ಶಾಂತಿಯಿಂದ ಗಣೇಶ ಹಾಗೂ ಈದ್ ಮಿಲಾದ್ ಆಚರಿಸಿ- ಪ್ರಸಾದ್ ಗೋಖಲೆ

0
27

ಸಂಡೂರು ತಾಲೂಕು ಸದಾ ಶಾಂತಿಯ ಪ್ರದೇಶವಾಗಿದ್ದು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಅದನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂದು ಡಿ.ವೈ.ಎಸ್ಪಿ ಪ್ರಸಾದ್ ಗೋಕುಲೆ ತಿಳಿಸಿದರು.

ಅವರು ಪಟ್ಟಣದ ಪೋಲಿಸ್ ಠಾಣೆಯ ಅವರಣದಲ್ಲಿ ಗಣೇಶ್ ಹಾಗೂ ಈದ್ ಮೀಲಾದ್ ಹಬ್ಬದ ಅಂಗವಾಗಿ ನಡೆಸಿದ ಶಾಂತಿ ಸೌಹಾರ್ದತೆ ಹಾಗೂ ಮುನ್ನೇಚ್ಚರಿಕೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಂದು ಹಬ್ಬಗಳು ತಮ್ಮ ಪಾಡಿಗೆ ತಾವು ನಡೆದುಹೋಗುತ್ತಿರುತ್ತವೆ ಅದರೆ ಕೆಲ ಪುಂಡರು ಅದರಲ್ಲಿ ತಮ್ಮದೇ ವೈಯಕ್ತಿಕ ಹಿತಾಸಕ್ತಿಯಿಂದ ಗೊಂದಲಕ್ಕೆ ಕಾರಣರಾಗುತ್ತಿದ್ದಾರೆ, ಅದ್ದರಿಂದ ಅದು ನಿಲ್ಲಬೇಕು, ಗಣೇಶನ ಹಬ್ಬದ ಪೂರ್ವದಲ್ಲಿ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ಸಂಬಂಧಪಟ್ಟವರು ಪೂರ್ಣ ಪ್ರಮಾಣದಲ್ಲಿ ಪರವಾನಿಗೆ ಅದ ಮಾಹಿತಿಯನ್ನು ಠಾಣೆಗೆ ನೀಡಬೇಕು, ಅಲ್ಲದೆ ಇಂದು ಬಹಳಷ್ಟು ಸಂದರ್ಭದಲ್ಲಿ ಅಸಂಬದ್ದ ವಾಟ್ಸ್ ಅಪ್ ಮೆಸೇಜ್ ಗಳನ್ನು ಕಳಿಸಿ ಸಮಸ್ಯೆಗೆ ಸಿಲುಕುತ್ತಿದ್ದಾರೆ, ಅಂತಹ ವ್ಯಕ್ತಿಗಳ ಮೇಲೆ ಕೇಸು ದಾಖಲಿಸಲಾಗುತ್ತಿದೆ, ಅದ್ದರಿಂದ ಮೆಸೆಜ್ ಗಳನ್ನು ಪಾರ್ವಡ್ ಮಾಡುವಾಗ ಎಚ್ಚರಿಕೆ ಅತಿ ಅಗತ್ಯ, ಅನಾವಶ್ಯಕವಾಗಿ ಮೆಸೇಜ್‍ಗಳನ್ನು ಕಳುಹಿಸುವುದು, ಕ್ರಿಯೇಟ್ ಮಾಡುವುದು, ಸಮಾಜದಲ್ಲಿ ಗೊಂದಲ ಸೃಷ್ಟಿಮಾಡಿದ್ದು ಕಂಡು ಬಂದಿದೆ, ಅದರ ಬಗ್ಗೆ ಇಲಾಖೆಯ ಸೈಬರ್ ವಿಭಾಗ ಪೂರ್ಣ ಎಚ್ಚರಿಕೆಯಿಂದ ಇದ್ದು ಈಗಾಗಲೇ ಹಲವಾರು ವ್ಯಕ್ತಿಗಳ ಮೇಲೆ ಕೇಸು ದಾಖಲಿಸಲಾಗಿದೆ, ಹುಡುಗಾಟಿಕೆಗೆ ಏನೋ ಮಾಡಲು ಹೋಗಿ ಅನಾಹುತಕ್ಕೆ ಸಿಲುಕಬೇಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಡೂರು ಸಿ.ಪಿಐ ಮಹೇಶ್ ಗೌಡ ಅವರು ಮಾತನಾಡಿ ಒಂದೇ ಕಡೆ ಗಣೇಶನ ಹಬ್ಬಕ್ಕೆ ಪರವಾನಿಗೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ, ಸಂಡೂರು ಠಾಣೆಯಲ್ಲಿಯೇ ಜೆಸ್ಕಾಂ, ಪುರಸಭೆ ಹಾಗೂ ಪೋಲಿಸ್ ಇಲಾಖೆಯವರು ಕಾರ್ಯನಿರ್ವಹಿಸುತ್ತಾರೆ ಅದ್ದರಿಂದ ಯಾರೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದರೂ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕು, ಅದರ ಸಂಘದ ಅಧ್ಯಕ್ಷರು ಮತ್ತು ಅಲ್ಲಿ ನಿತ್ಯ ಸೇವೆ ಮಾಡುವವರ ಮಾಹಿತಿ, ಮೆರವಣಿಗೆಯ ಮಾಹಿತಿ , ವಿಸರ್ಜನೆಯ ಮಾಹಿತಿಯನ್ನು ತಿಳಿಸಬೇಕು, ಪರವಾನಿಗೆ ಇಲ್ಲದೆ ಪ್ರತಿಷ್ಠಾಪಿಸಿದಲ್ಲಿ ಕಾನೂನು ಕ್ರಮವಾಗುತ್ತದೆ, ಯಾವುದೇ ಅವಘಡಗಳು, ಸಾಮಾಜಿಕವಾಗಿ ಗದ್ದಲ ಗಲಾಟೆಗಳು ಉಂಟಾದಲ್ಲಿ ಶಿಸ್ತುಕ್ರಮವಾಗುತ್ತದೆ, ಅಲ್ಲದೆ ಅಗ್ನಿ ಅವಘಡಗಳು ನಡೆಯದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳು ಗಣೇಶನ ಹಬ್ಬದ ವಿಸರ್ಜನೆ ಹಾಗೂ ಕಸ ನಿರ್ವಹಣೆಯ ಬಗ್ಗೆ ತಿಳಿಸಿದರು., ಅಗ್ನಿ ಶಾಮಕ ಠಾಣೆಯ ಅಧಿಕಾರಿ ಮಂಜುನಾಥ ಅವರು ಯಾವುದೇ ಅವಘಡಗಳು ಉಂಟಾದ ತಕ್ಷಣ ಮಾಹಿತಿ ನೀಡಲು ತಿಳಿಸಿದರು.

ಸಭೆಯಲ್ಲಿ ಸಂಡೂರು ಠಾಣೆಯ ಪಿ,.ಎಸ್.ಐ. ವೀರೇಶ್ ಮಾಳಶೆಟ್ಟಿ, ಚೋರನೂರು ಠಾಣೆಯ ಪಿ.ಎಸ್.ಐ. ರೇವಣಸಿದ್ದಪ್ಪ, ತೋರಣಗಲ್ಲು ಠಾಣೆಯ ಪಿ.ಎಸ್.ಐ. ಢಾಕೇಶ್, ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ಕೆ.ಇ.ಬಿ. ಉಮೇಶ್, ಅಗ್ನಿಶಾಮಕ ಠಾಣೆ ಮಂಜುನಾಥ, ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಷಡಾಕ್ಷರಯ್ಯ, ಎಲ್ಲಾ ಸಂಘ ಸಂಸ್ಥೆಗಳು ಅಧ್ಯಕ್ಷರು, ಪದಾಧಿಕಾರಿಗಳು, ಮುಸ್ಲಿಂ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here