1008 ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ.ಯುಕೆಜಿ ತರಗತಿ ಪ್ರಾರಂಭ

0
33

ಹೊಸಪೇಟೆ: (ವಿಜಯನಗರ)
ಪೂರ್ವ ಪ್ರಾಥಮಿಕ ಖಾಸಗಿ ಶಾಲೆಗಳ ಡೊನೇಷನ್ ಹಾವಳಿಯಿಂದ ಬೇಸತ್ತು ಹೋಗಿದ್ದ ಪೋಷಕರ ಬಹುದಿನದ ಕನಸು ಈಗ ನನಸಾಗಿದೆ.ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಗ್ರ ಶಿಕ್ಷಣ ಯೋಜನೆಯ ಅಡಿಯಲ್ಲಿ ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಮತ್ತು ಆರಂಭದಲ್ಲಿಯೆ ಮಕ್ಕಳು ಕಲಿಕೆಯಿಂದ ಹಿಂದುಳಿಯ ಬಾರದೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರವು ಪ್ರಸಕ್ತ 2024-25ನೇ ಸಾಲಿನಲ್ಲಿ ಕಲಬುರಗಿ ವಿಭಾಗದ ಆಯ್ದ 1,008 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ-ಯು.ಕೆ.ಜಿ.) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ್ದು, ಅದರಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಲ್.ಕೆ.ಜಿ-ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ.
ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿ ತರಗತಿಗಳು ನಡೆಯುತ್ತಿವೆ. ಅಲ್ಲಿ ದಾಖಲಾದ ಮಕ್ಕಳ ವಿವರಗಳನ್ನು ಅವಲೋಕಿಸಿದಾಗ, ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅದರ ಸಂಖ್ಯೆ ತೀರಾ ಕಡಿಮೆ ಇದೆ ಎಂಬುದು ಅಂಕಿ-ಸಂಖ್ಯೆಯಿಂದ ಗೊತ್ತಾಗುತ್ತದೆ. ಬೆಂಗಳೂರು ವಿಭಾಗದಲ್ಲಿ 3,073 ಶಾಲೆಗಳಲ್ಲಿ ಅತೀ ಹೆಚ್ಚು 1,71,523 ಮಕ್ಕಳು ಪ್ರವೇಶ ಪಡೆದರೆ, ಕಲಬುರಗಿ ವಿಭಾಗದಲ್ಲಿ 967 ಶಾಲೆಗಳಲ್ಲಿ 32,805 ಅತೀ ಕಡಿಮೆ ಮಕ್ಕಳು ಪ್ರವೇಶಾತಿ ಪಡೆಯುತ್ತಿದ್ದಾರೆ. ಧಾರವಾಡ ವಿಭಾಗದಲ್ಲಿ 1,102 ಶಾಲೆಗಳಲ್ಲಿ 48,805 ಮಕ್ಕಳು ಮತ್ತು ಮೈಸೂರು ವಿಭಾಗದಲ್ಲಿ 1,099 ಶಾಲೆಗಳಲ್ಲಿ 57,569 ಮಕ್ಕಳು ಎಲ್.ಕೆ.ಜಿ-ಯು.ಕೆ.ಜಿ. ಪ್ರವೇಶಾತಿ ಪಡೆಯುತ್ತಿದ್ದಾರೆ. ಇನ್ನು ಅಂಗನವಾಡಿಗಳಲ್ಲಿ 6 ವರ್ಷ ವರೆಗಿನ ಮಕ್ಕಳ ದಾಖಲಾತಿ ಪ್ರಮಾಣ ನೋಡಿದಾಗ ಬೆಂಗಳೂರು ವಿಭಾಗದಲ್ಲಿ ಶೇ.40.94, ಧಾರವಾಡ ವಿಭಾಗದಲ್ಲಿ ಶೇ.61.61, ಮೈಸೂರು ವಿಭಾಗದಲ್ಲಿ ಶೇ.34.48 ಹಾಗೂ ಕಲಬುರಗಿ ವಿಭಾಗದಲ್ಲಿ ಅತಿ ಹೆಚ್ಚು ಶೇ.70.93 ರಷ್ಟು ಇರುತ್ತದೆ.ಪೂರ್ವ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಕ್ರಿಯಾತ್ಮಕ ಚಟುವಟಿಕೆ ಸೇರಿದಂತೆ ಇನ್ನಿತರ ಮಾನದಂಡ ಆದರಿಸಿ ಪ್ರಾಥಮಿಕ ಶಾಲೆಗಳಿಗೆ ರಾಜ್ಯ ಸರ್ಕಾರ ಕಲಬುರಗಿ ವಿಭಾಗದ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿ. ತರಗತಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಹಂತಕ್ಕೆ ಶಾಲಾ ಹಂತದಲ್ಲಿಯೆ ನಿಯಮಾನುಸಾರ ಅತಿಥಿ ಶಿಕ್ಷಕರ ಮತ್ತು ಮಕ್ಕಳ ಪಾಲನೆಗೆ ಆಯಾ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಗಳ ಎಲ್ಲಾ ಏಳು ಜಿಲ್ಲೆಗಳಲ್ಲಿ ಆಯ್ದ 1008 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಎಲ್ ಕೆ ಜಿ.ಯುಕೆಜಿ ತರಗತಿಗಳನ್ನು (ECCE) ಪ್ರಾರಂಭಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ.
ವಿಜಯನಗರ ಜಿಲ್ಲೆಯಲ್ಲಿ 142 ಶಾಲೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.ಮಕ್ಕಳಿಗೆ ಪಠ್ಯಪುಸ್ತಕ ಕಲಿಕಾ ಸಾಮಗ್ರಿಗಳನ್ನು ಸಮಗ್ರ ಶಿಕ್ಷಣ ಅಡಿಯಲ್ಲಿ ಪೂರೈಸಲು ಸೂಚಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ತಾತ್ಕಾಲಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಳೀಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಒಬ್ಬ ಹಿರಿಯ ಸಹ ಶಿಕ್ಷಕ ಹಾಗೂ ಶಿಕ್ಷಕಿ ಸದಸ್ಯರ ಒಳಗೊಂಡ ಕಮಿಟಿಯಿಂದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ
LKG.ನೋಂದಣಿಯಾದ ವಿದ್ಯಾರ್ಥಿಗಳು-1953.
ನೇಮಕಾತಿಯಾದ ಅತಿಥಿ ಶಿಕ್ಷಕರು-63.UKG.ನೋಂದಣಿಯಾದ ವಿದ್ಯಾರ್ಥಿಗಳು-1718,
ನೇಮಕಾತಿಯಾದ ಅತಿಥಿ ಶಿಕ್ಷಕರು-43.ಆಯ್ಕೆ ಮಾಡಿ ಪ್ರಾರಂಭಿಸಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ.ರಾಜ್ಯ ಸರ್ಕಾರದ ಯೋಜನೆಗಳು ಫಲಕಾರಿಯಾಗುತ್ತವೆ ಎಂದು ಪೋಷಕರ ಅಭಿಪ್ರಾಯ.

■ತಳಮಟ್ಟದ ಎಲ್ಲಾ ಸಮುದಾಯ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀತಿಯನ್ನು ಗಟ್ಟಿಗೊಳಿಸಿದ ಕರ್ನಾಟಕ ಸರ್ಕಾರ ಈ ಕಾರ್ಯವನ್ನು ಸ್ವಾಗತಿಸುತ್ತೇವೆ.
—ಸೋಮಶೇಖರ್ ಬಣ್ಣದ ಮನೆ.
ಪ್ರಧಾನ ಕಾರ್ಯದರ್ಶಿ
ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಸಂಘ (ರಿ)

■ಸ್ಲಂ ಏರಿಯಾದಲ್ಲಿ ಇರುವ ಕಾರ್ಮಿಕ ವರ್ಗ ಹಾಗೂ ಬಡ ಮಕ್ಕಳ ತಂದೆ ತಾಯಿಗಳು ಇಂಗ್ಲಿಷ್ ಶಾಲೆಯಲ್ಲೇ ಓಡಿಸಬೇಕು ಎನ್ನುವ ಆಸೆ ಈಡೇರಿದೆ.ಸರಕಾರಿ ಶಾಲೆಯಲ್ಲಿ ಪಾಠದ ಜೊತೆಯಲ್ಲಿ ಪೌಷ್ಟಿಕ ಆಹಾರ ಮಕ್ಕಳಿಗೆ ಸಿಗುತ್ತದೆ.
—ಜಿ. ಬಾಬು
ಅಧ್ಯಕ್ಷರು
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ. ವಿನೋಬಾವೆ ಶಾಲೆ
ಚಿತ್ತವಾಡಗಿ.ಹೊಸಪೇಟೆ

LEAVE A REPLY

Please enter your comment!
Please enter your name here