Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಅಂಕಣ Archives - Hai Sandur kannada fortnightly news paper https://haisandur.com/category/ಅಂಕಣ/ Hai Sandur News.Karnataka India Mon, 19 Feb 2024 02:01:45 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಅಂಕಣ Archives - Hai Sandur kannada fortnightly news paper https://haisandur.com/category/ಅಂಕಣ/ 32 32 ಆಪರೇಷನ್ ಕಮಲ ಬೇಡಅಂದ್ರು ಮೋದಿ? https://haisandur.com/2024/02/19/%e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d-%e0%b2%95%e0%b2%ae%e0%b2%b2-%e0%b2%ac%e0%b3%87%e0%b2%a1%e0%b2%85%e0%b2%82%e0%b2%a6%e0%b3%8d%e0%b2%b0%e0%b3%81-%e0%b2%ae%e0%b3%8b/ https://haisandur.com/2024/02/19/%e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d-%e0%b2%95%e0%b2%ae%e0%b2%b2-%e0%b2%ac%e0%b3%87%e0%b2%a1%e0%b2%85%e0%b2%82%e0%b2%a6%e0%b3%8d%e0%b2%b0%e0%b3%81-%e0%b2%ae%e0%b3%8b/#respond Mon, 19 Feb 2024 02:01:44 +0000 https://haisandur.com/?p=34607 ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್‌ ಲೀಡರುಗಳಿಗೆ ವರಿಷ್ಟರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವನ್ನು ಯಾವ ಕಾರಣಕ್ಕೂ ಅಲುಗಾಡಿಸುವುದಿಲ್ಲ ಎಂಬುದು ಈ ಸಂದೇಶ. ಅಂದ ಹಾಗೆ ಕೆಲವೇ ಕಾಲದ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ರಾಜ್ಯದ ಕೆಲ ಬಿಜೆಪಿ ನಾಯಕರು ಉತ್ಸುಕರಾಗಿದ್ದರು. ವರಿಷ್ಟರು ಅನುಮತಿ ನೀಡಿದರೆ ಸಾಕು,ಸರ್ಕಾರ ಉರುಳಿಸುವ ಜವಾಬ್ದಾರಿ ನಮ್ಮದು ಅಂತ ಆಪ್ತ ವಲಯಗಳಲ್ಲಿ ರಣೋತ್ಸಾಹ ತೋರಿಸುತ್ತಿದ್ದರು. ಅವರ ಇಂತಹ ಉತ್ಸಾಹಕ್ಕೆ […]

The post ಆಪರೇಷನ್ ಕಮಲ ಬೇಡಅಂದ್ರು ಮೋದಿ? appeared first on Hai Sandur kannada fortnightly news paper.

]]>
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್‌ ಲೀಡರುಗಳಿಗೆ ವರಿಷ್ಟರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವನ್ನು ಯಾವ ಕಾರಣಕ್ಕೂ ಅಲುಗಾಡಿಸುವುದಿಲ್ಲ ಎಂಬುದು ಈ ಸಂದೇಶ.

ಅಂದ ಹಾಗೆ ಕೆಲವೇ ಕಾಲದ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ರಾಜ್ಯದ ಕೆಲ ಬಿಜೆಪಿ ನಾಯಕರು ಉತ್ಸುಕರಾಗಿದ್ದರು. ವರಿಷ್ಟರು ಅನುಮತಿ ನೀಡಿದರೆ ಸಾಕು,ಸರ್ಕಾರ ಉರುಳಿಸುವ ಜವಾಬ್ದಾರಿ ನಮ್ಮದು ಅಂತ ಆಪ್ತ ವಲಯಗಳಲ್ಲಿ ರಣೋತ್ಸಾಹ ತೋರಿಸುತ್ತಿದ್ದರು.

ಅವರ ಇಂತಹ ಉತ್ಸಾಹಕ್ಕೆ ಕಾರಣವೂ ಇತ್ತು.ಯಾಕೆಂದರೆ ೨೦೧೯ ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರವನ್ನು ಉರುಳಿಸುವುದರ ಹಿಂದೆ ಇವರ ಕೈ ಕೆಲಸ ಮಾಡಿತ್ತು.ಇಂತಹ ಅನುಭವ ಇದ್ದ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಮತ್ತೊಂದು ರೌಂಡು ಆಪರೇಷನ್‌ ಮಾಡಲು ಈ ನಾಯಕರು ಸಜ್ಜಾಗಿದ್ದರು.

ಹೀಗೆ ಅವರು ಸಜ್ಜಾಗಿ ನಿಂತ ಕಾಲಕ್ಕೆ ಸರಿಯಾಗಿ ಜಾತ್ಯತೀತ ಜನತಾ ದಳ ಕೂಡಾ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿತಲ್ಲ?ಇಂತಹ ಹೊಂದಾಣಿಕೆಯಾಗಿದ್ದೇ ತಡ,ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಹಲವು ಮೂಲಗಳಿಂದ ಪ್ರಯತ್ನ ಆರಂಭವಾದ ಸಂದೇಶಗಳು ಅಪ್ಪಳಿಸತೊಡಗಿದವು.

ಈ ಪೈಕಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದವರೆಂದರೆ ಗೋವಾದ ಮುಖ್ಯಮಂತ್ರಿ ಸಾವಂತ್‌ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ದೇವೇಂದ್ರ ಫಡ್ನವೀಸ್.ನೋಡ ನೋಡುತ್ತಿದ್ದಂತೆಯೇ ಈ ಇಬ್ಬರು ನಾಯಕರು ರಾಜ್ಯ ಕಾಂಗ್ರೆಸ್‌ ನ ಹಲ ಗುಂಪುಗಳ ನಾಯಕರ ಜತೆ ಚರ್ಚೆ ನಡೆಸುತ್ತಿದ್ದಾರೆ.ವರಿಷ್ಟರಿಂದ ಸಂದೇಶ ದೊರೆತ ತಕ್ಷಣ ಆಪರೇಷನ್‌ ಗೆ ಕೈ ಹಾಕುತ್ತಾರೆ ಎಂಬ ಮಾತುಗಳು ಕೇಳಿಸತೊಡಗಿದವು.

ಇದು ಸಾಲದೆಂಬಂತೆ ಇವತ್ತು ಉಪಮುಖ್ಯಮಂತ್ರಿಯಾಗಲು ಹವಣಿಸುತ್ತಿರುವ ಮುಂಬಯಿ-ಕರ್ನಾಟಕ ಭಾಗದ ಸಚಿವರೊಬ್ಬರು ಪದೇ ಪದೇ ದೇವೇಂದ್ರ ಫಡ್ನವೀಸ್‌ ಜತೆ ಮಾತುಕತೆ ನಡೆಸಿ ಬರುತ್ತಿದ್ದಾರೆ.ಬಿಜೆಪಿ ವರಿಷ್ಟರಿಂದ ಸೂಚನೆ ಬಂದ ಕೂಡಲೇ ತಮ್ಮ ಇಪ್ಪತ್ತೈದಕ್ಕೂ ಹೆಚ್ಚು ಬೆಂಬಲಿಗ ಶಾಸಕರ ಜತೆ ಕಮಲ ಪಾಳಯದ ಕಡೆ ವಲಸೆ ಹೋಗಲಿದ್ದಾರೆ ಎಂಬ ಮಾತುಗಳು ತೇಲಿ ಬಂದವು.

ಅಷ್ಟೇ ಅಲ್ಲ,ಸಿದ್ಧರಾಮಯ್ಯ ಅವರ ಸಂಪುಟದಲಿ ಮಂತ್ರಿಗಿರಿ ಸಿಗದೆ ಹತಾಶರಾಗಿರುವ ಕಾರವಾರ ಭಾಗದ ನಾಯಕರೊಬ್ಬರು ಗೋವಾ ಮುಖ್ಯಮಂತ್ರಿ ಸಾವಂತ್‌ ಅವರ ಜತೆ ಮಾತುಕತೆ ನಡೆಸುತ್ತಾ ಒಳಗಿಂದೊಳಗೇ ಸೆಟ್ಲಾಗಿದ್ದಾರೆ.ಹೀಗಾಗಿ ಅವರೂ ಟೈಮು ನೋಡಿ ರಾಜ್ಯ ಕಾಂಗ್ರೆಸ್ಸಿಗೆ ಷಾಕ್‌ ಕೊಡಲಿದ್ದಾರೆ ಅಂತ ಬಿಜೆಪಿಯ ಕೆಲ ಹಿರಿಯ ನಾಯಕರೇ ಪಿಸುಗುಟ್ಟತೊಡಗಿದರು.

ಆದರೆ ಕಳೆದ ಶನಿವಾರ,ಭಾನುವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ದಿಲ್ಲಿಗೆ ಹೋದ ರಾಜ್ಯದ ಪ್ರಮುಖ ನಾಯಕರಿಗೆ ಒಂದು ಮೆಸೇಜು ಸ್ಪಷ್ಟವಾಗಿ ತಲುಪಿದೆ.ಅದೆಂದರೆ,ಅಗತ್ಯ ಬಿದ್ದರೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗೋಣ.ಆದರೆ ಯಾವ ಕಾರಣಕ್ಕೂ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಅಸ್ಥಿರಗೊಳಿಸಿ ಉರುಳಿಸುವುದು ಬೇಡ ಎಂಬುದು ಈ ಸಂದೇಶ.

ಮೂಲಗಳ ಪ್ರಕಾರ,ಈ ನಾಯಕರಿಗೆ ಇಂತಹದೊಂದು ಸಂದೇಶವನ್ನು ರವಾನಿಸಿದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಶದ ಜಗತ್‌ ಪ್ರಕಾಶ್‌ ನಡ್ಡಾ.ಹೀಗೆ ನಡ್ಡಾ ಅವರು ರವಾನಿಸಿದ ಸಂದೇಶವೆಂದರೆ ನೋ ಡೌಟ್‌,ಇದು ಸ್ವತ: ಪ್ರಧಾನಿ ನರೇಂದ್ರಮೋದಿ ಅವರ ಇಶಾರೆ.

■ಮೋದಿ ಚಿಂತೆ ಏನು?
ಅಂದ ಹಾಗೆ ಕರ್ನಾಟಕದಲ್ಲಿರುವ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ಪ್ರಧಾನಿ ನರೇಂದ್ರಮೋದಿ ಇದ್ದಕ್ಕಿದ್ದಂತೆ ಯಾಕೆ ಆಸಕ್ತಿ ಕಳೆದುಕೊಂಡರು?ಅಂತ ರಾಜ್ಯ ಬಿಜೆಪಿಯ ಈ ಹಿರಿಯ ನಾಯಕರು ಕೌಂಟರ್‌ ಚೆಕ್‌ ಮಾಡಿಕೊಂಡಿದ್ದಾರೆ.ಅವರಿಗಿರುವ ತಕ್ಷಣದ ಮಾಹಿತಿ ಎಂದರೆ,ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸಲು ಕೈ ಹಾಕುವುದು ಎಂದರೆ ಅನಗತ್ಯ ತಲೆನೋವನ್ನು ಎಳೆದುಕೊಂಡಂತೆ ಅಂತ ಮೋದಿ ಭಾವಿಸಿದ್ದಾರೆ.

ಕಾರಣ?ಸಿದ್ಧರಾಮಯ್ಯ ಅವರ ಸರ್ಕಾರಕ್ಕೆ ಇವತ್ತು ನೂರಾ ಮೂವತ್ತೈದು ಶಾಸಕರ ಬಲವಿದೆ.ಪಕ್ಷಾಂತರ ನಿಷೇಧ ಕಾಯ್ದೆಯ ಹೊಡೆತವಿಲ್ಲದಂತೆ ನೋಡಿಕೊಳ್ಳಬೇಕು ಎಂದರೆ ಈ ಶಾಸಕರ ಪೈಕಿ ಮೂರನೇ ಎರಡು ಭಾಗದಷ್ಟು ಶಾಸಕರನ್ನು ಸೆಳೆದುಕೊಳ್ಳಬೇಕು.ಆದರೆ ಸಧ್ಯದ ಸ್ಥಿತಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುವುದು ಕಷ್ಟದ ಕೆಲಸ.

ಒಂದು ವೇಳೆ ಸರ್ಕಾರ ಬೀಳಿಸಿದರೆ ಸಾಕು ಎನ್ನುವುದಾದರೆ ನಲವತ್ತೈದರಿಂದ ಐವತ್ತು ಶಾಸಕರನ್ನು ಸೆಳೆಯಬೇಕು.ವಿವಿಧ ಶಕ್ತಿಯ ಮೂಲಕ ಇಷ್ಟು ಶಾಸಕರನ್ನೇ ನೋ ಸೆಳೆಯಬಹುದು.ಆದರೆ ಅವರನ್ನು ಉಪಚುನಾವಣೆಯ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಬೇಕು.

ಒಂದು ವೇಳೆ ಉಪಚುನಾವಣೆಯ ಕಣಕ್ಕಿಳಿಯುವ ಶಾಸಕರ ಪೈಕಿ ಅರ್ಧದಷ್ಟು ಮಂದಿ ಶಾಸಕರು ಸೋತರೂ ಮುಖಭಂಗವಾಗುವುದು ತಮಗೆ.ಯಾಕೆಂದರೆ,ಬಿಜೆಪಿ ಈ ಪ್ರಮಾಣದಲ್ಲಿ ಸೋಲು ಅನುಭವಿಸಿದರೆ ಪುನ: ಕಾಂಗ್ರೆಸ್‌ ಸರ್ಕಾರವೇ ಸೆಟ್ಲಾಗುತ್ತದೆ.

ಈ ಮಧ್ಯೆ ಕಾಂಗ್ರೆಸ್‌ ಪಕ್ಷದಿಂದ ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುತ್ತೇವಲ್ಲ?ಹೀಗೆ ಸೆಳೆದವರ ಪೈಕಿ ಬಹುತೇಕರು ಬಿಜೆಪಿ ನೇತೃತ್ವದ ಸರ್ಕಾರ ಬಂದರೆ ಮಂತ್ರಿ ಮಂಡಲ ಸೇರಲು ಹವಣಿಸುತ್ತಾರೆ.೨೦೧೯ ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಫಲವಾಗಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸಂಪುಟದಲ್ಲಿ ವಲಸಿಗರೇ ದೊಡ್ಡ ಮಟ್ಟದಲ್ಲಿ ಮಂತ್ರಿಗಳಾಗಿದ್ದರು.

ಹೀಗೆ ಹೊರಗಿನಿಂದ ಬಂದವರಿಗೇ ಹೆಚ್ಚಿನ ಆದ್ಯತೆ ಸಿಕ್ಕ ಪರಿಣಾಮವಾಗಿ ೨೦೨೩ ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸ್ವಪಕ್ಷೀಯರು ಬೇಸತ್ತು ಕುಳಿತಿದ್ದರು.ನಾಳೆ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರವನ್ನು ರಚಿಸಿದರೂ ಇದು ತಪ್ಪದ ತಲೆ ನೋವು.ಹೀಗಾಗಿ ಇಂತಹ ತಲೆ ನೋವಿಗೆ ಕೈ ಹಾಕುವ ಬದಲು ಸೂಕ್ತ ಕಾಲ ಬರುವವರೆಗೆ ಕಾಯುವುದು ಒಳ್ಳೆಯದು.

ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ಸಿದ್ಧರಾಮಯ್ಯ ಅವರ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ.ಅದು ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಲು ಈ ವರ್ಷವೂ ಪರದಾಡಬೇಕಾಗುತ್ತದೆ.ಅಷ್ಟೇ ಅಲ್ಲ,ಹಣಕಾಸಿನ ವಿಷಯದಲ್ಲಿ ಕೇಂದ್ರದ ವಿರುದ್ಧ ತಕರಾರು ಎತ್ತುವ ಸ್ಥಿತಿಗೆ ಬಂದಿದೆ ಎಂದರೆ,ಮುಂದಿನ ದಿನಗಳಲ್ಲಿ ಅದರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಹೀಗೆ ಅದರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದರೆ ಕಾಂಗ್ರೆಸ್‌ ಪಕ್ಷದ ಶಾಸಕರೇ ಕಿಡಿಕಿಡಿಯಾಗುತ್ತಾರೆ.ಅಷ್ಟೇ ಅಲ್ಲ,ತಮ್ಮ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಪರ್ಯಾಯ ಮಾರ್ಗಗಳ ಕಡೆ ಹೊರಳಿ ನೋಡುವ ಸ್ಥಿತಿಗೆ ಬರುತ್ತಾರೆ.ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ನಡುವೆ ನಡೆಯುತ್ತಿರುವ ಸಂಘರ್ಷ ಇನ್ನೊಂದು ವರ್ಷ ಕಳೆಯುವುದರೊಳಗಾಗಿ ವಿಕೋಪಕ್ಕೆ ತಲುಪಿರುತ್ತದೆ.ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಇದೇ ಪಕ್ವ ಕಾಲ.

ಇದೇ ರೀತಿ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕೈ ಹಾಕಿ ಪರ್ಯಾಯ ಸರ್ಕಾರ ರಚಿಸಬೇಕೆಂದರೆ ಇಲ್ಲಿ ತಮ್ಮ ಸ್ಥಿತಿಯೂ ಸರಿ ಇಲ್ಲ.ಅರ್ಥಾತ್‌,ತಮಗಿರುವ ಅರವತ್ತಾರು ಶಾಸಕ ಬಲದ ಜತೆ ಜೆಡಿಎಸ್‌ ಮತ್ತು ಪಕ್ಷೇತರರ ಬೆಂಬಲವನ್ನೂ ನೆಚ್ಚಿಕೊಳ್ಳಬೇಕಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ನಿಂದ ಶಾಸಕರನ್ನು ಸೆಳೆದು ಸರ್ಕಾರ ರಚನೆಗೆ ಕೈ ಹಾಕುವುದು ಎಂದರೆ ಕಿಚಡಿ ಮಾಡಿದಂತೆ.

ಯಾಕೆಂದರೆ ಸರ್ಕಾರದಲ್ಲಿ ಭಾಗಿಯಾಗುವ ಎಲ್ಲರೂ ತಮಗೆ ಇಷ್ಟು ಆದ್ಯತೆ ಸಿಗಬೇಕು ಅಂತ ಪಟ್ಟು ಹಿಡಿಯುತ್ತಾರೆ.ನಾವು ಬರದೆ ಇದ್ದರೆ ಸರ್ಕಾರ ಮಾಡಲು ಸಾಧ್ಯವೇ ಇರಲಿಲ್ಲ ಎನ್ನುತ್ತಾರೆ.ಹೀಗಾಗಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರ ರಚನೆಗೆ ಕೈ ಹಾಕುವುದು ಯಾವ ಕಾರಣಕ್ಕೂ ಪ್ರಾಕ್ಟಿಕಲ್‌ ಅಲ್ಲ ಎಂಬುದು ಮೋದಿ ಲೆಕ್ಕಾಚಾರ.

ಯಾವಾಗ ರಾಜ್ಯ ಬಿಜೆಪಿಯ ಟಾಪ್‌ ಲೀಡರುಗಳಿಗೆ ಈ ಮೆಸೇಜು ಸಿಕ್ಕಿತೋ?ಇದಾದ ನಂತರ ಕೆಲವರಿಗೆ ಬೇಸರವಾಗಿದೆ.ಯಾಕೆಂದರೆ,ಸಿದ್ಧರಾಮಯ್ಯ ಸರ್ಕಾರ ಉರುಳಿದರೆ ತಾವು ಸಿಎಂ ಆಗುವುದು ಗ್ಯಾರಂಟಿ ಅಂತ ಈ ನಾಯಕರು ಲೆಕ್ಕ ಹಾಕಿದ್ದರು.ಕೆಲ ದಿನಗಳ ಹಿಂದೆ ಈ ನಾಯಕರ ಲೆಕ್ಕಾಚಾರದ ವಿವರ ಸಿಕ್ಕಾಗ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಧಿಘ್ಮೂಢರಾಗಿದ್ದರಂತೆ.

ಅದೇನೇ ಇರಲಿ,ಆದರೆ ಪ್ರಧಾನಿ ನರೇಂದ್ರಮೋದಿಯವರ ಲೆಕ್ಕಾಚಾರ ಬದಲಾಗಿರುವುದರಿಂದ,ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ಬದಲು ಇನ್ನಷ್ಟು ಕಾಲ ಮೌನವಾಗಿರೋಣ ಎಂಬ ತೀರ್ಮಾನಕ್ಕೆ ಬಂದಿರುವುದರಿಂದ ರಾಜ್ಯ ಬಿಜೆಪಿಯ ಸೇನಾನಿಗಳು ಲೋಕಸಭೆ ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸುವ ಅನಿವಾರ್ಯತೆ ಎದುರಾಗಿದೆ.ಮುಂದೇನು ಕತೆಯೋ?

■ಯೋಗಿಯ ಹೊಸ ಸ್ಟೋರಿ

ಈ ಮಧ್ಯೆ ಬಿಜೆಪಿಯ ನಾಯಕ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಮೊನ್ನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರಂತೆ.
ಈ ಭೇಟಿಯ ಸಂದರ್ಭದಲ್ಲಿ ನೇರವಾಗಿ ವಿಷಯ ಪ್ರಸ್ತಾಪಿಸಿದ ಅವರು,ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಣಕ್ಕೆ ಬಿಜೆಪಿ ವತಿಯಿಂದ ನಿಮ್ಮ ಅಳಿಯ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಿದರೆ ಡಿ.ಕೆ.ಸುರೇಶ್ ವಿರುದ್ಧ ಮಿನಿಮಮ್ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಸಾರ್ ಎಂದಿದ್ದಾರೆ.
ಯೋಗೀಶ್ವರ್ ಅವರ ಮಾತು ಕೇಳಿದ ದೇವೇಗೌಡರು ಹಸನ್ಮುಖಿಯಾಗಿ, ಹೌದು,ಈಗ ಡಾ.ಮಂಜುನಾಥ್ ಅವರ ಜಾತಕವೂ ತುಂಬ ಚೆನ್ನಾಗಿದೆ.ನೋಡೋಣ, ಬಿಜೆಪಿ ವರಿಷ್ಟರು ಏನು ಹೇಳುತ್ತಾರೋ?ಎಂದಿದ್ದಾರೆ.
ಗೌಡರ ಮಾತು ಕೇಳಿ ಉತ್ತೇಜಿತರಾದ ಯೋಗೀಶ್ವರ್,ಬಿಜೆಪಿ ವತಿಯಿಂದ ಡಾ. ಮಂಜುನಾಥ್ ನಿಲ್ಲಲು ರೆಡಿ ಅಂದ್ರೆ ಬಿಜೆಪಿಯಲ್ಲಿ ವಿರೋಧ ಮಾಡುವವರೇ ಇಲ್ಲ ಸಾರ್,ನಾನೂ ಈ ಕುರಿತು ಪಕ್ಷದ ಪ್ರಮುಖರ ಮುಂದೆ ಪ್ರಸ್ತಾಪಿಸಿದ್ದೇನೆ.ನೀವು ಯಸ್ ಎಂದರೆ ಸಾಕು ಎಂದಿದ್ದಾರೆ.
ಅಂದ ಹಾಗೆ ಈ ಹಿಂದೆ ಯೋಗೀಶ್ವರ್ ಅವರಿಗೆ ಸಂಸದರಾಗುವ ಇಚ್ಚೆ ಇತ್ತು.ಆದರೆ ಕೆಲ ದಿನಗಳಿಂದ ಈ ವಿಷಯದಲ್ಲಿ ಆಸಕ್ತಿ ಕಳೆದುಕೊಂಡಿರುವ ಅವರು,ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ‌ ಕುಮಾರಣ್ಣ ನಿಂತ್ರೆ ಗೆಲ್ಲಿಸಿ ಕಳಿಸ್ತೀವಿ ಅನ್ನತೊಡಗಿದರು.
ಆದರೆ ಈ ವಿಷಯದಲ್ಲಿ ಕುಮಾರಸ್ವಾಮಿ ಆಸಕ್ತಿ ತೋರದ ಪರಿಣಾಮವಾಗಿ ಯೋಗೀಶ್ವರ್ ಅವರಿಗೆ ಡಾ.ಮಂಜುನಾಥ್ ಡಾರ್ಕ್ ಹಾರ್ಸ್ ಆಗಿ ಕಾಣತೊಡಗಿದ್ದಾರೆ.

■ಸುರ್ಜೇವಾಲ ಹುಡುಕಿದ ಅಸ್ತ್ರ

ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಭ್ರಷ್ಟಾಚಾರದ ಅಸ್ತ್ರ ಬಳಸಬೇಕು ಅಂತ ಪಟ್ಟು‌ ಹಿಡಿದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒಂದು ಅಸ್ತ್ರ ಹುಡುಕಿದ್ದಾರೆ.ಈ ಅಸ್ತ್ರದ ಹೆಸರು ಎನ್.ಆರ್.ರಮೇಶ್.
ಈ ಹಿಂದೆ ಬಿಬಿಎಂಪಿಯ ಸದಸ್ಯರಾಗಿದ್ದ ಎನ್.ಆರ್.ರಮೇಶ್ ಹಿಂದೆಯೇ ಶಾಸಕರಾಗಬೇಕಿತ್ತಾದರೂ ಯಡಿಯೂರಪ್ಪ ಕ್ಯಾಂಪಿನ ಹೊಡೆತಕ್ಕೆ ಟಿಕೆಟ್ ವಂಚಿತರಾಗುತ್ತಿದ್ದಾರೆ.
ಭ್ರಷ್ಟಾಚಾರದ ಎಪಿಸೋಡುಗಳನ್ನು ಹೊರತೆಗೆಯುವ ವಿಷಯದಲ್ಲಿ ಮಾಸ್ಟರ್ ಆಗಿರುವ ಎನ್.ಆರ್.ರಮೇಶ್ ಕಾಂಗ್ರೆಸ್ ವಿರುದ್ಧ 122 ಭ್ರಷ್ಟಾಚಾರದ ಆರೋಪಗಳನ್ನು ಮಾಡಿ ನಡುಗಿಸಿದವರು.
ಹೀಗೆ ಕಾಂಗ್ರೆಸ್ ವಿರುದ್ಧ ಹೋರಾಡಿರುವ ರಮೇಶ್ ಅವರನ್ನು ಕೈ ಪಾಳಯಕ್ಕೆ ಎಳೆದುಕೊಂಡರೆ ಬಿಜೆಪಿಯ ಶಿಬಿರ ನಡುಗುವಂತೆ ಮಾಡಬಹುದು ಎಂಬುದು ಸುರ್ಜೇವಾಲ ಯೋಚನೆ.ಹಾಗಂತಲೇ‌ ಮೊನ್ನೆ ರಮೇಶ್ ಅವರಿಗೆ ಫೋನು ಮಾಡಿದ ಸುರ್ಜೇವಾಲ,ನೀವು ಕಾಂಗ್ರೆಸ್ಸಿಗೆ ಬನ್ನಿ.ತುಂಬ ಎತ್ತರಕ್ಕೆ ಏರುತ್ತೀರಿ ಎಂದಿದ್ದಾರೆ.
ಅವರ ಮಾತು ಎನ್.ಆರ್.ರಮೇಶ್ ಅವರಿಗೆ ಹಿತವೆನ್ನಿಸಿದೆಯಾದರೂ ಸಂಘಪರಿವಾರದ ನಾಯಕರಾದ ಬಿ.ಎಲ್.ಸಂತೋಷ್,ಮುಕುಂದ್,ಸುಧೀರ್ ಮತ್ತು ತಿಪ್ಪೇಸ್ವಾಮಿಯವರನ್ನು ನೆನಪಿಸಿಕೊಂಡು ನಾನು ಕಾಂಗ್ರೆಸ್ಸಿಗೆ ಬರಲ್ಲ ಸಾರ್ ಅಂತ ಪ್ರತಿಯುತ್ತರಿಸಿದ್ದಾರೆ.
ಆದರೆ ಸುರ್ಜೇವಾಲ ಅವರು ರಮೇಶ್ ಬೆನ್ನಿಗೆ ಬಿದ್ದ ವಿಷಯ ತಿಳಿಯುತ್ತಲೇ ಬಿಜೆಪಿಯ ಹಲ ಮಾಜಿ ಸಚಿವರಿಗೆ ಆತಂಕ ಶುರುವಾಗಿರುವುದು ಮಾತ್ರ ಗುಟ್ಟಾಗಿ ಉಳಿದಿಲ್ಲ.

ಆರ್.ಟಿ.ವಿಠ್ಠಲಮೂರ್ತಿ

The post ಆಪರೇಷನ್ ಕಮಲ ಬೇಡಅಂದ್ರು ಮೋದಿ? appeared first on Hai Sandur kannada fortnightly news paper.

]]>
https://haisandur.com/2024/02/19/%e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d-%e0%b2%95%e0%b2%ae%e0%b2%b2-%e0%b2%ac%e0%b3%87%e0%b2%a1%e0%b2%85%e0%b2%82%e0%b2%a6%e0%b3%8d%e0%b2%b0%e0%b3%81-%e0%b2%ae%e0%b3%8b/feed/ 0
ಡಿಕೆಶಿಗೆ ಬಂತು ವಾರ್ನಿಂಗ್ ಮೆಸೇಜು? https://haisandur.com/2023/10/23/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf%e0%b2%97%e0%b3%86-%e0%b2%ac%e0%b2%82%e0%b2%a4%e0%b3%81-%e0%b2%b5%e0%b2%be%e0%b2%b0%e0%b3%8d%e0%b2%a8%e0%b2%bf%e0%b2%82%e0%b2%97%e0%b3%8d/ https://haisandur.com/2023/10/23/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf%e0%b2%97%e0%b3%86-%e0%b2%ac%e0%b2%82%e0%b2%a4%e0%b3%81-%e0%b2%b5%e0%b2%be%e0%b2%b0%e0%b3%8d%e0%b2%a8%e0%b2%bf%e0%b2%82%e0%b2%97%e0%b3%8d/#respond Mon, 23 Oct 2023 03:33:46 +0000 https://haisandur.com/?p=33709 ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಆತಂಕದ ಸಂದೇಶಗಳು ಬರತೊಡಗಿವೆ.ಮುಂದಿನ ಪಾರ್ಲಿಮೆಂಟ್‌ ಚುನಾವಣೆಯ ಹೊತ್ತಿಗೆ ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಕೇಂದ್ರದ ಬಿಜೆಪಿ ನಾಯಕರು ಹೊರಟಿದ್ದಾರೆ ಎಂಬುದು ಈ ಸಂದೇಶಗಳ ವಿವರ. ಅಂದ ಹಾಗೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಅದು ಉರುಳಲಿದೆ ಅಂತ ರಾಜ್ಯದ ಬಿಜೆಪಿ ನಾಯಕರು ಹೇಳುತ್ತಾ ಬಂದಿದ್ದಾರೆ.ಆದರೆ ನೂರಾ ಮೂವತ್ತಾರು ಶಾಸಕರನ್ನು ಹೊಂದಿರುವ ಕೈ ಪಾಳಯ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೊದಲನೆಯದಾಗಿ ಸರ್ಕಾರ ಉರುಳಬೇಕೆಂದರೆ ಕಾಂಗ್ರೆಸ್‌ ಪಕ್ಷದಲ್ಲಿರುವ ಶಾಸಕರ ಪೈಕಿ ಮೂರನೇ […]

The post ಡಿಕೆಶಿಗೆ ಬಂತು ವಾರ್ನಿಂಗ್ ಮೆಸೇಜು? appeared first on Hai Sandur kannada fortnightly news paper.

]]>
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಆತಂಕದ ಸಂದೇಶಗಳು ಬರತೊಡಗಿವೆ.ಮುಂದಿನ ಪಾರ್ಲಿಮೆಂಟ್‌ ಚುನಾವಣೆಯ ಹೊತ್ತಿಗೆ ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಕೇಂದ್ರದ ಬಿಜೆಪಿ ನಾಯಕರು ಹೊರಟಿದ್ದಾರೆ ಎಂಬುದು ಈ ಸಂದೇಶಗಳ ವಿವರ.

ಅಂದ ಹಾಗೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಅದು ಉರುಳಲಿದೆ ಅಂತ ರಾಜ್ಯದ ಬಿಜೆಪಿ ನಾಯಕರು ಹೇಳುತ್ತಾ ಬಂದಿದ್ದಾರೆ.ಆದರೆ ನೂರಾ ಮೂವತ್ತಾರು ಶಾಸಕರನ್ನು ಹೊಂದಿರುವ ಕೈ ಪಾಳಯ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಮೊದಲನೆಯದಾಗಿ ಸರ್ಕಾರ ಉರುಳಬೇಕೆಂದರೆ ಕಾಂಗ್ರೆಸ್‌ ಪಕ್ಷದಲ್ಲಿರುವ ಶಾಸಕರ ಪೈಕಿ ಮೂರನೇ ಎರಡು ಭಾಗದಷ್ಟು ಶಾಸಕರು ಪಕ್ಷ ತೊರೆಯಬೇಕು. ಇಲ್ಲವೇ ನಲವತ್ತರಷ್ಟು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಾಂತರ ನಿಷೇಧ ಕಾಯ್ದೆಯ ಹೊಡೆತ ತಿನ್ನಬೇಕು ಮತ್ತು ಉಪಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧಿಸಿ ಗೆಲ್ಲಬೇಕು.

ಹೀಗಾಗಿ ಇವೆರಡೂ ಆಗದ ಕೆಲಸ ಎಂದು ಭಾವಿಸಿದ್ದ ಕಾಂಗ್ರೆಸ್‌ ನಾಯಕರು ಸರ್ಕಾರ ಭದ್ರವಾಗಿದೆ ಎಂಬ ತೀರ್ಮಾನಕ್ಕೆ ಬಂದು ಹಲವು ಕಾಲವೇ ಕಳೆದಿತ್ತು.ಆದರೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕ್ಯಾಂಪಿಗೆ ತಲುಪುತ್ತಿರುವ ಸಂದೇಶಗಳು ಮಾತ್ರ ಬೇರೆಯದೇ ಕತೆ ಹೇಳುತ್ತಿವೆಯಂತೆ.

ಈ ಸಂದೇಶಗಳ ಪ್ರಕಾರ,ಕಾಂಗ್ರೆಸ್‌ ಪಾಳಯದ ಮೂರನೇ ಎರಡು ಭಾಗದಷ್ಟು ಶಾಸಕರನ್ನು ಸೆಳೆಯುವ ಬದಲು, ನಲವತ್ತರಿಂದ ಐವತ್ತು ಶಾಸಕರ ಕೈಲಿ ರಾಜೀನಾಮೆ ಕೊಡಿಸುವುದು ಬಿಜೆಪಿ ವರಿಷ್ಟರ ಲೆಕ್ಕಾಚಾರ ಮತ್ತು ಪಾರ್ಲಿಮೆಂಟ್‌ ಚುನಾವಣೆಯ ಸಂದರ್ಧದಲ್ಲಿ ಇವರೆಲ್ಲರನ್ನು ಉಪಚುನಾವಣೆಯ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವುದು ಅವರ ಯೋಚನೆ.

ಈ ಮಧ್ಯೆ ಕಾಂಗ್ರೆಸ್‌ ಗೆ ರಾಜೀನಾಮೆ ಕೊಟ್ಟು ಹೊರಬರುವ ಶಾಸಕರಿಗೆ ಡಬಲ್‌ ಧಮಾಕಾ ಬೇರೆ ಸಿಗಲಿದೆ.ಅರ್ಥಾತ್‌,ಅವರು ಬಿಜೆಪಿಯಿಂದ ಮಾತ್ರ ಕಣಕ್ಕಿಳಿಯಬೇಕು ಅಂತಲ್ಲ,ಬದಲಿಗೆ ತಾವು ಜೆಡಿಎಸ್‌ ವತಿಯಿಂದ ಸ್ಪರ್ಧಿಸಿದರೆ ಗೆಲ್ಲುವ ಚಾನ್ಸು ಜಾಸ್ತಿ ಅನ್ನಿಸಿದರೆ ಆ ಪಕ್ಷದ ಕ್ಯಾಂಡಿಡೇಟ್‌ ಆಗಿಯೂ ಅವರು ಸ್ಪರ್ಧಿಸಬಹುದು.

ಹೀಗೆ ಸ್ಪರ್ಧಿಸುವುದಷ್ಟೇ ಅವರ ಕೆಲಸ.ಉಳಿದಂತೆ ಅವರು ಹತ್ತುವ ರಥ,ಓಡುವ ಕುದುರೆ,ಬೇಕಾಗುವ ಶಸ್ತ್ರಾಸ್ತ್ರಗಳ ಹೊಣೆ ನಮ್ಮದೇ ಮತ್ತು ಚುನಾವಣೆಯಲ್ಲಿ ಗೆದ್ದ ಮೇಲೆ ಅವರಿಗೆ ನೆಲೆ ಕಲ್ಪಿಸಿಕೊಡುವ ಜವಾಬ್ದಾರಿಯೂ ನಮ್ಮದೇ ಎಂಬ ಸಂದೇಶ ಕಾಂಗ್ರೆಸ್‌ ನ ಮೂವತ್ತಕ್ಕೂ ಹೆಚ್ಚು ಶಾಸಕರಿಗೆ ಬಿಜೆಪಿ ವರಿಷ್ಟರಿಂದ ರವಾನೆಯಾಗಿದೆ ಎಂಬುದು ಡಿಕೆಶಿ ಕ್ಯಾಂಪಿಗೆ ತಲುಪಿರುವ ಸುದ್ದಿ.

ಕೇಂದ್ರದ ಬಿಜೆಪಿ ನಾಯಕರು ಕೊಟ್ಟ ಈ ಆಫರಿಗೆ ಮತ್ತೊಂದು ಅಟ್ರಾಕ್ಟೀವ್‌ ಮುಖವೂ ಇದೆ.ಅದೆಂದರೆ,ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬರುವ ಶಾಸಕರು ಉಪಚುನಾವಣೆಯಲ್ಲಿ ಗೆದ್ದು ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಬಿಜೆಪಿ ವರಿಷ್ಟರು,ಒಂದು ವೇಳೆ ಯಾರಾದರೂ ಸೋತರೆ ಅವರನ್ನು ಬೇರೆ ಬೇರೆ ಹುದ್ದೆಗಳಲ್ಲಿ ನೆಲೆ ಮಾಡುವ ಹೊಣೆಗಾರಿಕೆಯೂ ನಮ್ಮದೇ ಅಂತ ಹೇಳಿದ್ದಾರಂತೆ.

ಅರ್ಥಾತ್‌,ಮುಂದಿನ ಪಾರ್ಲಿಮೆಂಟ್‌ ಚುನಾವಣೆಯ ನಂತರ ಇಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರ ಇರಬೇಕು, ದಿಲ್ಲಿಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಅಧಿಕಾರದಲ್ಲಿರಬೇಕು ಎಂಬುದು ಕಮಲ ಪಾಳಯದ ಲೆಕ್ಕಾಚಾರ.

ಮುಂದೆ ಈ ಆಟ ಯಾವ ಯಾವ ಸ್ವರೂಪ ಪಡೆಯುತ್ತದೋ ಗೊತ್ತಿಲ್ಲ.ಆದರೆ ಈ ಕುರಿತ ಸಂದೇಶಗಳನ್ನು ಸ್ವೀಕರಿಸುತ್ತಿರುವ ಡಿಕೆಶಿ ಮಾತ್ರ ಚಿಂತಾಕ್ರಾಂತರಾಗಿದ್ದಾರಂತೆ.

ಜಾರಕಿಹೊಳಿ ಸಿಡಿಸಿದ ಗರ್ನಲ್ಲು


ಈ ಮಧ್ಯೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಿಡಿಸಿರುವ ಗರ್ನಲ್ಲು ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಧೂಳೆಬ್ಬಿಸಿದೆ.

ಪಕ್ಷದ ಇಪ್ಪತ್ತಕ್ಕೂ ಹೆಚ್ಚು ಶಾಸಕರನ್ನು ಮೈಸೂರಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದ ಸತೀಶ್‌ ಜಾರಕಿಹೊಳಿ ಅವರಿಗೆ ಬ್ರೇಕ್‌ ಹಾಕಲಾಯಿತೇನೋ ನಿಜ.ಆದರೆ ಇದು ಇಷ್ಟಕ್ಕೇ ನಿಲ್ಲುವುದಲ್ಲ ಎಂಬುದು ಎಲ್ಲರಿಗೂ ಗೊತ್ತು.

ಅಂದ ಹಾಗೆ ಜಾರಕಿಹೊಳಿ ಅವರ ಆಕ್ರೋಶಕ್ಕೆ ಬೆಳಗಾವಿ ಜಿಲ್ಲೆಯ ರಾಜಕೀಯ ಸುಳಿಗಳು ಕಾರಣ ಎನ್ನಲಾಗುತ್ತಿದೆಯಾದರೂ,ವಿಷಯ ಅಷ್ಟಕ್ಕೆ ಸೀಮಿತವಾಗಿದೆ ಎಂದೂ ಅಲ್ಲ,ನೇರವಾಗಿ ಹೇಳಬೇಕೆಂದರೆ ಸತೀಶ್‌ ಜಾರಕಿಹೊಳಿ ಅವರಿಗೀಗ ಅರ್ಜೆಂಟಾಗಿ ಉಪಮುಖ್ಯಮಂತ್ರಿ ಪೋಸ್ಟು ಬೇಕು,ಮುಂದೆ ಸಿದ್ಧರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದು ಬೇರೊಬ್ಬರು ಸಿಎಂ ಆಗುತ್ತಾರೆ ಎಂದಾದರೆ,ಆ ಪಟ್ಟವೂ ಅವರಿಗೆ ಬೇಕು.

ವಸ್ತುಸ್ಥಿತಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ತಮಗೆ ಡಿಸಿಎಂ ಹುದ್ದೆ ಸಿಗಬೇಕಿತ್ತು ಎಂಬುದು ಸತೀಶ್‌ ಜಾರಕಿಹೊಳಿ ವಾದ.ಆದರೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಾದರೆ ನಾನೊಬ್ಬನೇ ಡಿಸಿಎಂ ಆಗಿರಬೇಕು ಅಂತ ಡಿಕೆಶಿ ಹಿಡಿದ ಹಟಕ್ಕೆ ಕಾಂಗ್ರೆಸ್‌ ವರಿಷ್ಟರು ಮನ್ನಣೆ ನೀಡಿದ್ದರು.

ಹೀಗಾಗಿ ಸಿದ್ಧರಾಮಯ್ಯ ಅವರ ಸಂಫುಟದಲ್ಲಿ ಉಪಮುಖ್ಯಮಂತ್ರಿಯಾಗಬೇಕಿದ್ದ ತಾವು ಕೇವಲ ಮಂತ್ರಿಗಿರಿಗೆ ತೃಪ್ತಿ ಪಡಬೇಕಾಯಿತು ಎಂಬ ಸಿಟ್ಟು ಜಾರಕಿಹೊಳಿ ಅವರಿಗಿದೆ.ಹೀಗಾಗಿ ಮೇಲೆದ್ದು ನಿಂತಿರುವ ಅವರು,ಸಿದ್ಧರಾಮಯ್ಯ ಸಿಎಂ ಆಗಿರುವಾಗಲೇ ತಾವು ಡಿಸಿಎಂ ಆಗಬೇಕು.ಇಲ್ಲದಿದ್ದರೆ ಭವಿಷ್ಯದಲ್ಲಿ ಸಿಎಂ ಹುದ್ದೆ ಪಡೆಯುವುದು ಕಷ್ಟ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.

ಈ ಮಧ್ಯೆ ಸತೀಶ್‌ ಜಾರಕಿಹೊಳಿ ಸಿಟ್ಟಿಗೆ ತಾವು ಕಾರಣ,ಬೆಳಗಾವಿ ಜಿಲ್ಲೆಯ ಟ್ರಾನ್ಸ್‌ ಫರುಗಳಲ್ಲಿ ತಾವು ಮಾಡಿದ ಹಸ್ತಕ್ಷೇಪವೇ ಕಾರಣ ಎಂಬ ವರದಿಗಳನ್ನು ನೋಡಿದ ಡಿಕೆಶಿ,ಮೊನ್ನೆ ಶನಿವಾರ ಈ ಕುರಿತ ಮಾಹಿತಿಗಳನ್ನು ತರಿಸಿಕೊಂಡು ಪರಿಶೀಲಿಸಿದರಂತೆ.ನೋಡಿದರೆ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸತೀಶ್‌ ಜಾರಕಿಹೊಳಿ ಕೊಟ್ಟ ಲೆಟರುಗಳನ್ನೆಲ್ಲ ತಮ್ಮ ಕಚೇರಿ ಕ್ಲಿಯರ್‌ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನು ಬೆಂಗಳೂರು ನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಸುರಂಗ ಮಾರ್ಗಗಳನ್ನು ನಿರ್ಮಿಸುವ ವಿಷಯದಲ್ಲಿ ಡಿಕೆಶಿ ವಿರುದ್ಧ ಜಾರಕಿಹೊಳಿ ಸಿಟ್ಟಾಗಿದ್ದಾರೆ ಎಂಬುದರಿಂದ ಹಿಡಿದು ಹಲವು ರೀತಿಯ ಮಿಸೈಲುಗಳು ಸಿಡಿಯುತ್ತಿವೆಯಾದರೂ,ಫೈನಲಿ ಇದು ಡಿಸಿಎಂ ಹುದ್ದೆಗೆ,ಆ ಮೂಲಕ ಸಿಎಂ ಹುದ್ದೆಗೆ ಜಾರಕಿಹೊಳಿ ಇಟ್ಟಿರುವ ಟಾರ್ಗೆಟ್ಟು ಎಂಬುದು ಸ್ಪಷ್ಟ.

ಶುರುವಾಗಲಿದೆ ಇಬ್ರಾಹಿಂ ಔಟ್‌ ಲೆಟ್ಟು
­­­­­­­­­

ಜೆಡಿಎಸ್‌ ಪಕ್ಷದ ವಿಸರ್ಜಿತ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ಸಂಯುಕ್ತ ಜನತಾದಳದ ನಾಯಕ,ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬುಲಾವ್‌ ನೀಡಿದ್ದಾರಂತೆ.

ಕಳೆದ ಸೋಮವಾರ ಚಿಂತನ ಮಂಥನ ಸಭೆ ನಡೆಸಿದ ಸಿ.ಎಂ.ಇಬ್ರಾಹಿಂ ಅವರು,ತಮ್ಮದೇ ಒರಿಜಿನಲ್‌ ಜೆಡಿಎಸ್‌ ಎಂದು ಘೋಷಿಸಿಕೊಂಡಿದ್ದರು.

ಆದರೆ ಹೀಗೆ ಅವರು ಘೋಷಿಸಿಕೊಂಡ ನಂತರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ರಾಜ್ಯ ಸಮಿತಿ ಮತ್ತು ಶಾಸಕಾಂಗ ಪಕ್ಷದ ಸಭೆ ನಡೆಯಿತು.ಈ ಸಭೆ ನಡೆದ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು,ಇಬ್ರಾಹಿಂ ಸೇರಿದಂತೆ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ವಿಸರ್ಜನೆ ಮಾಡುವ ಆದೇಶ ಪ್ರಕಟಿಸಿದರು.

ಈ ಬೆಳವಣಿಗೆಯ ನಂತರ ಸದ್ದು ಮಾಡುತ್ತಿರುವ ಸಿ.ಎಂ.ಇಬ್ರಾಹಿಂ,ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಲು ಸಾಧ್ಯವಿಲ್ಲ ಎಂದು ವರಾತ ತೆಗೆದಿದ್ದಾರಲ್ಲದೆ,ನ್ಯಾಯ ಕೇಳಿ ನ್ಯಾಯಾಲಯಕ್ಕೆ ಹೋಗುವ ಮಾತನಾಡಿದ್ದಾರೆ.

ಇದೆಲ್ಲ ನಡೆಯುತ್ತಿರುವಾಗ ಉತ್ಸಾಹಗೊಂಡ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು,ಕರ್ನಾಟಕದಲ್ಲಿ ಜನತಾ ಪರಿವಾರವನ್ನು ಸಂಘಟಿಸಲು ಏನಾದರೂ ಅವಕಾಶಗಳಿವೆಯಾ ನೋಡಿ ಅಂತ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಲನ್‌ ಸಿಂಗ್‌ ಅವರಿಗೆ ಕೇಳಿದರಂತೆ.

ನಿತೀಶ್‌ ಕುಮಾರ್‌ ಅವರ ಈ ಸೂಚನೆ ಸಿಕ್ಕ ನಂತರ ಲಲನ್‌ ಸಿಂಗ್‌ ಅವರು,ಒಂದು ಕಾಲದಲ್ಲಿ ಕರ್ನಾಟಕದ ಜೆಡಿ(ಯು) ಅಧ್ಯಕ್ಷರಾಗಿದ್ದ,ಮತ್ತೀಗ ಎಲ್.ಜೆ.ಡಿ ನಾಯಕರಾಗಿರುವ ಡಾ.ಎಂ.ಪಿ. ನಾಡಗೌಡರನ್ನು ಮುಂಬೈಗೆ ಕರೆಸಿಕೊಂಡು ಚರ್ಚಿಸಿದ್ದಾರೆ.

ಈ ಚರ್ಚೆಯ ಸಂದರ್ಭದಲ್ಲಿ ಲಲನ್‌ ಸಿಂಗ್‌ ಅವರಿಗೆ ಕರ್ನಾಟಕದ ಪರಿಸ್ಥಿತಿಯ ಕುರಿತು ವಿವರಿಸಿದ ನಾಡಗೌಡರು, ಸಾರ್‌, ಕರ್ನಾಟಕದಲ್ಲಿ ಜನತಾ ಪರಿವಾರದ ತುಣುಕುಗಳು ಇನ್ನೂ ಉಳಿದಿವೆ.ಜಾತ್ಯಾತೀತ ದಳ,ಸಂಯುಕ್ತ ದಳ ಮತ್ತು ಎಲ್.ಜೆ.ಡಿ ಸೇರಿದಂತೆ ಮೂರ್ನಾಲ್ಕು ಪಕ್ಷಗಳು ಒಂದುಗೂಡಿದರೆ ದೊಡ್ಡ ಮಟ್ಟದ ಯಶಸ್ಸು ಸಿಗದಿರಬಹುದು.ಆದರೆ ನಿಶ್ಚಿತವಾಗಿ ಒಂದು ಔಟ್‌ ಲೆಟ್‌ ನಿರ್ಮಾಣವಾಗುತ್ತದೆ ಎಂದರಂತೆ.

ಅದು ಹೇಗೆ ಎಂದು ಲಲನ್‌ ಸಿಂಗ್‌ ಕೇಳಿದರೆ,ಇವತ್ತು ಜೆಡಿಎಸ್‌ ಪಕ್ಷದಲ್ಲಿರುವ ಹಲವು ಕಾರ್ಯಕರ್ತರಿಗೆ,ಬಿಜೆಪಿಯಲ್ಲಿರುವ ಕಾರ್ಯಕರ್ತರಿಗೆ ಆಲ್ಟರ್‌ ನೇಟಿವ್‌ ಬೇಕಾಗಿದೆ.ಆದರೆ ಅದು ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಸುಮ್ಮನಿದ್ದಾರೆ.ಅವರಿಗೆ ಇಂತಹದೊಂದು ಔಟ್‌ ಲೆಟ್‌ ಸಿಕ್ಕರೆ ಸಂತೋಷವಾಗಿ ಬರುತ್ತಾರೆ.ಹೀಗೆ ಕರ್ನಾಟಕದ ರಾಜಕಾರಣದಲ್ಲಿ ಒಂದು ಔಟ್‌ ಲೆಟ್‌ ನಿರ್ಮಾಣವಾದರೆ ನಾಳೆ ಅದು ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಬೇಕಾಗುತ್ತದೆ.ಆದರೆ ಅಂತಹ ಬೆಂಬಲ ಇಂಡಿಯಾ ಒಕ್ಕೂಟದ ಮೂಲಕ ಕೊಡಬೇಕು ಅಂತ ನಾಡಗೌಡರು ಹೇಳಿದಾಗ ಲಲನ್‌ ಸಿಂಗ್‌ ಯಸ್‌ ಎಂದರಂತೆ.

ಇದಾದ ನಂತರ ಸಿ.ಎಂ.ಇಬ್ರಾಹಿಂ ಅವರಿಗೆ ನಿತೀಶ್‌ ಕುಮಾರ್‌ ಅವರ ಕರೆ ಬಂದಿದೆ.ಇಬ್ರಾಹಿಂ ಕೂಡಾ ಪಾಟ್ನಾದ ವಿಮಾನ ಹತ್ತಲು ಆಸಕ್ತಿ ತೋರಿಸಿದ್ದಾರೆ.ಅಂದ ಹಾಗೆ ಸಿ.ಎಂ.ಇಬ್ರಾಹಿಂ ಅವರ ಎಪಿಸೋಡನ್ನು ತುಂಬ ಜನ ಗಂಭೀರವಾಗಿ ಪರಿಗಣಿಸಿಲ್ಲ.ಕಾರಣ?ಜೆಡಿಎಸ್‌ ಪಕ್ಷ ಹೇಳಿ ಕೇಳಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮುಷ್ಟಿಯಲ್ಲಿರುವ ಪಕ್ಷ.ಅಲ್ಲಿಂದ ಹೊರಬಿದ್ದು ಇಬ್ರಾಹಿಂ ಸಾಧಿಸುವುದೇನು?ಅನ್ನುವುದು ಹಲವರ ಯೋಚನೆ.

ಆದರೆ ಇಬ್ರಾಹಿಂ ಎಪಿಸೋಡನ್ನು ಯಾರೆಷ್ಟೇ ಲಘುವಾಗಿ ಪರಿಗಣಿಸಿದರೂ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲಘುವಾಗಿ ನೋಡುತ್ತಿಲ್ಲ.ಕಾರಣ?ಅವರಿಗೆ ಇಬ್ರಾಹಿಂ ಅವರ ಹಿಂದೆ ರಾಜ್ಯ ಕಾಂಗ್ರೆಸ್ಸಿನ ಘಟಾನುಘಟಿ ನಾಯಕರ ನೆರಳು ಕಾಣಿಸುತ್ತಿದೆ

ಕಳೆದ ಕೆಲ ಕಾಲದಿಂದ ಈ ನಾಯಕರು ಇಬ್ರಾಹಿಂ ಅವರ ಜತೆ ಸೇರಿ ಜೆಡಿಎಸ್‌ ಪಕ್ಷವನ್ನು ಒಡೆಯುವ ಕುರಿತು ಮಾತುಕತೆ ನಡೆಸಿದ್ದಾರೆ ಎಂಬುದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗಿರುವ ಫೀಡ್‌ ಬ್ಯಾಕು.ಹೀಗಾಗಿ ಇಬ್ರಾಹಿಂ ಎಪಿಸೋಡನ್ನು ಅವರು ತುಂಬ ಸೂಕ್ಷ್ಮವಾಗಿ ಬಗೆಹರಿಸಲು ತೀರ್ಮಾನಿಸಿದ್ದಾರೆ.ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ವಿಸರ್ಜನೆಯಾದ ರೀತಿಯೇ ಇದಕ್ಕೆ ಸಾಕ್ಷಿ.

ಆರ್.ಟಿ.ವಿಠ್ಠಲಮೂರ್ತಿ

The post ಡಿಕೆಶಿಗೆ ಬಂತು ವಾರ್ನಿಂಗ್ ಮೆಸೇಜು? appeared first on Hai Sandur kannada fortnightly news paper.

]]>
https://haisandur.com/2023/10/23/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf%e0%b2%97%e0%b3%86-%e0%b2%ac%e0%b2%82%e0%b2%a4%e0%b3%81-%e0%b2%b5%e0%b2%be%e0%b2%b0%e0%b3%8d%e0%b2%a8%e0%b2%bf%e0%b2%82%e0%b2%97%e0%b3%8d/feed/ 0
ಶಾಮನೂರು ಹಾಕಿದ ಬಾಂಬು ಢಂ ಎನ್ನಲಿಲ್ಲ https://haisandur.com/2023/10/09/%e0%b2%b6%e0%b2%be%e0%b2%ae%e0%b2%a8%e0%b3%82%e0%b2%b0%e0%b3%81-%e0%b2%b9%e0%b2%be%e0%b2%95%e0%b2%bf%e0%b2%a6-%e0%b2%ac%e0%b2%be%e0%b2%82%e0%b2%ac%e0%b3%81-%e0%b2%a2%e0%b2%82-%e0%b2%8e%e0%b2%a8/ https://haisandur.com/2023/10/09/%e0%b2%b6%e0%b2%be%e0%b2%ae%e0%b2%a8%e0%b3%82%e0%b2%b0%e0%b3%81-%e0%b2%b9%e0%b2%be%e0%b2%95%e0%b2%bf%e0%b2%a6-%e0%b2%ac%e0%b2%be%e0%b2%82%e0%b2%ac%e0%b3%81-%e0%b2%a2%e0%b2%82-%e0%b2%8e%e0%b2%a8/#respond Mon, 09 Oct 2023 13:32:30 +0000 https://haisandur.com/?p=33636 ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಕಿದ ಸ್ಮೆಲ್ ಬಾಂಬು ಕೊನೆಗೂ ಸಿಡಿಯದೆ ತಣ್ಣಗಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ.ಅವರಿಗೆ ಸರಿಯಾದ ಪೋಸ್ಟಿಂಗು ಸಿಗುತ್ತಿಲ್ಲ ಅಂತ ಅವರು ಹಾಕಿದ ಬಾಂಬು ಡೆಡ್ಲಿಯಾಗಿ ಕಾಣಿಸಿದ್ದೇನೋ ನಿಜ. ಆದರೆ ಅದು ನಿರೀಕ್ಷೆಯಂತೆ ಸ್ಪೋಟಿಸದೆ ಇರಲು ಅದು ಗಟ್ಟಿ ನೆಲದ ಮೇಲೆ ಅಪ್ಪಳಿಸುವುದಕ್ಕಿಂತ,ಮಿದು ನೆಲದ ಮೇಲೆ ಬಿದ್ದಿದ್ದು ಮುಖ್ಯ ಕಾರಣ.ಅರ್ಥಾತ್,ಸರ್ಕಾರಿ ನೌಕರರ ಪೋಸ್ಟಿಂಗುಗಳ ವಿಷಯದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎನ್ನಲು ದೊಡ್ಡ ಮಟ್ಟದ ಎವಿಡೆನ್ಸುಗಳು ಇದುವರೆಗೆ ಸಿಗುತ್ತಿಲ್ಲ. ಮೇಲು ಹಂತದ ಉದಾಹರಣೆ […]

The post ಶಾಮನೂರು ಹಾಕಿದ ಬಾಂಬು ಢಂ ಎನ್ನಲಿಲ್ಲ appeared first on Hai Sandur kannada fortnightly news paper.

]]>
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಕಿದ ಸ್ಮೆಲ್ ಬಾಂಬು ಕೊನೆಗೂ ಸಿಡಿಯದೆ ತಣ್ಣಗಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ.ಅವರಿಗೆ ಸರಿಯಾದ ಪೋಸ್ಟಿಂಗು ಸಿಗುತ್ತಿಲ್ಲ ಅಂತ ಅವರು ಹಾಕಿದ ಬಾಂಬು ಡೆಡ್ಲಿಯಾಗಿ ಕಾಣಿಸಿದ್ದೇನೋ ನಿಜ.

ಆದರೆ ಅದು ನಿರೀಕ್ಷೆಯಂತೆ ಸ್ಪೋಟಿಸದೆ ಇರಲು ಅದು ಗಟ್ಟಿ ನೆಲದ ಮೇಲೆ ಅಪ್ಪಳಿಸುವುದಕ್ಕಿಂತ,ಮಿದು ನೆಲದ ಮೇಲೆ ಬಿದ್ದಿದ್ದು ಮುಖ್ಯ ಕಾರಣ.ಅರ್ಥಾತ್,ಸರ್ಕಾರಿ ನೌಕರರ ಪೋಸ್ಟಿಂಗುಗಳ ವಿಷಯದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎನ್ನಲು ದೊಡ್ಡ ಮಟ್ಟದ ಎವಿಡೆನ್ಸುಗಳು ಇದುವರೆಗೆ ಸಿಗುತ್ತಿಲ್ಲ.

ಮೇಲು ಹಂತದ ಉದಾಹರಣೆ ನೋಡುವುದಾದರೆ,ವಿವಿಧ ಇಲಾಖೆಗಳಡಿ ಬರುವ ಇಪ್ಪತ್ತೆಂಟು ಮುಖ್ಯ ಎಂಜಿನಿಯರುಗಳ ಪೈಕಿ ಒಂಭತ್ತು ಮಂದಿ ಲಿಂಗಾಯತರು.ಇದೇ ರೀತಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಮತ್ತು ಬೆಂಗಳೂರಿನ ಡಿಸಿಪಿಗಳ ಪಟ್ಟಿ ತೆಗೆದರೆ ಅದರಲ್ಲಿ ಏಳು ಮಂದಿ ಲಿಂಗಾಯತರು.

ಇನ್ನು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಪಟ್ಟಿ ತೆಗೆದರೆ ಅದರಲ್ಲಿ ನಾಲ್ಕು ಮಂದಿ ಲಿಂಗಾಯತರು ಕಣ್ಣಿಗೆ ಕಾಣಿಸುತ್ತಾರೆ.

ರಾಜ್ಯದ ಅಸಿಸ್ಟೆಂಟ್ ಕಮೀಷನರುಗಳ ಪಟ್ಟಿಯನ್ನು ಓಪನ್ ಮಾಡಿಟ್ಟುಕೊಂಡರೆ ಅದರಲ್ಲಿ ಒಂಭತ್ತು ಮಂದಿ ಲಿಂಗಾಯತ ಅಧಿಕಾರಿಗಳಿದ್ದರೆ,ಜಿಲ್ಲಾಧಿಕಾರಿಗಳ ಪೈಕಿ ಮೂರು ಮಂದಿ ಲಿಂಗಾಯತ ಅಧಿಕಾರಿಗಳಿದ್ದಾರೆ.

ರಾಜ್ಯದ ನಲವತ್ತೊಂದು ವಿಶ್ವವಿದ್ಯಾನಿಲಯಗಳ ಪೈಕಿ ಹದಿಮೂರು ವಿವಿಗಳಲ್ಲಿ ಲಿಂಗಾಯತರು ಉಪಕುಲಪತಿಗಳಾಗಿದ್ದರೆ,ಎಂಟು ಮಂದಿ ಒಕ್ಕಲಿಗರು,ಎಂಟು ಮಂದಿ ಬ್ರಾಹ್ಮಣರು,ಐದು ಮಂದಿ ಪರಿಶಿಷ್ಟ ಜಾತಿಯವರು,ಆರು ಮಂದಿ ಹಿಂದುಳಿದ ವರ್ಗದವರು ಮತ್ತು ಪರಿಶಿಷ್ಟ ಪಂಗಡದ ಒಬ್ಬರು ಉಪಕುಲಪತಿಗಳಾಗಿದ್ದಾರೆ.

ಹಾಗೆಯೇ ಶಾಮನೂರು ಶಿವಶಂಕರಪ್ಪ ಅವರ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ,ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ,ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ,ಧೂಢಾ ಕಮೀಷನರ್,ಆಹಾರ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್,ತಹಸೀಲ್ದಾರ್,ಜಿಲ್ಲಾ ಸರ್ಜನ್ ಸೇರಿದಂತೆ ಬಹುತೇಕ ಆಯಕಟ್ಟಿನ ಹುದ್ದೆಗಳಲ್ಲಿ ಲಿಂಗಾಯತ ಅಧಿಕಾರಿಗಳು ಕುಳಿತಿದ್ದಾರೆ.

ಹೀಗೆ ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಲಿಂಗಾಯತರಿಗೆ ಸಿಕ್ಕಿರುವ ಪ್ರಾಮಿನೆನ್ಸು ಕಣ್ಣಿಗೆ ಢಾಳಾಗಿ ರಾಚುತ್ತಿರುವುದರಿಂದಲೇ ಶಾಮನೂರು ಶಿವಶಂಕರಪ್ಪ ಅವರ ಅರೋಪಕ್ಕೆ ಫೋರ್ಸು ಸಿಗುತ್ತಿಲ್ಲ.

ಇಷ್ಟಾದರೂ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಅಂತ ಅವರು ಹಾಕಿದ ಕೂಗು ಶುರುವಿನಲ್ಲಿ ಕಾಂಗ್ರೆಸ್ ಪಾಳಯವನ್ನು ಕಂಗಾಲು ಮಾಡಿದ್ದು ನಿಜ.ಯಾಕೆಂದರೆ ಮೂವತ್ತು ವರ್ಷಗಳ ಹಿಂದೆ ಕೈ ಪಾಳಯದಿಂದ ವಲಸೆ ಹೋಗಿದ್ದ ಲಿಂಗಾಯತರು ಇತ್ತೀಚೆಗಷ್ಟೇ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ.ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಆದ ಅವಮಾನವೇ ಇದಕ್ಕೆ ಮುಖ್ಯ ಕಾರಣ.

ಶತಾಯ ಗತಾಯ ಹೋರಾಡಿ 2019 ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು 2021 ರಲ್ಲಿ ಮೋದಿ-ಅಮಿತ್ ಷಾ ಜೋಡಿ ಬಲವಂತವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತು.ಇದೇ ರೀತಿ ವಿಧಾನಸಭಾ ಚುನಾವಣೆಗಳು ಹತ್ತಿರ ಬಂದಾಗ ಬಿಜೆಪಿಯಲ್ಲಿ ಸೆಟ್ಲಾದ ನಾಯಕರೊಬ್ಬರು:ನಮಗೆ ಲಿಂಗಾಯತರ ವೋಟು ಅನಿವಾರ್ಯವಲ್ಲ ಎಂದು ಬಿಟ್ಟರು.

ಪರಿಣಾಮ?ಈ ಬೆಳವಣಿಗೆಗಳು ಪ್ರಬಲ ಲಿಂಗಾಯತ ಸಮುದಾಯ ಸಿಡಿದು ನಿಲ್ಲುವಂತೆ ಮಾಡಿದ್ದಷ್ಟೇ ಅಲ್ಲ,ಕಾಂಗ್ರೆಸ್ ಕಡೆ ವಲಸೆ ಹೋಗಿ ಬಿಜೆಪಿಗೆ ಷಾಕ್ ಟ್ರೀಟ್ ಮೆಂಟ್ ಕೊಡುವಂತೆ ಮಾಡಿತು.

ವಸ್ತುಸ್ಥಿತಿ ಎಂದರೆ 1969 ವರೆಗೆ ಕಾಂಗ್ರೆಸ್ ಜತೆ ಇದ್ದ ಕರ್ನಾಟಕದ ಲಿಂಗಾಯತರು,ಕಾಂಗ್ರೆಸ್ ವಿಭಜನೆಯಿಂದ ಬೇಸತ್ತು ಜನತಾ ಪರಿವಾರದ ಕಡೆ ಹೊರಳಿದರು.1989 ರವರೆಗೂ ಅಲ್ಲೇ ಇದ್ದ ಈ ಸಮುದಾಯದ ಗಣನೀಯ ಮತಗಳು ವೀರೇಂದ್ರಪಾಟೀಲರ ಕಾರಣದಿಂದಾಗಿ 1989 ರಲ್ಲಿ ಕಾಂಗ್ರೆಸ್ ಜತೆ ನಿಂತವು.1994 ರಲ್ಲಿ ಜನತಾದಳದ ಕಡೆ ಹೋದ ಸಮುದಾಯ ರಾಮಕೃಷ್ಣ ಹೆಗಡೆ ಅವರ ಉಚ್ಚಾಟನೆಯ ನಂತರ ಜನತಾದಳ ತೊರೆದು ಲೋಕಶಕ್ತಿಯ ಜತೆ,ಆ ಮೂಲಕ ಬಿಜೆಪಿಯ ಕಡೆ ಹೊರಳಿಕೊಂಡಿತು.

ಹೀಗೆ ಅದು ಬಿಜೆಪಿಯ ಕಡೆ ಹೊರಳಲು ಎರಡು ಕಾರಣಗಳಿದ್ದವು.ಮೊದಲನೆಯದಾಗ ತಮ್ಮ ನೆಚ್ಚಿನ ನಾಯಕ ರಾಮಕೃಷ್ಣ ಹೆಗಡೆ ಅವರು ತೀರಿಕೊಂಡ ನಂತರ ಲಿಂಗಾಯತ ಸಮುದಾಯದಕ್ಕೆ ಪರ್ಯಾಯ ವೇದಿಕೆ ಬೇಕಿತ್ತು.ಈ ಸಂದರ್ಭದಲ್ಲಿ ಅದಕ್ಕೆ ಭರವಸೆಯಂತೆ ಕಾಣಿಸಿದವರು ಬಿಜೆಪಿಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ.

ಹೀಗೆ ಕಮಲ ಪಾಳಯದ ಕಡೆ ಬಂದ ಲಿಂಗಾಯತ ಸಮುದಾಯ ಸುಧೀರ್ಘ ಕಾಲ ಅಲ್ಲೇ ಉಳಿಯುವಂತೆ ನೋಡಿಕೊಂಡ ಯಡಿಯೂರಪ್ಪ,ಕರ್ನಾಟಕದ ನೆಲೆಯಲ್ಲಿ ಬಿಜೆಪಿ ಪದೇ ಪದೇ ಅಧಿಕಾರ ಹಿಡಿಯುವಂತೆ ನೋಡಿಕೊಂಡರು.ಆದರೆ ಯಾವಾಗ ಅವರನ್ನು ಬಲವಂತವಾಗಿ ಕೆಳಗಿಳಿಸಲಾಯಿತೋ?ಇದಾದ ನಂತರ ಲಿಂಗಾಯತ ಸಮುದಾಯ ಮೆಲ್ಲಗೆ ಕಾಂಗ್ರೆಸ್ ಕಡೆ ಕಣ್ಣು ಹಾಯಿಸಿತು.

ಅಂತಹ ಲಿಂಗಾಯತ ವರ್ಗ ಇನ್ನೂ ಕಾಂಗ್ರೆಸ್ ನಲ್ಲಿ ಸೆಟ್ಲಾಗುವ ಮುನ್ನವೇ ಶಾಮನೂರು ಶಿವಶಂಕರಪ್ಪ ಬಾಂಬು ಎಸೆದರಲ್ಲ?ಆಗ ಸಹಜವಾಗಿಯೇ ಕಾಂಗ್ರೆಸ್ ಪಾಳಯ ಕಂಗಾಲಾಯಿತು.ಎಷ್ಟೇ ಆದರೂ ಪಾರ್ಲಿಮೆಂಟ್ ಚುನಾವಣೆ ಹತ್ತಿರದಲ್ಲೇ ಇದೆ.ಇಂತಹ ಟೈಮಿನಲ್ಲಿ ತಮ್ಮ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಮೆಸೇಜು ಲಿಂಗಾಯತ ಸಮುದಾಯಕ್ಕೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾಗಬಹುದು ಎಂಬುದು ಅದರ ಆತಂಕ.

ಶಾಮನೂರು ಏಕೆ ಸಿಟ್ಟಿಗೆದ್ದರು

ಅಂದ ಹಾಗೆ ಇತ್ತೀಚಿನವರೆಗೂ ಸುಮ್ಮನಿದ್ದ ಶಾಮನೂರು ಶಿವಶಂಕರಪ್ಪ ಇದ್ದಕ್ಕಿದ್ದಂತೆ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೂಗು ಹಾಕಲು ಏನು ಕಾರಣ?ಹಾಗೆಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೈ ಪಾಳಯಕ್ಕೆ ನುಗ್ಗಿದರೆ ಇಂಟರೆಸ್ಟಿಂಗ್ ವಿಷಯಗಳು ಕೇಳಿ ಬರುತ್ತವೆ.

ಅದರ ಪ್ರಕಾರ,ದಾವಣಗೆರೆ ಧಣಿ ಬಿರುದಾಂಕಿತ ಶಾಮನೂರು ಶಿವಶಂಕರಪ್ಪನವರಿಗೆ ಇಂಧನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಾಂತೇಶ್ ಎಂಬ ಅಧಿಕಾರಿಯನ್ನು ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ತಂದುಕೊಳ್ಳುವ ಇಚ್ಚೆ ಇತ್ತಂತೆ.ಹಾಗಂತಲೇ ಈ ಕುರಿತು ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮೆಸೇಜು ಮುಟ್ಟಿಸಿದ್ದಾರೆ.ಆದರೆ ಅದು ವರ್ಕ್ ಔಟ್ ಆಗಿಲ್ಲ.

ಇದೇ ರೀತಿ ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯಗಳಿಗೆ ತಾವು ಹೇಳಿದವರನ್ನು ಉಪಕುಲಪತಿಗಳನ್ನಾಗಿ ನೇಮಕ ಮಾಡಬೇಕು ಅಂತ ಶಾಮನೂರು ಹೇಳಿದ್ದರಂತೆ.ಆದರೆ ಅದು ಕೂಡಾ ಇಂಪ್ಲಿಮೆಂಟ್ ಆಗಿಲ್ಲ.

ಯಾವಾಗ ತಾವು ಹೇಳಿದ್ದರಲ್ಲಿ ಈ ಮೂರು ಕೆಲಸಗಳು ಆಗಲಿಲ್ಲವೋ?ಆಗ ಸಹಜವಾಗಿಯೇ ಶಾಮನೂರು ಶಿವಶಂಕರಪ್ಪನವರ ಕೋಪ ನೆತ್ತಿಗೇರಿದೆ.ಹಾಗಂತಲೇ ಸಿಡಿದು ಬಿದ್ದು,ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಅಂತ ಬಾಂಬು ಎಸೆದಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ,ಒಂದು ಸರ್ಕಾರ ಹೊಸತಾಗಿ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿಗಳಾದವರು ಆಡಳಿತ ಯಂತ್ರ ತಮಗೆ ಅನುಕೂಲವಾಗುವಂತೆ ಸಾಫ್ ಮಾಡಿಟ್ಟುಕೊಳ್ಳುತ್ತಾರೆ.ಈ ಪರಿಪಾಠಕ್ಕೆ ಸಿದ್ಧರಾಮಯ್ಯ ಹೊರತೇನಲ್ಲ.

ಕಾರಣ?ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು,ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ತಂದು ಕೂರಿಸಿದ್ದರು.ಅದು ಅನಿವಾರ್ಯ ಕೂಡಾ.ಯಾಕೆಂದರೆ ಅವರಿಗಿಂತ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್, ತನ್ನ ಅನುಕೂಲಕ್ಕೆ ತಕ್ಕಂತಹ ಅಧಿಕಾರಿಗಳನ್ನು ತಂದು ಆಯಕಟ್ಟಿನ ಹುದ್ದೆಗಳಲ್ಲಿ ಕೂರಿಸಿತ್ತು.ಯಥಾ ಪ್ರಕಾರ ಈಗ ಕಾಂಗ್ರೆಸ್ ಸರದಿ.

ಅದರೆ,ಬಿಜೆಪಿ ಅವಧಿಯಲ್ಲಿ ಈ ರೀತಿ ಆಯಕಟ್ಟಿನ ಜಾಗಗಳಿಗೆ ಬಂದು ಕುಳಿತ ಅಧಿಕಾರಿಗಳನ್ನು ಸಿದ್ಧರಾಮಯ್ಯ ಅವರು ಅಲ್ಲೇ ಮುಂದುವರಿಸಬೇಕು,ಆಡಳಿತ ನಡೆಸಬೇಕು ಎಂಬುದು ತಪ್ಪು.ಯಾಕೆಂದರೆ ಈ ಹಿಂದಿದ್ದ ಬಿಜೆಪಿ ಸರ್ಕಾರ ಕೂಡಾ ಆಯಕಟ್ಟಿನ ಜಾಗಗಗಳಲ್ಲಿ ಕುಳಿತಿದ್ದವರನ್ನು ಎತ್ತಂಗಡಿ ಮಾಡಿಯೇ ತನಗೆ ಬೇಕಾದ ಆಡಳಿತ ಯಂತ್ರವನ್ನು ರೆಡಿ ಮಾಡಿಕೊಂಡಿತ್ತಲ್ಲ?ಇವತ್ತು ಸಿದ್ಧರಾಮಯ್ಯ ಕೂಡಾ ಇದನ್ನು ಮಾಡುತ್ತಿದ್ದಾರೆ.ಈ ಪ್ರೊಸೆಸ್ಸಿನಲ್ಲಿ ಕೆಲ ಲಿಂಗಾಯತ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳು ತಪ್ಪಬಹುದು.ಅದರರ್ಥ,ಹೋಲ್ ಸೇಲಾಗಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಅಂತಲ್ಲ.

ವಸ್ತುಸ್ಥಿತಿ ಎಂದರೆ ಬಿಜೆಪಿ ಸರ್ಕಾರ ಕೆಳಗಿಳಿದು ತಾವು ಮುಖ್ಯಮಂತ್ರಿ ಹುದ್ದೆಗೇರುವ ಘಳಿಗೆ ಹತ್ತಿರವಾಗುತ್ತಿದ್ದಂತೆಯೇ ಸರ್ಕಾರದ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ ಮೆಂಟಿನಲ್ಲಿ ಸೆಟ್ಲಾಗಿದ್ದ ಲಿಂಗಾಯತ ಅಧಿಕಾರಿಗಳ ಸಂಖ್ಯೆಯನ್ನು ನೋಡಿದ ಸಿದ್ಧರಾಮಯ್ಯ ಹೌಹಾರಿದ್ದರಂತೆ.ಇದಕ್ಕೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕಾರಣ ಎಂಬುದು ರಹಸ್ಯವೇನಲ್ಲ.

ಈಗ ಅಸ್ತಿತ್ವಕ್ಕೆ ಬಂದಿರುವ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಅಹಿಂದ ಸಮುದಾಯಗಳಿಗೆ ಸೇರಿದ ಅಧಿಕಾರಿಗಳಿಗೆ ಆದ್ಯತೆ ಸಿಗತೊಡಗಿದ್ದರೆ ಅದು ಸಹಜವೇ.ಗಮನಿಸಬೇಕಾದ ಸಂಗತಿ ಎಂದರೆ ಹೀಗೆ ಅಹಿಂದ ವರ್ಗಗಳಿಗೆ ಒಂದಷ್ಟು ಪ್ರಾಮಿನೆನ್ಸು ನೀಡಲಾಗುತ್ತಿದೆ ಎಂದರೂ,ಒಟ್ಟಾರೆಯಾಗಿ ನೋಡಿದರೆ ಅಲ್ಲಿ ಪ್ರಬಲ ವರ್ಗಗಳ ಪಾಲು ಗಣನೀಯವಾಗಿಯೇ ಇದೆ.

ಯಾಕೆಂದರೆ,ಈ ಹಿಂದೆ ಅಧಿಕಾರಕ್ಕೆ ಬಂದು ಕುಳಿತಿದ್ದ ನಾಯಕರು ತಮ್ಮ ತಮ್ಮ ವರ್ಗಗಳಿಗೆ ದೊಡ್ಡ ಮಟ್ಟದ ಪ್ರಾಮಿನೆನ್ಸು ನೀಡಿದ್ದಾರೆ.ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಕುಳಿತವರ ಪಟ್ಟಿ ನೋಡಿದರೆ ಇದು ಸ್ಪಷ್ಟವಾಗುತ್ತದೆ.ತಕರಾರೇನಿದ್ದರೂ ಈ ವರ್ಗಗಳ ತಳದಲ್ಲಿರುವವರಿಂದ ಬರಬೇಕು ಅಷ್ಟೇ.

ಯಡಿಯೂರಪ್ಪ ಬೇಸ್ತು ಬಿದ್ದಿದ್ದರು

ಅಂದ ಹಾಗೆ ಅಧಿಕಾರ ಹಿಡಿದಾಗ ತಮಗೆ ಬೇಕಾದಂತೆ ಆಡಳಿತ ಯಂತ್ರವನ್ನು ಸಜ್ಜು ಮಾಡಿಕೊಳ್ಳದೆ ಇದ್ದ ಕಾರಣದಿಂದ ಬೇಸ್ತು ಬಿದ್ದವರು ಯಡಿಯೂರಪ್ಪ ಮಾತ್ರ.

2008 ರಲ್ಲಿ ಅವರು ಮುಖ್ಯಮಂತ್ರಿಯಾದಾಗ ಅವರ ಆಪ್ತರು ಐಎಎಸ್,ಐಪಿಎಸ್,ಕೆಎಎಸ್ ಸೇರಿದಂತೆ ಹಲವು ಅಧಿಕಾರಿಗಳ ಹೆಸರುಗಳಿದ್ದ ಒಂದು ಪಟ್ಟಿಯನ್ನು ತಂದು ಮುಂದಿಟ್ಟಿದ್ದರಂತೆ.

ಹೀಗೆ ತಮ್ಮ ಮುಂದೆ ಬಂದ ಪಟ್ಟಿಯನ್ನು ನೋಡಿದ ಯಡಿಯೂರಪ್ಪನವರು ಇದೇನು ಅಂತ ಕೇಳಿದರೆ,ಇವರೆಲ್ಲ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದವರಿಗೆ ಹತ್ತಿರದವರು.ಇವರೆಲ್ಲ ಸರ್ಕಾರದ ಆಯಕಟ್ಟಿನ ಹುದ್ದೆಗಳಲ್ಲಿದ್ದಾರೆ.ಹೀಗಾಗಿ ಅವರನ್ನು ಎತ್ತಂಗಡಿ ಮಾಡಿ ಅಲ್ಲಿ ನಮಗೆ ನಿಷ್ಟರಾದವರನ್ನು ತಂದು ಕೂರಿಸಿಕೊಳ್ಳಬೇಕು ಎಂದರಂತೆ.

ಆದರೆ ತಮ್ಮ ಆಪ್ತರು ಹೇಳಿದ ಮಾತನ್ನು ಕೇಳಿಸಿಕೊಂಡ ಯಡಿಯೂರಪ್ಪ,ಯೇ ಅವರೆಲ್ಲ ಏನು ಮಾಡುತ್ತಾರೆ?ಎಷ್ಟೇ ಆದರೂ ಅವರು ಸರ್ಕಾರದ ಅಧಿಕಾರಿಗಳು.ಅವರಿದ್ದಾಗ ಅವರಿಗೆ ಬೇಕಾದಂತೆ ಕೆಲಸ ಮಾಡುತ್ತಾರೆ.ನಾವಿದ್ದಾಗ ನಮಗೆ ಬೇಕಾದಂತೆ ಕೆಲಸ ಮಾಡುತ್ತಾರೆ.ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಬಿಟ್ಟರು.

ಮುಂದೆ ಕೆಲವೇ ಕಾಲದಲ್ಲಿ ತಮ್ಮ ಸರ್ಕಾರದ ವಿರುದ್ದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಮುಗಿಬೀಳುತ್ತಿದ್ದ ರೀತಿಯನ್ನು ನೋಡಿ ಯಡಿಯೂರಪ್ಪ ಕಂಗಾಲಾದರಂತೆ.ಯಾಕೆಂದರೆ ಸರ್ಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನಗಳಾದರೂ ಅದರ ವಿವರ ಕುಮಾರಸ್ವಾಮಿ ಅವರ ಕೈಲಿರುತ್ತಿತ್ತು.

ಈ ವಿಸ್ಮಯದ ಕುರಿತು ಯಡಿಯೂರಪ್ಪ ತಮ್ಮ ಆಪ್ತರನ್ನು ಪ್ರಶ್ನಿಸಿದಾಗ:ಸಾರ್,ಈ ವಿಷಯದ ಬಗ್ಗೆ ಹಿಂದೆಯೇ ನಿಮ್ಮ ಗಮನ ಸೆಳೆದಿದ್ದೆವು.ಆದರೆ ನೀವು ಅದು ದೊಡ್ಡ ವಿಷಯವಲ್ಲ ಎಂದಿರಿ.ಆದರೆ ಇವತ್ತು ನೀವು ಕೈಗೊಳ್ಳುವ ಯಾವುದೇ ತೀರ್ಮಾನ ಸರ್ಕಾರದ ಅಧಿಕೃತ ಆದೇಶವಾಗಿ ಪ್ರಕಟವಾದರೆ,ಅದು ಮುದ್ರಿತವಾಗುತ್ತಿದ್ದಂತೆಯೇ ಒಂದು ಪ್ರತಿ ದೇವೇಗೌಡರ ಕುಟುಂಬದವರಿಗೆ ತಲುಪುತ್ತದೆ ಎಂದರಂತೆ.

ಯಾವಾಗ ಆಪ್ತರು ಈ ಮಾತು ಹೇಳಿದರೋ?ಇದಾದ ನಂತರ ಯಡಿಯೂರಪ್ಪ ಅವರು ಆಡಳಿತ ಯಂತ್ರಕ್ಕೆ ಸರ್ಜರಿ ಶುರು ಮಾಡಿದರು.

ಹೀಗಾಗಿ ಆಡಳಿತ ನಡೆಸುವವರು ತಮಗೆ ಬೇಕಾದವರು ಯಾರು ಅಂತ ನಿರ್ಧರಿಸಿ ಆಯಕಟ್ಟಿನ ಹುದ್ದೆಗಳಲ್ಲಿ ತಂದು ಕೂರಿಸಿರುತ್ತಾರೋ?ಅವರಲ್ಲಿ ಬಹುತೇಕರು ಹೊಸ ಸರ್ಕಾರ ಬಂದಾಗ ಬೇರೆ ಕಡೆ ವರ್ಗವಾಗಿ ಹೋಗುತ್ತಾರೆ.ಈಗ ಆಗುತ್ತಿರುವುದು ಕೂಡಾ ಅದೇ.

ಶಾಮನೂರು ಶಿವಶಂಕರಪ್ಪ ಅವರು ಎಸೆದ ಬಾಂಬು ಢಂ ಅನ್ನದೇ ಇದ್ದರೆ ಅದಕ್ಕೆ ಇದೇ ಮುಖ್ಯ ಕಾರಣ.ಹಾಗಂತ ಅದು ಆರಿ ಹೋಗಿದೆ ಅಂತಲೂ ಅಲ್ಲ.ಒಂದು ವೇಳೆ ಅದು ಆರದೇ ಹೋದರೆ ಅರಸರ ಕಾಲದಲ್ಲಾದ ಜಾತಿ ಸಂಘರ್ಷ ಪುನರಾವರ್ತನೆಯಾಗುವುದು ನಿಶ್ಚಿತ.

—-ಆರ್.ಟಿ.ವಿಠ್ಠಲಮೂರ್ತಿ

The post ಶಾಮನೂರು ಹಾಕಿದ ಬಾಂಬು ಢಂ ಎನ್ನಲಿಲ್ಲ appeared first on Hai Sandur kannada fortnightly news paper.

]]>
https://haisandur.com/2023/10/09/%e0%b2%b6%e0%b2%be%e0%b2%ae%e0%b2%a8%e0%b3%82%e0%b2%b0%e0%b3%81-%e0%b2%b9%e0%b2%be%e0%b2%95%e0%b2%bf%e0%b2%a6-%e0%b2%ac%e0%b2%be%e0%b2%82%e0%b2%ac%e0%b3%81-%e0%b2%a2%e0%b2%82-%e0%b2%8e%e0%b2%a8/feed/ 0
ಯಡಿಯೂರಪ್ಪ ಗೇಮ್ ಪ್ಲಾನು ಬದಲಾಗಿದ್ದೇಕೆ? https://haisandur.com/2023/07/24/%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%97%e0%b3%87%e0%b2%ae%e0%b3%8d-%e0%b2%aa%e0%b3%8d%e0%b2%b2%e0%b2%be%e0%b2%a8%e0%b3%81-%e0%b2%ac%e0%b2%a6/ https://haisandur.com/2023/07/24/%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%97%e0%b3%87%e0%b2%ae%e0%b3%8d-%e0%b2%aa%e0%b3%8d%e0%b2%b2%e0%b2%be%e0%b2%a8%e0%b3%81-%e0%b2%ac%e0%b2%a6/#respond Mon, 24 Jul 2023 04:32:16 +0000 https://haisandur.com/?p=33006 ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೇಮ್ ಪ್ಲಾನು ಬದಲಾಗಿದೆ.ಮೊನ್ನೆ ಮೊನ್ನೆಯ ತನಕ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾಕರಂದ್ಲಾಜೆ ಬರಲಿ,ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬೊಮ್ಮಾಯಿ ಬರಲಿ ಎನ್ನುತ್ತಿದ್ದ ಅವರು ಈಗ ಉಲ್ಟಾ ಹೊಡೆದಿದ್ದಾರೆ.ಅವರ ಗೇಮ್ ಪ್ಲಾನು ಇದ್ದಕ್ಕಿದ್ದಂತೆ ಬದಲಾಗಲು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣ ಎಂಬುದು ರಹಸ್ಯವೇನಲ್ಲ.ಅಂದ ಹಾಗೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಎದುರಿಸಲು,ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳನ್ನು ಕನ್ ಸಾಲಿಡೇಟ್ ಮಾಡಲು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ […]

The post ಯಡಿಯೂರಪ್ಪ ಗೇಮ್ ಪ್ಲಾನು ಬದಲಾಗಿದ್ದೇಕೆ? appeared first on Hai Sandur kannada fortnightly news paper.

]]>
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೇಮ್ ಪ್ಲಾನು ಬದಲಾಗಿದೆ.
ಮೊನ್ನೆ ಮೊನ್ನೆಯ ತನಕ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾಕರಂದ್ಲಾಜೆ ಬರಲಿ,ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬೊಮ್ಮಾಯಿ ಬರಲಿ ಎನ್ನುತ್ತಿದ್ದ ಅವರು ಈಗ ಉಲ್ಟಾ ಹೊಡೆದಿದ್ದಾರೆ.
ಅವರ ಗೇಮ್ ಪ್ಲಾನು ಇದ್ದಕ್ಕಿದ್ದಂತೆ ಬದಲಾಗಲು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣ ಎಂಬುದು ರಹಸ್ಯವೇನಲ್ಲ.
ಅಂದ ಹಾಗೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಎದುರಿಸಲು,ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳನ್ನು ಕನ್ ಸಾಲಿಡೇಟ್ ಮಾಡಲು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ ಅಂತ ಮೋದಿ-ಷಾ ಜೋಡಿ ಯೋಚಿಸಿರುವುದು ನಿಜ.
ಅಷ್ಟೇ ಅಲ್ಲ,ಈ ರೀತಿಯ ಹೊಂದಾಣಿಕೆಗೆ ಸಂಬಂಧಿಸಿದಂತೆ ಅದು ಒಂದು ಸೂತ್ರವನ್ನು ರಚಿಸಿ ಕುಮಾರಸ್ವಾಮಿ ಅವರಿಗೆ ವಿವರಿಸಿ ಹಲವು ದಿನಗಳೇ ಆಗಿವೆ.
ಅರ್ಥಾತ್,ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿ ಅಂತ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.
ಆದರೆ ವಿಲೀನದ ವಿಷಯದಲ್ಲಿ ಕುಮಾರಸ್ವಾಮಿ ಅವರಿಗಾಗಲೀ, ದೇವೇಗೌಡರಿಗಾಗಲೀ ಆಸಕ್ತಿ ಇಲ್ಲ.
ಪಕ್ಷಕ್ಕೆ ಎಲ್ಲಿಯವರೆಗೆ ಐಡೆಂಟಿಟಿ ಇರುತ್ತದೋ?ಅಲ್ಲಿಯವರೆಗೆ ಓಕೆ.ಆದರೆ ಒಂದು ಸಲ ವಿಲೀನವಾದರೆ ಅಲ್ಲಿಗೆ ಕತೆ ಕ್ಲೋಸು ಎಂಬುದು ಅವರ ಯೋಚನೆ.
ವಸ್ತುಸ್ಥಿತಿ ಎಂದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಮಾತುಕತೆ ಇಲ್ಲಿಗೆ ನಿಂತಿದೆ.ಈ ವಾರ ಲೋಕಸಭೆ ಅಧಿವೇಶನಕ್ಕೆ ದಿಲ್ಲಿಗೆ ಹೋಗುತ್ತಿರುವ ದೇವೇಗೌಡರಿಗೆ ಪ್ರಧಾನಿ ಮೋದಿಯವರ ಜತೆ ಮಾತನಾಡುವ ನಿರೀಕ್ಷೆ ಏನೋ ಇದೆ.ಆದರೆ ಅದು ಯಾವ ಸ್ವರೂಪ ಪಡೆಯಬಹುದು ಎಂಬ ಬಗ್ಗೆ ಅವರಿಗೂ ಸ್ಪಷ್ಟತೆ ಇಲ್ಲ.
ಅದೇನೇ ಇರಲಿ,ಆದರೆ ಈ ಬಾರಿಯ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್ ಜತೆ ಬಿಜೆಪಿಗೂ ಟಾನಿಕ್ ಕೊಟ್ಟಿದ್ದಾರೆ. ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಉಭಯ ಪಕ್ಷಗಳು ಖಾಡಾಖಾಡಿ ಕದನಕ್ಕೆ ಸಜ್ಜಾಗುವ ಸುಳಿವು ಕೊಟ್ಟಿದ್ದಾರೆ.
ಯಾವಾಗ ಇದು ಕಟ್ ಅಂಡ್ ಕ್ಲಿಯರ್ ಆಯಿತೋ?ಯಡಿಯೂರಪ್ಪ ಹೊಸ ಪ್ರಪೋಸಲ್ಲಿನೊಂದಿಗೆ ಆಟಕ್ಕಿಳಿದಿದ್ದಾರೆ.
ಕರ್ನಾಟಕದಲ್ಲಿ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅವರು ಒಂದು ಸೂತ್ರವನ್ನು ಈ ಹಿಂದೆ ಹೈಕಮಾಂಡ್ ವರಿಷ್ಟರಿಗೆ ವಿವರಿಸಿ ಬಂದಿದ್ದರು.
ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರಬೇಕು,ಮಾಜಿ‌ ಮುಖ್ಯಮಂತ್ರಿ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತರಬೇಕು ಎಂಬುದು ಈ ಪ್ರಪೋಸಲ್ಲು.
ಆದರೆ ಯಾವಾಗ ಕುಮಾರಸ್ವಾಮಿ ಬಿಜೆಪಿಗೆ ಹತ್ತಿರವಾಗುವ ಸುಳಿವು ಸ್ಪಷ್ಟವಾಗಿ ಗೋಚರವಾಗತೊಡಗಿತೋ?ಆಗ ಯಡಿಯೂರಪ್ಪ ಧಿಡೀರನೇ ತಮ್ಮ ಗೇಮ್ ಪ್ಲಾನು ಬದಲಿಸಿದ್ದಾರೆ. ಹೀಗಾಗಿ,ಕರ್ನಾಟಕದಲ್ಲಿ ಪಕ್ಷ ಮರಳಿ ಮೇಲೇಳಲು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆರ್.ಅಶೋಕ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವತ: ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಬರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಯಾವಾಗ ಈ ನಿರ್ಧಾರ ಪಕ್ಕಾ ಆಯಿತೋ?ಇದಾದ ನಂತರ ಡಾಲರ್ ಕಾಲೋನಿಯ ಅವರ ನಿವಾಸ ಧವಳಗಿರಿಯಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ,ಯಡಿಯೂರಪ್ಪ ಅವರ ಈ ಗೇಮ್ ಪ್ಲಾನು ಸ್ಪಷ್ಟವಾಗುತ್ತಿದ್ದಂತೆಯೇ ಅವರ ಪುತ್ರ ವಿಜಯೇಂದ್ರ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮನೆಯಲ್ಲಿ ಒಂದು ಹೋಮ ನಡೆಸಿದ್ದಾರೆ. ನಂತರ ದಿಲ್ಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಒಂದು ಪತ್ರ ಕೊಟ್ಟು ಬಂದಿದ್ದಾರೆ.
ಅದರ ಪ್ರಕಾರ,ಕರ್ನಾಟಕದಲ್ಲಿ ಪಕ್ಷದ ಅರವತ್ತಾರು ಶಾಸಕರ ಪೈಕಿ ನಲವತ್ತಾರು ಮಂದಿ ಈಗಲೂ ಯಡಿಯೂರಪ್ಪ ಅವರ ಜತೆಗಿದ್ದಾರೆ.
ಹಾಗೆಂಬ ವಿವರದ ಪತ್ರವನ್ನು ಅಮಿತ್ ಷಾ ಅವರಿಗೆ ಕೊಟ್ಟ ವಿಜಯೇಂದ್ರ:ನಿಮ್ಮ ಆಶೀರ್ವಾದವಿದ್ದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣ್ಣು ಮುಕ್ಕಿಸುತ್ತೇವೆ ಎಂದರಂತೆ.
ಆದರೆ ಇದಕ್ಕೆ ಅಮಿತ್ ಷಾ ಏನು ಹೇಳಿದರು ಅಂತ ಗೊತ್ತಾಗದೆ ಇದ್ದರೂ ಪಾರ್ಲಿಮೆಂಟ್ ಚುನಾವಣೆಯ ದೃಷ್ಟಿಯಿಂದ ಯಡಿಯೂರಪ್ಪ ಕ್ಯಾಂಪಿಗೆ ಒಂದು ಮಟ್ಟದ ಪವರ್ ತುಂಬುವ ಯೋಚನೆಗೆ ಅವರು ಬಂದಂತಿದೆ.

ಮೋದಿ-ಷಾ ಲೆಕ್ಕಾಚಾರ ಏನು?

ಅಂದ ಹಾಗೆ ಮೋದಿ ಮತ್ತು ಅಮಿತ್ ಷಾ ಜೋಡಿಗೆ ಯಡಿಯೂರಪ್ಪ ಅವರ ವಿಷಯದಲ್ಲಿ ವಿಶ್ವಾಸ ಕುಸಿದು ಹೋಗಿತ್ತು ಎಂಬುದು ನಿಜ.
ಆದರೆ ಹೀಗೆ ವಿಶ್ವಾಸ ಕುಸಿದ ಕಾಲದಲ್ಲಿ ಅವರು ಯಾರನ್ನು ನಂಬಿದರೋ?ಅವರು ದೊಡ್ಡ ಮಟ್ಟದಲ್ಲಿ ವಿಫಲರಾಗಿರುವುದು ಮೋದಿ-ಷಾ ಜೋಡಿಗೆ ಭ್ರಮನಿರಸನ ಉಂಟು ಮಾಡಿದೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತವರ ಮಗನ ಹಾವಳಿ ತಡೆಗಟ್ಟಿ,ಪ್ರಧಾನಿ ಮತ್ತು ಗೃಹ ಸಚಿವರು ದಾಂಗುಡಿ ಇಟ್ಟರೆ ನಿರಾಯಾಸವಾಗಿ ನೂರಾ ನಲವತ್ತು ಸೀಟು ಗೆಲ್ಲಬಹುದು ಅಂತ ಯಡಿಯೂರಪ್ಪ ವಿರೋಧಿಗಳು ಹೇಳಿದ್ದನ್ನು ಮೋದಿ-ಷಾ ಜೋಡಿ ಅಕ್ಷರಶ: ನಂಬಿತ್ತು.
ಆದರೆ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು ಕಾಂಗ್ರೆಸ್ ಅದ್ಧೂರಿ ಗೆಲುವು ಗಳಿಸಿದ ನಂತರ ಮೋದಿ-ಷಾ ಜೋಡಿಗೆ ಒಂದು ವಿಷಯ ಕನ್ ಫರ್ಮ್ ಆಗಿದೆ.
ಅದೆಂದರೆ,ಕರ್ನಾಟಕದಲ್ಲಿ ಗುಜರಾತ್ ಮಾದರಿಯ ಧರ್ಮಾಧಾರಿತ ರಾಜಕಾರಣ ವರ್ಕ್ ಔಟ್ ಆಗುವುದಿಲ್ಲ.ಬದಲಿಗೆ ಜಾತಿ ಆಧರಿತ ರಾಜಕಾರಣವಷ್ಟೇ ಅಲ್ಲಿ ಸಕ್ಸಸ್ ಆಗುತ್ತದೆ ಎಂಬುದು.
ಯಾವಾಗ ಇದು ಸ್ಪಷ್ಟವಾಗುತ್ತಾ ಹೋಯಿತೋ?ಅಷ್ಟಾದ ನಂತರ ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಅವರ ಸಂದೇಶಗಳಿಗೆ ಬೆಲೆ ಸಿಗತೊಡಗಿದೆ.ಮತ್ತು ಇದನ್ನರ್ಥ ಮಾಡಿಕೊಂಡ ಯಡಿಯೂರಪ್ಪ ಕೂಡಾ ವರಿಷ್ಟರಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ.
ತಮ್ಮ ಪುತ್ರ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ,ಅಶೋಕ್ ಪ್ರತಿಪಕ್ಷ ನಾಯಕರಾಗಲಿ ಎಂಬ ಪ್ರಪೋಸಲ್ಲನ್ನು ಅವರು ಆತ್ಮವಿಶ್ವಾಸದಿಂದ ವರಿಷ್ಟರಿಗೆ ರವಾನಿಸಲು ಇದೇ ಮುಖ್ಯ ಕಾರಣ.

ವಿಜಣ್ಣ-ಕುಮಾರಣ್ಣ ಕ್ಲೋಸಾಗಿದ್ದಾರೆ

ಕುಮಾರಸ್ವಾಮಿ ಬಿಜೆಪಿಗೆ ಹತ್ತಿರವಾಗುತ್ತಿದ್ದಂತೆಯೇ ಯಡಿಯೂರಪ್ಪ ಅವರ ಗೇಮ್ ಪ್ಲಾನು ಬದಲಾಗಿದ್ದೇಕೆ ಎಂಬ ವಿಷಯದಲ್ಲಿ ಹಲವು ಅನುಮಾನಗಳಿವೆಯಾದರೂ,ಜೆಡಿಎಸ್-ಬಿಜೆಪಿ ಮೈತ್ರಿ ಏರ್ಪಟ್ಟರೆ ತಮ್ಮ ಬಣದ ಹಲವರು ಸೈಡ್ ಲೈನಿಗೆ ಹೋಗಬಹುದು ಎಂಬ ಆತಂಕ ಯಡಿಯೂರಪ್ಪ ಅವರಲ್ಲಿರುವುದು ಮುಖ್ಯ ಕಾರಣ.
ಅದೇ ರೀತಿ ಇಂತಹ ಸಂದರ್ಭದಲ್ಲಿ ಬಿಜೆಪಿಯ ರಥಕ್ಕೆ ಬೊಮ್ಮಾಯಿ-ಶೋಭಾ ಎಂಬ ಚಕ್ರಗಳಿದ್ದರೆ ಅದು ಪರಿಪೂರ್ಣ ಶಕ್ತಿಯೊಂದಿಗೆ ರಥ ಎಳೆಯುವುದು ಕಷ್ಟ ಎಂಬುದು ಯಡಿಯೂರಪ್ಪ ಅವರ ಯೋಚನೆ.
ಹೀಗಾಗಿ ವಿಜಯೇಂದ್ರ-ಅಶೋಕ್ ಜೋಡಿ ಲೈಮ್ ಲೈಟಿಗೆ ಬಂದರೆ ಮುಂದೆ ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂಬುದು ಯಡಿಯೂರಪ್ಪ ಅವರ ಯೋಚನೆ.
ಅಂದ ಹಾಗೆ ಇದೆಲ್ಲ ಏನೇ ಇದ್ದರೂ ಕುಮಾರಸ್ವಾಮಿ ಜತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕ್ಲೋಸಾಗಿಯೇ ಇದ್ದಾರೆ.
2019 ರಲ್ಲಿ ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದರಲ್ಲ?ಇದಾದ ನಂತರ ಬಿಜೆಪಿ ವರಿಷ್ಟರ ಮೇಲೆ ಸಿಟ್ಟಾಗಿದ್ದ ಅವರು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಲು ಬಯಸಿದ್ದರು.
ಇಂತಹ ಬಯಕೆಗೆ ಪೂರಕವಾಗಿ ದೇಶದ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ವಿಜಯೇಂದ್ರ ಭೇಟಿ ಮಾಡಿ ಚರ್ಚಿಸಿದ್ದರಂತೆ.
ಆ ಸಂದರ್ಭದಲ್ಲಿ ತಮ್ಮ ರಣನೀತಿಯನ್ನು ರೂಪಿಸಲು ಆಗುವ ವೆಚ್ಚ,ಪಕ್ಷ ಕಟ್ಟಲು ಆಗುವ ವೆಚ್ಚದ ವಿವರ ಕೊಟ್ಟ ಪ್ರಶಾಂತ್ ಕಿಶೋರ್,ಇಷ್ಟೆಲ್ಲ ಆದರೂ ನೀವು ಒಂದು ಕೆಲಸ ಮಾಡಲೇಬೇಕು ಎಂದರಂತೆ.
ಅದೇನು ಅಂತ ಕೇಳಿದರೆ,ಈ ಪ್ರಾದೇಶಿಕ ಪಕ್ಷ ಅಧಿಕಾರದ ಆಸೆ ಇಟ್ಟುಕೊಳ್ಳಬೇಕೆಂದರೆ ಜೆಡಿಎಸ್ ಪಕ್ಷದ ಜತೆ ಕೈ ಜೋಡಿಸಬೇಕು.ಇಲ್ಲದಿದ್ದರೆ ಈ ಪ್ರಯತ್ನ ಕೆಜೆಪಿ-2 ಆಗುತ್ತದೆ.
ಹಾಗಾಗಬಾರದು ಎಂದರೆ ನಿಮ್ಮ ಪಕ್ಷ ಜೆಡಿಎಸ್ ಜತೆ ಕೈ ಜೋಡಿಸಬೇಕು.ಅಧಿಕಾರ ಹಂಚಿಕೆಯ ಪ್ರಶ್ನೆ ಬಂದರೆ ಮೊದಲ ಕಂತಿನಲ್ಲಿ ಕುಮಾರಸ್ವಾಮಿಯವರಿಗೆ ಅಧಿಕಾರ ಬಿಟ್ಟುಕೊಡಲು ರೆಡಿ ಆಗಬೇಕು
ಎಂದಾಗ ವಿಜಯೇಂದ್ರ ಒಪ್ಪಿ ವಾಪಸ್ಸಾಗಿದ್ದರು.
ಅಷ್ಟೇ ಅಲ್ಲ,ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರಶಾಂತ್ ಕಿಶೋರ್ ಹೇಳಿದ್ದನ್ನು ಅವರಿಗೆ ವಿವರಿಸಿದ್ದರು.
ಆದರೆ ಇತ್ತೀಚಿನವರೆಗೆ‌ ಕಿತ್ತಾಡಿ,ಈಗ ಹೊಂದಾಣಿಕೆ ಎಂದರೆ‌ ಜನ ಒಪ್ಪುವುದಿಲ್ಲ.ಹೀಗಾಗಿ ಸ್ವಲ್ಪ ದಿನದ ನಂತರ ಈ ಕುರಿತು ಮಾತನಾಡೋಣ ಎಂದು ವಿಜಯೇಂದ್ರ ಅವರಿಗೆ ಹೇಳಿದ್ದ‌ ಕುಮಾರಸ್ವಾಮಿ ಈ ವಿಷಯದಲ್ಲಿ ಪಾಸಿಟಿವ್ ಆಗಿಯೇ ಇದ್ದರು.
ಆದರೆ ಮುಂದಿನ ಕೆಲವೇ ದಿನಗಳಲ್ಲಿ ಇಂತಹ ಪ್ರಾದೇಶಿಕ ಪಕ್ಷ ತಲೆ ಎತ್ತುವ ಮತ್ತು ಯಾರ್ಯಾರ ಜತೆ ಅದು ಹೊಂದಾಣಿಕೆಗೆ ತವಕಿಸುತ್ತಿದೆ ಎಂಬ ವಿವರ ಪಡೆದ ಬಿಜೆಪಿ ವರಿಷ್ಟರು ಯಡಿಯೂರಪ್ಪ ಟೀಮಿನ ಮೇಲೆ ಮುರಕೊಂಡು ಬಿದ್ದರು.
ಪರಿಣಾಮ?ಕರ್ನಾಟಕದ ನೆಲೆಯಲ್ಲಿ ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಯಡಿಯೂರಪ್ಪ-ವಿಜಯೇಂದ್ರ ಅವರ ಕನಸು ಕರಗಿ ಕಣ್ಮರೆಯಾಯಿತು.
ಆದರೆ ಇಷ್ಟೆಲ್ಲದರ ನಡುವೆಯೂ ಕುಮಾರಸ್ವಾಮಿ ಜತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕ್ಲೋಸಾಗಿಯೇ ಇದ್ದಾರೆ.
ಆದರೆ ಕ್ಲೋಸಾಗಿದ್ದೇವೆ ಅಂತ ಪಕ್ಷವನ್ನು ಅವರ ಹಿಡಿತಕ್ಕೆ ಬಿಟ್ಟುಕೊಡಬಾರದಲ್ಲ?ಅದನ್ನೇ ಈಗ ಯಡಿಯೂರಪ್ಪ ಮಾಡುತ್ತಿದ್ದಾರೆ.

ಅಶೋಕ್ ಫಾರ್ ನಾರ್ಥ್

ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಅಶೋಕ್ ಅವರಿಗೆ ಪ್ರಾಮಿನೆನ್ಸು ಸಿಗುವುದು ಯಡಿಯೂರಪ್ಪ ವಿರೋಧಿಗಳಿಗೆ ಇಷ್ಟವಿಲ್ಲ.
ಹೀಗಾಗಿ,ಇವರು ಇಲ್ಲಿದ್ದರೆ ತಾನೇ ಆಟ ಅಂತ ಈ ವಿರೋಧಿಗಳು ಹೊಸ ಕ್ಯಾಂಪೇನು ಶುರು ಮಾಡಿದ್ದಾರೆ.
ಅಶೋಕ್ ಫಾರ್ ನಾರ್ಥ್ ಅಂತ ಹುಯಿಲೆಬ್ಬಿಸುವುದು ಈ ಕ್ಯಾಂಪೇನು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಿ.ವಿ.ಸದಾನಂದಗೌಡರಿಗೆ ವಯಸ್ಸಾಗಿದೆ.ಈ ಮಧ್ಯೆ ಕ್ಷೇತ್ರದ ಒಕ್ಕಲಿಗ ಮತದಾರರ ಪೈಕಿ ಶೇಕಡಾ ತೊಂಬತ್ತರಷ್ಟು ಜನ ಮರಸು ಒಕ್ಕಲಿಗರಾದ್ದರಿಂದ ಅದೇ ಪಂಗಡದ ಆರ್.ಅಶೋಕ್ ಅವರನ್ನು ಅಲ್ಲಿಂದ ಕಣಕ್ಕಿಳಿಸಬೇಕು ಎಂಬುದು ಅಲ್ಲಿನ ಕೂಗು.
ಅಂದ ಹಾಗೆ ಅಶೋಕ್ ಅವರಿಗೆ ಇದು ಇಷ್ಟವಿಲ್ಲ.ಹೇಗಾದರೂ ಮಾಡಿ ಇಲ್ಲೇ ಉಳಿದು ಒಂದು ಸಲ ಸಿಎಂ ಆಗುವುದು ಅವರ ಯೋಚನೆ.
ಆದರೆ ಯಡಿಯೂರಪ್ಪ ವಿರೋಧಿ ಗ್ಯಾಂಗು ಈಗಾಗಲೇ ಅಶೋಕ್ ಅವರು ಪಾರ್ಲಿಮೆಂಟಿಗೆ ನಿಂತರೆ ಪಕ್ಷ ಗೆಲ್ಲುತ್ತದೆ. ಇಲ್ಲದಿದ್ದರೆ ಸೋಲುತ್ತದೆ ಅಂತ ಹುಯಿಲೆಬ್ಬಿಸಲು ನಿರ್ಧರಿಸಿದೆ.
ಮುಂದೇನಾಗುತ್ತದೋ ಗೊತ್ತಿಲ್ಲ.ಆದರೆ ರಾಜ್ಯ ಬಿಜೆಪಿಯನ್ನು ವಶಕ್ಕೆ ಪಡೆಯುವ ಭರಾಟೆಯಲ್ಲಿ ಪಕ್ಷದ ಎರಡು ಬಣಗಳು ಪರಸ್ಪರ ಕಲ್ಲು ತೂರಾಟ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಆರ್.ಟಿ.ವಿಠ್ಠಲಮೂರ್ತಿ

The post ಯಡಿಯೂರಪ್ಪ ಗೇಮ್ ಪ್ಲಾನು ಬದಲಾಗಿದ್ದೇಕೆ? appeared first on Hai Sandur kannada fortnightly news paper.

]]>
https://haisandur.com/2023/07/24/%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%97%e0%b3%87%e0%b2%ae%e0%b3%8d-%e0%b2%aa%e0%b3%8d%e0%b2%b2%e0%b2%be%e0%b2%a8%e0%b3%81-%e0%b2%ac%e0%b2%a6/feed/ 0
ನಾಯಕನ ಬೆನ್ನಲ್ಲಿದೆ ದಾರುಣ ಕತೆ ಹೀಗಾಗಿ ಇದು ಕತೆಯಲ್ಲ,ಜೀವನ ! https://haisandur.com/2023/07/21/%e0%b2%a8%e0%b2%be%e0%b2%af%e0%b2%95%e0%b2%a8-%e0%b2%ac%e0%b3%86%e0%b2%a8%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%a6%e0%b3%86-%e0%b2%a6%e0%b2%be%e0%b2%b0%e0%b3%81%e0%b2%a3/ https://haisandur.com/2023/07/21/%e0%b2%a8%e0%b2%be%e0%b2%af%e0%b2%95%e0%b2%a8-%e0%b2%ac%e0%b3%86%e0%b2%a8%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%a6%e0%b3%86-%e0%b2%a6%e0%b2%be%e0%b2%b0%e0%b3%81%e0%b2%a3/#respond Fri, 21 Jul 2023 14:26:14 +0000 https://haisandur.com/?p=32975 ಅದು ಹೈದ್ರಾಬಾದ್ ನಿಜಾಮನ ಹಿಡಿತದಿಂದ ಬಿಡುಗಡೆಯಾಗಲು ಹೈದ್ರಾಬಾದ್-ಕರ್ನಾಟಕ ಭಾಗದ ಜನ ಸಿಡಿದೆದ್ದ ಕಾಲ.ಅಂದ ಹಾಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಗುಲ್ಬರ್ಗ,ರಾಯಚೂರು(ಈಗಿನ ಕೊಪ್ಪಳವೂ ಸೇರಿ)ಬಳ್ಳಾರಿ ಸೇರಿದಂತೆ ಕನ್ನಡ ಭಾಷಿಕರೇ ಹೆಚ್ಚಾಗಿದ್ದ ಮೂರು ಜಿಲ್ಲೆಗಳು ಹೈದ್ರಾಬಾದ್ ಸಂಸ್ಥಾನದಲ್ಲಿದ್ದವು.ಜತೆಗೇ ಬೀದರ್ ನ ಕೆಲ ಭಾಗಗಳಲ್ಲೂ ನಿಜಾಮನ ಹಿಡಿತವಿತ್ತು.ಒಟ್ಟಿನಲ್ಲಿ ತೆಲಂಗಾಣದ ಎಂಟು ಜಿಲ್ಲೆಗಳು,ಮರಾಠವಾಡದ ಐದು ಹಾಗೂ ಕರ್ನಾಟಕದ ಮೂರು ಜಿಲ್ಲೆಗಳು ಹೈದ್ರಾಬಾದ್ ಸಂಸ್ಥಾನದ ತೆಕ್ಕೆಯಲ್ಲಿದ್ದವು.ದೇಶಕ್ಕೆ ಸ್ವಾತಂತ್ರ್ಯ ಬಂದರೂ,ಭಾರತದ ಒಕ್ಕೂಟದೊಳಗೆ ಸೇರಲು ನಿಜಾಮ ತಯಾರಿರಲಿಲ್ಲ.ಆತನ ಹೆಸರು!ಮಿರ್ ಉಸ್ಮಾನ್ ಅಲೀಖಾನ್ ಬಹಾದ್ದೂರ್.ಅಂದ ಹಾಗೆ ದೇಶದ ಐನೂರಾ […]

The post ನಾಯಕನ ಬೆನ್ನಲ್ಲಿದೆ ದಾರುಣ ಕತೆ ಹೀಗಾಗಿ ಇದು ಕತೆಯಲ್ಲ,ಜೀವನ ! appeared first on Hai Sandur kannada fortnightly news paper.

]]>
ಅದು ಹೈದ್ರಾಬಾದ್ ನಿಜಾಮನ ಹಿಡಿತದಿಂದ ಬಿಡುಗಡೆಯಾಗಲು ಹೈದ್ರಾಬಾದ್-ಕರ್ನಾಟಕ ಭಾಗದ ಜನ ಸಿಡಿದೆದ್ದ ಕಾಲ.
ಅಂದ ಹಾಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಗುಲ್ಬರ್ಗ,ರಾಯಚೂರು(ಈಗಿನ ಕೊಪ್ಪಳವೂ ಸೇರಿ)ಬಳ್ಳಾರಿ ಸೇರಿದಂತೆ ಕನ್ನಡ ಭಾಷಿಕರೇ ಹೆಚ್ಚಾಗಿದ್ದ ಮೂರು ಜಿಲ್ಲೆಗಳು ಹೈದ್ರಾಬಾದ್ ಸಂಸ್ಥಾನದಲ್ಲಿದ್ದವು.ಜತೆಗೇ ಬೀದರ್ ನ ಕೆಲ ಭಾಗಗಳಲ್ಲೂ ನಿಜಾಮನ ಹಿಡಿತವಿತ್ತು.
ಒಟ್ಟಿನಲ್ಲಿ ತೆಲಂಗಾಣದ ಎಂಟು ಜಿಲ್ಲೆಗಳು,ಮರಾಠವಾಡದ ಐದು ಹಾಗೂ ಕರ್ನಾಟಕದ ಮೂರು ಜಿಲ್ಲೆಗಳು ಹೈದ್ರಾಬಾದ್ ಸಂಸ್ಥಾನದ ತೆಕ್ಕೆಯಲ್ಲಿದ್ದವು.ದೇಶಕ್ಕೆ ಸ್ವಾತಂತ್ರ್ಯ ಬಂದರೂ,ಭಾರತದ ಒಕ್ಕೂಟದೊಳಗೆ ಸೇರಲು ನಿಜಾಮ ತಯಾರಿರಲಿಲ್ಲ.ಆತನ ಹೆಸರು!
ಮಿರ್ ಉಸ್ಮಾನ್ ಅಲೀಖಾನ್ ಬಹಾದ್ದೂರ್.
ಅಂದ ಹಾಗೆ ದೇಶದ ಐನೂರಾ ಅರವತ್ತೈದರಷ್ಟು ಸಂಸ್ಥಾನಗಳ ಪೈಕಿ ಹೈದ್ರಾಬಾದ್ ಸಂಸ್ಥಾನವೇ ಶ್ರೀಮಂತ ಸಂಸ್ಥಾನ.ಐವತ್ತು ಲಕ್ಷ ಎಕರೆಯಷ್ಟು ಜಮೀನು ನಿಜಾಮನ ಸ್ವಂತ ಆಸ್ತಿಯಾಗಿತ್ತು ಅಂದರೆ ಊಹಿಸಿ.ಅದೇ ರೀತಿ ಆತನ ವಾರ್ಷಿಕ ಆದಾಯ ಎರಡೂವರೆ ಕೋಟಿ ರೂಪಾಯಿಗಳಷ್ಟು ದೊಡ್ಡದಿತ್ತು.
1941 ರ ಜನಗಣತಿಯ ಪ್ರಕಾರ ಈ ಸಂಸ್ಥಾನದ ಜನ ಸಂಖ್ಯೆ ಒಂದು ಕೋಟಿ ಅರವತ್ಮೂರು ಲಕ್ಷಕ್ಕೂ ಹೆಚ್ಚು.ಈ ಪೈಕಿ ಎಪ್ಪತ್ತು ಲಕ್ಷ ಮಂದಿ ತೆಲುಗರು,ನಲವತ್ತು ಲಕ್ಷ ಮರಾಠಿಗರು ಹಾಗೂ ಇಪ್ಪತ್ತು ಲಕ್ಷ ಕನ್ನಡ ಭಾಷಿಕರು ಇದ್ದರು.
ಅಂದ ಹಾಗೆ ಹೈದ್ರಾಬಾದ್ ಸಂಸ್ಥಾನವನ್ನು ಪ್ರಾರಂಭಿಸಿದವನು ಮಿರ್ ಕಮರುದ್ದೀನ್ ಚಿನ್ ಖಿಲಜಿ ಖಾನ್! ಮುಂದೆ ಪೇಶ್ವೆಗಳ ಕಾಲದಲ್ಲಿ ಮರಾಠರ ಹೊಡೆತ ತಾಳಲಾಗದೆ 1798 ರಲ್ಲಿ ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿಯಡಿ ಅಂದಿನ ಹೈದ್ರಾಬಾದ್ ನಿಜಾಮ ಒಪ್ಪಂದ ಮಾಡಿಕೊಂಡ.ಈ ಒಪ್ಪಂದಕ್ಕೆ ಪ್ರತಿಯಾಗಿ ಬ್ರಿಟಿಷರ ಆರು ಬೆಟಾಲಿಯನ್ ಸೈನ್ಯ ಹೈದ್ರಾಬಾದ್ ಸಂಸ್ಥಾನದ ರಕ್ಷಣೆಗೆ ನಿಂತುಕೊಂಡಿತು.ಹೀಗಾಗಿ ಮುಂದೆ ಪೇಶ್ವೆಗಳ ವಿಷಯದಲ್ಲಿ ಸಂಸ್ಥಾನಕ್ಕೆ ತೊಂದರೆಯಾಗದಂತೆ ಬ್ರಿಟಿಷರು ನೋಡಿಕೊಂಡರು.
ಆದರೆ ಇದಕ್ಕಾಗಿ ಹೈದ್ರಾಬಾದ್ ನಿಜಾಮ ಆಗಿನ ಕಾಲದಲ್ಲೇ ಭರಿಸುತ್ತಿದ್ದ ಒಂದು ವರ್ಷದ ವೆಚ್ಚ ಇಪ್ಪತ್ನಾಲ್ಕು ಲಕ್ಷ,ಹದಿನೇಳು ಸಾವಿರ ರೂಪಾಯಿ.ಹೀಗೆ ಬ್ರಿಟಿಷರ ಆಸರೆ ಪಡೆದ ಕಾರಣಕ್ಕಾಗಿಯೇ ಹೈದ್ರಾಬಾದ್ ನಿಜಾಮರು,ಬ್ರಿಟಿಷರ ವಿರುದ್ಧ ಸಿಡಿದು ನಿಂತ ಟಿಪ್ಪು ಸುಲ್ತಾನನಿಗೆ ಬೆಂಬಲ ನೀಡಲಿಲ್ಲ.ಅರ್ಥಾತ್,ಅವರು ಬ್ರಿಟಿಷರ ಜತೆ ಗಟ್ಟಿಯಾಗಿ ನಿಂತುಬಿಟ್ಟಿದ್ದರು.
ಅಲ್ಲಿಂದ ಮುಂದೆ ಹಲ ನಿಜಾಮರು ಸಂಸ್ಥಾನದ ಸಿಂಹಾಸನವೇರಿದರು.ಆದರೆ ಮೀರ್ ಉಸ್ಮಾನ್ ಅಲಿ ಖಾನ್ ಅಧಿಕಾರಕ್ಕೆ ಬಂದ ಕಾಲಕ್ಕೆ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕೂಗು ಜೋರಾಗಿತ್ತು.
ಈ ಸಂದರ್ಭದಲ್ಲಿ ಬ್ರಿಟಿಷರಿಗೆ ನಿಷ್ಟನಾಗಿದ್ದ ನಿಜಾಮ,ತನ್ನದೇ ಒಂದು ಸೈನ್ಯ ಕಟ್ಟಿಕೊಂಡ.ಅದರ ಹೆಸರು ಇತ್ತೆಹಾದ್ ಮುಸ್ಲಿಮಿನ್.ಕಾಲ ಕ್ರಮೇಣ ಈ ಪಡೆಗೆ ರಜಾಕಾರರ ಪಡೆ ಎಂಬ ಹೆಸರು ಬಂತು.ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಕ್ಕಾಗಲೇ ಈ ಪಡೆಯಲ್ಲಿ ಒಂದು ಲಕ್ಷ ಜನರಿದ್ದರು.
ದೇಶಕ್ಕೇನೋ ಸ್ವಾತಂತ್ರ್ಯ ಬಂತು.ಆದರೆ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಮಾತ್ರ ಸ್ವಾತಂತ್ರ್ಯ ಬರಲಿಲ್ಲ.ಹೀಗಾಗಿ ರಮಾನಂದ ತೀರ್ಥರು ಸೇರಿದಂತೆ ಹಲ ನಾಯಕರು ನಿಜಾಮನಿಗೆ ಸೆಡ್ಡು ಹೊಡೆದು ಹೋರಾಟಕ್ಕಿಳಿದರು.ಭಾರತದ ಒಕ್ಕೂಟದೊಳಕ್ಕೆ ಸೇರಬಯಸದ ನಿಜಾಮ,ಪಾಕಿಸ್ತಾನದ ಜನಕ ಮಹಮದಾಲಿ ಜಿನ್ನಾ ಅವರ ಜತೆ ಮಾತುಕತೆ ನಡೆಸಿ,ಪಾಕಿಸ್ತಾನಕ್ಕೆ ಸೇರುವ ಬಯಕೆ ತೋಡಿಕೊಂಡ.
ಜನಸಂಖ್ಯೆಯ ಆಧಾರದ ಮೇಲೆ ಶೇಕಡಾ ಎಂಭತ್ತಕ್ಕೂ ಹೆಚ್ಚು ಮಂದಿ ಹಿಂದೂಗಳು ಸಂಸ್ಥಾನದಲ್ಲಿದ್ದರು.ಆದರೆ ಮುಸ್ಲಿಂ ಆಳರಸ ನಿಜಾಮನಾಗಿದ್ದಲ್ಲ?ಈ ಸಂದರ್ಭದಲ್ಲಿ ಜಿನ್ನಾ,ಆಳರಸರು ಯಾರೇ ಆಗಲಿ,ಜನಸಂಖ್ಯೆಯ ಆಧಾರದ ಮೇಲೆ ಹೈದ್ರಾಬಾದ್ ಸಂಸ್ಥಾನ ಭಾರತದ ಒಕ್ಕೂಟಕ್ಕೇ ಸೇರಬೇಕು ಎಂದಿದ್ದರೆ ಸಮಸ್ಯೆ ಇರಲಿಲ್ಲ.
ಆದರೆ ಜಿನ್ನಾ ಒಳಗಿಂದೊಳಗೇ ನಾಟಕವಾಡಿದರು.ಹೈದ್ರಾಬಾದ್ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಳ್ಳಲು ನೋಡಿದರು.ಇದು ಒಂದು ಕಡೆಗಾದರೆ ಮತ್ತೊಂದು ಕಡೆ ನಿಜಾಮ ಯಾವ ಪರಿ ಧರ್ಮಾಂಧನಾಗಿದ್ದನೆಂದರೆ,ಆತನ ಹಿಡಿತದಲ್ಲಿದ್ದ ರಜಾಕಾರರ ಪಡೆ,ಸಂಸ್ಥಾನದಿಂದ ಬಿಡುಗಡೆ ಹೊಂದಲು ಯತ್ನಿಸಿದ ಜನರನ್ನು ಸಿಕ್ಕ ಸಿಕ್ಕಂತೆ ಬಡಿಯಿತು.ಅವರ ಮೇಲೆ ದೌರ್ಜನ್ಯ,ಅತ್ಯಾಚಾರ,ಸುಲಿಗೆ ನಡೆಸಿತು.ಅಸಂಖ್ಯಾತ ಜನರನ್ನು ಕೊಂದು ಹಾಕಿತು.
ಒಂದು ಹಂತದಲ್ಲಿ ರಜಾಕಾರರ ಪಡೆ ಯಾವ ಮಟ್ಟಕ್ಕೆ ಬೆಳೆದಿತ್ತು ಎಂದರೆ ಸ್ವತ: ನಿಜಾಮನೂ ಅದರ ಮೇಲಿನ ಹಿಡಿತ ಕಳೆದುಕೊಳ್ಳುತ್ತಾ ಬಂದಿದ್ದ.ಸಾರಿಗೆ,ಹಣಕಾಸು ಸೇರಿದಂತೆ ಬಹುತೇಕ ವಿಷಯಗಳಲ್ಲಿ ಹಿಡಿತ ಸಾಧಿಸಿದ್ದ ರಜಾಕಾರರು,ಹೈದ್ರಾಬಾದ್ ಸಂಸ್ಥಾನದಿಂದ ಹೊರಬರಲು ಯತ್ನಿಸಿದವರ ವಿರುದ್ಧ ಸಿಕ್ಕ ಸಿಕ್ಕಂತೆ ದೌರ್ಜನ್ಯವೆಸಗಿದರು.
ಇಂತಹ ಕಾಲದಲ್ಲೇ ಬೀದರ್ ಜಿಲ್ಲೆ,ಹುಮ್ನಾಬಾದ್ ತಾಲ್ಲೂಕಿನ ವರವಟ್ಟಿ ಗ್ರಾಮದ ಮೇಲೆ ಒಂದು ದಿನ ರಜಾಕಾರರ ಅಮಾನುಷ ಧಾಳಿ ನಡೆಯಿತು.ಆ ಧಾಳಿ ಎಷ್ಟು ಅಮಾನುಷವಾಗಿತ್ತೆಂದರೆ ಆ ಗ್ರಾಮದ ಹಲವಾರು ಮಂದಿ,ರಜಾಕಾರರ ಅಟ್ಟಹಾಸಕ್ಕೆ ಸಜೀವ ದಹನವಾದರು.
ಈ ಪೈಕಿ ಒಂದು ಕುಟುಂಬದ ಮನೆಯೊಡತಿ ಮತ್ತು ಮೂರು ಮಕ್ಕಳು ಸೇರಿದಂತೆ ನಾಲ್ಕು ಮಂದಿಯಿದ್ದ ಒಂದು ಗುಡಿಸಲೂ ಧಗಧಗನೆ ಹತ್ತಿ ಉರಿಯಿತು.ರಜಾಕಾರರ ಅಟ್ಟಹಾಸಕ್ಕೆ ಬಲಿಯಾದ ಆ ಕುಟುಂಬದ ಯಜಮಾನರ ಹೆಸರು ಮಾಪಣ್ಣ!
ಕೆಲಸಕ್ಕೆಂದು ಹೊರಗೆ ಹೋಗಿದ್ದ ಪರಿಣಾಮವಾಗಿ ಮಾಪಣ್ಣ ಅವರು ರಜಾಕಾರರ ಅಟ್ಟಹಾಸಕ್ಕೆ ಸಿಲುಕದೆ ಬಚಾವಾದರು.ಆದರೆ ಬಂದು ನೋಡುತ್ತಾರೆ.ಎಲ್ಲಿದೆ ಗುಡಿಸಲು?ಪತ್ನಿ ಹಾಗೂ ಮಕ್ಕಳ ಸಮೇತ ಬೂದಿಯಾಗಿದೆ.ಕಂಗಾಲಾದ ಮಾಪಣ್ಣ ಅತ್ತಿತ್ತ ತಿರುಗಿ ನೋಡುತ್ತಾರೆ.
ಒಂದು ಮರಕ್ಕೆ ಸೀರೆಯನ್ನು ಜೋಕಾಲಿಯ ತರ ಕಟ್ಟಲಾಗಿದೆ.ಆ ಜೋಕಾಲಿಯಲ್ಲಿ ಒಂದು ಮಗು ಮಲಗಿದೆ.ಹಾಗೆ ಜೋಕಾಲಿಯಲ್ಲಿ ಮಲಗಿದ್ದ ಕಾರಣಕ್ಕಾಗಿ ಮಗು ಬಚಾವಾಗಿದೆ.ಅದೊಂದೇ ರಜಾಕಾರರ ಧಾಳಿಯ ನಡುವೆಯೂ ಬದುಕುಳಿದ ಮಾಪಣ್ಣ ಅವರ ಮಗು.
ತಕ್ಷಣ ಮಗುವನ್ನು ಎತ್ತಿಕೊಂಡ ಮಾಪಣ್ಣ ನೆರೆಯ ಗುಲ್ಬರ್ಗಕ್ಕೆ ಹೋದರು.ಇದಾದ ಸ್ವಲ್ಪ ಕಾಲದಲ್ಲೇ ಸರ್ದಾರ್ ವಲ್ಲಭಭಾಯ್ ಪಟೇಲರು 1948 ರ ಸೆಪ್ಟೆಂಬರ್ 13 ರಂದು ಭಾರತೀಯ ಸೈನ್ಯವನ್ನು ಹೈದ್ರಾಬಾದ್ ಸಂಸ್ಥಾನಕ್ಕೆ ನುಗ್ಗಿಸಿದರು.ಪರಿಣಾಮ?ಬೇರೆ ದಾರಿ ಕಾಣದ ನಿಜಾಮ,ಹೈದ್ರಾಬಾದ್ ಸಂಸ್ಥಾನ ಭಾರತೀಯ ಒಕ್ಕೂಟದೊಳಕ್ಕೆ ಸೇರುವುದನ್ನು ಅಸಹಾಯಕವಾಗಿ ನೋಡಬೇಕಾಯಿತು.
ಈ ಮಧ್ಯೆ ವರವಟ್ಟಿಯಿಂದ ಗುಲ್ಬರ್ಗಕ್ಕೆ ಬಂದ ಮಾಪಣ್ಣ ಅಲ್ಲಿನ ಎಂ.ಎಸ್.ಕೆ.ಮಿಲ್ ನಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದರು.ಕಷ್ಟ ಪಟ್ಟು ದುಡಿದು ತಮ್ಮ ಮಗುವನ್ನು ಬೆಳೆಸಿದರು.ಮುಂದೆ ಅದೇ ಮಗು ದೊಡ್ಡದಾಯಿತು.ಕಷ್ಟ ಪಟ್ಟು ಓದಿದ್ದರ ಫಲವಾಗಿ ಕಾರ್ಖಾನೆಯ ಕಾನೂನು ಸಲಹೆಗಾರರ ಪಟ್ಟ ಸಿಕ್ಕಿತು.ಸಂಯುಕ್ತ ಮಜದೂರ್ ಸಂಘಟನೆಯ ಮುಖಂಡತ್ವವೂ ದಕ್ಕಿತು.
ಅಷ್ಟೇ ಅಲ್ಲ,ದೊಡ್ಡದಾದ ಈ ಮಗು ಕಾರ್ಖಾನೆಯ ನೂರಾರು ಮಂದಿ ಬಡ ಕಾರ್ಮಿಕರಿಗೆ ಸ್ವಂತ ಸೂರು ಕಟ್ಟಿಕೊಟ್ಟಿತು.ಒಂದು ಕಾಲದಲ್ಲಿ ರಜಾಕಾರರ ಕ್ರೌರ್ಯಕ್ಕೆ ಸಿಲುಕಿ ಕುಟುಂಬವನ್ನೇ ಕಳೆದುಕೊಂಡ ಆ ಮಗು ಈ ರೀತಿ ನೂರಾರು ಜನರಿಗೆ ಸೂರು ನಿರ್ಮಿಸಿಕೊಟ್ಟಿದ್ದಷ್ಟೇ ಅಲ್ಲ.1969 ರಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಕರ್ನಾಟಕದ ಧೀಮಂತ ನಾಯಕನಾಗಿ ಬೆಳೆದು ನಿಂತಿದ್ದು ಪವಾಡವೇ ಸೈ.
ಹೀಗೆ ರಜಾಕಾರರ ಧಾಳಿಗೆ ಬಲಿಯಾಗಿ ತಂದೆಯನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಕಳೆದುಕೊಂಡರೂ ತಲೆ ಎತ್ತಿ ನಿಂತ,ಮಂತ್ರಿಯಾಗಿ,ಪ್ರತಿಪಕ್ಷದ ನಾಯಕರಾಗಿ,ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷರಾಗಿ,ರೈಲ್ವೇ ಸಚಿವರಾಗಿ,ರಾಷ್ಟ್ರೀಯ ಕಾಂಗ್ರೆಸ್ ನ ಸಂಸದೀಯ ನಾಯಕರಾಗಿ, ರಾಜ್ಯಸಭೆಗೆ ಭೂಷಣವಾಗಿ,ಎಐಸಿಸಿ ಅಧ್ಯಕ್ಷರ ಪಟ್ಟಕ್ಕೇರಿರುವ ಆ ಮಗುವಿನ ಹೆಸರೇನು ಗೊತ್ತಾ?

ಎಂ.ಮಲ್ಲಿಕಾರ್ಜುನ ಖರ್ಗೆ!

ಇವತ್ತು ಕಣ್ಣ ಮುಂದೆ ಕಾಣುವ ದೊಡ್ಡ ದೊಡ್ಡವರ ಬೆನ್ನಲ್ಲಿ ಇಂತಹ ದಾರುಣ ಕತೆಗಳೂ ಇರುತ್ತವೆ.ಹೀಗಾಗಿ ಇದು ಕತೆಯಲ್ಲ,ಜೀವನ ಎಂಬ ಕಾರಣಕ್ಕಾಗಿ ನಿಮ್ಮ ಬಳಿ ಹಂಚಿಕೊಂಡೆ.

ಆರ್.ಟಿ.ವಿಠ್ಢಲಮೂರ್ತಿ

(ಇವತ್ತು ಮಲ್ಲಿಕಾರ್ಜುನ ಖರ್ಗೆಯವರ ಜನ್ಮ ದಿನ)

The post ನಾಯಕನ ಬೆನ್ನಲ್ಲಿದೆ ದಾರುಣ ಕತೆ ಹೀಗಾಗಿ ಇದು ಕತೆಯಲ್ಲ,ಜೀವನ ! appeared first on Hai Sandur kannada fortnightly news paper.

]]>
https://haisandur.com/2023/07/21/%e0%b2%a8%e0%b2%be%e0%b2%af%e0%b2%95%e0%b2%a8-%e0%b2%ac%e0%b3%86%e0%b2%a8%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%a6%e0%b3%86-%e0%b2%a6%e0%b2%be%e0%b2%b0%e0%b3%81%e0%b2%a3/feed/ 0
ತೃತೀಯ ಶಕ್ತಿ ಎಂದರೆ ದೇವೇಗೌಡರಿಗೇಕೆ ಸಿಟ್ಟು? https://haisandur.com/2023/07/19/%e0%b2%a4%e0%b3%83%e0%b2%a4%e0%b3%80%e0%b2%af-%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%8e%e0%b2%82%e0%b2%a6%e0%b2%b0%e0%b3%86%e0%b2%a6%e0%b3%87%e0%b2%b5%e0%b3%87%e0%b2%97%e0%b3%8c%e0%b2%a1/ https://haisandur.com/2023/07/19/%e0%b2%a4%e0%b3%83%e0%b2%a4%e0%b3%80%e0%b2%af-%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%8e%e0%b2%82%e0%b2%a6%e0%b2%b0%e0%b3%86%e0%b2%a6%e0%b3%87%e0%b2%b5%e0%b3%87%e0%b2%97%e0%b3%8c%e0%b2%a1/#respond Wed, 19 Jul 2023 06:05:43 +0000 https://haisandur.com/?p=32949 ಮಾಜಿ ಪ್ರಧಾನಿ ದೇವೇಗೌಡರಿಗೆ ತೃತೀಯ ಶಕ್ತಿ ಎಂದರೆ ಸಿಟ್ಟು ಬರುತ್ತಿದೆ.ತೀರಾ ಇತ್ತೀಚಿನವರೆಗೂ ತೃತೀಯ ಶಕ್ತಿ ಎಂದರೆ ಅವರಿಗೆ ಗೌರವ ಭಾವನೆ ಇತ್ತು.ತಾವು ಪ್ರಧಾನಿಯಾಗಲು ಕಾರಣವಾದ ಕೂಟ ಎಂಬ ಪ್ರೀತಿ ಇತ್ತು.ಆದರೆ ಈಗ ಮಹಾಘಟಬಂಧನ್ ರೂಪ ತಳೆದಿರುವ ತೃತೀಯ ಶಕ್ತಿಯ ಬಗ್ಗೆ ದೇವೇಗೌಡರಲ್ಲಿ ಯಾವ ವಿಶ್ವಾಸವೂ ಉಳಿದಿಲ್ಲ.ತಮ್ಮ ಪಕ್ಷ ಅದರೊಂದಿಗೆ ಕೈ ಜೋಡಿಸಿ ಮುಂದಿನ ಹೆಜ್ಜೆ ಇಡಬೇಕು ಎಂಬ ಕಾಂಕ್ಷೆಯೂ ಇಲ್ಲ.ಒಂದು ಕಾಲದಲ್ಲಿ ತಮ್ಮ ಪುತ್ರ ಕುಮಾರಸ್ವಾಮಿ ಬಿಜೆಪಿ ಜತೆ ಕೈಗೂಡಿಸುವ ಮಾತನಾಡಿದರೆ ಅವರು ರೇಗುತ್ತಿದ್ದರು.ಕೋಮುವಾದಿ ಶಕ್ತಿಗಳ ಜತೆ […]

The post ತೃತೀಯ ಶಕ್ತಿ ಎಂದರೆ ದೇವೇಗೌಡರಿಗೇಕೆ ಸಿಟ್ಟು? appeared first on Hai Sandur kannada fortnightly news paper.

]]>
ಮಾಜಿ ಪ್ರಧಾನಿ ದೇವೇಗೌಡರಿಗೆ ತೃತೀಯ ಶಕ್ತಿ ಎಂದರೆ ಸಿಟ್ಟು ಬರುತ್ತಿದೆ.
ತೀರಾ ಇತ್ತೀಚಿನವರೆಗೂ ತೃತೀಯ ಶಕ್ತಿ ಎಂದರೆ ಅವರಿಗೆ ಗೌರವ ಭಾವನೆ ಇತ್ತು.ತಾವು ಪ್ರಧಾನಿಯಾಗಲು ಕಾರಣವಾದ ಕೂಟ ಎಂಬ ಪ್ರೀತಿ ಇತ್ತು.
ಆದರೆ ಈಗ ಮಹಾಘಟಬಂಧನ್ ರೂಪ ತಳೆದಿರುವ ತೃತೀಯ ಶಕ್ತಿಯ ಬಗ್ಗೆ ದೇವೇಗೌಡರಲ್ಲಿ ಯಾವ ವಿಶ್ವಾಸವೂ ಉಳಿದಿಲ್ಲ.ತಮ್ಮ ಪಕ್ಷ ಅದರೊಂದಿಗೆ ಕೈ ಜೋಡಿಸಿ ಮುಂದಿನ ಹೆಜ್ಜೆ ಇಡಬೇಕು ಎಂಬ ಕಾಂಕ್ಷೆಯೂ ಇಲ್ಲ.
ಒಂದು ಕಾಲದಲ್ಲಿ ತಮ್ಮ ಪುತ್ರ ಕುಮಾರಸ್ವಾಮಿ ಬಿಜೆಪಿ ಜತೆ ಕೈಗೂಡಿಸುವ ಮಾತನಾಡಿದರೆ ಅವರು ರೇಗುತ್ತಿದ್ದರು.ಕೋಮುವಾದಿ ಶಕ್ತಿಗಳ ಜತೆ ಕೈಗೂಡಿಸುವುದು ಬೇಡ ಎನ್ನುತ್ತಿದ್ದರು.
ಆದರೆ ಇದೀಗ ಅವರ ಧೋರಣೆ ಬದಲಾಗಿದೆ.ಇವತ್ತು ಬಿಜೆಪಿಯ ಜತೆ ಕೈ ಜೋಡಿಸಿದರೆ ತಮ್ಮ ಪಕ್ಕದಲ್ಲಿರುವ ಕೆಲ ಶಾಸಕರು ಸೇರಿದಂತೆ ಹಲವರು ಸಿಎಂ ಸಿದ್ಧರಾಮಯ್ಯ ಅವರ ಕ್ಯಾಂಪು ಸೇರಲು ಸಜ್ಜಾಗಿ ಕುಳಿತಿದ್ದಾರೆ ಅಂತ ಗೊತ್ತಿದ್ದರೂ ಅದನ್ನು ಲೆಕ್ಕಿಸುವ ಸ್ಥಿತಿಯಲ್ಲಿ ಅವರಿಲ್ಲ.
ಬಿಜೆಪಿ ವಿರೋಧಿ ಶಕ್ತಿಗಳು ಅಂತ ತೋರಿಸಿಕೊಳ್ಳುತ್ತಿರುವ ಪಕ್ಷಗಳು ತಮ್ಮ ಪಕ್ಷದ ಬಗ್ಗೆ ನಡೆದುಕೊಂಡಿದ್ದೇ‌ ಇದಕ್ಕೆ ಕಾರಣ.
ಅದು ತಮಿಳುನಾಡಿನ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಇರಬಹುದು, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇರಬಹುದು,ತೆಲಂಗಾಣದ ಕೆ.ಸಿ.ಚಂದ್ರಶೇಖರರಾವ್ ಇರಬಹುದು, ಬಿಹಾರದ ನಿತೀಶ್ ಕುಮಾರ್ ಇರಬಹುದು.
ಈ ಎಲ್ಲ ನಾಯಕರು ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸಹಕಾರ ನೀಡಿದ್ದರೆ ತಮ್ಮ ಪಕ್ಷ ಅಧಿಕಾರದ ಪಾಲುದಾರನಾಗಿರುತ್ತಿತ್ತು ಎಂಬುದು ದೇವೇಗೌಡರ ಕೊರಗು.
ಈ ಪೈಕಿ ಡಿಎಂಕೆ ಪಕ್ಷದ ಎಂ.ಕೆ.ಸ್ಟಾಲಿನ್ ಅವರು,ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ತಮಿಳು ಮತದಾರರನ್ನು ಕ್ರೋಢಿಕರಿಸಲು ಅಗತ್ಯದ ನೆರವು ನೀಡುತ್ತೇವೆ.ಇದಕ್ಕೇನು ನೆರವಿನ ಅಗತ್ಯವಿದೆಯೋ?ಅದನ್ನು ಕೊಡುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದರು.
ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸ್ಟಾಲಿನ್ ಅವರ ಲೆಕ್ಕಾಚಾರ ಉಲ್ಟಾ ಆಯಿತು.ದೇಶದಲ್ಲಿ ತೃತೀಯ ಶಕ್ತಿಗೆ ಅಂತಿಮ ಬಲ ಅಂತ ನೀಡಬೇಕಿರುವುದು ಕಾಂಗ್ರೆಸ್ ಪಕ್ಷ.ಹೀಗಿರುವಾಗ ಕರ್ನಾಟಕದಲ್ಲಿ ನಾವು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದರೆ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಪಕ್ಷದ ಕನಸಿಗೆ ಕಲ್ಲು ಹಾಕಿದಂತಾಗುತ್ತದೆ ಅಂತ ಸ್ಟಾಲಿನ್ ಯೋಚಿಸಿದರು.
ಪರಿಣಾಮ? ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನೆರವು ನೀಡುವ ಗೋಜಿಗೇ ಹೋಗದ ಅವರು,ಕುಮಾರಸ್ವಾಮಿ ಮಾತನಾಡಲು ಯತ್ನಿಸಿದರೆ ತಪ್ಪಿಸಿಕೊಳ್ಳುತ್ತಿದ್ದರು.

ಈ ವಿಷಯದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರು ಕೂಡಾ ದೇವೇಗೌಡರಿಗೆ ಭ್ರಮ ನಿರಸನವಾಗುವಂತೆ ಮಾಡಿದ್ದಾರೆ.
ಒಂದು ಕಾಲದಲ್ಲಿ ಬಿಜೆಪಿ,ಕಾಂಗ್ರೆಸ್ ವಿರುದ್ಧ ತೃತೀಯ ಶಕ್ತಿ ನಿಲ್ಲಬೇಕೆಂದು ಕನಸು ಕಾಣುತ್ತಿದ್ದ ಕೆಸಿಆರ್ ಇದೇ ಭರದಲ್ಲಿ ದೇಶದ ಎಲ್ಲ ಕಡೆ ಕೈ ಚಾಚುತ್ತಿದ್ದರು.ಇದರ ಭಾಗವಾಗಿ ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಗುಡುಗುತ್ತಿದ್ದ ಕೆಸಿಆರ್ ಅವರು ಕರ್ನಾಟಕದಲ್ಲಿ ನೀವು ಬಿಜೆಪಿಯನ್ನು ಬಗ್ಗು ಬಡಿಯಬೇಕು ಅಂತ ಕುಮಾರಸ್ವಾಮಿ ಅವರಿಗೆ ಹೇಳಿದ್ದರು.
ಈ ಕೆಲಸವಾಗಬೇಕು ಎಂದರೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಬೇಕು.ಆದರೆ ಅಧಿಕಾರಕ್ಕೆ ಬರಬೇಕೆಂದರೆ ದೊಡ್ಡ ಮಟ್ಟದಲ್ಲಿ ಶಸ್ತ್ರಾಸ್ತ್ರ ಬಳಸಬೇಕಲ್ಲ?
ಇಂತಹ ಶಸ್ತ್ರಾಸ್ತ್ರಗಳನ್ನು ನಾನು ನಿಮಗೆ ಒದಗಿಸುತ್ತೇನೆ ಎಂದು ಕೆಸಿಆರ್ ಭರವಸೆ ನೀಡಿದ್ದರು.
ಇದಕ್ಕೆ ಪೂರಕವಾಗಿ ಜೆಡಿಎಸ್ ಪಕ್ಷದ ಕ್ಯಾಂಡಿಡೇಟುಗಳ ಆಯ್ಕೆಗೆ ಎಲೆಕ್ಷನ್ ಸ್ಪೆಷಲಿಸ್ಟುಗಳನ್ನೂ ಕಳಿಸಿಕೊಟ್ಟಿದ್ದರು.
ಆದರೆ ಇದ್ದಕ್ಕಿದ್ದಂತೆ ಕೆಸಿಆರ್ ತಲೆಗೆ ಹೊಸ ಐಡಿಯಾ ಹೊಳೆಯಿತಲ್ಲದೆ,ತೆಲುಗು ಭಾಷಿಕರಿರುವ ಗಡಿ ಭಾಗದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳೋಣ.ಅಲ್ಲಿ ನಮ್ಮ ಕ್ಯಾಂಡಿಡೇಟುಗಳೂ ಸ್ಪರ್ಧಿಸಲಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದರು.
ಆದರೆ ಕೆಸಿಆರ್ ಅವರ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡರೆ ಭಾಷಾ ವಿವಾದ ತಲೆ ಎತ್ತಬಹುದು ಅಂತ ಯೋಚನೆಗೊಳಗಾದ ಕುಮಾರಸ್ವಾಮಿ, ಇಂತಹ ಹೊಂದಾಣಿಕೆ ಪಾರ್ಲಿಮೆಂಟ್ ಎಲೆಕ್ಷನ್ ಟೈಮಲ್ಲಿ ಮಾಡಿಕೊಳ್ಳೋಣ.ಈಗ ಬೇಡ ಎಂದರು.
ಯಾವಾಗ ಕುಮಾರಸ್ವಾಮಿ ಮೈತ್ರಿ ಕ್ಯಾಂಡಿಡೇಟುಗಳನ್ನು ಕಣಕ್ಕಿಳಿಸಲು ಒಪ್ಪಲಿಲ್ಲವೋ?ಇದಾದ ನಂತರ ತಮ್ಮ ಮೂಲ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳತೊಡಗಿದರು.
ಈ ಮಧ್ಯೆ, ಕರ್ನಾಟಕದಲ್ಲಿ ಜೆಡಿಎಸ್ ಸ್ವಯಂಬಲದ ಮೇಲೆ ಗೆಲ್ಲುವುದು ಕಷ್ಟ.ಹಾಗಾದಾಗ ಅವರು ಬಿಜೆಪಿ ಜತೆಗೂ‌ ಮೈತ್ರಿ ಮಾಡಿಕೊಳ್ಳಬಹುದು ಎಂಬಂತಹ ಮಾತುಗಳು ಅವರ ಪಕ್ಷದ ಕಾಂಪೌಂಡಿನಿಂದ ಸಿಡಿಯತೊಡಗಿದಾಗ ಕುಮಾರಸ್ವಾಮಿ ಬೇಸತ್ತು ದೂರವಾದರು.
ಅಂದ ಹಾಗೆ ಈಗ ಕೆಸಿಆರ್ ಅತಂತ್ರ ಸ್ಥಿತಿಯಲ್ಲಿದ್ದಾರೆ.ಅವರು ಮಹಾಮೈತ್ರಿ ಜತೆ ಹೋಗುತ್ತಾರೋ?ಬಿಜೆಪಿ ಜತೆ ಹೋಗುತ್ತಾರೋ ಎಂಬುದು ಅರ್ಥವಾಗದ ಪರಿಸ್ಥಿತಿ ಇದೆ.ಆದರೂ ಅವರು ಆಳದಲ್ಲಿ ತೃತೀಯ ಶಕ್ತಿಯನ್ಬು ಬಯಸುತ್ತಾರೆ ಎಂಬುದು ಮಾತ್ರ ನಿಜ.

ಈ ಮಧ್ಯೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ನಾಯಕಿ,ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಒಂದು‌ ಹಂತದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಕರ್ನಾಟಕಕ್ಕೆ ಬರಲು ಒಪ್ಪಿಕೊಂಡಿದ್ದರು.
ಎಷ್ಟೇ ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ರಾಷ್ಟ್ರ ಮಟ್ಟದಲ್ಲಿ ಫೈಟು ಕೊಡುತ್ತಿದ್ದಾರೆ.
ಇದರ ಪರಿಣಾಮವಾಗಿ ಅಲ್ಪಸಂಖ್ಯಾತ ಸಮುದಾಯದ ಪಾಲಿಗೆ ಐಕಾನ್ ಆಗಿ ಮೇಲೆದ್ದು ನಿಂತಿದ್ದಾರೆ.ಅಂತವರು ಕರ್ನಾಟಕಕ್ಕೆ ಬಂದು ತಮ್ಮ ಪಕ್ಷದ ಪರವಾಗಿ ಮಾತನಾಡಿದರೆ ಮುಸ್ಲಿಂ ಮತ ಬ್ಯಾಂಕು ಒಂದು ಮಟ್ಟದಲ್ಲಾದರೂ ತಮ್ಮ ಜತೆ ನಿಲ್ಲಬಹುದು ಎಂಬ ಲೆಕ್ಕಾಚಾರ ದೇವೇಗೌಡ-ಕುಮಾರಸ್ವಾಮಿ ಅವರಿಬ್ಬರಿಗೂ ಇತ್ತು.
ಹಾಗಂತಲೇ ಮಮತಾ ಬ್ಯಾನರ್ಜಿ ಅವರ ಬಳಿ ಕುಮಾರಸ್ವಾಮಿ ವಿಷಯ ವಿವರಿಸಿದಾಗ,ಖಂಡಿತ ಬರುತ್ತೇನೆ ಎಂದು ಭರವಸೆ ನೀಡಿದ್ದರು.
ಆಂದ ಹಾಗೆ ದೇಶದಲ್ಲಿ ಕಾಂಗ್ರೆಸ್ ನೆರವಿಲ್ಲದೆ ತೃತೀಯ ಶಕ್ತಿ ಸ್ವಯಂ ಆಗಿ ಮೇಲೆದ್ದು ನಿಲ್ಲಬೇಕು ಎಂಬ ಲೆಕ್ಕಾಚಾರದಲ್ಲಿದ್ದವರು ಮಮತಾ ಬ್ಯಾನರ್ಜಿ.
ಆದರೆ ಅಂತವರು ಇದ್ದಕ್ಕಿದ್ದಂತೆ ಮೋದಿ ವಿರುದ್ದದ ಹೋರಾಟದಲ್ಲಿ ಕಾಂಗ್ರೆಸ್ ಇರಲಿ ಎಂಬ ತೀರ್ಮಾನಕ್ಕೆ ಬಂದರು.
ಹೀಗಾಗಿ ಜೆಡಿಎಸ್ ಪಕ್ಷದ ಪರವಾಗಿ ಕರ್ನಾಟಕಕ್ಕೆ ಹೊರಡಬೇಕಾದ ಸನ್ನಿವೇಶದಲ್ಲಿ ಯೋಚನೆಗೆ ಬಿದ್ದ ಮಮತಾ,ಈಗ ಹೋಗಿ ಜೆಡಿಎಸ್ ಪರ ಪ್ರಚಾರ ಮಾಡಿದರೆ ಅದು ಕಾಂಗ್ರೆಸ್ಸನ್ನು ವಿರೋಧಿಸಿದಂತಾಗುತ್ತದೆ.ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಯೋಚನೆಗೆ ಬಿದ್ದು ಯೂ ಟರ್ನ್ ಹೊಡೆದುಬಿಟ್ಟರು.

ಅಂದ ಹಾಗೆ ಬಿಹಾರದ ಮುಖ್ಯಮಂತ್ರಿ,ಸಂಯುಕ್ತ ಜನತಾದಳದ ನಾಯಕ ನಿತೀಶ್ ಕುಮಾರ್ ವಿಷಯದಲ್ಲೂ ದೇವೇಗೌಡರಿಗೆ ಸಿಟ್ಟಿದೆ.
ಯಾಕೆಂದರೆ ವಿಧಾನಸಭೆ ಚುನಾವಣೆಗೂ ಮುನ್ನವೇ ಕರ್ನಾಟಕಕ್ಕೆ ಬರಲು,ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ನಿತೀಶ್ ಬಯಸಿದ್ದರು.
ಈ ಬಿಜೆಪಿ ವಿರೋಧಿ ಶಕ್ತಿಗಳಲ್ಲಿ ಕಾಂಗ್ರೆಸ್ ಕೂಡಾ ಇತ್ತು.ಹಾಗಂತಲೇ ಚುನಾವಣೆಗಿಂತ ಮುಂಚೆ ನೀವು ಕರ್ನಾಟಕಕ್ಕೆ ಬಂದು ಜೆಡಿಎಸ್ ಲೆಕ್ಕಾಚಾರವನ್ನು ಹಾಳು ಮಾಡಬೇಡಿ ಅಂತ ದೇವೇಗೌಡರು ನಿತೀಶ್ ಕುಮಾರ್ ಅವರಿಗೆ ಹೇಳಿದ್ದರು.
ದೇವೇಗೌಡರ ಮಾತಿನ ಪ್ರಕಾರ ನಿತೀಶ್ ಕರ್ನಾಟಕಕ್ಕೆ ಬರಲಿಲ್ಲ.ಆದರೆ ಅವರ ಒಲವು ಮಾತ್ರ ಸಿದ್ದರಾಮಯ್ಯ ಪರ ಇತ್ತು.
ಅಷ್ಟೇ ಅಲ್ಲ,ಜೆಡಿಎಸ್ ಪರವಾಗಿ ಕರ್ನಾಟಕಕ್ಕೆ ಬರಲು ಸಜ್ಜಾಗಿದ್ದ ನಾಯಕರನ್ನು ನಿತೀಶ್ ಅವರೇ ತಡೆದು ಕಾಂಗ್ರೆಸ್ ಗೆ ಉಪಕಾರ ಮಾಡಿದರು. ಮತ್ತಿದರ ಪರಿಣಾಮವಾಗಿ ಜೆಡಿಎಸ್ ಸಂಕಷ್ಟ ಅನುಭವಿಸಬೇಕಾಯಿತು ಎಂಬುದು ದೇವೇಗೌಡರ ಅನುಮಾನ.
ಸಾಲದೆಂಬಂತೆ ಈಗ ಅದೇ ನಿತೀಶ್ ಕುಮಾರ್ ಮಹಾಮೈತ್ರಿಕೂಟದ ಅರ್ಥಾತ್ ತೃತೀಯ ಶಕ್ತಿಯ ಪ್ರಧಾನಿ ಕ್ಯಾಂಡಿಡೇಟ್ ಅಗಲು ಹೊರಟಿದ್ದಾರೆ.
ಈ ಮಧ್ಯೆ ಜೆಡಿಎಸ್ ಗೆ ಸಹಕಾರದ ಭರವಸೆ ಕೊಟ್ಟು ಹಿಂದೆ ಸರಿದ ಮಮತಾ ಬ್ಯಾನರ್ಜಿ ಕೂಡಾ ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದಾರೆ.
ಆದರೆ ತಮಗೆ ಕೈ ಕೊಟ್ಟ ಇಂತವರ ಕನಸು ಪೋಷಿಸಲು ತಮ್ಮ ಪಕ್ಷವೇಕೆ ಬೆಂಬಲ ಕೊಡಬೇಕು ಎಂಬುದು ದೇವೇಗೌಡರ ಹಾಲಿ ಸಿಟ್ಟು.ಹಾಗಂತಲೇ ಅವರು ಕುದಿಯುತ್ತಿದ್ದಾರೆ.ಹಾಗೆ ಕುದಿಯುತ್ತಲೇ ಬಿಜೆಪಿ ಕಡೆ ನೋಡುತ್ತಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

The post ತೃತೀಯ ಶಕ್ತಿ ಎಂದರೆ ದೇವೇಗೌಡರಿಗೇಕೆ ಸಿಟ್ಟು? appeared first on Hai Sandur kannada fortnightly news paper.

]]>
https://haisandur.com/2023/07/19/%e0%b2%a4%e0%b3%83%e0%b2%a4%e0%b3%80%e0%b2%af-%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%8e%e0%b2%82%e0%b2%a6%e0%b2%b0%e0%b3%86%e0%b2%a6%e0%b3%87%e0%b2%b5%e0%b3%87%e0%b2%97%e0%b3%8c%e0%b2%a1/feed/ 0
ಪ್ರದೀಪ್ ಈಶ್ವರ್ ಎಂಬ ಬಾಹುಬಲಿಯ ಕತೆ https://haisandur.com/2023/07/17/%e0%b2%aa%e0%b3%8d%e0%b2%b0%e0%b2%a6%e0%b3%80%e0%b2%aa%e0%b3%8d-%e0%b2%88%e0%b2%b6%e0%b3%8d%e0%b2%b5%e0%b2%b0%e0%b3%8d-%e0%b2%8e%e0%b2%82%e0%b2%ac-%e0%b2%ac%e0%b2%be%e0%b2%b9%e0%b3%81%e0%b2%ac/ https://haisandur.com/2023/07/17/%e0%b2%aa%e0%b3%8d%e0%b2%b0%e0%b2%a6%e0%b3%80%e0%b2%aa%e0%b3%8d-%e0%b2%88%e0%b2%b6%e0%b3%8d%e0%b2%b5%e0%b2%b0%e0%b3%8d-%e0%b2%8e%e0%b2%82%e0%b2%ac-%e0%b2%ac%e0%b2%be%e0%b2%b9%e0%b3%81%e0%b2%ac/#respond Mon, 17 Jul 2023 04:05:38 +0000 https://haisandur.com/?p=32937 ಇದು ರಾಜ್ಯ ರಾಜಕಾರಣದ ಬಾಹುಬಲಿಯ ಕತೆ.ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಾಣುತ್ತಿದ್ದ ಡಾ.ಕೆ.ಸುಧಾಕರ್ ಅವರನ್ನು ಸೋಲಿಸಿದ ಆ್ಯಂಗ್ರಿ ಯಂಗ್ ಮ್ಯಾನ್ ಪ್ರದೀಪ್ ಈಶ್ವರ್ ಅವರ ರೋಚಕ ವೃತ್ತಾಂತ.ಅಂದ ಹಾಗೆ 2018 ರಲ್ಲಿ ಅಸ್ತಿತ್ವಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಉರುಳಿಸಿದರಲ್ಲ?ಆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಅವರೊಂದಿಗೆ ಹೋದ ಚಿಕ್ಕಬಳ್ಳಾಪುರದ ಶಾಸಕ ಡಾ.ಸುಧಾಕರ್ ಮಂತ್ರಿಯಾದರು.ಹೀಗೆ ಮಂತ್ರಿಯಾಗಿದ್ದಷ್ಟೇ ಅಲ್ಲ,ತಮ್ಮ ಕೆಪ್ಯಾಸಿಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ […]

The post ಪ್ರದೀಪ್ ಈಶ್ವರ್ ಎಂಬ ಬಾಹುಬಲಿಯ ಕತೆ appeared first on Hai Sandur kannada fortnightly news paper.

]]>
ಇದು ರಾಜ್ಯ ರಾಜಕಾರಣದ ಬಾಹುಬಲಿಯ ಕತೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಾಣುತ್ತಿದ್ದ ಡಾ.ಕೆ.ಸುಧಾಕರ್ ಅವರನ್ನು ಸೋಲಿಸಿದ ಆ್ಯಂಗ್ರಿ ಯಂಗ್ ಮ್ಯಾನ್ ಪ್ರದೀಪ್ ಈಶ್ವರ್ ಅವರ ರೋಚಕ ವೃತ್ತಾಂತ.
ಅಂದ ಹಾಗೆ 2018 ರಲ್ಲಿ ಅಸ್ತಿತ್ವಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಉರುಳಿಸಿದರಲ್ಲ?ಆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಅವರೊಂದಿಗೆ ಹೋದ ಚಿಕ್ಕಬಳ್ಳಾಪುರದ ಶಾಸಕ ಡಾ.ಸುಧಾಕರ್ ಮಂತ್ರಿಯಾದರು.
ಹೀಗೆ ಮಂತ್ರಿಯಾಗಿದ್ದಷ್ಟೇ ಅಲ್ಲ,ತಮ್ಮ ಕೆಪ್ಯಾಸಿಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಪ್ತ ವಲಯಕ್ಕೆ ಸೇರುವ ಮಟ್ಟಕ್ಕೆ ಬೆಳೆದರು.
ಮುಂದೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಬಂದ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಡಿಸಿಎಂ ಹುದ್ದೆಗೆ ಟವೆಲ್ಲು ಹಾಕುವ ರೇಂಜಿಗೆ ಸುಧಾಕರ್ ತಲುಪಿದ್ದರು ಎಂಬುದು ಅವರ ಕೆಪ್ಯಾಸಿಟಿಗೆ ಸಾಕ್ಷಿ.
ಬೊಮ್ಮಾಯಿ ಇರುವವರೆಗೆ ಅದು ಸಾಧ್ಯವಾಗಲಿಲ್ಲ ಎಂಬುದು ಬೇರೆ ಮಾತು.ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹದಿನೈದು ವಿಧಾನಸಭಾ ಕ್ಷೇತ್ರಗಳ ಪೈಕಿ ಮಿನಿಮಮ್ ಹತ್ತರಲ್ಲಿ ಬಿಜೆಪಿ ಕ್ಯಾಂಡಿಡೇಟುಗಳನ್ನು ಗೆಲ್ಲಿಸಲು ಸುಧಾಕರ್ ಬ್ಲೂ ಪ್ರಿಂಟು ರೆಡಿ ಮಾಡಿದ್ದರು.
ಈ ರೀತಿ ಸುಧಾಕರ್ ತಮ್ಮ ಕೈಗಳನ್ನು ಚಾಚಿದ ಪರಿ ಹೇಗಿತ್ತೆಂದರೆ ಅದರ ಪವರ್ ಕಂಡು ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಬಹುತೇಕ ಕಾಂಗ್ರೆಸ್ ನಾಯಕರು ಬೆಚ್ಚಿ ಬಿದ್ದಿದ್ದರು.ಅಷ್ಟೇ ಅಲ್ಲ,ಡಾ.ಸುಧಾಕರ್ ಅವರ ವಿರುದ್ಧ ಎಲ್ಲೂ ಧ್ವನಿ ಎತ್ತಬೇಡಿ. ಹಾಗೇನಾದರೂ ಮಾಡಿದರೆ ನೀವಾಗಿಯೇ ನಿಮ್ಮ ಕ್ಷೇತ್ರಕ್ಕೆ ಆನೆ ನುಗ್ಗಿಸಿಕೊಂಡು ನಾಶವಾಗುತ್ತೀರಿ ಎಂದು ಪಿಸುಗುಟ್ಟುವ ರೇಂಜಿನಲ್ಲಿ ಹೆದರಿಕೆ ಹುಟ್ಟಿಸಿದ್ದರು.
ಸುಧಾಕರ್ ಹುಟ್ಟಿಸಿದ ಈ ಹೆದರಿಕೆ ಹೇಗಿತ್ತು ಎಂದರೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರೆಲ್ಲ,ರೀ ಹೇಗಾದರೂ ಮಾಡಿ ಈ ಸುಧಾಕರ್ ಅವರನ್ನು ಕಟ್ಟಿ ಹಾಕಬೇಕು ಕಣ್ರೀ.ಇದು ಸಾಧ್ಯವಾಗದೆ ಹೋದರೆ ನಿಮ್ಮ ಭಾಗದಲ್ಲಿ ಕಾಂಗ್ರೆಸ್ ಕುಸಿದು ಹೋದಂತೆಯೇ ಲೆಕ್ಕ ಎಂದು ಸ್ಥಳೀಯ ನಾಯಕರೆದುರು ಆತಂಕ ವ್ಯಕ್ತಪಡಿಸಿದ್ದರಂತೆ.
ಇಂತಹ ಆತಂಕದ ನಡುವೆ ಅರಿಭಯಂಕರ ಡಾ.ಸುಧಾಕರ್ ಅವರನ್ನು ಕಟ್ಟಿ ಹಾಕಬಲ್ಲ ಕ್ಯಾಂಡಿಡೇಟನ್ನು ಹುಡುಕಿ ಎಂದವರು ಹೇಳಿದರೂ, ಸ್ಥಳೀಯ ಕಾಂಗ್ರೆಸ್ ನಾಯಕರ ಕಣ್ಣಿಗೆ ಯಾವೊಬ್ಬ ಕ್ಯಾಂಡಿಡೇಟೂ ಕಾಣಿಸಿಲ್ಲ.
ಒಂದು ಹಂತದಲ್ಲಿ ವಿನಯ್ ಶ್ಯಾಮ್ ಎಂಬುವವರನ್ನು ತೋರಿಸಿದ ಹಿರಿಯ ನಾಯಕ ಕೆ.ಹೆಚ್.ಮುನಿಯಪ್ಪ,ಇವರು ಕ್ಯಾಂಡಿಡೇಟ್ ಆದರೆ ಸುಧಾಕರ್ ಅವರನ್ನು ಕಟ್ಟಿ ಹಾಕಬಹುದು ಎಂದು ತೋರಿಸಿದರಂತೆ,ಆದರೆ ಅವರನ್ನು ಕ್ಯಾಂಡಿಡೇಟು ಮಾಡುವ ವಿಷಯದಲ್ಲಿ ಪಕ್ಷದ ಬಹುತೇಕ ನಾಯಕರು ಸಹಮತ ವ್ಯಕ್ತಪಡಿಸಲಿಲ್ಲ.
ಸರಿ,ಹೀಗಿರುವಾಗಲೇ ಆ ಭಾಗದಲ್ಲಿ ನಡೆದ ಸಭೆಯೊಂದರಲ್ಲಿ ಚಿಂತಾಮಣಿಯ ಕಾಂಗ್ರೆಸ್ ನಾಯಕ ಡಾ.ಎಂ.ಸಿ.ಸುಧಾಕರ್ (ಈಗ ಸಚಿವರು) ಅವರು ಸಚಿವ ಡಾ.ಸುಧಾಕರ್ ಅವರ ವಿರುದ್ಧ ಗುಡುಗಿದ್ದಾರೆ.ಇದು ಸಹಜವಾಗಿಯೇ ಡಾ.ಸುಧಾಕರ್ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ.ಅಷ್ಟೇ ಅಲ್ಲ,ಎಂ.ಸಿ.ಸುದಾಕರ್ ವಿರುದ್ಧ ಕಿಡಿ ಕಾರುವಂತೆ ಮಾಡಿದೆ.
ಯಾವಾಗ ಈ ಬೆಳವಣಿಗೆ ನಡೆಯಿತೋ?ಇದಾದ ನಂತರ ಡಾ.ಸುಧಾಕರ್ ಅವರ ವಿರುದ್ಧ ಪ್ರಬಲ ಅಸ್ತ್ರ ತಯಾರಿಸಲು ಎಂ.ಸಿ.ಸುಧಾಕರ್ ತೀರ್ಮಾನಿಸಿದ್ದಾರೆ. ಅಷ್ಟೊತ್ತಿಗೆ ಸರಿಯಾಗಿ ರಾಜ್ಯದ ಕಾಂಗ್ರೆಸ್ ನಾಯಕರೂ,ಡಾ.ಸುಧಾಕರ್ ಅವರನ್ನು ಕಟ್ಟಿ ಹಾಕಬಲ್ಲ ಕ್ಯಾಂಡಿಡೇಟನ್ನು ಹುಡುಕಲು ಎಂ.ಸಿ.ಸುಧಾಕರ್ ಅವರಿಗೆ ಸುಪಾರಿ ಕೊಟ್ಟಿದ್ದಾರೆ.
ಯಾವಾಗ ತಮ್ಮ ಕೈಗೆ ಈ ಸುಪಾರಿ ಬಂತೋ?ಆಗಿನಿಂದ ಹುಡುಕಾಟ ಆರಂಭಿಸಿದ ಎಂ.ಸಿ.ಸುದಾಕರ್ ಅವರಿಗೆ ಸೂಟಬಲ್ ಕ್ಯಾಂಡಿಡೇಟು ಸಿಕ್ಕಿಲ್ಲ.ಆದರೆ ಕಳೆದ ವರ್ಷ ತಮ್ಮ ಹುಟ್ಟು ಹಬ್ಬವನ್ನು ಅವರು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಒಬ್ಬ ಯುವಕ ಅವರನ್ನು ಭೇಟಿಯಾಗಿ ಶುಭ ಕೋರಿದರಂತೆ.
ಆ ಯುವಕನನ್ನು ನೋಡಿದ್ದೇ ತಡ, ಎಂ.ಸಿ.ಸುದಾಕರ್ ಅವರ ತಲೆಗೆ ಮಿಂಚು ಹೊಡೆದಂತಾಗಿದೆ.ಈ ಯುವಕನ ಬಗ್ಗೆ ಒಂದಷ್ಟು ಮಾಹಿತಿ ಬೇರೆ ಇತ್ತಲ್ಲ?ಹೀಗಾಗಿಯೇ ಆ ಯುವಕನ ಬಳಿ,ನೀನೇಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸಬಾರದು ಎಂದಿದ್ದಾರೆ.ಅಂದ ಹಾಗೆ ಆ ಯುವಕನ ಹೆಸರು- ಪ್ರದೀಪ್ ಈಶ್ವರ್.

ಅಷ್ಟೊತ್ತಿಗಾಗಲೇ ಈ ಯುವಕ ಪ್ರದೀಪ್ ಈಶ್ವರ್ ಅವರು ಡಾ.ಸುಧಾಕರ್ ಅವರ ಹೊಡೆತಕ್ಕೆ ಸಿಲುಕಿ ಹಲವು ಬವಣೆಗಳನ್ನು ಎದುರಿಸಿದ್ದರಲ್ಲ?ಹೀಗಾಗಿ ಎಂ.ಸಿ.ಸುಧಾಕರ್ ಅವರ ಮಾತು ಕೇಳುತ್ತಲೇ ಹೌಹಾರಿ, ಅಯ್ಯೋ ಬೇಡ ಸಾರ್,ಈಗಾಗಲೇ ಅವರು ನನಗೆ ಸಾಕಷ್ಟು ಹಿಂಸೆ ಕೊಟ್ಟಿದ್ದಾರೆ. ಈಗಾಗಲೇ ಜೈಲು ಬೇರೆ ಸೇರಿ ಬಂದಿದ್ದೇನೆ ಎಂದರಂತೆ.
ಇಷ್ಟಾದರೂ ಎಂ.ಸಿ.ಸುಧಾಕರ್ ಒತ್ತಾಯ ಮಾಡಿದಾಗ,ಸಾರ್,ಹೇಗೋ ಕಷ್ಟಪಟ್ಟು ಇನ್ಸ್ ಸ್ಟಿಟ್ಯೂಟ್ ಕಟ್ಟಿ ಬೆಳೆಸಿದ್ದೇನೆ.ನಾಳೆ ಚುನಾವಣೆಯಲ್ಲಿ ಅವರ ವಿರುದ್ಧ ಸ್ಪರ್ಧಿಸಿ ಸೋತರೆ ಅದನ್ನೆಲ್ಲ ಮುಚ್ಚಿಸಿಬಿಡುತ್ತಾರೆ. ನನಗೆ ರಕ್ಷಣೆಯೇ ಇಲ್ಲದಂತಾಗುತ್ತದೆ.ಅದೇ ರೀತಿ ಅವರ ವಿರುದ್ಧ ಸ್ಪರ್ಧಿಸಲು ನನ್ನ ಬಳಿ ಹಣ ಬಲವೂ ಇಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಆದರೆ ಪಟ್ಟು ಬಿಡದ ಎಂ.ಸಿ.ಸುಧಾಕರ್ ಅವರು:ಯಾರೇನೇ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ.ಒಂದು ವೇಳೆ ನೀವು ಸೋತರೂ ನಿಮಗೆ ತೊಂದರೆಯಾಗದಂತೆ ನಾನು ರಕ್ಷಣೆ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ,ಈ ಬಗ್ಗೆ ಇವತ್ತೇ ನಿಮ್ಮ ಉತ್ತರ ಬೇಡ,ಎರಡು ದಿನ ಟೈಮು ತೆಗೆದುಕೊಂಡು ಹೇಳಿ ಎಂದಿದ್ದಾರೆ.
ಸರಿ,ಇದಾಗಿ ಎರಡು ದಿನ ಕಳೆದ ನಂತರ ಪ್ರದೀಪ್ ಈಶ್ವರ್ ಪುನ: ಎಂ.ಸಿ.ಸುಧಾಕರ್ ಅವರನ್ನು ಸಂಪರ್ಕಿಸಿ ಯಸ್ ನಾನು ರೆಡಿ ಎಂದರಂತೆ.ಯಾವಾಗ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿತೋ?ಇದಾದ ನಂತರ ಮಾಜಿ ವಿಧಾನಸಭಾಧ್ಯಕ್ಷರಾದ,ಶ್ರೀನಿವಾಸಪುರದ ರಮೇಶ್ ಕುಮಾರ್ ಅವರಿಗೆ ಎಂ.ಸಿ.ಸುಧಾಕರ್ ವಿಷಯ ಹೇಳಿದ್ದಾರೆ. ಅಷ್ಟೇ ಅಲ್ಲ,ಪ್ರದೀಪ್ ಈಶ್ವರ್ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಲಾಭವಾಗಬಹುದು ಎಂಬ ಲೆಕ್ಕಾಚಾರವನ್ನು ವಿವರಿಸಿದ್ದಾರೆ.
ಹೇಗಿದ್ದರೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಲಿಜ ಸಮುದಾಯದ ಪವರ್ರು ಜಾಸ್ತಿ. ಪ್ರದೀಪ್ ಈಶ್ವರ್ ಅವರು ಈ ಸಮುದಾಯಕ್ಕೆ ಸೇರಿದವರು.ನಾಳೆ ಬಿಜೆಪಿ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸಲಿರುವ ಡಾ.ಸುಧಾಕರ್ ಅವರು ಒಕ್ಕಲಿಗರು, ಜೆಡಿಎಸ್ ಕೂಡಾ ಒಕ್ಕಲಿಗರನ್ನೇ ಕಣಕ್ಕಿಳಿಸುವುದರಿಂದ ಸಹಜವಾಗಿಯೇ ಒಕ್ಕಲಿಗರ ವೋಟು ಡಿವೈಡ್ ಆಗುತ್ತದೆ. ಅದೇ ಕಾಲಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬಲಿಜ, ಕುರುಬ,ಮುಸ್ಲಿಂ ಮತ್ತು ಪರಿಶಿಷ್ಟ ಮತಗಳು ಕನ್ ಸಾಲಿಡೇಟ್ ಆಗಿ ನಮ್ಮ ಕ್ಯಾಂಡಿಡೇಟು ಗೆಲ್ಲುವುದು ಗ್ಯಾರಂಟಿ ಎಂದು ಅವರು ವಿವರಿಸಿದಾಗ ರಮೇಶ್ ಕುಮಾರ್ ಅವರು ಖುಷಿಯಿಂದ ಯಸ್ ಎಂದರಂತೆ.
ಇದಾದ ನಂತರ ಪ್ರದೀಪ್ ಈಶ್ವರ್ ಅವರನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡುವ ಬಗ್ಗೆ ಎಂ.ಸಿ.ಸುಧಾಕರ್ ಅವರು ಸಿದ್ಧರಾಮಯ್ಯ ಅವರಿಗೆ ತಿಳಿಸಿದಾಗ: ಗುಡ್, ಚಿಕ್ಕಬಳ್ಳಾಪುರದಲ್ಲಿ ನಮಗೆ ಒಳ್ಳೆ ಕ್ಯಾಂಡಿಡೇಟು ಸಿಕ್ಕರಲ್ಲ?ಒಳ್ಳೆಯದು. ಹೇಗಾದರೂ ಮಾಡಿ ಆ ಸುಧಾಕರ್ ಗೆಲ್ಲದಂತೆ ನೋಡಿಕೊಳ್ಳಿ ಎಂದಿದ್ದಾರೆ.
ಇಷ್ಟಾದ ನಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುರ್ಜೇವಾಲ ಮತ್ತು ಹೈಕಮಾಂಡ್ ನ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ಅವರಿಗೆ ವಿಷಯ ಹೇಳಿದಾಗ,ಎಲ್ಲ ಮಾಹಿತಿ ಪಡೆದ ಅವರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಆದರೆ ಅಷ್ಟರಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು:ಪ್ರದೀಪ್ ಈಶ್ವರ್ ಅವರು ಡಾ.ಸುಧಾಕರ್ ಮತ್ತಿತರ ನಾಯಕರ ಜತೆಗಿದ್ದ ಫೋಟೋ ತೋರಿಸಿ,ರೀ ಈ ಪ್ರದೀಪ್ ಈಶ್ವರ್ ಹೇಳಿ ಕೇಳಿ ಡಾ.ಸುಧಾಕರ್ ಅವರ ಕ್ಯಾಂಡಿಡೇಟು. ಇವತ್ತು ನಮ್ಮ ಪಕ್ಷದ ಕಡೆ ಅವರನ್ನು ಕಳಿಸಿ ಟಿಕೆಟ್ ಕೊಡಿಸುವುದು,ನಿರಾಯಾಸವಾಗಿ ಗೆಲ್ಲುವುದು ಡಾ.ಸುಧಾಕರ್ ಅವರ ತಂತ್ರ ಎಂದರಂತೆ.
ಹೀಗೆ ಹೇಳಿದ ನಾಯಕರಿಗೆ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವವೂ ಇತ್ತಲ್ಲ?ಹೀಗಾಗಿ ಅವರ ಮಾತು ಕೇಳಿದ ಸುರ್ಜೇವಾಲಾ ಪುನ: ವಿವರಣೆ ಕೇಳಿದ್ದಾರೆ.ಆಗ ಎಂ.ಸಿ.ಸುಧಾಕರ್ ಅವರು,ಸಾರ್,ಪ್ರದೀಪ್ ಈಶ್ವರ್ ಅವರು ಇನ್ ಸ್ಟಿಟ್ತೂಟ್ ಕಟ್ಟಿದ್ದಾರೆ.ಹೀಗಾಗಿ ಅವರು ಹಲವು ನಾಯಕರನ್ನು ಭೇಟಿ ಮಾಡಿರಬಹುದು.ಹಾಗಂತ ಅವರು ಡಾ.ಸುಧಾಕರ್ ಕಡೆಯವರು ಎಂದರ್ಥವಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಮುಂದೆ ಇಂತಹ ಬಿಕ್ಕಟ್ಟುಗಳನ್ನೆಲ್ಲ ದಾಟಿಕೊಂಡು ರಾಹುಲ್ ಗಾಂಧಿ ಅವರ ಸಮ್ಮತಿಯೊಂದಿಗೆ ಪ್ರದೀಪ್ ಈಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಾಗ ಆಟ ಶುರುವಾಗಿದೆ.ತಮ್ಮ ಎದುರು ಸ್ಪರ್ಧಿಸಿದ ಕ್ಯಾಂಡಿಡೇಟನ್ನು ನೋಡಿ ಡಾ.ಸುಧಾಕರ್ ಅವರು:ರೀ ನಾನು ಡಾಕ್ಟರು,ಆತ ಆಫ್ಟರಾಲ್ ಪಿಯೂಸಿ ಎಂದಾಗ ಪ್ರದೀಪ್ ಈಶ್ವರ್ ಥೇಟು ತೆಲುಗು ಫಿಲಂ ಹೀರೋನಂತೆ:ರೀ ಅವರು ಡಾಕ್ಟರ್ ಆದರೆ,ನಾನು ಡಾಕ್ಟರುಗಳನ್ನು ತಯಾರಿಸುವ ಫ್ಯಾಕ್ಟರಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಅವರು ಹೀಗೆ ತಿರುಗೇಟು ಕೊಡುವ ಕಾಲಕ್ಕೆ ಫೀಲ್ಡಿಗಿಳಿದ ಎಂ.ಸಿ.ಸುಧಾಕರ್ ಅವರು ಕೂಡಾ ಸಚಿವ ಡಾ.ಸುಧಾಕರ್ ಅವರ ವಿರುದ್ಧ ದೊಡ್ಡ ಆರೋಪ ಪಟ್ಟಿಯನ್ನೇ ಬಿಡುಗಡೆ ಮಾಡಿ ಗುಡುಗಿ ಆಪರೇಷನ್ ಚಿಕ್ಕಬಳ್ಳಾಪುರಕ್ಕೆ ಚಾಲನೆ ನೀಡಿದ್ದಾರೆ.
ಈ ಮಧ್ಯೆಯೂ ಹಲವರು ಎಂ.ಸಿ.ಸುಧಾಕರ್ ಅವರಿಗೆ ಫೋನು ಮಾಡಿ:ಸಾರ್,ನೀವು ಆರಿಸಿರುವ ಕ್ಯಾಂಡಿಡೇಟು ಭಾಷಣ ಮಾಡುವಾಗ ತೋಳು ಮೇಲೇರಿಸಿ ಮಾತನಾಡುತ್ತಾರೆ, ಸೊಂಟದ ಮೇಲೆ ಕೈ ಇಟ್ಟುಕೊಳ್ಳುತ್ತಾರೆ ಅಂತ ಪ್ರದೀಪ್ ಈಶ್ವರ್ ಅವರ ಬಾಡಿ ಲಾಂಗ್ವೇಜಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಆಗೆಲ್ಲ ಎಂ.ಸಿ.ಸುಧಾಕರ್; ಅವರು ಮಕ್ಕಳಿಗೆ ಪಾಠ ಮಾಡುವಾಗ ಹೀಗೆ ಮಾಡುವುದು ಕಾಮನ್ ಎನ್ನುತ್ತಿದ್ದರಾದರೂ ಮತ್ತೊಂದು ಕಡೆಯಿಂದ ಪ್ರದೀಪ್ ಈಶ್ವರ್ ಅವರಿಗೆ ಟಿಪ್ಸುಕೊಡುತ್ತಾ ಹೋಗುತ್ತಿದ್ದರು. ಯಾವುದನ್ನು ಹಣ ಖರೀದಿ ಮಾಡಲು ಸಾಧ್ಯವಿಲ್ಲವೋ?ಅದನ್ನು ಹೃದಯ ಖರೀದಿಸುತ್ತದೆ ಎಂದು ಹುರುಪು ತುಂಬುತ್ತಿದ್ದರು.
ಅಷ್ಟೇ ಅಲ್ಲ,ಪ್ರದೀಪ್ ಈಶ್ವರ್ ಅವರು ಜೈಲು ಸೇರಿದಾಗ ಅವರ ಪರ ವಾದ ಮಾಡಲೂ ವಕೀಲರ ಕೊರತೆಯಾಗುವಂತೆ ಮಾಡಿದವರು ಯಾರು?ಆ ಸಂದರ್ಭದಲ್ಲಿ ಬೇಸತ್ತು ಜೈಲಿನಲ್ಲಿ ನೀವು ಉಪವಾಸ ಸತ್ಯಾಗ್ರಹ ಮಾಡಿದ್ದು ಹೇಗಿತ್ತು? ಇದನ್ನು ಕಂಡ ಜೈಲರುಗಳು ನ್ಯಾಯಾಲಯಕ್ಕೆ ಆ ಬಗ್ಗೆ ವಿವರಿಸಿದಾಗ ನ್ಯಾಯಾಧೀಶರು ನಿಮಗೆ ಬೇಲ್ ಕೊಟ್ಟು ಕಳಿಸಿದ್ದು ಹೇಗೆ?ಎಂಬ ಬಗ್ಗೆ ಜನರಿಗೆ ವಿವರಿಸುತ್ತಾ ಹೋಗಿ,ಅವರ ಮನಸ್ಸು ಗೆಲ್ಲುತ್ತೀರಿ ಎಂದಿದ್ದಾರೆ.
ಪರಿಣಾಮ?ನೋಡ ನೋಡುತ್ತಿದ್ದಂತೆಯೇ ಅರಿಭಯಂಕರ ಡಾ.ಸುಧಾಕರ್ ಅವರ ಸುತ್ತಲಿನ ಪ್ರಭಾವಳಿ ಸಿನಿಮಾ ಪೋಸ್ಟರಿನಂತೆ ಕಳಚಿ ಬೀಳುತ್ತಾ,ಪ್ರದೀಪ್ ಈಶ್ವರ್ ಅವರ ಇಮೇಜು ಕಟೌಟಿನಂತೆ ಜನರ ಮನಸ್ಸಿನಲ್ಲಿ ನೆಲೆಯಾಗತೊಡಗಿದೆ.
ಯಾವಾಗ ಹೀಗೆ ಪರಿಸ್ಥಿತಿ ಬದಲಾಯಿತೋ?ಆಗ ಜೆಡಿಎಸ್ ಪಕ್ಷದ ಬಹುತೇಕ ಸ್ಥಳೀಯ ನಾಯಕರು ಒಂದು ನಿರ್ಧಾರಕ್ಕೆ ಬಂದಿದ್ದಾರೆ.ಚುನಾವಣೆಯಲ್ಲಿ ಡಾ.ಸುಧಾಕರ್ ಅವರ ವಿರುದ್ಧ ಯಾರು ಗೆಲ್ಲುತ್ತಾರೋ?ಅವರ ಜತೆ ನಿಲ್ಲಬೇಕು ಅಂತ ನಾವು ಕಾಂಗ್ರೆಸ್ ನಾಯಕರ ಜತೆ ಮಾತನಾಡಿಕೊಂಡಿದ್ದೇವೆ.ನಮ್ಮ ಕ್ಯಾಂಡಿಡೇಟು ಗೆಲ್ಲುವುದಾದರೆ ಕಾಂಗ್ರೆಸ್ ಪಕ್ಷ ನಮಗೆ ಬೆಂಬಲ ಕೊಡಬೇಕು,ಕಾಂಗ್ರೆಸ್ ಪಕ್ಷ ಗೆಲ್ಲುವುದಾದರೆ ನಾವು ಅವರಿಗೆ ಬೆಂಬಲ ಕೊಡಬೇಕು ಅನ್ನುವುದು ಈ ನಿರ್ಧಾರ.
ಅದರ ಪ್ರಕಾರ,ಈ ಚುನಾವಣೆಯಲ್ಲಿ ಡಾ.ಸುಧಾಕರ್ ಅವರನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಪ್ರದೀಪ್ ಈಶ್ವರ್ ಅಲುಗಾಡಿಸುತ್ತಿದ್ದಾರೆ.ಹೀಗಾಗಿ ಚುನಾವಣೆಯಲ್ಲಿ ನಾವು ಅವರ ಬೆಂಬಲಕ್ಕೆ ನಿಲ್ಲೋಣ ಎಂದು ಈ ನಾಯಕರು ಮಾತನಾಡಿಕೊಂಡ ಮೇಲೆ ಜೆಡಿಎಸ್ ಪಕ್ಷದ ಬಹುತೇಕ ಮತಗಳು ಪ್ರದೀಪ್ ಈಶ್ವರ್ ಅವರಿಗೆ ಶಿಫ್ಟಾಗಿವೆ.
ಪರಿಣಾಮ? ಕರ್ನಾಟಕದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಡಾ.ಸುಧಾಕರ್ ಚುನಾವಣೆಯಲ್ಲಿ ಸೋತಿದ್ದಾರೆ.ಅದೇ ಕಾಲಕ್ಕೆ ಕರ್ನಾಟಕದ ಜನರಿಗೆ ಅನಾಮಧೇಯರಂತಿದ್ದ ಪ್ರದೀಪ್ ಈಶ್ವರ್ ಡಿಟ್ಟೋ ಬಾಹುಬಲಿಯಂತೆ ಮೇಲೆದ್ದು ವಿಧಾನಸಭೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

The post ಪ್ರದೀಪ್ ಈಶ್ವರ್ ಎಂಬ ಬಾಹುಬಲಿಯ ಕತೆ appeared first on Hai Sandur kannada fortnightly news paper.

]]>
https://haisandur.com/2023/07/17/%e0%b2%aa%e0%b3%8d%e0%b2%b0%e0%b2%a6%e0%b3%80%e0%b2%aa%e0%b3%8d-%e0%b2%88%e0%b2%b6%e0%b3%8d%e0%b2%b5%e0%b2%b0%e0%b3%8d-%e0%b2%8e%e0%b2%82%e0%b2%ac-%e0%b2%ac%e0%b2%be%e0%b2%b9%e0%b3%81%e0%b2%ac/feed/ 0
ಅವತ್ತು ಶಾಂಗ್ರಿಲಾ ಹೋಟೆಲಿನಲ್ಲಿ ನಡೆದಿದ್ದೇನು? https://haisandur.com/2023/07/10/%e0%b2%85%e0%b2%b5%e0%b2%a4%e0%b3%8d%e0%b2%a4%e0%b3%81-%e0%b2%b6%e0%b2%be%e0%b2%82%e0%b2%97%e0%b3%8d%e0%b2%b0%e0%b2%bf%e0%b2%b2%e0%b2%be%e0%b2%b9%e0%b3%8b%e0%b2%9f%e0%b3%86%e0%b2%b2%e0%b2%bf%e0%b2%a8/ https://haisandur.com/2023/07/10/%e0%b2%85%e0%b2%b5%e0%b2%a4%e0%b3%8d%e0%b2%a4%e0%b3%81-%e0%b2%b6%e0%b2%be%e0%b2%82%e0%b2%97%e0%b3%8d%e0%b2%b0%e0%b2%bf%e0%b2%b2%e0%b2%be%e0%b2%b9%e0%b3%8b%e0%b2%9f%e0%b3%86%e0%b2%b2%e0%b2%bf%e0%b2%a8/#respond Mon, 10 Jul 2023 03:50:20 +0000 https://haisandur.com/?p=32843 ಕೆಲ ದಿನಗಳ ಹಿಂದೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ಒಂದು ಮಹತ್ವದ ಸಭೆ ನಡೆಯಿತು.ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಕೆಲವರಷ್ಟೇ ಇದ್ದರು.ಅಲ್ಲಿ ಮಾತನಾಡಿದ ಯಡಿಯೂರಪ್ಪ ತಮ್ಮ ಪುತ್ರನಿಗೆ ಒಂದು ಮಹತ್ವದ ಸುಳಿವು ನೀಡಿದರಂತೆ.ರಾಜ್ಯದಲ್ಲಿ ಬಿಜೆಪಿಯ ಪುನಶ್ಚೇತನವಾಗಬೇಕು ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ನಮ್ಮ ಉದ್ದೇಶ ಈಡೇರಬೇಕು ಎಂದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾವು ಸೂಚಿಸಿದವರು ಬಂದು ಕೂರಬೇಕು.ಹೀಗೆ ರಾಜ್ಯಾಧ್ಯಕ್ಷರಾಗುವವರು ಪಕ್ಷಕ್ಕೆ ಶಕ್ತಿ ತುಂಬುವ ನಮ್ಮ ಗುರಿಗೆ ಪ್ಲಸ್ […]

The post ಅವತ್ತು ಶಾಂಗ್ರಿಲಾ ಹೋಟೆಲಿನಲ್ಲಿ ನಡೆದಿದ್ದೇನು? appeared first on Hai Sandur kannada fortnightly news paper.

]]>
ಕೆಲ ದಿನಗಳ ಹಿಂದೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ಒಂದು ಮಹತ್ವದ ಸಭೆ ನಡೆಯಿತು.
ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಕೆಲವರಷ್ಟೇ ಇದ್ದರು.
ಅಲ್ಲಿ ಮಾತನಾಡಿದ ಯಡಿಯೂರಪ್ಪ ತಮ್ಮ ಪುತ್ರನಿಗೆ ಒಂದು ಮಹತ್ವದ ಸುಳಿವು ನೀಡಿದರಂತೆ.ರಾಜ್ಯದಲ್ಲಿ ಬಿಜೆಪಿಯ ಪುನಶ್ಚೇತನವಾಗಬೇಕು ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ನಮ್ಮ ಉದ್ದೇಶ ಈಡೇರಬೇಕು ಎಂದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾವು ಸೂಚಿಸಿದವರು ಬಂದು ಕೂರಬೇಕು.
ಹೀಗೆ ರಾಜ್ಯಾಧ್ಯಕ್ಷರಾಗುವವರು ಪಕ್ಷಕ್ಕೆ ಶಕ್ತಿ ತುಂಬುವ ನಮ್ಮ ಗುರಿಗೆ ಪ್ಲಸ್ ಆಗಿರಬೇಕು.ಆ ದೃಷ್ಟಿಯಿಂದ ನಮ್ಮ ಮುಂದಿರುವ ಆಯ್ಕೆ ಎಂದರೆ ಇವತ್ತು ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ.
ಅವರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿದರೆ ರಾಜ್ಯದಲ್ಲಿ ಬಿಜೆಪಿಯ ಪವರ್ ಹೆಚ್ಚಾಗುತ್ತದೆ ಅಂತ ನಾನು ವರಿಷ್ಟರಿಗೆ ಹೇಳುತ್ತೇನೆ.ಆದರೆ ಅದಕ್ಕೂ ಮುನ್ನ ಶೋಭಾ ಕರಂದ್ಲಾಜೆ ಅವರ ವಿಷಯದಲ್ಲಿ ನಿನಗಿರುವ ಭಿನ್ನಾಭಿಪ್ರಾಯ ನಿವಾರಣೆಯಾಗಬೇಕು.
ಹಾಗಂತ ಯಡಿಯೂರಪ್ಪ ಅವರು ಹೇಳಿದಾಗ ವಿಜಯೇಂದ್ರ ಅರೆಕ್ಷಣ ಮೌನವಾಗಿದ್ದರಂತೆ.
ಅಂದ ಹಾಗೆ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಶೋಭಾ ಕರಂದ್ಲಾಜೆ 2019 ರಲ್ಲಿ ನಡೆದ ಒಂದು ಘಟನೆಯಿಂದ ಬೇಸತ್ತು ದೂರವಾಗಿದ್ದರು.
ಹೀಗಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಇಷ್ಟು ಕಾಲ ಅವರ ಕ್ಯಾಂಪಿನಲ್ಲಿ ಇವರು ಕಾಣಿಸಿಕೊಳ್ಳುತ್ತಿರಲಿಲ್ಲ.
ನಾಲ್ಕು ವರ್ಷಗಳ ಹಿಂದೆ ವಿಜಯೇಂದ್ರ ತಮ್ಮ ವಿರುದ್ಧ ಕಿಡಿ ಕಾರಿದ್ದರಿಂದ ಕಿರಿಕಿರಿ ಮಾಡಿಕೊಂಡ ಶೋಭಾ ಕರಂದ್ಲಾಜೆ ತಪ್ಪಿಯೂ ಯಡಿಯೂರಪ್ಪ ಅವರ ಮನೆಯ ಕಡೆ ಹೋಗಿರಲಿಲ್ಲವಂತೆ.
ಮುಂದೆ ಅವರು ಪ್ರಧಾನಿ ನರೇಂದ್ರಮೋದಿ ಅವರ ಸಂಪುಟದಲ್ಲಿ ಸಚಿವರಾದರು.ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸೆಟ್ಲಾದರು.
ಅಲ್ಲಿಗೆ ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಬಲವಂತವಾಗಿ ಕೆಳಕ್ಕಿಳಿಸಲಾಯಿತು.ಅಷ್ಟೇ ಅಲ್ಲ,ಅವರನ್ನು ಬಿಜೆಪಿಯ ಔಟರ್ ರಿಂಗ್ ರೋಡಿನಲ್ಲಿ ನಿಲ್ಲಿಸುವ ಯತ್ನ ಆರಂಭವಾಯಿತು.
ಯಡಿಯೂರಪ್ಪ ಅವರನ್ನೇ ದೂರ ತಳ್ಳುವ ಯತ್ನ ನಡೆದಾಗ ವಿಜಯೇಂದ್ರ ಅವರನ್ನು ಸುಮ್ಮನೆ ಬಿಡಲು ಸಾಧ್ಯವೇ?ಹಾಗಂತಲೇ ಅವರ ವಿಧಾನಪರಿಷತ್ ಎಂಟ್ರಿಗೆ ಅವಕಾಶ ನೀಡದೆ,ಬೊಮ್ಮಾಯಿ ಸಂಪುಟಕ್ಕೆ ನುಗ್ಗುವ ಚಾನ್ಸು ನೀಡದೆ ನಿಯಂತ್ರಿಸಲಾಯಿತು.
ಆದರೆ ಎಲ್ಲ ಕಡೆ ತಮಗಿರುವ ಲಿಂಕುಗಳನ್ನು ಬಳಸಿ ವಿಜಯೇಂದ್ರ ಅವರು ವಿಧಾನಸಭೆ ಪ್ರವೇಶಿಸುವಂತೆ ನೋಡಿಕೊಂಡ ಯಡಿಯೂರಪ್ಪ ಅವರಿಗೆ ಈಗ ನಿಜವಾದ ಸವಾಲು ಶುರುವಾಗಿದೆ.
ಅರ್ಥಾತ್,ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿರುವ ಅವರ ವಿರೋಧಿ ಗ್ಯಾಂಗು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಶಾಸಕಾಂಗ ನಾಯಕನ ಸ್ಥಾನವನ್ನು ಕಬ್ಜಾ ಮಾಡಿಕೊಳ್ಳಲು ಹೊರಟಿದೆ.
ಈ ದಿಸೆಯಲ್ಲಿ ‘ಎ’ ಪ್ಲಾನ್ ಮತ್ತು ‘ಬಿ’ ಪ್ಲಾನ್ ರೆಡಿ ಮಾಡಿಟ್ಟುಕೊಂಡಿರುವ ಈ ಗ್ಯಾಂಗು ಯಶಸ್ವಿಯಾದರೆ ಅನುಮಾನವೇ ಬೇಡ,ಪಕ್ಷದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಷೇರು ಮೌಲ್ಯ ಕಡಿಮೆಯಾಗಲಿದೆ.
ಅಂದ ಹಾಗೆ ಹಿರಿಯ ನಾಯಕ ವಿ.ಸೋಮಣ್ಣ ರಾಜ್ಯಾಧ್ಯಕ್ಷರಾಗಿ,ಡಾ.ಅಶ್ವಥ್ಥ ನಾರಾಯಣ ಇಲ್ಲವೇ ವಿ.ಸುನೀಲ್ ಕುಮಾರ್ ಶಾಸಕಾಂಗ ನಾಯಕರಾಗುವುದು ಅದರ ‘ಎ’ಪ್ಲಾನು.
ಇದೇ ರೀತಿ ಡಾ.ಅಶ್ವಥ್ಥನಾರಾಯಣ,ಸಿ.ಟಿ.ರವಿ ಮತ್ತು ವಿ.ಸುನೀಲ್ ಕುಮಾರ್ ಅವರ ಪೈಕಿ ಒಬ್ಬರು ರಾಜ್ಯಾಧ್ಯಕ್ಷರಾಗಿ,ಬಸವನಗೌಡ ಪಾಟೀಲ್ ಯತ್ನಾಳ್ ಶಾಸಕಾಂಗ ನಾಯಕರಾಗುವುದು ಅದರ ‘ಬಿ’ ಪ್ಲಾನು.
ಯಾವಾಗ ಇದು ಸ್ಪಷ್ಟವಾಯಿತೋ?ಇದಾದ ನಂತರ ಧಿಡೀರನೆ ಎಚ್ಚೆತ್ತ ಯಡಿಯೂರಪ್ಪ ತಾವು ಒಂದು ಪ್ಲಾನು ರೆಡಿ ಮಾಡಿದ್ದಾರೆ.
ಅದರ ಪ್ರಕಾರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಇಲ್ಲವೇ ಮಾಜಿ ಸಚಿವ ಆರ್.ಅಶೋಕ್ ಅವರನ್ನು ತರಬೇಕು.ಅದೇ ರೀತಿ ಶಾಸಕಾಂಗ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂದು ಕೂರುವಂತೆ ಮಾಡಬೇಕು ಎಂಬುದು ಯಡಿಯೂರಪ್ಪ ಪ್ಲಾನು.

ಬೊಮ್ಮಾಯಿ ಈಗ ಅನಿವಾರ್ಯ

ಅಂದ ಹಾಗೆ ಪಕ್ಷದ ಶಾಸಕಾಂಗ ನಾಯಕರಾಗಿ,ಆ ಮೂಲಕ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ಬಸವರಾಜ ಬೊಮ್ಮಾಯಿ ಅವರ ಆಯ್ಕೆ ಆಗುವುದು ಸಹಜ ನ್ಯಾಯ.
ಯಾಕೆಂದರೆ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡು ಅಧಿಕೃತ ವಿರೋಧ ಪಕ್ಷವಾದಾಗ ಮುಖ್ಯಮಂತ್ರಿಗಳಾಗಿದ್ದವರೇ ವಿಪಕ್ಷ ನಾಯಕರಾಗುವುದು ಸಂಪ್ರದಾಯ.
ಇದಕ್ಕೆ ಕಾರಣವೂ ಇದೆ.ಅದೆಂದರೆ ಮುಖ್ಯಮಂತ್ರಿಗಳಾಗಿದ್ದವರಿಗೆ ಸರ್ಕಾರದ ಎಲ್ಲ ಇಲಾಖೆಗಳ ಆಳ-ಅಗಲ ಗೊತ್ತಿರುತ್ತದೆ.ಅದೇ ರೀತಿ ಬಯಸಿದ ಮಾಹಿತಿ ಪಡೆಯಲು ಅವರಿಗೆ ಬೇಕಾದ ಅಧಿಕಾರಿಗಳಿರುತ್ತಾರೆ.
ಇದೇ ಕಾರಣಕ್ಕಾಗಿ ಕರ್ನಾಟಕದ ಇತಿಹಾಸದಲ್ಲಿ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡು ಅಧಿಕೃತ ವಿರೋಧ ಪಕ್ಷವಾದಾಗ ಮುಖ್ಯಮಂತ್ರಿಗಳಾಗಿದ್ದವರೇ ವಿಪಕ್ಷ ನಾಯಕರಾಗಿದ್ದು ಜಾಸ್ತಿ.
2006 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಉರುಳಿ ಬಿದ್ದು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಧರ್ಮಸಿಂಗ್ ಪ್ರತಿಪಕ್ಷ ನಾಯಕರಾಗಿದ್ದರು.
2013 ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಶುರುವಿನಲ್ಲಿ ಜೆಡಿಎಸ್ ನ ಕುಮಾರಸ್ವಾಮಿ,ನಂತರ ಬಿಜೆಪಿಯ ಜಗದೀಶ್ ಶೆಟ್ಟರ್,2018 ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಮೇಲೆದ್ದಾಗ ಬಿಜೆಪಿಯ ಯಡಿಯೂರಪ್ಪ,2019 ರಲ್ಲಿ ಬಿಜೆಪಿ ಸರ್ಕಾರ ಸೆಟ್ಲಾದಾಗ ಸಿದ್ಧರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದರು.
1983 ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಗುಂಡೂರಾಯರು ಸೋಲನುಭವಿಸಿದ್ದರಿಂದ ಜನತಾರಂಗ ಸರ್ಕಾರದ ಎದುರು ಪ್ರತಿಪಕ್ಷ ನಾಯಕರಾಗಲು ಸಾಧ್ಯವಾಗಲಿಲ್ಲ.
1994 ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಾಗ ಅದಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನವೇ ಇರಲಿಲ್ಲ.
ಹಾಗೆ ನೋಡಿದರೆ ಪಕ್ಷ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆದರೂ ವಿಪಕ್ಷ ನಾಯಕ ಸ್ಥಾನದಲ್ಲಿ ಕೂರದ ಮಾಜಿ ಮುಖ್ಯಮಂತ್ರಿ ಎಂದರೆ ರಾಮಕೃಷ್ಣ ಹೆಗಡೆ.
1989 ರಲ್ಲಿ ಜನತಾದಳ ಇಪ್ಪತ್ನಾಲ್ಕು ಸ್ಥಾನ ಗೆದ್ದು ಅಧಿಕೃತ ವಿರೋಧ ಪಕ್ಷವಾದಾಗ,ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹೆಗಡೆ ಸಹಜ ಆಯ್ಕೆಯಾಗಿದ್ದರು.
ಆದರೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಾಟ್ಲಿಂಗ್ ಹಗರಣ,ರೇವಜಿತು ಹಗರಣ,ಟೆಲಿಫೋನ್ ಕದ್ದಾಲಿಕೆ ಹಗರಣಗಳಿಗೆ ಸಿಲುಕಿಕೊಂಡಿದ್ದ ಅವರು,ಇಷ್ಟೆಲ್ಲ ರಗಳೆ ಹೆಗಲ ಮೇಲಿರುವಾಗ ತಾವು ವಿಪಕ್ಷ ನಾಯಕನಾಗಿ ಕೂರುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು.
ಹೀಗಾಗಿ ಅವತ್ತು ಡಿ.ಬಿ.ಚಂದ್ರೇಗೌಡರು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆಯಾದರು.
ಹೀಗೆ ಆಡಳಿತಾರೂಢ ಪಕ್ಷ ಅಧಿಕೃತ ವಿರೋಧ ಪಕ್ಷವಾದಾಗ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮುಖ್ಯಮಂತ್ರಿಗಳಾಗಿದ್ದವರೇ ಬಂದು ಕೂರುವುದು ಪ್ರಾಕ್ಟಿಕಲ್ ಕೂಡಾ.
ಯಾರೇನೇ ಹೇಳಿದರೂ ಇವತ್ತು ಸಿದ್ಧರಾಮಯ್ಯ ಅವರ ಮುಂದೆ ನಿಲ್ಲುವ ಮತ್ತು ಹಣಕಾಸಿನ ವಿಷಯದಲ್ಲಿ ಪವರ್ ಫುಲ್ಲಾಗಿ ಮಾತನಾಡುವ ಶಕ್ತಿ ಅಂತಿದ್ದರೆ ಅದು ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ.
ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಅಜೆಂಡಾ ಹಿಡಿದು ಹೋರಾಡಲು ಒಂದು ರಾಜಕೀಯ ಪಕ್ಷಕ್ಕೆ ಜನತಾ ನ್ಯಾಯಾಲಯ ಸಾಕು,ಆದರೆ ವಿಧಾನಸಭೆಯಲ್ಲಿ ಹೋರಾಡಲು ಅದಕ್ಕೆ ವಿಷಯ ಜ್ಞಾನದ ನೇತೃತ್ವ ಬೇಕೇ ಬೇಕು.
ಆ ದೃಷ್ಟಿಯಿಂದ ಬೊಮ್ಮಾಯಿ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ತರದೆ ಬಿಜೆಪಿ ವರಿಷ್ಟರಿಗೆ ವಿಧಿಯಿಲ್ಲ.ಒಂದು ವೇಳೆ ಹಾಗೆ ಮಾಡದೆ ಬೊಮ್ಮಾಯಿ ಮ್ಯಾಚ್ ಫಿಕ್ಸಿಂಗ್ ಕ್ಯಾಂಡಿಡೇಟು ಅಂತ ವಾದಿಸುವವರ ಪರ ಅದು ನಿಂತರೆ,ಬೇರೊಬ್ಬರನ್ನು ತಂದರೆ ಪರಿಸ್ಥಿತಿ ಕಷ್ಟಕರವಾಗಬಹುದು.

ಶೋಭಾ ಕರಂದ್ಲಾಜೆ ಏಕೆ ಬೇಕು?

ಅಂದ ಹಾಗೆ ಇಂತಹ ಅಂಶಗಳೆಲ್ಲ ಬೊಮ್ಮಾಯಿ ಅವರಿಗೆ ಪ್ಲಸ್ ಆಗುವುದರಿಂದ ಯಡಿಯೂರಪ್ಪ ಅವರಿಗೆ ಹೆಚ್ಚಿನ ಚಿಂತೆ ಇಲ್ಲ.
ಆದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ತರುವ ವಿಷಯದಲ್ಲಿ ಅವರಿಗೆ ಒಂದಿಲ್ಲೊಂದು ಅಡ್ಡಿ ಎದುರಾಗುತ್ತಿದೆ.
ಹಾಗಂತಲೇ ಅವರು ಶಾಂಗ್ರಿಲಾ ಹೋಟೆಲಿನ ಮೀಟಿಂಗಿನಲ್ಲಿ ಕುಳಿತು ವಿಜಯೇಂದ್ರ ಅವರಿಗಿದ್ದ ವಿರೋಧವನ್ನು ನಿವಾರಿಸಿದ್ದಾರೆ.
ಇದಾದ ನಂತರ ದಿಲ್ಲಿಗೆ ಹೋದ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ಚರ್ಚಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ತಂದರೆ ಕರ್ನಾಟಕದಲ್ಲಿ ಒಕ್ಕಲಿಗ ಮತ ಬ್ಯಾಂಕನ್ನು ಕ್ರೋಢೀಕರಿಸುವುದು ಸುಲಭ ಎಂದವರು ಹೇಳಿದ್ದನ್ನು ನಡ್ಡಾ ಕುತೂಹಲದಿಂದ ಕೇಳಿಸಿಕೊಂಡರಂತೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹಳೆ ಮೈಸೂರು ಭಾಗದ ಬಹುತೇಕ ಒಕ್ಕಲಿಗ ಮತದಾರರು ಕಾಂಗ್ರೆಸ್ ಗೆ ಪರ್ಯಾಯವಾದ ಶಕ್ತಿಯನ್ನು ಅರಸುತ್ತಿದ್ದಾರೆ.ಇಂತಹ ಕಾಲದಲ್ಲಿ ಬಿಜೆಪಿ-ಜೆಡಿಎಸ್ ಪರಸ್ಪರ ಕೈಗೂಡಿಸಿದರೆ ಮತ್ತು ಅದೇ ಕಾಲಕ್ಕೆ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಬಿಜೆಪಿಯ ಮುಂಚೂಣಿಯಲ್ಲಿ ನಿಂತಿದ್ದರೆ ಒಕ್ಕಲಿಗ ಮತದಾರರು ಕನ್ ಸಾಲಿಡೇಟ್ ಆಗುತ್ತಾರೆ.
ಕಳೆದ ಚುನಾವಣೆಯಲ್ಲಿ ನಾವು ಜೆಡಿಎಸ್ ಮತ ಬ್ಯಾಂಕನ್ನು ಒಡೆದಿದ್ದರಿಂದ ಅದು ಕಾಂಗ್ರೆಸ್ಸಿಗೆ ಅನುಕೂಲವಾಯಿತು.ಈಗ ಆ ಮತ ಬ್ಯಾಂಕು ಒಗ್ಗೂಡುವಂತೆ ಮಾಡಿದರೆ ನಾವು ಯಶಸ್ಸು ಗಳಿಸುವುದು ಗ್ಯಾರಂಟಿ.
ಇಷ್ಟಾದ ನಂತರ ನೋ ಡೌಟ್,ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾವು ಇಪ್ಪತ್ತಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಅಂತ ಯಡಿಯೂರಪ್ಪ ವಿವರಿಸಿದಾಗ ನಡ್ಡಾ ತಲೆದೂಗಿದರಂತೆ.

ಶೋಭಕ್ಕ ಬಂದ್ರೆ ತಲೆ ಎತ್ತಲಿದೆ ಕೆಜೆಪಿ?

ಯಾವಾಗ ಯಡಿಯೂರಪ್ಪ ದಿಲ್ಲಿಗೆ ಹೋಗಿ ಶೋಭಾ ಕರಂದ್ಲಾಜೆ ಪಕ್ಷಾಧ್ಯಕ್ಷರಾಗಲಿ ಅಂತ ಹೇಳಿ ಬಂದರೋ?ಇದಾದ ನಂತರ ಅವರ ವಿರೋಧಿ ಗ್ಯಾಂಗು ಕುದಿಯತೊಡಗಿದೆ.
ಹಾಗಂತಲೇ ಅದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಸಂದೇಶ ರವಾನಿಸಿ,ಶೋಭಾ ಪಕ್ಷದ ಅಧ್ಯಕ್ಷರಾದರೆ ಕರ್ನಾಟಕದಲ್ಲಿ ಕೆಜೆಪಿ ಮತ್ತೆ ತಲೆ ಎತ್ತಲಿದೆ ಅಂತ ಹೇಳಿದೆಯಂತೆ.
ಮತ್ತೊಮ್ಮೆ ಕೆಜೆಪಿ ತಲೆ ಎತ್ತುವುದು ಎಂದರೆ ಯಡಿಯೂರಪ್ಪ ನಿಷ್ಟರು ಮೇಲೆದ್ದು,ಪಕ್ಷ ನಿಷ್ಟರು ಮೂಲೆಗುಂಪಾಗುವುದು ನಿಶ್ಚಿತ ಅಂತಲೂ ವಿವರಿಸಿದೆಯಂತೆ.
ಎಲ್ಲಕ್ಕಿಂತ ಮುಖ್ಯವಾಗಿ ಶೋಭಾ ಕರಂದ್ಲಾಜೆ ಪಕ್ಷದ ಅಧ್ಯಕ್ಷರಾದರೆ ಬಿಜೆಪಿಗಿಂತ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಪ್ಲಸ್ಸು.ಯಾಕೆಂದರೆ ಇವರಿಬ್ಬರೂ ಕರ್ನಾಟಕದಲ್ಲಿ ಪವರ್ ಮಿನಿ ಸ್ಟರುಗಳಾಗಿದ್ದವರು ಅಂತ ಅದು ಸೂಚ್ಯವಾಗಿ ಹೇಳಿದೆಯಂತೆ.
ಪರಿಣಾಮ?ರಾಜ್ಯ ಬಿಜೆಪಿಯನ್ನು ವಶಪಡಿಸಿಕೊಳ್ಳಲು ಎರಡು ಬಣಗಳು ನಡೆಸಿರುವ ಕದನ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.
ಮುಂದೇನೋ?ಕಾದು ನೋಡಬೇಕು.

ಆರ್.ಟಿ.ವಿಠ್ಠಲಮೂರ್ತಿ

The post ಅವತ್ತು ಶಾಂಗ್ರಿಲಾ ಹೋಟೆಲಿನಲ್ಲಿ ನಡೆದಿದ್ದೇನು? appeared first on Hai Sandur kannada fortnightly news paper.

]]>
https://haisandur.com/2023/07/10/%e0%b2%85%e0%b2%b5%e0%b2%a4%e0%b3%8d%e0%b2%a4%e0%b3%81-%e0%b2%b6%e0%b2%be%e0%b2%82%e0%b2%97%e0%b3%8d%e0%b2%b0%e0%b2%bf%e0%b2%b2%e0%b2%be%e0%b2%b9%e0%b3%8b%e0%b2%9f%e0%b3%86%e0%b2%b2%e0%b2%bf%e0%b2%a8/feed/ 0
ಡಿಕೆಶಿಗೆ ದಿಲ್ಲಿ ಕನಸು ಬೀಳುತ್ತಿದೆ https://haisandur.com/2023/06/26/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf%e0%b2%97%e0%b3%86-%e0%b2%a6%e0%b2%bf%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b2%b8%e0%b3%81-%e0%b2%ac%e0%b3%80%e0%b2%b3/ https://haisandur.com/2023/06/26/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf%e0%b2%97%e0%b3%86-%e0%b2%a6%e0%b2%bf%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b2%b8%e0%b3%81-%e0%b2%ac%e0%b3%80%e0%b2%b3/#respond Mon, 26 Jun 2023 01:28:30 +0000 https://haisandur.com/?p=32663 ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿಲ್ಲಿಯ ಕನಸು ಬೀಳುತ್ತಿದೆಯಂತೆ.ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಅವರಿಗೆ ತಕ್ಷಣವೇ ಮುಖ್ಯಮಂತ್ರಿಯಾಗುವ ಆಸೆ ಇತ್ತು.ಈ ಕಾರಣದಿಂದ ಅವರು ದಿಲ್ಲಿಯಲ್ಲಿ ಕುಳಿತು ಐದು ದಿನ ಕಸರತ್ತು ನಡೆಸಿದರೂ ಅದು ಫಲ ನೀಡಲಿಲ್ಲ.ಹೀಗಾಗಿ ಸೋನಿಯಾಗಾಂಧಿ ಅವರ ಮಾತಿಗೆ ಬಗ್ಗಿದ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡು ಕರ್ನಾಟಕಕ್ಕೆ ಮರಳಿದರು.ಹೀಗೆ ಮರಳಿದ ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಡಿಸಿಎಂ ಆಗಿ ಕುಳಿತಿದ್ದಾರಾದರೂ ಸಿಎಂ ಹುದ್ದೆಯ ಮೇಲಿರುವ ಅವರ ಕನಸು ದಷ್ಟಪುಷ್ಟವಾಗಿಯೇ ಉಳಿದಿದೆ.ಆದರೆ ಅದು ಮುಂದಿನ ದಿನಗಳಲ್ಲಿ ಈಡೇರಬೇಕಿರುವ […]

The post ಡಿಕೆಶಿಗೆ ದಿಲ್ಲಿ ಕನಸು ಬೀಳುತ್ತಿದೆ appeared first on Hai Sandur kannada fortnightly news paper.

]]>
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿಲ್ಲಿಯ ಕನಸು ಬೀಳುತ್ತಿದೆಯಂತೆ.
ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಅವರಿಗೆ ತಕ್ಷಣವೇ ಮುಖ್ಯಮಂತ್ರಿಯಾಗುವ ಆಸೆ ಇತ್ತು.
ಈ ಕಾರಣದಿಂದ ಅವರು ದಿಲ್ಲಿಯಲ್ಲಿ ಕುಳಿತು ಐದು ದಿನ ಕಸರತ್ತು ನಡೆಸಿದರೂ ಅದು ಫಲ ನೀಡಲಿಲ್ಲ.
ಹೀಗಾಗಿ ಸೋನಿಯಾಗಾಂಧಿ ಅವರ ಮಾತಿಗೆ ಬಗ್ಗಿದ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡು ಕರ್ನಾಟಕಕ್ಕೆ ಮರಳಿದರು.
ಹೀಗೆ ಮರಳಿದ ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಡಿಸಿಎಂ ಆಗಿ ಕುಳಿತಿದ್ದಾರಾದರೂ ಸಿಎಂ ಹುದ್ದೆಯ ಮೇಲಿರುವ ಅವರ ಕನಸು ದಷ್ಟಪುಷ್ಟವಾಗಿಯೇ ಉಳಿದಿದೆ.
ಆದರೆ ಅದು ಮುಂದಿನ ದಿನಗಳಲ್ಲಿ ಈಡೇರಬೇಕಿರುವ ಮಾತು.ಹೀಗಾಗಿ ರಾಜ್ಯದಲ್ಲಿ ಯಾರು ಏನೇ ಮಾತನಾಡಿದರೂ ಡಿ.ಕೆ.ಶಿವಕುಮಾರ್ ಮೌನ ವಹಿಸುತ್ತಾರೆ.ಮುಂಚೆಲ್ಲ ಒಂದು ಮಾತು ಬಂದರೆ ಸಟ್ಟಂತ ಪ್ರತಿಕ್ರಿಯಿಸುತ್ತಿದ್ದ ಅವರು ಈಗ ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುತ್ತಾರೆ.ಅವರು ಪಕ್ವ ನಾಯಕರಾಗುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ತೀರಾ ಇತ್ತೀಚೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು,ಕರ್ನಾಟಕದಲ್ಲಿ ಮುಂದಿನ ಐದು ವರ್ಷಗಳ ಕಾಲ ನಾಯಕತ್ವ ಬದಲಾವಣೆಯಿಲ್ಲ ಎಂಬರ್ಥದಲ್ಲಿ ಮಾತನಾಡಿದರು.
ಅವರ ಈ ಮಾತಿನಿಂದ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಕೆರಳಿದ್ದರು.ಆದರೆ ಡಿಕೆಶಿ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸಲು ಹೋಗಲಿಲ್ಲ.ಯಾಕೆ ಅಂತ ಎಲ್ಲರೂ ಅಚ್ಚರಿಪಡುತ್ತಿರುವಾಗಲೇ ಬೆಂಗಳೂರಿನ ಸದಾಶಿವನಗರದಲ್ಲಿ ನೆಲೆಯಾಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರ ಮಧ್ಯಸ್ಥಿಕೆಯಲ್ಲಿ ಡಿಕೆಶಿ ಮತ್ತು ಎಂ.ಬಿ.ಪಾಟೀಲರ ಡಿನ್ನರಿಗೆ ಡೇಟು ಫಿಕ್ಸಾಗಿದೆ ಎಂಬ ವರ್ತಮಾನ ಹರಿದಾಡುತ್ತಿದೆ.
ಅರ್ಥಾತ್,ತಮಗೆ ಯಾವ ಮೂಲಗಳಿಂದ ವಿರೋಧ ವ್ಯಕ್ತವಾಗಬಹುದು ಎಂಬುದನ್ನು ಗಮನಿಸುತ್ತಿರುವ ಡಿಕೆಶಿ ಸೈಲೆಂಟಾಗಿ ಅದನ್ನು ಸರಿಮಾಡಿಕೊಳ್ಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವ ತಮ್ಮ ಕನಸಿಗೆ ಯಾವ ಅಡ್ಡಿಗಳು ಎದುರಾಗಬಾರದು ಎಂಬುದು ಡಿಕೆಶಿ ಯೋಚನೆ.ಅದೇ ಕಾಲಕ್ಕೆ ಅವರಿಗೆ ಒಂದಿಲ್ಲೊಂದು ದಿನ ರಾಷ್ಟ್ರ ರಾಜಕಾರಣಕ್ಕೇಕೆ ಹೋಗಬಾರದು ಎಂಬ ಯೋಚನೆ ಮೊಳೆತಿದೆಯಂತೆ.ಅಂದ ಹಾಗೆ ಮುಖ್ಯಮಂತ್ರಿಯಾಗುವುದು ಒಂದು ಗುರಿ.ಆದರೆ ಗುರಿ ಇಷ್ಟಕ್ಕೆ ಸೀಮಿತವಾಗಬಾರದಲ್ಲ?ಹೀಗಾಗಿ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟೇ ದಿಲ್ಲಿಯ ಮೇಲೂ ಅವರು ಕಣ್ಣು ಹಾಯಿಸುತ್ತಿದ್ದಾರೆ.
ಆದರೆ ಕಣ್ಣು ಹಾಯಿಸಬೇಕೆಂದರೆ ಅದಕ್ಕೆ ಒಂದು ಶಕ್ತಿಯಾದರೂ ಇರಬೇಕಲ್ಲ?ಹೀಗಾಗಿ ಅವರು ತಮ್ಮ ಕನಸಿನ ಬೆಂಗಳೂರು ಬ್ರಾಂಡ್ ಅನ್ನು ದೊಡ್ಡ ಮಟ್ಟದಲ್ಲಿ ಎಮರ್ಜ್ ಮಾಡಿ ಅರ್ಥವ್ಯವಸ್ಥೆಯ ಹೀರೋ ಅನ್ನಿಸಿಕೊಳ್ಳಲು,ಆ ಮೂಲಕ ದೇಶದ ಗಮನ ಸೆಳೆಯಲು ಬಯಸಿದ್ದಾರೆ.
ಆ ದೃಷ್ಟಿಯಿಂದ ಈಗವರ ಗಮನ ತೆಲಂಗಾಣದ ಮಂತ್ರಿ ಕೆ.ಟಿ.ಆರ್ ಮೇಲೆ ಬಿದ್ದಿದೆ.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಪುತ್ರ ಕಲ್ವಕುಂಟ್ಲ ತಾರಕ ರಾಮರಾವ್ ಅವರೇ ಈ ಕೆ.ಟಿ.ಆರ್.
ಇವತ್ತು ಭಾರತದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿರುವ ಉದ್ಯಮಿಗಳಿಗೆ ತಾರಕರಾಮರಾವ್ ಅಚ್ಚುಮೆಚ್ಚಿನ ವ್ಯಕ್ತಿ.ಅವರು ರೂಪಿಸುತ್ತಿರುವ ನೀತಿಗಳು ಅಮೆಜಾನ್ ಸೇರಿದಂತೆ ಜಾಗತಿಕ ಮಟ್ಟದ ದೊಡ್ಡ ದೊಡ್ಡ ಕಂಪನಿಗಳಿಗೆ ಪ್ರಿಯವಾಗಿವೆಯಷ್ಟೇ ಅಲ್ಲ.ದೊಡ್ಡ ಪ್ರಮಾಣದ ಬಂಡವಾಳ ತೆಲಂಗಾಣದತ್ತ ಹರಿದು ಬರುವಂತೆ ಮಾಡುತ್ತಿದೆ.
ಸಹಜವಾಗಿಯೇ ಇದು ಡಿ.ಕೆ.ಶಿವಕುಮಾರ್ ಅವರ ಕಣ್ಣರಳುವಂತೆ ಮಾಡಿದೆ.ಮುಂದಿನ ದಿನಗಳಲ್ಲಿ ಕೆ.ಟಿ.ಆರ್ ತರ ಕರ್ನಾಟಕಕ್ಕೆ ಬಂಡವಾಳ ಹರಿದು ಬರುವಂತೆ ಮಾಡಿದರೆ ತಮ್ಮ ಇಮೇಜೇ ಚೇಂಜ್ ಆಗಿಬಿಡುತ್ತದೆ ಎಂಬುದು ಡಿಕೆಶಿ ಲೆಕ್ಕಾಚಾರ.
ಇವತ್ತು ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ಇದೇ ಕೆಲಸ ಮಾಡಿ ಗುಜರಾತ್ ಮಾಡೆಲ್ ಅನ್ನು ಸೃಷ್ಟಿಸಿದರು.ಮತ್ತಿದರ ಪರಿಣಾಮವಾಗಿಯೇ ಅಹಮದಾಬಾದ್ ಟು ದಿಲ್ಲಿ ವಿಮಾನ ಹತ್ತಿದರು.
ಎಷ್ಟೇ ಆದರೂ ಮೋದಿ-ಅಮಿತ್ ಷಾ ಜೋಡಿ ತಮಗೆ ತಿಹಾರ್ ಜೈಲು ತೋರಿಸಿತ್ತಲ್ಲವೇ?ನಾಳೆ ಈ ಜೋಡಿಯ ಕಣ್ಣ‌ ಮುಂದೆಯೇ ರಾಷ್ಟ್ರ ರಾಜಕಾರಣದಲ್ಲಿ ತಲೆ ಎತ್ತಿ ನಿಲ್ಲಬೇಕು ಎಂಬುದು ಡಿಕೆಶಿ ಕನಸು.
ಇಂತಹ ಕನಸು ಕಾಣುತ್ತಿರುವ ಅವರಿಗೆ ಬೆಂಗಳೂರು ಬ್ರಾಂಡ್ ನ ಕನಸು ಮಾತ್ರವಲ್ಲ,ರಾಷ್ಟ್ರದಲ್ಲಿ ಕಾಂಗ್ರೆಸ್ ತೊರೆದಿರುವ ನಾಯಕರನ್ನು ಮರಳಿ ಕೈ ಪಾಳಯಕ್ಕೆ ಸೆಳೆಯುವ ಕನಸೂ ಬಿದ್ದಿದೆ.
ಹೀಗಾಗಿ ಸೀಮಾಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ,ತೆಲಂಗಾಣದಲ್ಲಿ ಬೀದಿ ಕಾಳಗ ನಡೆಸುತ್ತಿರುವ ಶರ್ಮಿಳಾರೆಡ್ಡಿ ಸೇರಿದಂತೆ ಹಲವರ ಜತೆ ಸಂಪರ್ಕದಲ್ಲಿರುವ ಡಿಕೆಶಿ,’ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿತ್ರ ಬದಲಾಗಲಿದೆ.ಇಂತಹ ಟೈಮಿನಲ್ಲಿ ನೀವು ಕಾಂಗ್ರೆಸ್ ನಲ್ಲಿರುವುದು ಒಳ್ಳೆಯದು’ ಅಂತ ಹೇಳಿದ್ದಾರೆ.
ಅವರ ಈ ಪ್ರಯತ್ನಗಳು ಎಷ್ಟರ ಮಟ್ಟಿಗೆ ಈಡೇರುತ್ತವೆ ಎಂಬುದು ಬೇರೆ ವಿಷಯ.ಆದರೆ ಅವರ ಇಂತಹ ಪ್ರಯತ್ನಗಳು ನಿಶ್ಚಿತವಾಗಿ ಅವರ ಇಮೇಜ್ ಅನ್ನು ಹೆಚ್ಚಿಸಲಿವೆ.

ಇವರಿಗೀಗ ಡಿಕೆಶಿ ರೋಲ್ ಮಾಡೆಲ್

ಹೀಗೆ ಕರ್ನಾಟಕದಿಂದ ಹಿಡಿದು ದಿಲ್ಲಿಯವರೆಗೆ ತಮ್ಮ ಪವರ್ ಹೆಚ್ಚಬೇಕು ಅಂತ ಡಿಕೆಶಿ ಬಯಸುತ್ತಿದ್ದರೆ,ಅವರನ್ನು ರೋಲ್ ಮಾಡೆಲ್ ಅಂತ ಭಾವಿಸುತ್ತಿರುವ ಒಂದು ಟೀಮು ದೇಶದಲ್ಲಿ ಕಾಣಿಸಿಕೊಂಡಿದೆ.
ಇದರಲ್ಲಿ ಅಮ್ ಆದ್ಮಿ ಪಕ್ಷದ ಮನಿಶ್ ಸಿಸೋಡಿಯಾ ಅವರಿಂದ ಹಿಡಿದು ತಮಿಳ್ನಾಡಿನ ಸಚಿವರಾಗಿದ್ದ ಸೆಂಥಿಲ್ ತನಕ ನಾಯಕರ ಒಂದು ದಂಡೇ ಇದೆ.
ಇಂತಹ ಬಹುತೇಕ ನಾಯಕರಿಗೀಗ ಡಿ.ಕೆ.ಶಿವಕುಮಾರ್ ಅವರೇ ಆದರ್ಶ ನಾಯಕ.
ಆಂಧ್ರದ ಖ್ಯಾತ ರಾಜಕೀಯ ವಿಶ್ಲೇಷಕ ಫ್ರೊ.ನಾಗೇಶ್ವರ್ ಅವರ ಪ್ರಕಾರ:ಇಂತಹ ಬೆಳವಣಿಗೆಗೆ ಡಿ.ಕೆ.ಶಿವಕುಮಾರ್ ಅವರು ಐಟಿ,ಇಡಿ,ಸಿಬಿಐ ಅನ್ನು ಎದುರಿಸಿದ ರೀತಿಯೇ ಕಾರಣ.
ಮಹಾರಾಷ್ಟ್ರದ ಎನ್.ಸಿ.ಪಿ ನಾಯಕ ಶರದ್ ಪವಾರ್ ಅವರು ತಮ್ಮ ಪುಸ್ತಕದಲ್ಲಿ ಒಂದು ಮಾತು ಬರೆಯುತ್ತಾರೆ.ದೇಶದಲ್ಲಿ ಇವತ್ತು ಪ್ರತಿಪಕ್ಷಗಳಲ್ಲಿರುವ ನಾಯಕರಿಗೆ ದಪ್ಪ ಚರ್ಮ ಮತ್ತು ತಾಳ್ಮೆ ಇರಬೇಕು ಎಂಬುದು ಈ ಮಾತು.ಅವರ ಈ ಮಾತನ್ನು ಉದಾಹರಿಸುವ ಫ್ರೊ.ನಾಗೇಶ್ವರ್,ದೇಶದಲ್ಲಿ ಇದಕ್ಕೆ ಸೂಕ್ತ ಉದಾಹರಣೆ ಅಂತಿದ್ದರೆ ಅದು ಡಿ.ಕೆ.ಶಿವಕುಮಾರ್ ಎನ್ನುತ್ತಾರೆ.
ಇವತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಹಿಡಿತದಲ್ಲಿರುವ ತನಿಖಾ ಸಂಸ್ಥೆಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಳ್ಳುತ್ತಿದೆ.ಮತ್ತು ಇದೇ ಕಾರಣಕ್ಕಾಗಿ ಈ ತನಿಖಾ ಸಂಸ್ಥೆಗಳ ಶಕ್ತಿ ಕಡಿಮೆಯಾಗುತ್ತಿದೆ.
ಕಾರಣ?ಇಂತಹ ತನಿಖಾ ಸಂಸ್ಥೆಗಳ ಹೊಡೆತ ಅತಿಯಾದರೆ ಅದನ್ನು ಎದುರಿಸುವ ಶಕ್ತಿಯೂ ನಾಯಕರಲ್ಲಿ ಹೆಚ್ಚುತ್ತದೆ.
ಹೀಗೆ ದಿನ ಕಳೆದಂತೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಡಿ.ಕೆ.ಶಿವಕುಮಾರ್ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ಎದುರಿಸುತ್ತಾ ಬಂದಿದ್ದಾರೆ.
ಹಾಗೆ ನೋಡಿದರೆ ಈ ತನಿಖಾ ಸಂಸ್ಥೆಗಳನ್ನು ಎದುರಿಸುವ ವಿಷಯದಲ್ಲಿ ಅವರಿರುವ ಕಾಂಗ್ರೆಸ್ ಪಕ್ಷ ಹೆಚ್ಚಿನ ನೆರವು ನೀಡುವ ಸ್ಥಿತಿಯಲ್ಲಿಲ್ಲ.
ಇಂತಹ ಸಂದರ್ಭದಲ್ಲಿ ತಮಗೆ ಬಂದ ಆಮಿಷಗಳನ್ನು ಡಿಕೆಶಿ ಒಪ್ಪಿಕೊಂಡಿದ್ದರೆ ಅವರು ತುಂಬ ದಿನಗಳ ಹಿಂದೆಯೇ ದೊಡ್ಡ ದೊಡ್ಡ ಲಾಭ ಪಡೆಯಬಹುದಿತ್ತು.ಆದರೆ ಅದ್ಯಾವುದನ್ನೂ ಲೆಕ್ಕಿಸದೆ ಅವರು ಕೇಂದ್ರದ ತನಿಖಾ ಸಂಸ್ಥೆಗಳನ್ನು ಎದುರಿಸಿದರು.ಜೈಲಿಗೂ ಹೋಗಿ ಬಂದರು.
ಆದರೆ ಹೀಗೆ ಹೋಗಿ ಬಂದ ಡಿಕೆಶಿ, ನಂತರ ಕರ್ನಾಟಕದ ರಾಜಕೀಯ ನಕಾಶೆ ಬದಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಹೀಗಾಗಿ ಡಿಕೆಶಿ ಇದನ್ನು ಹೇಗೆ ಸಾಧಿಸಿದರು?ಕೇಂದ್ರದ ತನಿಖಾ ಸಂಸ್ಥೆಗಳನ್ನು ಅವರು ಎದುರಿಸಿದ್ದು ಹೇಗೆ?ದೊಡ್ಡ ಉದ್ಯಮಿಯಾಗಿರುವ ಅವರನ್ನು ಒಂದಿಲ್ಲೊಂದು ಕಾರಣಕ್ಕೆ ಖೆಡ್ಡಾಗೆ ಕೆಡವಬಹುದಾಗಿದ್ದರೂ ಕೇಂದ್ರ ಸರ್ಕಾರವೇ ಯಾಕೆ ತಣ್ಣಗೆ ಕುಳಿತಿದೆ?ಎಂಬುದೆಲ್ಲ ಐಟಿ,ಇಡಿ ರೈಡಿಗೊಳಗಾದವರಿಗೆ ಪಾಠದಂತೆ ಕಾಣಿಸತೊಡಗಿದೆ ಎಂಬುದು ಫ್ರೊ.ನಾಗೇಶ್ವರ್ ಅವರ ಮಾತು.
ಅಷ್ಟೇ ಅಲ್ಲ, ಮಳೆ-ಗಾಳಿ ಬಂದರೆ ಧೈರ್ಯಕ್ಕಾಗಿ ಅರ್ಜುನ,ಅರ್ಜುನ,ಅರ್ಜುನ ಅಂತ ನಾಮಸ್ಮರಣೆ ಮಾಡುವ ಒಂದು ರೂಢಿ ಇದೆ.
ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ,ಇವತ್ತು ಐಟಿ,ಇಡಿ ರೈಡಿಗೊಳಗಾದವರು ತಮಗೆ ಪ್ರೇರಣೆ,ಧೈರ್ಯ ಸಿಗಬೇಕು ಎಂದರೆ ಶಿವಕುಮಾರ,ಶಿವಕುಮಾರ,ಶಿವಕುಮಾರ ಎಂದು ನಾಮಸ್ಮರಣೆ ಮಾಡುವ ಪರಿಸ್ಥಿತಿ ಇದೆ ಅಂತ ಅವರು ಹೇಳುತ್ತಾರೆ.
ಅರ್ಥಾತ್,ದಿನ ಕಳೆದಂತೆ ಡಿಕೆಶಿಯ ಇಮೇಜ್ ದೇಶದ ಇತರ ಭಾಗಗಳಲ್ಲೂ ಬೆಳೆಯತೊಡಗಿದೆ.ಆದರೆ ಅಧಿಕಾರ ರಾಜಕಾರಣದಲ್ಲಿ ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೋ ಕಾದು ನೋಡಬೇಕು.

ಡಿಕೆ ಸಾಮ್ರಾಜ್ಯದ ವಿರುದ್ಧ ಹೆಚ್.ಡಿ.ಕೆ?

ಈ ಮಧ್ಯೆ ಬೆಳೆದು ನಿಂತಿರುವ ಡಿಕೆಶಿ ಸಾಮ್ರಾಜ್ಯದ ವಿರುದ್ಧ ಹೊಸ ಮೈತ್ರಿಯೊಂದು ಎದ್ದು ನಿಲ್ಲಲಿದೆ.
ಮಾಜಿ ಮುಖ್ಯಮಂತ್ರಿ,ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯಲ್ಲಿರುವ ಸಿ.ಪಿ.ಯೋಗೀಶ್ವರ್ ಅವರ ಜೋಡಿಯದೇ ಈ ಮೈತ್ರಿ.
ಅಂದ ಹಾಗೆ ತಾವು ಪರಸ್ಪರ ವಿರೋಧಿಗಳಾಗಿದ್ದರೆ ಡಿಕೆಶಿಗೆ ಲಾಭ ಎಂಬುದು ಕುಮಾರಸ್ವಾಮಿ,ಯೋಗೀಶ್ವರ್ ಅವ ರಿಬ್ಬರಿಗೂ ಅರ್ಥವಾಗಿದೆ.
ಈ ಮಧ್ಯೆ ರಾಜಕಾರಣದ ಅನಿವಾರ್ಯತೆಗಳು ಹೇಗೆ ಎಮರ್ಜ್ ಆಗುತ್ತಿವೆ ಎಂದರೆ ಕುಮಾರಸ್ವಾಮಿ ಅವರೀಗ ಬಿಜೆಪಿ ನೇತೃತ್ವದ ಎನ್.ಡಿ.ಎ ಜತೆ ಕೈ ಜೋಡಿಸುವ ಮನ:ಸ್ಥಿತಿಯಲ್ಲಿದ್ದಾರೆ.
ಹೀಗೆ ಅವರು ಕೈ ಜೋಡಿಸಿದರೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹೊಸ ರಾಜಕೀಯ ಸಮೀಕರಣವೊಂದು ರೂಪುಗೊಳ್ಳುತ್ತದೆ.
ಹಾಗಾದಾಗ ಕುಮಾರಸ್ವಾಮಿ ಅವರು ರಾಜ್ಯಸಭೆಗೆ ಇಲ್ಲವೇ ಲೋಕಸಭೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಲಿದ್ದಾರೆ
ಈ ಸಂದರ್ಭದಲ್ಲಿ ರಾಜ್ಯಸಭೆಗಿಂತ ಲೋಕಸಭೆಗೆ ಸ್ಪರ್ಧಿಸುವುದು,ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತ ಎಂಬುದು ಯೋಗೀಶ್ವರ್ ಲೆಕ್ಕಾಚಾರ.
ಅಂದ ಹಾಗೆ ಇವತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಡಿಕೆಶಿ ಸಹೋದರ,ಕಾಂಗ್ರೆಸ್ ನ ಡಿ.ಕೆ.ಸುರೇಶ್ ಪ್ರತಿನಿಧಿಸುತ್ತಿದ್ದಾರೆ.
ಹೀಗಾಗಿ ಅವರ ವಿರುದ್ಧ ಕುಮಾರಸ್ವಾಮಿ ಸ್ಪರ್ಧಿಸಿದರೆ ನಿಶ್ಚಿತವಾಗಿಯೂ ಆಟ ಹಾಕಬಹುದು ಎಂಬುದು ಯೋಗಿ ಲೆಕ್ಕಾಚಾರ.
ಗಮನಿಸಬೇಕಾದ ಸಂಗತಿ ಎಂದರೆ ಕುಮಾರಸ್ವಾಮಿ ಅವರಿಗೆ ಇನ್ನೂ ಅರಗಿಸಿಕೊಳ್ಳಲಾಗದ ವಿಷಯವೆಂದರೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಅನುಭವಿಸಿದ ಸೋಲು.
ಪುತ್ರನ ಈ ಸೋಲಿನ ಹಿಂದೆ ಡಿ.ಕೆ.ಸುರೇಶ್ ಕರಾಮತ್ತು ಇದೆ ಎಂಬುದು ಕುಮಾರಸ್ವಾಮಿ ಅವರ ಅನುಮಾನ.ಹೀಗಾಗಿ ಮಗನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಡಿ.ಕೆ.ಸುರೇಶ್ ವಿರುದ್ದ ಕಣಕ್ಕಿಳಿಯುವ ಯೋಚನೆ ಅವರಲ್ಲೂ‌ ಇದೆ.
ಒಂದು ವೇಳೆ ಇದು ಸಾಧ್ಯವಾದರೆ ಡಿಕೆಶಿ ಸಾಮ್ರಾಜ್ಯ ಅಲುಗಾಡುವುದು ನಿಶ್ಚಿತ.ಅದೇ ರೀತಿ ಕುಮಾರಸ್ವಾಮಿ ದಿಲ್ಲಿಗೆ ಹೋದರೆ ಚನ್ನಪಟ್ಟಣದಿಂದ ತಾವು ವಿಧಾನಸಭೆಗೆ ಆರಿಸಿ ಬರಬಹುದು ಎಂಬುದು ಯೋಗಿ ಲೆಕ್ಕಾಚಾರ.
ಕುತೂಹಲದ ಸಂಗತಿ ಎಂದರೆ ಯೋಗೀಶ್ವರ್ ಇಂತಹ ಲೆಕ್ಕಾಚಾರ ಹಾಕುತ್ತಿರುವ ಕಾಲದಲ್ಲೇ ಡಿ.ಕೆ.ಸುರೇಶ್,’ನಂಗಿನ್ನು ಚುನಾವಣೆ ಬೇಡ’ ಅಂತ ವೈರಾಗ್ಯದ ಮಾತನಾಡುತ್ತಿದ್ದಾರೆ.
ಅವರ ವೈರಾಗ್ಯಕ್ಕೂ,ಯೋಗಿ ಲೆಕ್ಕಾಚಾರ ಹರಳುಗಟ್ಟುತ್ತಿರುವುದಕ್ಕೂ ಸಂಬಂಧ ಇದೆಯೇ?ಎಂಬುದು ಸಧ್ಯದ ಕುತೂಹಲ.

ಆರ್.ಟಿ.ವಿಠ್ಠಲಮೂರ್ತಿ

The post ಡಿಕೆಶಿಗೆ ದಿಲ್ಲಿ ಕನಸು ಬೀಳುತ್ತಿದೆ appeared first on Hai Sandur kannada fortnightly news paper.

]]>
https://haisandur.com/2023/06/26/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf%e0%b2%97%e0%b3%86-%e0%b2%a6%e0%b2%bf%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b2%b8%e0%b3%81-%e0%b2%ac%e0%b3%80%e0%b2%b3/feed/ 0
ಮಂತ್ರಿ ಎಂ. ಬಿ. ಪಾಟೀಲ್ ಅವರಿಗೇಕೆ ಸಿಟ್ಟು ಬಂತು? https://haisandur.com/2023/06/12/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%bf-%e0%b2%8e%e0%b2%82-%e0%b2%ac%e0%b2%bf-%e0%b2%aa%e0%b2%be%e0%b2%9f%e0%b3%80%e0%b2%b2%e0%b3%8d%e0%b2%85%e0%b2%b5%e0%b2%b0%e0%b2%bf%e0%b2%97/ https://haisandur.com/2023/06/12/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%bf-%e0%b2%8e%e0%b2%82-%e0%b2%ac%e0%b2%bf-%e0%b2%aa%e0%b2%be%e0%b2%9f%e0%b3%80%e0%b2%b2%e0%b3%8d%e0%b2%85%e0%b2%b5%e0%b2%b0%e0%b2%bf%e0%b2%97/#respond Mon, 12 Jun 2023 09:06:41 +0000 https://haisandur.com/?p=32567 ಕಳೆದ ವಾರ ಸಿಂಗಾಪುರಕ್ಕೆ ಹೋಗಿದ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಅಚ್ಚರಿಯ ಸಂದೇಶ ಕಾದಿತ್ತಂತೆ.ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಕೆಎಐಡಿಬಿಗೆ ಮುಖ್ಯಮಂತ್ರಿಗಳು ಮಹೇಶ್ ಎಂಬ ಅಧಿಕಾರಿಯನ್ನು ತಂದು ಕೂರಿಸಿದ್ದಾರೆ ಎಂಬುದು ಈ ಸಂದೇಶ.ಅಂದ ಹಾಗೆ ಕೆಎಐಡಿಬಿಗೆ ತುಮಕೂರು ಜಿಲ್ಲಾಧಿಕಾರಿಯಾಗಿದ್ದ ವೈ.ಎಸ್.ಪಾಟೀಲರನ್ನು ಕರೆಸಿಕೊಳ್ಳಬೇಕು ಎಂಬ ಇಚ್ಚೆ ಎಂ.ಬಿ.ಪಾಟೀಲ್ ಅವರಿಗಿತ್ತು.ಹಾಗಂತ ಮಂತ್ರಿಯಾದ ಶುರುವಿನಲ್ಲೇ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದರು.ಆದರೆ ತಾವು ಸಿಂಗಾಪುರಕ್ಕೆ ಬಂದ ಟೈಮು ನೋಡಿ ಮಹೇಶ್ ಎಂಬ ಅಧಿಕಾರಿಯನ್ನು ತಂದುಕೂರಿಸಿದ ಬೆಳವಣಿಗೆ ಎಂ.ಬಿ.ಪಾಟೀಲರ ಆಕ್ರೋಶಕ್ಕೆ ಕಾರಣವಾಗಿದೆ.ಹಾಗಂತಲೇ ಅವರು […]

The post ಮಂತ್ರಿ ಎಂ. ಬಿ. ಪಾಟೀಲ್ ಅವರಿಗೇಕೆ ಸಿಟ್ಟು ಬಂತು? appeared first on Hai Sandur kannada fortnightly news paper.

]]>
ಕಳೆದ ವಾರ ಸಿಂಗಾಪುರಕ್ಕೆ ಹೋಗಿದ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಅಚ್ಚರಿಯ ಸಂದೇಶ ಕಾದಿತ್ತಂತೆ.
ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಕೆಎಐಡಿಬಿಗೆ ಮುಖ್ಯಮಂತ್ರಿಗಳು ಮಹೇಶ್ ಎಂಬ ಅಧಿಕಾರಿಯನ್ನು ತಂದು ಕೂರಿಸಿದ್ದಾರೆ ಎಂಬುದು ಈ ಸಂದೇಶ.
ಅಂದ ಹಾಗೆ ಕೆಎಐಡಿಬಿಗೆ ತುಮಕೂರು ಜಿಲ್ಲಾಧಿಕಾರಿಯಾಗಿದ್ದ ವೈ.ಎಸ್.ಪಾಟೀಲರನ್ನು ಕರೆಸಿಕೊಳ್ಳಬೇಕು ಎಂಬ ಇಚ್ಚೆ ಎಂ.ಬಿ.ಪಾಟೀಲ್ ಅವರಿಗಿತ್ತು.ಹಾಗಂತ ಮಂತ್ರಿಯಾದ ಶುರುವಿನಲ್ಲೇ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದರು.
ಆದರೆ ತಾವು ಸಿಂಗಾಪುರಕ್ಕೆ ಬಂದ ಟೈಮು ನೋಡಿ ಮಹೇಶ್ ಎಂಬ ಅಧಿಕಾರಿಯನ್ನು ತಂದುಕೂರಿಸಿದ ಬೆಳವಣಿಗೆ ಎಂ.ಬಿ.ಪಾಟೀಲರ ಆಕ್ರೋಶಕ್ಕೆ ಕಾರಣವಾಗಿದೆ.ಹಾಗಂತಲೇ ಅವರು ವಿಚಾರಿಸಿ ನೋಡಿದರೆ,ಇದರ ಹಿಂದೆ ಸಿದ್ಧರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ ಕೈವಾಡವಿರುವುದು ಅವರ ಗಮನಕ್ಕೆ ಬಂದಿದೆ.
ಹೀಗಾಗಿ ಕೆರಳಿರುವ ಎಂ.ಬಿ.ಪಾಟೀಲ್ ಸಿಂಗಾಪೂರದಿಂದಲೇ ಫೋನಾಯಿಸಿ,ಯಾವ ಕಾರಣಕ್ಕೂ ಚಾರ್ಜ್ ತೆಗೆದುಕೊಳ್ಳಬೇಡಿ ಎಂದು ಮಹೇಶ್ ಅವರಿಗೆ ಹೇಳಿದರಂತೆ.
ಕುತೂಹಲದ ಸಂಗತಿ ಎಂದರೆ ಕೆಎಐಡಿಬಿಯಲ್ಲಿ ತಮಗೆ ಬೇಕಾದ ಅಧಿಕಾರಿಗಳೇ ಇರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದ ಎಂ.ಬಿ.ಪಾಟೀಲ್ ಕೆಲ ದಿನಗಳ ಹಿಂದೆ ಅಲ್ಲಿದ್ದ ಗಂಗಾಧರಯ್ಯ ಅವರನ್ನು ಎತ್ತಂಗಡಿ ಮಾಡಿ ದೊಡ್ಡಬಸವರಾಜು ಎಂಬುವವರನ್ನು ತರಲು ಬಯಸಿದರು.
ಆದರೆ ಅಷ್ಟರಲ್ಲಾಗಲೇ ಸಿಎಂ ಆಪ್ತರೊಬ್ಬರು ಗಂಗಾಧರಯ್ಯ ಕೆಎಐಡಿಬಿಯಲ್ಲೇ ಇರಲಿ,ಇದು ಸಿಎಂ ಸೂಚನೆ ಎಂದರಂತೆ.ಈ ವಿಷಯ ಗೊತ್ತಾದ ನಂತರ ವಿಸ್ಮಿತರಾದ ಎಂ.ಬಿ.ಪಾಟೀಲ್ ವಿಚಾರಿಸಿ ನೋಡಿದರೆ,ಸಿಎಂ ಅಂತಹ ಸೂಚನೆ ನೀಡಿಲ್ಲ ಎಂಬುದು ಗಮನಕ್ಕೆ ಬಂದಿದೆ.ಹೀಗಾಗಿ ಅಲರ್ಟ್ ಆದ ಅವರು ತಮ್ಮಿಚ್ಚೆಯಂತೆ ದೊಡ್ಡ ಬಸವರಾಜು ಅವರನ್ನು ತಂದು ಕೂರಿಸಿದ್ದಾರೆ.
ಹೀಗೆ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಸಿಎಂ ಎಸ್ಟಾಬ್ಲಿಷ್ ಮೆಂಟಿನಿಂದ ಬರುತ್ತಿರುವ ಅಡ್ಡಿ ಸಹಜವಾಗಿಯೇ ಪಾಟೀಲರ ಇರುಸುಮುರಿಸಿಗೆ ಕಾರಣವಾಗಿದೆ.

ಡಿಕೆಶಿ ಸಿಟ್ಟಾಗಿದ್ದು ಏಕೆ?

ಇದೇ ರೀತಿ ಬೆಂಗಳೂರು ನಗರಾಬಿವೃದ್ಧಿಯ ವ್ಯಾಪ್ತಿಗೆ ಬರುವ ಬಿಡಿಎಗೆ ಖಾನುಂ ಎಂಬ ಅಧಿಕಾರಿಯನ್ನು ಸೆಕ್ರೆಟರಿಯಾಗಿ ನೇಮಿಸಿ ಸಿಎಂ ಸಿದ್ಧರಾಮಯ್ಯ ಆದೇಶ ಹೊರಡಿಸಿದ್ದರಂತೆ.
ಆದರೆ ತಮ್ಮ ನಿಯಂತ್ರಣದಲ್ಲಿರುವ ಇಲಾಖೆಯಲ್ಲಿ ಸಿಎಂ ಕೈ ಹಾಕಿದ ಬೆಳವಣಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೆರಳಿಸಿದೆ.
ಇದು ಹೇಗೆ ಸಾಧ್ಯವಾಯಿತು ಅಂತ ಅವರು ಚೆಕ್ ಮಾಡಿ ನೋಡಿದರೆ ಇದರ ಹಿಂದೆ ಸಿದ್ಧರಾಮಯ್ಯ ಅವರ ಆಪ್ತ,ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮುಖ ಕಾಣಿಸಿದೆ.
ಇನ್ನೂ ಸ್ವಲ್ಪ ಆಳಕ್ಕಿಳಿದು ನೋಡಿದರೆ ಬಿಡಿಎ ಸೆಕ್ರೆಟರಿ ಹುದ್ದೆಗೆ ನೇಮಕವಾಗಿರುವ ಖಾನುಂ ಅವರು ಮಾಜಿ ಸಚಿವ ರೋಷನ್ ಬೇಗ್ ಅವರ ಸಹೋದರನ ಸೊಸೆ ಎಂಬ ಮಾಹಿತಿ ಸಿಕ್ಕಿತಂತೆ.
ಅರ್ಥಾತ್,ರೋಷನ್ ಬೇಗ್ ಅವರು ಜಮೀರ್ ಅವರಿಗೆ ಹೇಳಿ,ಆ ಮೂಲಕ ಸಿದ್ಧರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ಟಿನ ಮೇಲೆ ಪ್ರಭಾವ ಬೀರಿದ ಕಾರಣಕ್ಕಾಗಿ ಸಿಎಂ ಈ ಆದೇಶ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದರಂತೆ ಡಿಕೆಶಿ.ಅಷ್ಟೇ ಅಲ್ಲ,ಸಂಬಂಧ ಪಟ್ಟ ಅಧಿಕಾರಿಗೆ ಚಾರ್ಜ್ ತೆಗೆದುಕೊಳ್ಳಬೇಡಿ ಎಂದು ಕಟ್ಟು ನಿಟ್ಟಾಗಿ ಹೇಳಿದರಂತೆ.

ಪರಮೇಶ್ವರ್ ಅವರಿಗೆ ಸಮಾಧಾನವಿಲ್ಲ

ಇನ್ನು ಸಿದ್ಧರಾಮಯ್ಯ ಅವರ ಸಂಪುಟದಲ್ಲಿ ಗೃಹ ಸಚಿವರಾಗಿರುವ ಡಾ.ಪರಮೇಶ್ವರ್ ಅವರಿಗೆ ಸಮಾಧಾನ ಇಲ್ಲದಂತಾಗಿದೆ.
ಹಾಗೆ ನೋಡಿದರೆ ಅವರಿಗೆ ಈ ಸಲ ಗೃಹ ಖಾತೆ ಪಡೆಯುವ ಬಗ್ಗೆ ಇಷ್ಟವಿರಲಿಲ್ಲ.ಹೀಗಾಗಿ ಕಂದಾಯ,ಬೆಂಗಳೂರು ನಗರಾಭಿವೃದ್ದಿ ಸೇರಿದಂತೆ ಬೇರೆ ಯಾವುದಾದರೂ ಪ್ರಮುಖ ಖಾತೆ ಪಡೆಯುವ ನಿರೀಕ್ಷೆ ಅವರಲ್ಲಿತ್ತು.
ಆದರೆ ಈ ಖಾತೆಗೆ ನಿಮ್ಮಂತಹ ಹಿರಿಯರೇ ಸೂಟಬಲ್ಲು ಡಾಕ್ಟ್ರೇ ಅಂತ ಸಿದ್ಧರಾಮಯ್ಯ ಅವರ ಮನ ಒಲಿಸಿದ್ದರು.
ಆದರೆ ಖಾತೆ ಪಡೆದು ಒಂದು ತಿಂಗಳು ಕಳೆಯುವ ಮುನ್ನವೇ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ.
ಕಾರಣ?ಗೃಹ ಇಲಾಖೆಯ ಪ್ರಮುಖ ವರ್ಗಾವಣೆಗಳ ವಿಷಯದಲ್ಲಿ ಮುಖ್ಯಮಂತ್ರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿಲ್ಲ.
ಹೀಗೆ ಹೆಗಲಿಗೊಂದು ಖಾತೆ ಕಟ್ಟಿ,ಅದರ ವ್ಯವಹಾರವನ್ನು ನೋಡಿಕೊಳ್ಳುವ ಸ್ವಾತಂತ್ರ್ಯ ಇಲ್ಲದಿದ್ದರೆ ಅದಕ್ಕೇನು ಅರ್ಥ?ಎಂಬುದು ಪರಮೇಶ್ವರ್ ಅವರ ನೋವು.
ಅಂದ ಹಾಗೆ ಗೃಹ ಇಲಾಖೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ವಿಷಯದಲ್ಲಿ ಪರಮೇಶ್ವರ್ ಅವರಿಗೆ ತಮ್ಮದೇ ಕನಸುಗಳಿದ್ದವು.ಈ ಪೈಕಿ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಅವರನ್ನು ಬೆಂಗಳೂರು ಪೋಲೀಸ್ ಕಮೀಷ್ನರ್ ಹುದ್ದೆಗೆ ತರಬೇಕು ಎಂಬುದೂ ಒಂದು.
ಬೆಂಗಳೂರಿನಲ್ಲಿ ದಲಿತ ಅಧಿಕಾರಿಗಳು ಪೋಲೀಸ್ ಕಮೀಷ್ನರ್ ಆಗಿದ್ದಾರಾದರೂ ಅವರಲ್ಲಿ ಆಂಧ್ರ ಕೇಡರಿನವರೇ ಜಾಸ್ತಿ.ಕರ್ನಾಟಕ ಕೇಡರಿನ ಮರಿಸ್ವಾಮಿ ಅವರು ಕಮೀಷ್ನರ್ ಆಗಿದ್ದರಾದರೂ ತದನಂತರದ ದಿನಗಳಲ್ಲಿ ಕರ್ನಾಟಕ ಕೇಡರಿನ ದಲಿತ ಅಧಿಕಾರಿಗಳು ಕಮೀಷ್ನರ್ ಆಗಿಲ್ಲ.
ಹೀಗಾಗಿ ಈ ಸಲ ಅರುಣ್ ಚಕ್ರವರ್ತಿ ಅವರನ್ನು ಬೆಂಗಳೂರು ಪೋಲೀಸ್ ಕಮೀಷ್ನರ್ ಹುದ್ದೆಗೆ ತರುವ ಮೂಲಕ ಆ ಕೊರತೆಯನ್ನು ನೀಗಿಕೊಳ್ಳುವುದು ಪರಮೇಶ್ವರ್ ಅವರ ಲೆಕ್ಕಾಚಾರವಾಗಿತ್ತು.
ಆದರೆ ಈ ಕುರಿತಂತೆ ಅವರು ಹೆಜ್ಜೆ ಇಡುವ ಮುನ್ನವೇ ಸಿದ್ಧರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ಟಿನ ಕೈ ಚಳಕದಿಂದ ಬೇರೊಬ್ಬರು ಬಂದು ಆ ಹುದ್ದೆಯಲ್ಲಿ ಕುಳಿತರು.
ವಿಪರ್ಯಾಸವೆಂದರೆ,ಈ ಹುದ್ದೆಗೆ ಇಂತವರನ್ನು ತರುತ್ತೇವೆ ಅಂತ ಆದೇಶ ಹೊರಡಿಸುವ ಮುನ್ನ ಸಿದ್ಧರಾಮಯ್ಯ ನೆಪಮಾತ್ರಕ್ಕೂ ಪರಮೇಶ್ವರ್ ಅವರ ಜತೆ ಚರ್ಚಿಸಿರಲಿಲ್ಲವಂತೆ.
ಇದೇ ರೀತಿ ಡಿ.ಜಿ ಇನ್ ಚಾರ್ಜ್ ಆಗಿ ಅಲೋಕ್ ಮೋಹನ್ ಅವರನ್ನು,ಕಾನೂನು ಸುವ್ಯವಸ್ಥೆಯ ಎಡಿಜಿಪಿಯನ್ನಾಗಿ ಹಿತೇಂದ್ರ ಅವರನ್ನು ತಂದು ಕೂರಿಸುವ ಮುನ್ನವೂ ಪರಮೇಶ್ವರ್ ಅವರ ಜತೆ ಚರ್ಚಿಸಿರಲಿಲ್ಲವಂತೆ.
ಹೀಗೆ ಗೃಹ ಇಲಾಖೆಯ ಆಯಕಟ್ಟಿನ ಹುದ್ದೆಗಳಿಗೆ ನೇಮಕ‌ ಮಾಡುವಾಗ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ,ನಾನ್ಯಾವ ವಿಶ್ವಾಸದಿಂದ ಗೃಹ ಖಾತೆ ನಿಭಾಯಿಸಲಿ ಅಂತ ಪರಮೇಶ್ವರ್ ಆಪ್ತರಲ್ಲಿ ನೋವು ತೋಡಿಕೊಳ್ಳುತ್ತಿದ್ದಾರೆ.

ನೋ ನೋ ಎಂದರಂತೆ ಜಾರ್ಜ್

ಈ ಮಧ್ಯೆ ಮೈಸೂರಿನ ಚಾಮುಂಡೇಶ್ವರಿ ಎಲೆಕ್ಟ್ರಿಕ್ ಕಂಪನಿಯ (ಚಸ್ಕಾಂ)ಎಂ.ಡಿ ಹುದ್ದೆಗೆ ಇಂಜಿನಿಯರ್ ಒಬ್ಬರನ್ನು ತಂದು ಕೂರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಯಸಿದ್ದರಂತೆ.
ಆದರೆ ಐಎಎಸ್ ಅಲ್ಲದವರೊಬ್ಬರನ್ನು ಚಸ್ಕಾಂನ ಎಂ.ಡಿ ಹುದ್ದೆಗೆ ತಂದು ಕೂರಿಸಲು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ನಿರಾಕರಿಸಿದ್ದಾರೆ.
ಆದರೆ,ಇವರು ಚುನಾವಣೆ ಟೈಮಿನಲ್ಲಿ ನಮಗೆ ಹೆಲ್ಪು ಮಾಡಿದವರು.ಏನಾದ್ರೂ ಮಾಡಿ ಅಕಾಮಡೇಟ್ ಮಾಡಲು ಸಾಧ್ಯವಾ ನೋಡಿ ಅಂತ ಸಿದ್ದರಾಮಯ್ಯ ಕೇಳಿದರಂತೆ.
ಆದರೆ ಸಚಿವ ಜಾರ್ಜ್ ಮತ್ತು ಅಲ್ಲಿದ್ದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು,ಸಾರ್,ಇವತ್ತು ಎಂಡಿ ಪೋಸ್ಟಿಗೆ ಎಂಜಿನಿಯರ್ ಒಬ್ಬರನ್ನು ತಂದು ಕೂರಿಸಿದರೆ ನಾಳೆ ಅದೇ ಒಂದು ಪರಿಪಾಠವಾಗಿ ಎಂಜಿನಿಯರುಗಳೇ ಇಂತಹ ಜಾಗ ಹಿಡಿಯುವಂತಾಗುತ್ತದೆ.ಸಾಮಾನ್ಯವಾಗಿ ಈ ಜಾಗಕ್ಕೆ ಐಎಎಸ್ ಅಧಿಕಾರಿಗಳೇ ಬರಬೇಕು ಎಂದಿದ್ದಾರೆ.
ಅಷ್ಟೇ ಅಲ್ಲ,ಎಂಡಿ ಜಾಗಕ್ಕೆ ಐಎಎಸ್ ಅಧಿಕಾರಿಗಳ ಬದಲು ಎಂಜಿನಿಯರುಗಳನ್ನು ತಂದು ಕೂರಿಸುವುದು ವಿಶ್ವಬ್ಯಾಂಕ್ ನಿಯಮಾವಳಿಗಳಿಗೆ ವಿರುದ್ಧ.ಹೀಗಾಗಿ ನಾವು ಒಂದು ಹೆಜ್ಜೆ ಮುಂದಿಟ್ಟರೂ ತನ್ನ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಅಂತ ವಿಶ್ವಬ್ಯಾಂಕ್ ಭಾವಿಸಬಹುದು ಎಂದಿದ್ದಾರೆ.
ಅವರ ಮಾತು ಕೇಳಿ ಸಿದ್ಧರಾಮಯ್ಯ ಅವರು ಮೌನವಾದಾಗ ಜಾರ್ಜ್ ಅವರೇ ಮುಂದಾಗಿ,ಈ ಅಧಿಕಾರಿ ನಮಗೆ ಬೇಕಾದವರು ಎನ್ನುತ್ತೀರಿ.ಅವರಿಗೆ ಸೂಟ್ ಆಗುವ ಮತ್ತೊಂದು ಜಾಗ ನೋಡಿದರಾಯಿತು ಸಾರ್ ಎಂದರಂತೆ.

ಪ್ರಿಯಾಂಕ್ ಅವರಿಗಿದು ಪ್ರಿಯವಲ್ಲದ ಕೆಲಸ

ಈ ಮಧ್ಯೆ ಕರ್ನಾಟಕದ ಸಿಂಗಂ ಎಂಬ ಖ್ಯಾತಿಗೆ ಪಾತ್ರರಾಗಿರುವ ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ಎಪಿಸೋಡು ಸಿದ್ಧರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ಟಿಗೆ ಕಿಚಿಪಿಚಿ ಉಂಟು ಮಾಡಿದೆ.
ಅಂದ ಹಾಗೆ ಆರು ತಿಂಗಳ ಹಿಂದಷ್ಟೇ ರವಿ ಚನ್ನಣ್ಣವರ್ ಅವರು ಕಿಯೋನಿಕ್ಸ್ ಎಂಡಿಯಾಗಿ ನೇಮಕಗೊಂಡಿದ್ದರು.
ಆದರೆ ಅವರನ್ನು ಮೊನ್ನೆ ಇದ್ದಕ್ಕಿದ್ದಂತೆ ಆಂತರಿಕ ಭದ್ರತೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗೆ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಿ,ಅವರ ಜಾಗಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮೆಂಬರ್ ಸೆಕ್ರೆಟರಿ ಆಗಿದ್ದ ಗಿರೀಶ್ ಅವರನ್ನು ತಂದು ಕೂರಿಸಲಾಗಿದೆ.
ಹೀಗೆ ಗಿರೀಶ್ ಅವರನ್ನು ಇಲ್ಲಿಗೆ ತಂದು ಕೂರಿಸುವುದರ ಹಿಂದೆ ಮತ್ತೊಂದು ಟ್ವಿಸ್ಟು ಇದೆ.ಅದೆಂದರೆ ಗಿರೀಶ್ ಅವರು ಇದುವರೆಗೆ ಕುಳಿತಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯ ಮೆಂಬರ್ ಸೆಕ್ರೆಟರಿ ಹುದ್ದೆಗೆ ಸೂರಿ ಪಾಯಲ್ ಎಂಬುವವರನ್ನು ತಂದು ಕೂರಿಸುವುದು ಸಿದ್ದರಾಮಯ್ಯ ಕಿಚನ್ ಕ್ಯಾಬಿನೆಟ್ಟಿನ ಲೆಕ್ಕಾಚಾರ.
ಆದರೆ ವಾಸ್ತವದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಮೆಂಬರ್ ಸೆಕ್ರೆಟರಿ ಆಗುವವರು ಐ.ಎಫ್.ಎಸ್ ಅಧಿಕಾರಿ ಆಗಿರಬೇಕು.ಆದರೆ ಸದರಿ ಪಾಯಲ್ ಐ.ಎಫ್.ಎಸ್ ಅಧಿಕಾರಿಯಲ್ಲ.
ಆದರೂ ಅವರನ್ನು ಮೆಂಬರ್ ಸೆಕ್ರೆಟರಿ ಮಾಡಲು ನಡೆದಿರುವ ಒಳಲೆಕ್ಕಾಚಾರಗಳು ಹಲವರ ಆಕ್ರೋಶಕ್ಕೆ ಕಾರಣವಾಗಿದೆಯಲ್ಲದೆ,ಇದರ ಬಗ್ಗೆ ಹಾಹಾಕಾರ ಏಳುವಂತೆ ಮಾಡಿದೆ.
ಹೀಗೆ ಪಾಯಲ್ ಅವರಿಗಾಗಿ ಗಿರೀಶ್ ಅವರು ಕಿಯೋನಿಕ್ಸ್ ಗೆ ವರ್ಗಾವಣೆಯಾಗಿ,ಕಿಯೋನಿಕ್ಸ್ ನಿಂದ ತಾವು ಎತ್ತಂಗಡಿಯಾದ ಬೆಳವಣಿಗೆಯಿಂದ ರವಿ ಚನ್ನಣ್ಣವರ್ ಮುನಿಸಿಕೊಂಡಿದ್ದಾರೆ.ಅಷ್ಟೇ ಅಲ್ಲ,ನೇರವಾಗಿ ಸಿ.ಎ.ಟಿ ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ.
ಈ ಬೆಳವಣಿಗೆ ಸಹಜವಾಗಿಯೇ ಐಟಿ-ಬಿಟಿ ಖಾತೆ ನೋಡಿಕೊಳ್ಳುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಇರುಸುಮುರಿಸುಂಟು ಮಾಡಿದೆಯಂತೆ.
ಅಂದ ಹಾಗೆ ಈ ಹಿಂದೆ 2013 ರಿಂದ 2018
ತನಕ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರಲ್ಲ?ಆಗೆಲ್ಲ ಅವರು ಆಡಿದ್ದೇ ವೇದ ವಾಕ್ಯ,ಮಾಡಿದ್ದೇ ಬ್ರಹ್ಮ ಲಿಖಿತ ಎಂಬಂತಿತ್ತು.ಹೀಗಾಗಿ ಅವರೇನೇ ಮಾಡಿದರೂ ಚಕಾರ ಎತ್ತುವವರು ಇರಲಿಲ್ಲ.
ಆದರೆ ಈಗ ಪರಿಸ್ಥಿತಿ ಬದಲಾಗಿದೆ.ಅವರು ಯಾವ ಮಂತ್ರಿಗಳ ಇಲಾಖೆಗೇ ಕೈ ಹಾಕಲಿ,ಅಲ್ಲಿಂದ ಅಸಮಾಧಾನ,ಸಿಟ್ಟು,ನಸನಸೆ ಹೊರಹೊಮ್ಮುತ್ತಿದೆ.
ಇದು ಸರಳ ಸಂಗತಿಯಂತೂ ಅಲ್ಲ.

ಆರ್.ಟಿ.ವಿಠ್ಠಲಮೂರ್ತಿ

The post ಮಂತ್ರಿ ಎಂ. ಬಿ. ಪಾಟೀಲ್ ಅವರಿಗೇಕೆ ಸಿಟ್ಟು ಬಂತು? appeared first on Hai Sandur kannada fortnightly news paper.

]]>
https://haisandur.com/2023/06/12/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%bf-%e0%b2%8e%e0%b2%82-%e0%b2%ac%e0%b2%bf-%e0%b2%aa%e0%b2%be%e0%b2%9f%e0%b3%80%e0%b2%b2%e0%b3%8d%e0%b2%85%e0%b2%b5%e0%b2%b0%e0%b2%bf%e0%b2%97/feed/ 0