ಕಾಮನ ಬಿಲ್ಲು (ವೃಷಭಪ್ರಾಸ)

0
127


ಅಂತು ಮಳೆ ನಿಂತು ಹೋದಮೇಲೆ
ಬಂತು ಬಣ್ಣಬಣ್ಣದ ಬಿಲ್ಲು ಬಾಗಿ
ಎಂತು ವರ್ಣಿಸಲಿ ಸಪ್ತವರ್ಣಗಳಾ
ತುಂತುರು ಹನಿಗಳ ಹೂ ಚೆಲ್ಲಾಟ
ಇಂತು ಸೊಬಗು ಸೃಷ್ಟಿಯ ವೈಭವ
ಕಾಂತೆ ನೋಡೆಂದೆ ಬಳಿಗೆ ಕರೆದು

ಅಂಬುವಾಹಗಳ ಇಣುಕಿನಲಿ
ಅಂಭೋಜದಂತೆ ಅರಳಿದೆ
ಅಂಬುಧರನಿಗೆ ಕಿರೀಟವಾಗಿ
ಅಂಬುಗಾರನ್ಯಾರಿಹನು…?
ಅಂಬುಜಮಿತ್ರನ ನಗುವಿನಲಿ
ಅಂಬಿರಿವಿಡಾಗಿದೆ ಧರೆಗೆ…

ಮಂದ ಮಾರುತವು ಬೀಸುತ್ತಿರಲು
ಮಂದಾಕಿನಿಯಂತೆ ಹೋಳೆಯುತ್ತಾ
ಮಂದಹಾಸ ಬೀರುತಿದೆ ಧರೆಯು
ಮಂದರಗಳು ಮೈಪುಳಕಗೊಂಡು
ಮಂದಗಮನೆಯಂತೆ ನಗುತಿಹಳು
ಮಂದಜ ಮಳೆಯಲಿ ಜೊತೆಯಲಿ

ಸಂಪ್ರಾಪ್ತಿಗೊಂಡಿದೆ ಭೂಸ್ವರ್ಗ
ಸಂಪ್ರೋಕ್ತವಾಗಿದೆ ಪ್ರಕೃತಿ
ಸಂಪ್ರೋಕ್ಷಣಗೊಂಡಿದೆ ಸಂತಸ
ಸಂಪ್ರಾಪ್ತವಿದು ಸಂಪ್ರದಾನವಿದು
ಸಂಪ್ರೇಕ್ಷಕರಿಗೆಹಬ್ಬವಿದು ಸೊಬಗು
ಸಂಪ್ರೀತಿತೋರೋಣ ಪ್ರಕೃತಿಗೆ

ಮಧುನಾಯ್ಕ.ಲಂಬಾಣಿ
ಹೂವಿನಹಡಗಲಿ

LEAVE A REPLY

Please enter your comment!
Please enter your name here