ಕೈಗಳ ಸ್ವಚ್ಚತೆಯಿಂದ ಪ್ರತಿಯೊಬ್ಬರಿಗೂ ಆರೋಗ್ಯ ಲಭಿಸಲಿದೆ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ.ಅಭಿಪ್ರಾಯ

0
176

ಸಂಡೂರು:ಅ:18:-ಸಂಡೂರು ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಜಾಗತಿಕ ಕೈತೊಳೆಯುವ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡುತ್ತಾ,

ಮಹಿಳೆಯರು ಕೈಗಳ ಸ್ವಚ್ಚತೆ ಬಗ್ಗೆ ಗಮನಹರಿಸದರೆ ಮಕ್ಕಳ ಮತ್ತು ಮಹಿಳೆಯರ ಅಪೌಷ್ಟಿಕತೆ ನಿವಾರಿಸಲು ಸಾಧ್ಯ ಎಂದು ಮಾಹಿತಿ ನೀಡಿದರು, ಕೈಗಳ ತೊಳೆಯುವದರಿಂದ ಲಾಡಿಹುಳು, ಕೊಕ್ಕೆಹುಳು,ಜಂತುಹುಳು ಬಾಧೆ ತಪ್ಪಿಸಬಹುದು,ಮತ್ತು ಕಾಲರಾ (ವಾಂತಿ ಭೇಧಿ ಪ್ರಕರಣ) ತಡೆಯಬಹುದು, ಹಾಗೇ ಕೋವಿಡ್ ಕೂಡ ತಡೆಬಹುದೆಂಬುದನ್ನು ಕಲಿತಿದ್ದೇವೆ ಎಂದು ತಿಳಿಸಿದರು,

ಕೈತೊಳೆಯುವುದು ಒಂದು ಕಲೆಯಾಗಿದೆ ಅದನ್ನು ಸರಿಯಾದ ರೀತಿಯಲ್ಲಿ ಕೈತೊಳೆಯುದನ್ನು ಕರಗತ ಮಾಡಿಕೊಳ್ಳಬೇಕು ಅದಕ್ಕಾಗಿ ಸರ್ಕಾರ ಆರು ವಿಧಾನಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ ಅದರಂತೆ ಮಹಿಳೆಯರಿಗೆ ಪ್ರಾತ್ಯಕ್ಷಿಕೆ ಮುಖಾಂತರ ಮಾಡಿ ತೋರಿಸಲಾಯಿತು,

ಇದೇ ರೀತಿಯಾಗಿ ಪ್ರತಿಯೊಬ್ಬರೂ ಪ್ರತಿ ದಿನ ಶೌಚಾಲಯಕ್ಕೆ ಹೋಗಿ ಬಂದನಂತರ, ಊಟಕ್ಕೆ ಮುಂಚೆ, ಅಡುಗೆ ಮಾಡುವ ಮುಂಚೆ,ಮಕ್ಕಳಿಗೆ ಹಾಲೂಣಿಸುವ ಮುಂಚೆ ಹಾಗೆ ಆಹಾರ ಕೊಡುವ ಮುಂಚೆ, ಮತ್ತು ಶಿಶುಗಳನ್ನು ಎತ್ತಿಕೊಳ್ಳುವ ಮುಂಚೆ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು,ಈ ತಿಂಗಳ 15 ರಿಂದ 22 ರ ವರೆಗೆ ಹಳ್ಳಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ಮಾಹಿತಿ ಒದಗಿಸಲಾಗುತ್ತದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸುರಕ್ಷತಾ ಅಧಿಕಾರಿ ಶಕೀಲ್ ಅಹಮದ್, ಭಾಗ್ಯಲಕ್ಷ್ಮಿ, ಗೋಪಾಲ್,ನಿಜಾಮುದ್ದೀನ್,ಗ್ರಾಮದ ಮುಖಂಡರಾದ ಶಬ್ಭೀರ್ ಬಾಷ, ವಿಶ್ವನಾಥ, ಅಶೋಕ್, ಆಂಜಿನೇಯಲು, ಆಶಾ ಕಾರ್ಯಕರ್ತೆ ರಾಜೇಶ್ವರಿ, ಹುಲಿಗೆಮ್ಮ,ಆಶಾ, ಕಾವೇರಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here