ನರಕಯಾತ್ರೆಗೆ ಸಾಕ್ಷಿಯಾದ ಖಾನಹೊಸಹಳ್ಳಿ ಪಟ್ಟಣದ ರಸ್ತೆ. ನಗರದ ರಸ್ತೆಯ ಸಂಕಷ್ಟಕ್ಕೆ ಮೋಕ್ಷ ಯಾವಾಗ..?

0
297

ಕೂಡ್ಲಿಗಿ :- ತಾಲ್ಲೂಕಿನ ಮುಖ್ಯ ಪಟ್ಟಣವಾದ ಕಾನಹೊಸಹಳ್ಳಿಯ ಮುಖ್ಯ ರಸ್ತೆಯ ಅಭಿವೃದ್ಧಿಗೆ ಶಂಕುಸ್ಥಾಪನೆಯಾಗಿ ಬಹಳ ತಿಂಗಳುಗಳು ಕಳೆದರು ಕೂಡ ರಸ್ತೆಯ ಕಾಮಗಾರಿ ಕೆಲಸ ಇನ್ನು ಸಂಪೂರ್ಣವಾಗಿ ಮುಗಿದಿಲ್ಲ ಒಂದು ವರ್ಷಗಳಿಂದಲೂ ನರಕಯಾತ್ರೆಯ ಪಯಣದಲ್ಲಿ ನರಲಾಡುವ ಪರುಸ್ಥಿತಿ ನಗರದ ಜನರಿಗೆ ಮುಂದುವರೆಯುತ್ತಿದೆ.
ತಾಲ್ಲೂಕಿನ ಮುಖ್ಯ ಪಟ್ಟಣವಾಗಿದ್ದು ಸುತ್ತಮುತ್ತಲಿನ ಹಳ್ಳಿಗಳ ಜನತೆ ಏನೇ ವಸ್ತುಗಳು ಹಾಗೂ ದಿನನಿತ್ಯದ ಬಳಕೆಗಳನ್ನ ಕೊಂಡುಕೊಳ್ಳಲು ಬರಲು ಇರುವ ಮುಖ್ಯ ಪಟ್ಟಣ ಇದಾಗಿದ್ದು ಇಲ್ಲಿನ ಪ್ರಸ್ತುತ ವ್ಯವಸ್ಥೆಯನ್ನ ನೋಡಿದರೇ ಆ ನಗರಕ್ಕೆ ಹೋಗುವುದಕ್ಕೂ ಬೇಸರವಾಗುವುದು ಎಂಬುವುದು ಬೇರೆ ಹಳ್ಳಿಯ ಜನರ ಮಾತಾಗಿದೆ

ಆಕ್ರೋಶ:-
ನಗರ ಅಭಿವೃದ್ಧಿಯಾಗಲು ಮೊದಲು ರಸ್ತೆ ಉತ್ತಮವಾಗಿರಬೇಕು ಆದರೆ ನಮ್ಮ ನಗರದಲ್ಲಿ ರಸ್ತೆಯದ್ದೇ ದೊಡ್ಡ ಸಮಸ್ಯೆಯಾಗಿದೆ ಮಕ್ಕಳು,ಮಹಿಳೆಯರು,ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗುತ್ತದೆ,ತಕ್ಷಣ ರಸ್ತೆ ಕಾಮಗಾರಿಯ ಬಗ್ಗೆ ಕಾಳಜಿ ವಹಿಸಿ ಸಮಸ್ಯೆ ಬಗೆಹರಿಸಬೇಕೆಂದು ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೇ

ವರದಿ:-
ಪುನೀತ್ ಐನಾಪುರಿ

LEAVE A REPLY

Please enter your comment!
Please enter your name here