ಕೂಡ್ಲಿಗಿ;ವೋಲ್ಟೇಜ್ ಇಲ್ಲದ ಹೈಮಾಸ್ಟ್ ದೀಪಗಳು:

0
90

ಕೂಡ್ಲಿಗಿ.ಸೆ. 29:-ತಾಲೂಕು ಕೇಂದ್ರವಾದ ಕೂಡ್ಲಿಗಿ ಪಟ್ಟಣದಲ್ಲಿ ರಾತ್ರಿಯಾಯಿತೆಂದರೆ ಬೆಳಕು ಚೆಲ್ಲಬೇಕಾದ ಪ್ರಮುಖ ವೃತ್ತದ ಹೈಮಾಸ್ಟ್ ದೀಪಗಳು ಮತ್ತು ರಸ್ತೆಬದಿಯ ವಿದ್ಯುತ್ ದೀಪಗಳು ಬೆಳಕು ಚೆಲ್ಲದೇ ಮಂದ ಬೆಳಕು ನೀಡುತಿದ್ದರು ಕಂಡು ಕಾಣದೆ ಅಧಿಕಾರಿಗಳು ಓಡಾಡುತ್ತಿದ್ದು ಅದರ ದುರಸ್ಥಿಗೆ ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪಟ್ಟಣದ ಹೃದಯಭಾಗವಾದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತ, ಪಾದಗಟ್ಟೆ ಸರ್ಕಲ್ ಮತ್ತು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂದಿನ ಪ್ರಮುಖ ಸ್ಥಳ ಮತ್ತು ಪ್ರಮುಖ ವೃತ್ತಗಳು ಸೇರಿದಂತೆ ಮಹಾತ್ಮ ಗಾಂಧೀಜಿಯವರ ಪವಿತ್ರ ಚಿತಾಭಸ್ಮ ಸ್ಮಾರಕವಿರುವ ಹಾಗೂ ಕಾಲೇಜು, ಆಸ್ಪತ್ರೆ ಪ್ರಮುಖ ಇಲಾಖೆಗಳನ್ನೊಳಗೊಂಡಿರುವ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಬೀದಿ ದೀಪಗಳಂತೂ ಅವುಗಳು ನೀಡುವ ಬೆಳಕಂತೂ ಹೇಳುವುದಕ್ಕಿಂತ ನೋಡಿದರೆ ಅದರ ಬೆಳಕಿನ ಮಹಿಮೆ ಅರಿಯಬಹುದಾಗಿದೆ.

ಬಹಳಷ್ಟು ಸಾರ್ವಜನಿಕರು ಓಡಾಡುವ ಈ ರಸ್ತೆ ಮತ್ತು ಸಾರಿಗೆ ಸಂಚಾರಕ್ಕೆ ಹೋಗಿ ಬರುವ ಪ್ರಯಾಣಿಕರಿರುವ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂದಿರುವ ಹೈಮಾಸ್ಟ್ ದೀಪಗಳು ನಾಲ್ಕೈದು ತಿಂಗಳಿಂದ ಮಂದ ಬೆಳಕು ಚೆಲ್ಲುತ್ತಿವೆ ಅದನ್ನು ಕಂಡು ಕಾಣದೆ ಅಧಿಕಾರಿಗಳು ಅವುಗಳ ದುರಸ್ಥಿಗೊಳಿಸುವಲ್ಲಿ ಮುಂದಾಗದೆ ಇರುವುದು ಸರಿಯಾದ ಕ್ರಮವಲ್ಲ ಕಾರಣಾಂತರಗಳಿಂದ ಪಟ್ಟಣ ಪಂಚಾಯತಿ ಅಧಿಕಾರ ಗದ್ದುಗೆ ಹಿಡಿಯದೇ ಇದ್ದು ಪಟ್ಟಣ ಪಂಚಾಯತಿಯ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಹಾಗೂ ಪಂಚಾಯತಿಯ ಮುಖ್ಯಾಧಿಕಾರಿಗಳು ಮಂದ ಬೆಳಕಿನ ವಿದ್ಯುತ್ ದೀಪಗಳನ್ನು ತೆಗೆದುಹಾಕಿ ವೋಲ್ಟೇಜ್ ಕೊಡುವ ದೀಪಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಅಧಿಕಾರಿಗಳಿಗೆ ಮನವಿಮಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here