ಸೋಲೇ ಗೆಲುವಿಗೆ ಮುನ್ನುಡಿ

0
477

ಅಂಜದಿರು ಅಳುಕದಿರು
ಸೋತೆನೆಂದು ಎದೆಗುಂದದಿರು
ಸೋಲಲ್ಲವೇ ಬರೆಯುವುದು
ಗೆಲುವಿಗೆ ಮುನ್ನುಡಿಯೆಂದು ಸಾಗುತಿರು

ಇಂದು ನೀ ಸೋಲಬಹುದು ಮನವೇ
ಆದರೆ ವ್ಯರ್ಥವಾಗದು ನಿನ್ನ ಪರಿಶ್ರಮ
ಸೋತು ಸೋತು ನೀ ನಗುವ ಚಿಮ್ಮಿಸು
ಅದಾಗಲೇ ನಿನ್ನ ಬಾಳ ಹಾದಿ ಸುಗಮ

ಅಪ್ರಯತ್ನದಿ ನೀ ಸೋಲಿಗೆ ಕೊರಳೊಡ್ಡಿದ್ದರೆ
ಎಂದೆಂದಿಗೂ ಕ್ಷಮಿಸದು ನಿನ್ನನು ಈ ಜಗ
ಸತತ ಪ್ರಯತ್ನದ ಫಲದಿ ಸೋಲಾದರೆ
ಸೋಲಲ್ಲವದು ಗೆಲುವಿನ ಶುಭಯೋಗ

ಸೋತೆನೆಂದು ಮರುಗದಿರು
ಸೋಲಲ್ಲವೇ ಗೆಲುವಿನ ಮೆಟ್ಟಿಲು
ಛಲದಿ ಮುನ್ನುಗ್ಗು ಧೈರ್ಯ ಅಚಲವಾಗಿರಲಿ
ನೀನೇರುವೆಯಾಗಲೇ ಸಾಧನೆಯ ಮುಗಿಲು

ಸೋತರೇನಂತೆ ಧಕ್ಕುವುದಲ್ಲವೇ
ಪ್ರಯತ್ನಕ್ಕೆ ತಕ್ಕ ಪ್ರತಿಫಲ
ಸೋಲಿನ ಸರಮಾಲೆಯನೆದುರಿಸಿ
ನೀ ಸೃಷ್ಟಿಸಬಲ್ಲೆ ಇತಿಹಾಸ ಜಗದಗಲ

ಸೋತೆನೆಂದು ಕುಗ್ಗದಿರು
ಗೆಲುವಿನ ಹಾದಿಗೆ ಸೋಲೇ ಶಿಕ್ಷಕ
ಗೆಲುವಿಗಾಗಿ ನಿರೀಕ್ಷೆಯ ಪಡದಿರು
ಪ್ರರಿಶ್ರಮದ ಅನುಭವವೇ ದಾರಿದೀಪ ಕೊನೆತನಕ

✍ಸುಕೃತಿ ಕೆ ಪೂಜಾರಿ
ಈಶ್ವರಮಂಗಲ
ಪುತ್ತೂರು ತಾಲೂಕು
ದಕ್ಷಿಣ ಕನ್ನಡ:-574313

LEAVE A REPLY

Please enter your comment!
Please enter your name here