ಉಚಿತ ಆರೋಗ್ಯ ತಪಾಸಣಾ ರಕ್ತದಾನ ಶಿಬಿರ

0
230

ಬಳ್ಳಾರಿ:ಮುಗುಳುನಗೆ ಫೌಂಡೇಷನ್ ವತಿಯಿಂದ ನಗರದ 18 ನೇ ವಾರ್ಡಿನ ಜನತಾ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮಕ್ಕೆ ಎಸ್ ಸುರೇಶ್ ರಾಜ್ಯಾಧ್ಯಕ್ಷರು ಕರವೇ ಕಾವಲು ಪಡೆ ಬಳ್ಳಾರಿ ಇವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ವಿ.ಎಸ್. ಸಾಗರ್ ನೇತೃತ್ವದ ಮುಗುಳುನಗೆ ಫೌಂಡೇಶನ್ ಬಳ್ಳಾರಿಯಲಿ ಸತತವಾಗಿ ಸಮಾಜ ಸೇವೆಯಲ್ಲಿ ತೊಡಗಿದೆ. ಈಗಿನ ಕಾಲದಲ್ಲಿ ಮಾತನಾಡುವ ಮನುಷ್ಯರ ಭಾವನೆಗಳನ್ನ ಅರ್ಥ ಮಾಡಿಕೊಳ್ಳುವುದೇ ಕಷ್ಟಕರ ಅಂತಹದರಲ್ಲಿ ಮುಗುಳುನಗೆ ಫೌಂಡೇಶನ್ ಮೂಕ ಪ್ರಾಣಿಗಳ ನೆರವಿಗೆ ಮುಂದಾಗಿದೆ ಇದೊಂದು ಉತ್ತಮವಾದ ಸೇವೆ ಎಂದೇ ಹೇಳಬಹುದು ಪ್ರತಿ ದಿನ ಮೂಕ ಪ್ರಾಣಿಗಳಿಗೆ ಊಣಬಡಿಸುವುದು ಅವುಗಳನ್ನು ರಕ್ಷಣೆ ಮಾಡುವುದು ಸೇರಿದಂತೆ ಇನ್ನಿತರೆ ಸೇವೆಗಳನ್ನು ಮಾಡುತ್ತಾ ಸದಾ ಮುನ್ನುಗುತ್ತಿದೆ ಇವರ ಈ ಸೇವೆ ಇನ್ನೆಷ್ಟು ಎತ್ತರಕ್ಕೆ ಬೆಳೆಯಲಿ ಎಂದು ತಿಳಿಸಿದರು. ಹಾಗೆ ಯುವಕರು ರಕ್ತದಾನ ನೇತ್ರದಾನ ಮಾಡಲು ಮುಂದೆ ಬನ್ನಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾಸ್ಪತ್ರೆಯ ವೈದ್ಯರ ತಂಡ ಗೋಪಿ ಬ್ಲಡ್ ಬ್ಯಾಂಕ್ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಮತ್ತು 45ಕ್ಕೂ ಹೆಚ್ಚು ಜನ ರಕ್ತದಾನವನ್ನು ಮಾಡಿದ್ದಾರೆ. ಮುಗುಳುನಗೆ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ನಗರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಜನತಾ ನಗರದ ಬಿಜೆಪಿ ಮುಖಂಡರಾದ ಚನ್ನಕೇಶವ, ಅರುಣ್ ಬಾಲಚಂದ್ರ ಬಿಪಿ ನ್ಯೂಸ್ ಮುಖ್ಯಸ್ಥ,ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಅರುಣ್ ಭೂಪಾಲ್,
ಮುಗುಳುನಗೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ವಿ.ಎಸ್.ಸಾಗರ ಅಪ್ಪು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ವಾಲ್ಮೀಕಿ , ರವಿತೇಜ , ಶಾಮಿದ್ ಅಲಿ ,ರಾಘವೇಂದ್ರ ಇನ್ನಿತರ ಕಾರ್ಯಕರ್ತರು ಇದ್ದರು.

LEAVE A REPLY

Please enter your comment!
Please enter your name here