ನಮ್ಮ ದೇಶದ ಕ್ರಿಮಿನಲ್ಸ್ ನಮ್ಮ ಸಂವಿಧಾನವನ್ನು ನಾಶಮಾಡಿದ್ದಾರೆ- ಎಸ್.ಅರ್. ಹಿರೇಮಠ

0
15

ಸಂಡೂರು: ನಮ್ಮ ದೇಶದ ಕ್ರಿಮಿನಲ್ಸ್ ನಮ್ಮ ಸಂವಿಧಾನವನ್ನು ನಾಶಮಾಡಿದ್ದಾರೆ. ನಮ್ಮ ಪ್ರಾರಂಭದ ಹೋರಾಟವೇನಿದ್ದರೂ ಗ್ರಾಮೀಣ ಭಾಗದ ಹರಿಜನ ಕೇರಿಯಿಂದ ಸಂಘಟನೆ ಪ್ರಾರಂಭ, ನಮ್ಮ ಸದುದ್ದೇಶವಾಗಿದೆ. ಮಹಾತ್ಮ ಗಾಂಧೀಜಿಯವರ ಪ್ರೇರಣೆ ನಮ್ಮ ಹೋರಾಟಕ್ಕೆ ಬಲ, ಸತ್ಯ, ನ್ಯಾಯದ ಆಧಾರದ ಮೇಲೆಯೇ ಡಾ. ಬಿ.ಅರ್.ಅಂಬೇಡ್ಕರ್ ಅವರ ಸಂವಿಧಾನವಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖಂಡರಾದ ಎಸ್.ಅರ್. ಹಿರೇಮಠ ತಿಳಿಸಿದರು.

ಅವರು ಇಂದು ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಜನಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಹಮ್ಮಿಕೊಮಡಿದ್ದ ಗಣ ಬಾಧಿತ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಕಾನೂನು ಹೋರಾಟ ಎನ್ನುವ ವಿಷಯ ಕುರಿತು ಮಾತನಾಡಿ ನಮ್ಮ ರೈತರು ಉತ್ಕøಷ್ಟ ಮನೋಭಾವನೆ ಹೊಂದಿ ದೆಹಲಿಯಲ್ಲಿ ಸತ್ಯಾಗ್ರಹ ಮಾಡಿದರು, ರೈತರ ಸತ್ಯಾಗ್ರಹದ ಬಲವೇ ಮೂರು ಕಆನೂನುಗಳನ್ನು ವಾಪಾಸ್ಸು ಪಡೆದರು. ಬಿಜೆಪಿ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಬಹಳ ದರ್ಪದಿಂದ ಆಲ್ವಿಕೆಯನ್ನು ನಡೆಸಿ ರೈತರನ್ನು ಕಡೆಗಾಣಿಸಿದರು,, ಜೀವನದಲ್ಲಿ ದುರ್ಬಲರಾದವರಿಗೆ ಸಹಕರ ಕೊಡಲು ಅಮೇರಿಕಾದಿಂದ ಬಂದೆ, ವ್ಯವಸ್ಥಿತರೀತಿಯ ಸಮಘಟನೆ ಇಲ್ಲವಾದಲ್ಲಿ ಎಲ್ಲವೂ ವ್ಯರ್ಥ ಇದರ ಪರಿಣಾಮವಾಗಿ ಗಣಿಗಾರಿಯಿಂದ ಎಲ್ಲವೂ ಹಾಳಾಗಿದೆ. ನ್ಯಾಯಾಧೀಶ ಶೈಲೇಂದ್ರ ಅವರು ಪೃಥ್ವಿಯಮೇಲೆ ಅತ್ಯಾಚಾರವಾಗಲು ಗಣಿಗಾರಿಕೆ ಪರವಾನಿಗೆಯೇ ಕಾರಣ, ಕಪ್ಪತ್ತಗುಡ್ಡ, ಸಂಡೂರು ಗುಡ್ಡ ಈ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಕಪ್ಪತ್ತಗುಡ್ಡಕ್ಕೆ ಹೋರಾಟ ಮಾಡಿದವರು ಗದುಗಿನ ತೋಂಟದಾರ್ಯ ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳು ಪ್ರಕೃತಿ ಮಾತೆಯ ಪರಿಸರವನ್ನು ಉಳಿಸಲು ಎಲ್ಲಾ ತ್ಯಾಗ ಮಾಡಬೇಕಾಗಿದೆ. ದೇವದಾರಿ ಗಣಿಗಾರಿಕೆಗೆ ಅವಕಾಶ ನೀಡಬಾರದು, ಅದು ಸೂಕ್ಷ್ಮಪ್ರದೇಶವಾಗಿದೆ, ಇಲ್ಲಿರುವ ಶ್ರೀಗಂಧ ಅಪರೂಪವಾದುದು, ಇದರ ನಾಶ ಸರಿಯಾದ ಕ್ರಮವಲ್ಲ, ಈಗಾಗಲೇ ಗಣಿಗಾರಿಕೆಯಿಂದ ಅಪಾರ ನಷ್ಟವಾಗಿದೆ ಅದ್ದರಿಂದ ಕೆ.ಎಂ.ಅರ್.ಸಿ. ಅಡಿಯಲ್ಲಿ ಪುನಶ್ಚೇತನ ಗೈಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಿಸರ ಹೋರಾಟಗಾರರಾದ ನಾಗೇಶ್ ಹೆಗಡೆ ಕಿರುಚಿತ್ರ ಬಿಡುಗಡೆ ಮಾಡಿ ಮಾತನಾಡಿ ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಕಾರಣ ಪರಿಸರದಲ್ಲಿ ನಡೆಯುತ್ತಿರುವ ವಿಪರೀತ ಗಣಿಗಾರಿಕೆ, ಅರಣ್ಯ ನಾಶವೇ ಪ್ರಮುಖ ಕಾರಣ, ಅದರ ಜೊತೆಗೆಯಲ್ಲಿ ವಿಪರೀತ ಮಾಲಿನ್ಯ ಮಾಡುವ ಕಾರ್ಖಾನೆಗಳು ಅದ್ದರಿಂದ ಸಂಡೂರಿನ ಅರಣ್ಯ ರಕ್ಷಣೆ ಮಾಡಿದಲ್ಲಿ ಮುಂದಿನ ಪೀಳಿಗೆ ನೆಮ್ಮದಿಯಾಗಿರಲು ಸಾಧ್ಯ, ಅಲ್ಲದೆ ಈಗಾಗಲೇ ಭೂಕುಸಿತ ಉಂಟಾಗಿದೆ, ಪ್ರವಾಹ ಉಕ್ಕುತ್ತಿದೆ, ಕುಡಿಯುವ ನೀರು ಸಿಗದಂತಹ ದುಸ್ಥಿತಿ ಉಂಟಾಗಿ ಚಂದ್ರನಲ್ಲಿ ನೀರನ್ನು ಹುಡುಕುತ್ತಿದ್ದೇವೆ ಕಾರಣ ಪರಿಸರ ನಾಶ, ಅದ್ದರಿಂದ ಪರಿಸರ ರಕ್ಷಣೆ ನಮ್ಮ ಅದ್ಯತೆಯಾಗಬೇಕು ಅದಕ್ಕೆ ಹೋರಾಟ ಅತಿ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಜನಸಂಗ್ರಾಮ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಠಗಿ ಮಾತನಾಡಿ ಪರಿಸರ ಅಭಿವೃದ್ಧಿಯ ಏಲಿಗೆಗಾಗಿ ಮಹಿಳೆಯರ ಪಾತ್ರ ಅಮೋಘ, 32 ಸಾವಿರ ಕೋಟಿ ರೂ. ಪರಿಸರ ಪುನಶ್ಚೇತನನಿಮ್ಮ ಮನೆಯ ಬಾಗಿಲಿಗೆ ಬಂದಿದೆ, ಅದರೆ ಅದನ್ನು ರಾಜಕಾರಣಿಗಳು ತಿಂದು ಹಾಕಲು ಯೋಜನೆ ರೂಪಿಸುತ್ತಿದ್ದಾರೆ, ಅದ್ದರಿಂದ ಅದು ನಿಲ್ಲಬೇಕು,. ಬರೀ ಸಂಡೂರಿನ ಜನತೆ ಹೋರಾಟ ಸಾಲದು ಇಡೀ ಜಗತ್ತೇ ಇದರ ಬಗ್ಗೆ ಎಚ್ಚೇತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ, ಪರಿಸರ ರಕ್ಷಣೆ ಇಲ್ಲದೇ ಹೋದಲ್ಲಿ ಬರೀ ಕಾಪೂರೇಟ್ ಕಂಪನಿಗಳ ಸ್ಥಾಪನೆ ಮಾಡುತ್ತಾ ಹೋದಲ್ಲಿ ಬದುಕು ದುಸ್ತರವಾಗುತ್ತದೆ, ಬಂಗಾರದಂತಹ ಜಮೀನನ್ನು ಸಿದ್ದರಾಮಯ್ಯ ಕೇವಲ 1.25 ಸಾವಿರಕ್ಕೆಮಾರಲು ಹೋದ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು ಕಾರಣ ಭ್ರಷ್ಠರ ತಂಡಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಇದು ಸಹ ನಿಲ್ಲಬೇಕು, ಸಂಡೂರಿನಲ್ಲಿ ಈಗಾಗಲೇ ಮಿತಿ ಮೀರಿ ಗಣಿಗಾರಿಕೆ ನಡೆದಿದೆ ಅದು ನಿಲ್ಲಬೇಕು ಎಂದರು.

ಸಭೆಯಲ್ಲಿ ಅಖಿಲೇಶ್ ಚಿಪ್ಳಿ ಇವರು ಪಶ್ಚಿಮ ಘಟ್ಟದ ನಾಶದಿಂದ ಉತ್ತರ ಕರ್ನಾಟಕದ ಮೇಲಾಗುವ ಪರಿಣಾಮಗಳ ಕುರಿತು ವಿಷಯ ಮಂಡನೆ ಮಾಡಿದರು. ಸಂತೋಷ್ ಮಾರ್ಟಿನ ಅವರು ಸಂಡೂರಿನ ಅರಣ್ಯ ಮತ್ತದರ ವೈವಿಧ್ಯಮಯಗಳು ಕುರಿತು ವಿಷಯ ಮಂಡನೆ ಮಾಡಿದರೆ, ಟಿ.ಅರ್. ಚಂದ್ರಶೇಖರ್ ಅವರು ಗಣ ಬಾಧಿತ ಜನರ ಆರ್ಥಿಕತೆ ಮತ್ತು ಸಾಮಾಜಿಕ ಸುಧಾರಣೆ ಕುರಿತು ವಿಷಯ ಮಂಡನೆ ಮಾಡಿದರು, ಸ.ರಘುನಾಥ ಅವರು ಕೃಷಿಕರ ಸುಸ್ಥಿತರ ಅಭಿವೃದ್ದಿ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಕರೂರು ಮಾಧವರೆಡ್ಡಿ ರಾಜ್ಯ ಕ.ರಾ.ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ, ಮುಖ್ಯ ಅತಿಥಿಗಳಾಗಿ ಬಡಗಲಪುರ ನಾಗೇಂದ್ರ, ಕ.ರಾ.ರೈ.ಸಂಘ ರಾಜ್ಯಾಧ್ಯಕ್ಷರು, ವೀರಸಂಗಯ್ಯ ಇವರು ಚಾಮರಸ ಮಾಲೀ ಪಾಟೀಲ್, ಉಗ್ರನರಸಿಂಹೇಗೌಡ, ಎಂ.ಎಲ್.ಕೆ. ನಾಯ್ಡು, ಶ್ರಿಶೈಲ ಅಲ್ದಳ್ಳಿ, ಟಿ.ಎಂ. ಶಿವಕುಮರ್, ಜಿ.ಕೆ. ನಾಗರಾಜ, ಮಂಜುನಾಥ.ಟಿ.ಕೆ. ಇತರ ಹಲವಾರು ಗಣ್ಯರು, ಸಂಡೂರಿನ ವಿವಿಧ ಗ್ರಾಮಗಳಿಂದ ಅಗಮಿಸಿದ ರೈತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here