ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಮಾವೇಶ:ನೂತನ ಪದಾಧಿಕಾರಿಗಳ ಆಯ್ಕೆ.

0
262

ಬಳ್ಳಾರಿ:ಆಗಸ್ಟ್:೨೭; ಎಐಯುಟಿಯುಸಿ ಕಾರ್ಮಿಕ ಸಂಘಟನೆಗೆ ಸೇರ್ಪಡೆಗೊಂಡಿರುವ “ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ” ದ ಬಳ್ಳಾರಿ ತಾಲೂಕು ಮಟ್ಟದ ಸಮಾವೇಶವನ್ನು ಎಐಯುಟಿಯುಸಿಯ ಬಳ್ಳಾರಿ ಜಿಲ್ಲಾ ಕಛೇರಿಯಲ್ಲಿ ಸಂಘಟಿಸಲಾಯಿತು.

ಎಐಯುಟಿಯುಸಿಯ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಗಳಾದ ಎ.ದೇವದಾಸ್, ಎಐಯುಟಿಯುಸಿ ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ್.ಜಿ, ಎಸ್.ಜಿ.ನಾಗರತ್ನ ರವರ ಸಮ್ಮುಖದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹಾಗು ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು. ನಂತರ ಬಳ್ಳಾರಿ ತಾಲೂಕು ಮಟ್ಟದ ಅಕ್ಷರ ದಾಸೋಹ ಕಾರ್ಮಿಕರ ನೂತನ ಪದಾಧಿಕಾರಿಗಳನ್ನು ಅಯ್ಕೆಮಾಡಲಾಯಿತು.

ಬಳ್ಳಾರಿ ಜಿಲ್ಲಾ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸಲಹೆಗಾರರಾಗಿ ಎಸ್.ಜಿ.ನಾಗರತ್ನ.
ಬಳ್ಳಾರಿ ತಾಲೂಕು ಅಕ್ಷರ ದಾಸೋಹ ಕಾರ್ಮಿಕರ
ಅಧ್ಯಕ್ಷರಾಗಿ ಮಂಜುಳ ಶ್ರೀಧರಗಡ್ಡೆ,
ಉಪಾಧ್ಯಕ್ಷರಾಗಿ ಲಕ್ಷ್ಮೀ ಇಂದ್ರ ನಗರ.
ಕಾರ್ಯದರ್ಶಿಗಳಾಗಿ ನಾಗರತ್ನ ಬ್ಯಾಲಿಚಿಂತಿ,
ಕಾರ್ಯಕಾರಿ ಸಮಿತಿ ಸದಸ್ಯರಾಗಿ. ಕವಿತಾ, ಹೇಮಾವತಿ, ಜಯಮ್ಮ ಕೊರ್ಲಗುಂದಿ, ಭಾಗ್ಯಮ್ಮ ಗುಡದೂರು, ಗೋವಿಂದಮ್ಮ, ಟಿ. ಲಕ್ಷ್ಮಿ ಕೋಳೂರು, ನೀಲಮ್ಮ ಕಾರೆಕಲ್ ಆಯ್ಕೆಯಾದರು.

ಮಖ್ಯ ಭಾಷಣಕಾರರಾಗಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ ನೂತನ ತಾಲೂಕು ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು, ಕಾರ್ಮಿಕರು ತಳಮಟ್ಟದಿಂದ ಸಂಘಟಿತರಾಗಿ ಬಲಿಷ್ಟ ಸಮಿತಿಗಳನ್ನು ಕಟ್ಟಿಕೊಳ್ಳಬೇಕಿದೆ. ಬಂಡವಾಳಶಾಹಿಗಳ ಪರವಾಗಿರುವ ಇಂದಿನ ಸರ್ಕಾರಗಳ ನೀತಿಗಳು ದಿನದಿಂದ ದಿನಕ್ಕೆ ಕಾರ್ಮಿಕರ ಜೀವನವನ್ನು ಮತ್ತಷ್ಟು ಸಂಕಷ್ಟಮಯ ವಾಗಿಸುತ್ತಿವೆ. ಕಾರ್ಮಿಕರ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದರೂ ಗೌರವಯುತ ಜೀವನವನ್ನು ನಡೆಸಲು ಪೂರಕವಾಗುವ ಕನಿಷ್ಟ ಸೌಲಭ್ಯಗಳನ್ನು ಪಡೆದುಕೊಳ್ಳಲಾಗುತ್ತಿಲ್ಲ. ಸರ್ಕಾರಗಳ ನೀತಿಗಳು ಕಾರ್ಮಿಕರನ್ನು ಬೀದಿಪಾಲಾಗಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕ ಮುಂದಿರುವ ಏಕೈಕ ಮಾರ್ಗ ಬಲಿಷ್ಟ ಸಮಿತಿಗಳನ್ನು ಕಟ್ಟಿಕೊಂಡು ಹೋರಾಟಕ್ಕೆ ಬೀದಿಗಿಳಿಯ ಬೇಕಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸರ್ಕಾರದ ಸಂಸ್ಥೆಗಳಲ್ಲಿ ಶ್ರಮಿಸುತ್ತಿರುವ ಕಾರ್ಮಿಕರು ಕನಿಷ್ಟ ವೇತನ, ಸೌಲಭ್ಯಗಳಿಗಾಗಿ ಬೀದಿಗಿಳಿಯ ಬೇಕಿದೆ. ಸಂವಿಧಾನದ ಕಾಯ್ದೆ, ಕಾನೂನುಗಳನ್ನು ಸರ್ಕಾರಗಳೇ ಪಾಲಿಸುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಧ್ವನಿಎತ್ತುವ ತ್ವರಿತ ಸಂದರ್ಭ ಇದಾಗಿದೆ.

ಅಕ್ಷರ ದಾಸೋಹ ಕಾರ್ಮಿಕ ಕನಿಷ್ಟ ವೇತನ, ಅಗತ್ಯ ಸಮವಸ್ತ್ರ, ಆರೋಗ್ಯ ವಿಮೆ, ಮೂಲ ಸೌಲಭ್ಯಗಳಿಗಾಗಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಹೋರಾಟಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮಾವೇಶ ಉದ್ದೇಶಿಸಿ ಎಸ್.ಜಿ.ನಾಗರತ್ನ ರವರು ಮಾತನಾಡುತ್ತಾ ಕೊರೊನಾ ಸೊಂಕಿನ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ರಜೆಕೊಟ್ಟರೂ ಶಾಲಾ ಆವರಣದಲ್ಲಿ ಸ್ವಚ್ಛ ಗೊಳಿಸುವುದರಲ್ಲಿ ಅಕ್ಷರ ದಾಸೋಹ ಕಾರ್ಮಿಕರನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಕಳೆದ 3 ತಿಂಗಳುಗಳಿಂದ ವೇತನ ಜಾರಿಗೊಳಿಸಿಲ್ಲ. ಹಿಂದಿನ ವೇತನವನ್ನು ಸಹ ಹೋಟದಿಂದಲೇ ಪಡೆದಿದ್ದೆವು. ನಮ್ಮ ವೇತನ ವನ್ನು ನಾವು ಪಡೆಯಬೇಕೆಂದರು ಪ್ರತಿಭಟಿಸಬೇಕಿದೆ, ಇವರು ಬಹು ಮಟ್ಟಿಗೆ ಒಂಟಿ ಹೆಣ್ಣುಮಕ್ಕಳು, ವಿಧವೆಯರು ಇಡೀ ಕುಟುಂಬದ ಜವಾಬ್ದಾರಿ ಯನ್ನು ಹೊತ್ತಿರುವರೇ ಆಗಿದ್ದಾರೆ. ಇಂದಿನ ದಿನಗಳಲ್ಲಿ ಇವರ ಕಷ್ಟಗಳು ಬೆಟ್ಟದಷ್ಟು ಬೆಳೆಯುತ್ತಲೇ ಇವೆ. ಇವರಿಗೆ ಸಿಗುವ ವೇತನವು ಪುಡಿಗಾಸಿನಂತಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುವ ನಿಟ್ಟಿನಲ್ಲಿ ಹೋರಾಟಗಳನ್ನು ಸಂಘಟಿಸಲಾಗುವುದು. ಆಯ್ಕೆಯಾಗಿರುವ ಈ ನೂತನ ಪದಾಧಿಕಾರಿಗಳ ಸಮಿತಿಯು ಪ್ರತಿ ಒಬ್ಬರನ್ನು ಸಂಘಟಿಸಿ, ಹೋರಟವನ್ನು ಬಲಿಷ್ಟಗೊಳಿಸಲು ಸಜ್ಜಗಬೇಕಿದೆ ಎಂದು ಕರೆನೀಡಿದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here