ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ, ಬಳ್ಳಾರಿ ನಗರದ ಉತ್ತರ ಭಾಗದ ರಸ್ತೆ ವಿಸ್ತರಣೆ ಡಿಪಿಆರ್ ತಯಾರಿಸಲು ನಿರ್ಧಾರ

0
211

ಬಳ್ಳಾರಿ,ಜು.12 : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರ್ ಶೇಖರ್ ಅವರ ಅಧ್ಯಕ್ಷತೆಯಲ್ಲಿ ಬುಡಾ ಸಾಮಾನ್ಯ ಸಭೆಯು ಕಚೇರಿ ಆವರಣದಲ್ಲಿ ಸೋಮವಾರ ನಡೆಯಿತು.
ಬಳ್ಳಾರಿ ನಗರದ ಉತ್ತರ ಭಾಗದ ರಸ್ತೆಯ ಅಲೈನ್‍ಮೆಂಟ್‍ನಂತೆ ಸಹಾ ಅಭಿವೃದ್ಧಿ ಪಡಿಸಿದ್ದಲ್ಲಿ ನಗರದ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಾಧಿಕಾರದಿಂದ ಈಗಾಗಲೇ ಪ್ರಸ್ತಾವನೆಯಾಗಿರುವ ಅಲೈನ್‍ಮೆಂಟ್‍ನಂತೆ ಹೊಸದಾಗಿ 30 ಮೀಟರ್ ಬದಲಾಗಿ 60 ಮೀಟರ್ ಅಗಲದ ರಸ್ತೆಯನ್ನಾಗಿ ಮಾಡುವ ಸಂಬಂಧ ಡಿ.ಪಿ.ಆರ್ ತಯಾರಿಸಲು ನಿಯಮಾನುಸಾರ ಸಭೆ ಅನುಮೋದನೆ ನೀಡಿತು.

ಪ್ರಾಧಿಕಾರದ ಕಚೇರಿ ಆವರಣಲ್ಲಿರುವ ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆ ಕೋಣೆಯನ್ನು ಪ್ರಾಧಿಕಾರದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿದ ನಂತರ ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆ ಕೋಣೆ ಸ್ಥಳಾಂತರಿಸಿದ ನಂತರ ಸದರಿ ಸ್ಥಳದಲ್ಲಿ ಸಭಾಂಗಣ/ಪ್ರಾಧಿಕಾರದ ಕಛೇರಿ ಕಟ್ಟಡ ವಿಸ್ತರಣೆ/ವಾಣಿಜ್ಯ ಸಂಕೀರ್ಣ ನಿರ್ಮಿಸುವ ಪ್ರಸ್ತಾವನೆಗೆ ಸಭೆ ಒಪ್ಪಿಗೆ ನೀಡಿತು.
ಬಳ್ಳಾರಿ ನಗರದ ಬೀರಪ್ಪಸ್ವಾಮಿ ದೇವಸ್ಥಾನದ ಹತ್ತಿರ ರೂ. 16.08 ಲಕ್ಷಗಳ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ವಿದ್ಯುತ್ ಹೈಮಾಸ್ಟ್ ದೀಪಗಳನ್ನು ಅಳವಡಿಸಲು, ಬುಡಾದಿಂದ ರೂ.66.08 ಕೋಟಿಗಳ ವೆಚ್ಚದಲ್ಲಿ ಕೈಗೊಂಡಿರುವ ಯೋಜನೆ/ಕಾಮಗಾರಿಗಳನ್ನು ಪರಿಶೀಲಿಸಿ, ಯೋಜನಾ ನಿರ್ವಹಣಾ ಸೇವೆಗಳ ಪಡೆಯಲು ಏಜನ್ಸಿಯನ್ನು ನೇಮಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ನಗರದ ಕುವೆಂಪು ಬಡಾವಣೆಯಲ್ಲಿರುವ ವಾಣಿಜ್ಯನಿವೇಶನಗಳನ್ನು ಸಣ್ಣ ಸಣ್ಣ ವಾಣಿಜ್ಯ ನಿವೇಶನಗಳನ್ನಾಗಿ ಉಪವಿಭಜನೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಬುಡಾ ಒಡೆತನದಲ್ಲಿರುವ 89 ನಾಗರಿಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ನೀಡಲು ತೀರ್ಮಾನಿಸಲಾಯಿತು.

ಬಳ್ಳಾರಿ ನಗರದ ಪರಿಷ್ಕøತ ಸ್ಥಳೀಯ ಯೋಜನಾ ಪ್ರದೇಶಕ್ಕೆ (ಹೆಚ್ಚುವರಿ ಪ್ರದೇಶಕ್ಕೆ ಮಾತ್ರ) ಸರ್ಕಾರವು ಅಧಿಸೂಚಿಸಿದ ನಂತರ ಕೆ.ಟಿ.ಸಿ.ಪಿ ಕಾಯ್ದೆಯನ್ವಯ ಮಹಾಯೋಜನೆ ಕಾರ್ಯವನ್ನು ಕೈಗೊಳ್ಳಬೇಕಾಗಿರುತ್ತದೆ. ಮಹಾಯೋಜನೆ ತಯಾರಿಕೆ ಕೆಲಸ ಈಗಾಗಲೇ ವ್ಯಾಪ್ಕೋಸ್ ಅವರಿಗೆ ವಹಿಸಿದ್ದು, ಕಾರ್ಯ ಪ್ರಗತಿಯಲ್ಲಿದೆ. ಪರಿಷ್ಕøತ ಸ್ಥಳೀಯ ಯೋಜನಾ ಪ್ರದೇಶ ಅಧಿಸೂಚಿಸಿದ ನಂತರ ಹೆಚ್ಚುವರಿ ಪ್ರದೇಶಕ್ಕೆ ಕೆ.ಟಿ.ಸಿ.ಪಿ ಕಾಯ್ದೆಯನ್ವಯ ಪ್ರಾಧಿಕಾರದ ವತಿಯಿಂದ ಮಹಾಯೋಜನೆ ತಯಾರಿಸಲು ಸರ್ಕಾರದ ಅವಗಾಹನೆಗೆ ಸಲ್ಲಿಸಲು ನಿರ್ಧರಿಸಲಾಗಿದೆ.
ಭೂ ಉಪಯೋಗ ಬದಲಾವಣೆ ಪ್ರಕರಣಗಳನ್ನು ಆನ್‍ಲೈನ್ ಮೂಲಕ ನಿರ್ವಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಖಾಸಗಿ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದ್ದು, ಸದರಿ ಖಾಸಗಿ ಸಂಸ್ಥೆಯು ಈ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ, ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಸಾರ್ವಜನಿಕರು ಸದರಿ ತಂತ್ರಾಂಶದ ಮೂಲಕ ಭೂ ಉಪಯೋಗ ಬದಲಾವಣೆ ಪ್ರಕರಣಗಳನ್ನು ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಅಂತಿಮ ಅನುಮೋದನೆ ಖಾಸಗಿ ವಿನ್ಯಾಸಗಳು, ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ ಮಂಜೂರು ಕೋರಿರುವ ಅರ್ಜಿಗಳಿಗೆ ಅನುಮೋದನೆ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬುಡಾ ಆಯುಕ್ತ ವಿರೇಂದ್ರ ಕುಂದಗೋಳ, ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜನಿಯರ್ ಖಾಜಾಮೊಹಿನುದ್ದೀನ್, ಬುಡಾ ಎಇಇ ರವಿಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here