ಆಶ್ರಯ ಮನೆ ನಿರ್ಮಾಣದ ಜಮೀನು ಗುರುತಿಸಲು ವಸತಿ ಸಚಿವರಿಂದ ಪರಿಶೀಲನೆ

0
80

ಕನಕಪುರ ತಾಲ್ಲೂಕಿನ ಯಲಚವಾಡಿ ಹಾಗೂ ಸುತ್ತಮುತ್ತಲಿನ ಇತರೆ ಗ್ರಾಮಗಳಲ್ಲಿ ವಸತಿ ರಹಿತ ಅರ್ಹ ಬಡ ಜನರಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಆಶ್ರಯ ಒದಗಿಸಲು ಜಮೀನಿನ ಪರಿಶೀಲನೆಯನ್ನು ಇಂದು ವಸತಿ ಸಚಿವ ವಿ.ಸೋಮಣ್ಣ ಅವರು ನಡೆಸಿದರು.

ಬಡ ಜನರಿಗೆ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಅರಣ್ಯದಲ್ಲಿ ವಾಸವಾಗಿರುವ ಅರ್ಹರನ್ನು ಗುರುತಿಸಿ ಆಶ್ರಯ ಒದಗಿಸಲು ಬೇಕಿರುವ ಜಮೀನನ್ನು ಭೂ ಮಾಲೀಕರಿಂದ ಖರೀದಿಸಲು ಪರಿಶೀಲನೆ ನಡೆಸಲಾಗುತ್ತಿದೆ. ಬಡ ಜನರಿಗೆ ಉತ್ತಮ ಸ್ಥಳದಲ್ಲಿ ಆಶ್ರಯಕ್ಕಾಗಿ ಜಮೀನು ಗುರಿತಿಸಲಾಗುವುದು. ಅದಷ್ಟು ಮುಖ್ಯ ರಸ್ತೆಯಲ್ಲಿ ಜಮೀನು ಗುರುತಿಸಲಾಗುವುದು. ವಸತಿಗೆ ಉತ್ತಮ ಸ್ಥಳವಾದಲ್ಲಿ ಚರ್ಚಿಸಿ ಸರಿಹೊಂದುವ ದರ ನಿಗದಿಮಾಡಿ ಜಮೀನು ಖರೀದಿಸಲಾಗುವುದು ಎಂದರು.

ಬೆಂಗಳೂರು ನಗರ ಪ್ರದೇಶದಲ್ಲಿ 2030 ಅಡಿ ಅಳತೆಯ ನಿವೇಶನ ನೀಡಲಾಗುತ್ತಿದೆ. ಯಲಚವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶ ಗ್ರಾಮೀಣ ಭಾಗವಾಗಿದ್ದು, ಒಂದು ಎಕರೆಯಲ್ಲಿ 3040 ಅಡಿಯ ಹತ್ತು ನಿವೇಶನ ಮಾಡಬಹುದಾಗಿದ್ದು,30*40 ಅಡಿಯ ನಿವೇಶನ ನೀಡಲು ಚಿಂತಿಸಲಾಗುತ್ತಿದೆ.ಅವಶ್ಯಕತೆ ಆಧಾರದ ಮೇಲೆ ಜಮೀನು ಖರೀದಿಸಲಾಗುವುದು ಎಂದರು

ಮೇಕೆದಾಟು ಯೋಜನೆ ‌ಅನುಷ್ಠಾನ ಮಾಡುವುದು ಕರ್ನಾಟಕ ಸರ್ಕಾರದ ನೂರಕ್ಕೆ ನೂರು ಆಶಯ. ಅದು ಕಾನೂನು ಚೌಕಟ್ಟಿನಲ್ಲೇ ಆಗಬೇಕು. ಇದಕ್ಕಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.

ನೈಟ್ ಕಫ್ರ್ಯೂ ಕುರಿತಂತೆ ಕೆಲವರಲ್ಲಿ ಬೇಸರವಿದೆ. ಆದರೆ ಕೋವಿಡ್ 2 ನೇ ಅಲೆಯಲ್ಲಿ ಉಂಟಾದ ಸಾವು ಹಾಗೂ ನೋವುಗಳನ್ನು ನಾವು ಮರೆಯಬಾರದು. ಕೋವೀಡ್ ನಿಯಂತ್ರಣಕ್ಕಾಗಿ ಜನರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿತ್ತೇನೆ ಎಂದರು.

ಪರಿಶೀಲನೆ ವೇಳೆ ಉಪವಿಭಾಗಾಧಿಕಾರಿ ಮಂಜುನಾಥ್, ಕನಕಪುರ ತಹಶೀಲ್ದಾರ್ ವಿಶ್ವನಾಥ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here