ಗಾಂಧಿಜೀಯ ಆದರ್ಶಗಳು ಇಂದಿಗೂ ಪ್ರಸ್ತುತ: ಪ್ರೊ.ರಮೇಶ್ ಓಲೇಕಾರ

0
126

ಬಳ್ಳಾರಿ,ಜ.30: ಗಾಂಧಿಜೀಯವರ ಸತ್ಯ ಮತ್ತು ಅಹಿಂಸೆ ಸಿದ್ಧಾಂತ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಬೋಧನೆಗಳನ್ನು ಪ್ರಪಂಚದಾದ್ಯಂತ ಅನುಸರಿಸಲಾಗುತ್ತಿದೆ ಎಂದು ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಓಲೇಕಾರ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ‘ರಾಷ್ಟ್ರಪಿತ ಮೋಹನದಾಸ್ ಕರಮಚಂದ್ ಗಾಂಧಿಜೀಯವರ ಹುತಾತ್ಮ ದಿನಾಚರಣೆ’ಯ ಪ್ರಯುಕ್ತ ವಿದ್ಯಾರ್ಥಿ ಕಲ್ಯಾಣ ಘಟಕದವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರಕ್ಕಾಗಿ ಅನುಸರಿಸಿದ ಅಹಿಂಸಾ ತತ್ವ ಇಂದಿಗೂ ಪ್ರಸ್ತುತವಾಗಿದೆ. ಗಾಂಧಿಜೀಯವರ ಜೀವನ ಅವರ ನಾಯಕತ್ವಕ್ಕೆ ಸ್ಪೂರ್ತಿಯಾಗಿದೆ. ಗಾಂಧಿಜೀ ಮತ್ತು ವಿವೇಕಾನಂದರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ರಾಬರ್ಟ್ ಜೋಸ್ ಮಾತನಾಡಿ, ನಮ್ಮ ಪ್ರಾಚೀನ ನಾಗರಿಕತೆಗಳಲ್ಲಿ ಹುತಾತ್ಮರ ದಿನದ ಪರಿಕಲ್ಪನೆ ಕಂಡು ಬರುತ್ತದೆ. ಗಾಂಧಿಜೀಯವರಿಗೆ ಅಹಿಂಸೆಯೆ ಜೀವನಶೈಲಿಯಾಗಿತ್ತು. ಇಂದು ಪ್ರಪಂಚದಾದ್ಯಂತ ಹಿಂಸಾ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಇಂತಹ ಪ್ರವೃತ್ತಿಗಳಿಂದ ನಮ್ಮ ಸಂಸ್ಕøತಿಗಳು ಹಾಳಾಗುತ್ತಿವೆ. ಗಾಂಧಿಜೀಯವರ ತತ್ವ ಆದರ್ಶಗಳನ್ನು ಪುನರಾವರ್ತನೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕರಾದ ಪ್ರೊ. ಜಿ.ಪಿ. ದಿನೇಶ್, ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಶಿಧರ ಕೆಲ್ಲೂರ್, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here