ-1093
ಒಟ್ಟು ಮತಗಳು-1,74,689.

96-ಕೂಡ್ಲಿಗಿ:
ಈ.ತುಕಾರಾಮ್(ಕಾಂಗ್ರೆಸ್)-82,992
ವಾಲ್ಮೀಕಿ ಕೃಷ್ಣಪ್ಪ(ಬಿಎಸ್‍ಪಿ)-922
ಬಿ.ಶ್ರೀರಾಮುಲು(ಬಿಜೆಪಿ)-74,447
ಸಿ.ಚನ್ನವೀರ(ಕೆಆಆರ್‍ಎಸ್)-631
ಎ.ದೇವದಾಸ್(ಎಸ್‍ಯುಸಿಐ)-192
ಮಂಜುನಾಥ ಗೋಸಲ(ಪಿಜೆಪಿ)-159
ಜಿ.ಸ್ವಾಮಿ(ನವಭಾರತ ಸೇನಾ ಪಕ್ಷ) -145
ಅರುಣ್ ಎಸ್.ಹಿರೇಹಾಳ್(ಪಕ್ಷೇತರ)-180
ಕಂಡಕ್ಟರ್ ಪಂಪಾಪತಿ(ಪಕ್ಷೇತರ)-309
ವೀರೇಶ-(ಪಕ್ಷೇತರ)208.
ನೋಟಾ-745
ಒಟ್ಟು ಮತಗಳು-1,60,930

ಮತ ಎಣಿಕೆಗಾಗಿ ನಗರದ ರಾವ್‍ಬಹದ್ದೂರ್ ವೈ ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಯೂ ಕೈಗೊಳ್ಳಲಾಗಿತ್ತು.
ಪೂರ್ವ ನಿಗದಿಯಂತೆ ಮಂಗಳವಾರದಂದು ಬೆಳಗ್ಗೆ 7.30 ಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ ಸಖಮುರಿ, ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂನ್ನು ತೆರೆಯಲಾಯಿತು. ಬಳಿಕ ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆಯನ್ನು ಪ್ರಾರಂಭಿಸಲಾಯಿತು. ನಂತರ ಭದ್ರತಾ ಕೋಣೆಯಲ್ಲಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕೊಠಡಿಗಳಿಗೆ ಆಯಾ ಸುತ್ತು ಮತ ಎಣಿಕೆಯ ಸಂದರ್ಭದಲ್ಲಿ ಒಯ್ಯಲಾಯಿತು.

ಮತ ಎಣಿಕೆ ಪ್ರಾರಂಭವಾದ ಮೊದಲ ಸುತ್ತಿನಿಂದ ಕೊನೆಯವರೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ. ತುಕಾರಾಂ ಅವರು ಸಮೀಪದ ಸ್ಪರ್ಧಿ ಬಿಜೆಪಿ ಪಕ್ಷದ ಬಿ. ಶ್ರೀರಾಮುಲು ಅವರಿಗಿಂತಲೂ ಮತ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡೇ ಬಂದರು.
ಮತ ಎಣಿಕೆ ಕೇಂದ್ರದ ಕಟ್ಟಡದಲ್ಲಿ 20 ಇವಿಎಂ ಸ್ಟ್ರಾಂಗ್ ರೂಂ ಮತ್ತು 02 ಅಂಚೆ ಮತಗಳ ಸ್ಟ್ರಾಂಗ್ ರೂಂಗಳಿದ್ದು, ಮತ ಎಣಿಕೆ ಕಾರ್ಯ ಒಟ್ಟು 08 ಹಾಲ್‍ಗಳಲ್ಲಿ ನಡೆಯಿತು.

ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್ ಕಾಯ್ದಿರಿಸಲಾಗಿತ್ತು. ಪ್ರತಿ ಟೇಬಲ್‍ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯೋಜಿಸಲಾಗಿತ್ತು. ಬಳ್ಳಾರಿ ಜಿಲ್ಲೆಗೆ ಒಟ್ಟು 112 ಟೇಬಲ್‍ಗಳಂತೆ, 150 ಎಣಿಕಾ ಮೇಲ್ವಿಚಾರಕರು, 159 ಎಣಿಕಾ ಸಹಾಯಕರು ಮತ್ತು 146 ಎಣಿಕಾ ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಿಸಿದ್ದು, ಆಯಾಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮತ ಎಣಿಕೆ ಸಿಬ್ಬಂದಿ ಮತ್ತು ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳು ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಮತ ಎಣಿಕಾ ಕೇಂದ್ರಕ್ಕೆ ಸಿ.ಸಿ ಕ್ಯಾಮರಾ ಅಳವಡಿಸಿ ಮತ್ತು ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಭದ್ರತೆ ನೀಡಲಾಗಿತ್ತು.
ಮಾಧ್ಯಮ ಕೇಂದ್ರದ ಮೂಲಕ ಮತ ಎಣಿಕೆಯ ಪ್ರತಿ ಸುತ್ತಿನ ಮಾಹಿತಿಯನ್ನು ಜನತೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿತ್ತು.
ಮತ ಎಣಿಕೆಯ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದ ಹೊರಗಡೆ ಮತ್ತು ಒಳಗಡೆ ಸೂಕ್ತವಾದ ಪೆÇಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿತ್ತು. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮುಕ್ತಾಯಗೊಂಡರೂ ಅಂತಿಮವಾಗಿ ಸಂಜೆಯ ವೇಳೆಗೆ ಫಲಿತಾಂಶವನ್ನು ಪ್ರಕಟಿಸಲಾಯಿತು.

LEAVE A REPLY

Please enter your comment!
Please enter your name here