ಗಣಿನಾಡಿನ ಕಸಾಪ ಜಿಲ್ಲಾಧ್ಯಕ್ಷ ಸ್ಥಾನ ಅಂತಿಮ‌ ಕಣದಲ್ಲಿ ಏಳು ಜನ

0
217

ಬಳ್ಳಾರಿ : ಮುಂದಿನ ತಿಂಗಳ 9 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಂತಿಮವಾಗಿ ಏಳು ಜನ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ಸಲ್ಲಿಸಿದ್ದ ಎಂಟು ಅಭ್ಯರ್ಥಿಗಳ ಪೈಕಿ ಹಾಲಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದಾಗಿ ಅಂತಿಮ ಸ್ಪರ್ಧಾ ಕಣದಲ್ಲಿ ಏಳು ಜನ ಉಳಿದಿದ್ದಾರೆ.

ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಹಾಲಿ ಖಜಾಂಚಿ ಟಿ.ಎಂ.ಪಂಪಾಪತಿ, ಅಭಿನಯ ಕಲಾ ಕೇಂದ್ರದ ಕೆ.ಜಗದೀಶ್,
ಇದೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿ ವಿನೋದಾ ಕರಣಂ, ಸಿ.ಮಂಜುನಾಥ್, ಅರುಣ್ ಕುಮಾರ್, ಕೃಷ್ಣಪ್ಪ ಗುಣಸಾಗರ್ ಸ್ಪರ್ಧೆಯಲ್ಲಿದ್ದಾರೆ. ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮತದಾರರ ವಿವರ:
ಬಳ್ಳಾರಿ (3624), ಸಿರುಗುಪ್ಪ (2507),
ಹರಪನಹಳ್ಳಿ (2454), ಹಗರಿಬೊಮ್ಮನಹಳ್ಳಿ (1366),
ಹಡಗಲಿ (1162), ಸಂಡೂರು (1037), ಹೊಸಪೇಟೆ (828), ಕೊಟ್ಟೂರು (736), ಕೂಡ್ಲಿಗಿ (468), ಕಂಪ್ಲಿ (602), ಕುರುಗೋಡು (386) ಮತದಾರರಿದ್ದಾರೆ‌

ಮತದಾನ ಕೇಂದ್ರಗಳು:
ಬಳ್ಳಾರಿ ನಗರದಲ್ಲಿ ಒಟ್ಟು ನಾಲ್ಕು ಮತದಾನ ಕೇಂದ್ರಗಳಿದ್ದು ನಗರದ ಸರ್ಕಾರ ಪದವಿ ಪೂರ್ವ (ಮುನ್ಸಿಪಲ್) ಕಾಲೇಜಿನಲ್ಲಿ ಮತದಾನ ನಡೆಯಲಿದೆ

ಸಿರುಗುಪ್ಪ ತಾಲ್ಲೂಕಿನಲ್ಲಿ ಒಟ್ಟು ಮೂರು ಮತದಾನ ಕೇಂದ್ರಗಳಿದ್ದು. ಸಿರುಗುಪ್ಪ ಪಟ್ಟಣದ ತಾಲ್ಲೂಕು ಕಛೇರಿ ಯಲ್ಲಿ ಮತ್ತು ತೆಕ್ಕಲಕೋಟೆಯ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಮತದಾನ ಜರುಗಲಿದೆ. ಹರಪನಹಳ್ಳಿ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ.
ಸಂಡೂರು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ (ಗುರುಭವನ ),ಕಂಪ್ಲಿ (ನಾಡಕಾರ್ಯಾಲಯ),
ಹೊಸಪೇಟೆ (ತಾಲ್ಲೂಕು ಕಛೇರಿ ), ಹಗರಿಬೊಮ್ಮನಹಳ್ಳಿ (ಹಳೆ ತಾಲೂಕು ಕಚೇರಿ) ನಾಡಕಛೇರಿ -ತಂಬ್ರಹಳ್ಳಿ, ಕೊಟ್ಟೂರು (ನಾಡಕಛೇರಿ), ಕೂಡ್ಲಿಗಿ (ತಾಲೂಕು ಪಂಚಾಯತ್ ಕಾರ್ಯಾಲಯ), ಎಸ್ ಕೆ ಡಿ ಡಿ ವಿ ಪ್ರೌಢಶಾಲೆ ಖಾನಾಹೊಸಳ್ಳಿ ), ಕುರುಗೋಡು (ತಹಸೀಲ್ದಾರ್ ಕಛೇರಿ ), ಹಡಗಲಿ (ತಾಲ್ಲೂಕು ಕಚೇರಿ ಮೀಟಿಂಗ್ ಹಾಲ್ ) ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಿದೆ.

LEAVE A REPLY

Please enter your comment!
Please enter your name here