ವಿಸ್ಟ್ರಾನ್ ಸಂಸ್ಥೆಯು ನೀಡಿದ ಆಮ್ಲಜನಕ ಕಾನ್ಸಂಟ್ರೇಟ್‍ರ್‍ಗಳಿಂದ ಉತ್ತಮ ಚಿಕಿತ್ಸೆ ನೀಡಲು ಅನುಕೂಲ – ಡಾ|| ಆರ್.ಸೆಲ್ವಮಣಿ

0
83

ಕೋಲಾರ: ವಿಸ್ಟ್ರಾನ್ ಸಂಸ್ಥೆಯಿಂದ ಜಿಲ್ಲೆಗೆ 10 ಆಮ್ಲಜನಕ ಕಾನ್ಸಂಟ್ರೇಟ್‍ರ್‍ಗಳನ್ನು ನೀಡಿರುವುದರಿಂದ ಕೋವಿಡ್ 19 ಎರಡನೇ ಅಲೆಯ ಈ ಸಂದರ್ಭದಲ್ಲಿ ಉತ್ತಮ ಚಿಕಿತ್ಸೆ ನೀಡಲು ತುಂಬಾ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ|| ಆರ್.ಸೆಲ್ವಮಣಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಕೇರ್ ಸಿ.ಎಸ್.ಆರ್. ಕಾರ್ಯಕ್ರಮದ ಅಂಗವಾಗಿ ವಿಸ್ಟ್ರಾನ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಸಂಸ್ಥೆಯ ವತಿಯಿಂದ 10 ಆಕ್ಸಿಜನ್ ಕಾನ್ಸಂಟ್ರೇಟ್‍ರ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಕ್ಸಿಜನ್ ಕಾನ್ಸಂಟ್ರೇಟ್‍ರ್‍ಗಳನ್ನು ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಗುವುದು. ಶೀಘ್ರದಲ್ಲೇ ವಿಸ್ಟ್ರಾನ್ ಸಂಸ್ಥೆ ವತಿಯಿಂದ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಸಾಮಥ್ರ್ಯದ ಆಮ್ಲಜನಕ ಉತ್ಪಾದಕ ಘಟಕವನ್ನ್ನು ಸ್ಥಾಪಿಸಲಿದ್ದಾರೆ. ಈ ತುರ್ತು ಸಂದರ್ಭದಲ್ಲಿ ವಿಸ್ಟ್ರಾನ್ ಕಂಪನಿಯು ಅನೇಕ ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದು, ಜಿಲ್ಲೆಯ ಜನತೆಗೆ ಸಾಕಷ್ಟು ಉದ್ಯೋಗ ಅವಕಾಶ ಕಲ್ಪಿಸಿರುವುದು ತುಂಬಾ ಸಂತೋಷದ ವಿಷಯ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಆಮ್ಲಜನಕ ಕಾನ್ಸಂಟ್ರೇಟ್‍ರ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ನಂತರ ವಿಸ್ಟ್ರಾನ್ ಇನ್ಫೋಕಾಮ್ ಉತ್ಪಾದನಾ ಭಾರತದ ವ್ಯವಸ್ಥಾಪಕ ನಿರ್ದೇಶಕರಾದ ನಾಗರಾಜ್.ಎಂ ಅವರು ಮಾತನಾಡಿ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯಗಳ ಮೇಲೆ ಬಾರಿ ಒತ್ತಡವಿದೆ ಮತ್ತು ಅದನ್ನು ನಿರ್ವಹಿಸಲು ಜಿಲ್ಲಾಡಳಿತವು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ. ಅವರೊಂದಿಗೆ ನಾವು ಕೈಜೋಡಿಸಿ ಆಸ್ಪತ್ರೆಗಳಿಗೆ ಬೇಕಾದ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲಾಗುತ್ತಿದೆ ಮತ್ತು ಸಿ.ಎಸ್.ಅರ್. ಕಾರ್ಯಕ್ರಮದ ಭಾಗವಾಗಿ ನಮ್ಮ ಬೆಂಬಲವನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ. ವಿಸ್ಟ್ರಾನ್ ಕಂಪನಿಯ ಆಡಳಿತದ ಸೂಚನೆಯಂತೆ ಶೀಘ್ರದಲ್ಲೇ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಜನರೇಟರ್ ಸ್ಥಾವರವನ್ನು ಸ್ಥಾಪಿಸಲಿದ್ದೇವೆ ಎಂದು ತಿಳಿಸಿದರು.
ವಿಸ್ಟ್ರಾನ್ ಕಾರ್ಪೋರೇಷನ್ ಜಾಗತಿಕ ಪ್ರಮುಖ ತಂತ್ರಜ್ಞಾನ ಸೇವಾ ಪೂರೈಕೆದಾರರಾಗಿದ್ದು, ಭಾರತದಲ್ಲಿ 2017 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಪ್ರಸ್ತುತ 7000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗಿದೆ. ವಿಸ್ಟ್ರಾನ್ ಕಂಪನಿಯಲ್ಲಿ ಕೋವಿಡ್ ಸೋಂಕಿತರನ್ನು ನೋಡಿಕೊಳ್ಳಲು ಮತ್ತು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿರುವ ಎಲ್ಲಾ ಮುಂಚೂಣಿ ಕಾರ್ಮಿಕರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಆಮ್ಲಜನಕ ಸಾಂದ್ರತೆಗಳು ನಮ್ಮ ಈ ಸಾಮಾಜಿಕ ಕಳಕಳಿಯ ಪ್ರಯತ್ನಗಳಲ್ಲಿ ಸ್ವಲ್ಪ ಸಹಾಯ ಮತ್ತು ಪರಿಹಾರವನ್ನು ಜಿಲ್ಲೆಯ ಜನತೆಗೆ ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ. ಹೆಚ್ಚಿನ ಉಪಕ್ರಮಗಳು ಮುಂದಿನ ಎರಡು ವಾರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಜಗದೀಶ್ ಅವರು ಮಾತನಾಡಿ ಕೋವಿಡ್‍ನಿಂದ ಎಲ್ಲರೂ ತುಂಬಾ ಕಷ್ಟ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಸ್ಟ್ರಾನ್ ಸಂಸ್ಥೆಯ ವತಿಯಿಂದ ನೀಡಿರುವ 10 ಆಕ್ಸಿಜನ್ ಕಾನ್ಸಂಟ್ರೇಟ್‍ರ್‍ಗಳನ್ನು ಪ್ರಾಮಾಣಿಕವಾಗಿ ಉತ್ತಮ ರೀತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬಳಸಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಸಹ ನಮ್ಮ ಮತ್ತು ಅವರ ಅನುಬಂಧ ಹೀಗೆ ಇರಲಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ತೈವಾನ್‍ನ ವಿಸ್ಟ್ರಾನ್ ಸಂಸ್ಥೆಯ ಉಪಾಧಕ್ಷರಾದ ಹಂಕ್‍ಸು ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ವಿಸ್ಟ್ರಾನ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಾದ ಸೆಂಥಿಲ್ ಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here