ಜಿಂದಾಲ್ ಕಾರಖಾನೆ ಆವರಣದಲ್ಲಿ ಜಿಲ್ಲಾಡಳಿತದಿಂದ ಆಯೋಜನೆ ತುರ್ತುಸಂದರ್ಭದಲ್ಲಿನ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ ಅಣುಕು ಪ್ರದರ್ಶನ

0
116

ಬಳ್ಳಾರಿ, : ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜೆ.ಎಸ್.ಡಬ್ಲ್ಯೂ ಸಹಯೋಗದೊಂದಿಗೆ ತೋರಣಗಲ್ಲುವಿನಲ್ಲಿರುವ ಜಿಂದಾಲ್ ಕಾರಖಾನೆ ಆವರಣದಲ್ಲಿ ತುರ್ತು ಸಂದರ್ಭದಲ್ಲಿನ ಹೊರ ವಲಯದ (ಆಫ್-ಸೈಟ್) ಸುರಕ್ಷತಾ ಅಣಕು ಪ್ರದರ್ಶನ ಬುಧವಾರ ಜರುಗಿತು.
ಗ್ಯಾಸ್ ಹೋಲ್ಡರ್ ನಿಂದ ಕೋರೆಕ್ಸ್ ಅನಿಲ ಸೋರಿಕೆಯು ಕೆಲವು ಭಾಗಗಳಾದ ಜಿಂದಾಲ್ ವಿಮಾನ ನಿಲ್ದಾಣ, ವಿದ್ಯಾನಗರ ಟೌನ್ ಶಿಪ್ ಮತ್ತು ವಡ್ಡು ಗ್ರಾಮದ ಮೇಲೆ ಪರಿಣಾಮ ಬಿರುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಮುಂದಾಲೋಚನೆಯಿಂದ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಅಣಕು ಪ್ರದರ್ಶನವು ತುರ್ತು ಪರಿಸ್ಥಿತಿಯಲ್ಲಿ ಅಪಾಯಗಳು, ಸಂಪನ್ಮೂಲಗಳ ಕ್ರೋಢೀಕರಣ, ಸುರಕ್ಷಿತ ಸ್ಥಳಾಂತರಿಸುವಿಕೆ ಮತ್ತು ಪುನರ್ವಸತಿಗಳ ಬಗ್ಗೆ ಸಿಬ್ಬಂದಿಗಳಲ್ಲಿ ಹಾಗೂ ಸಮುದಾಯದಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಿತು.
ಈ ಅಣಕು ಪ್ರದರ್ಶನವನ್ನು ಅಗ್ನಿಶಾಮಕ, ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ,ಕಾರ್ಖಾನೆಗಳು ಮತ್ತು ಬಾಯ್ಲರ್, ಮಾಲಿನ್ಯ ನಿಯಂತ್ರಣ ಮಂಡಳಿ, ಪಶುಸಂಗೋಪನೆ ಇಲಾಖೆ, ನಾಗರಿಕ ರಕ್ಷಣಾ ಇಲಾಖೆ, ರೆಡ್ ಕ್ರಾಸ್, ಹೋಮ್ ಗಾರ್ಡ್, ವಡ್ಡು ಪಂಚಾಯತ್, ಜೆಎಸ್ಡಬ್ಲ್ಯೂ ಸ್ಟೀಲ್, ಎನರ್ಜಿ, ಸಿಮೆಂಟ್, ಇಸಿಪಿಎಲ್, ಎಸ್‍ಐಪಿ, ಜೆಎಸ್‍ಎಸ್‍ಎಲ್, ಬಿಟಿಪಿಎಸ್ ಮತ್ತು ಜಿಂದಾಲ್ ಸಂಜೀವನಿ ಆಸ್ಪತ್ರೆ ಈ ಅಣುಕು ಪ್ರದರ್ಶನ ಬೆಂಬಲಿಸಿವೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗಳಾದ ಎಸ್.ಎಸ್.ನಕುಲ್ ಅವರು ತುರ್ತು ಪರಿಸ್ಥಿತಿಗಳನ್ನು ಕಡಿಮೆ ಮಾಡುವ /ತಗ್ಗಿಸುವಲ್ಲಿ ಜೆಎಸ್ಡಬ್ಲ್ಯೂ ಸ್ಟೀಲ್ ಅಳವಡಿಸಿಕೊಂಡ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ಶ್ಲಾಘಿಸಿದರು.
ತುರ್ತು ಪರಿಸ್ಥಿತಿಗಾಗಿ ತಯಾರಿ ಮಾಡುವ ಪ್ರಾಮುಖ್ಯತೆ ಮತ್ತು ಅಪಾಯಕಾರಿ ಅನಿಲ ಸೋರಿಕೆಯನ್ನು ತಡೆಗಟ್ಟಲು ಮತ್ತು ಒಳಗೊಂಡಿರುವ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ವಿವರಿಸಿದರು. ಈ ಅಣಕು ಪ್ರದರ್ಶನದ ಪ್ರಕ್ರಿಯೆಯನ್ನು ಬೆಂಬಲಿಸಿದ ಎಲ್ಲಾ ಏಜೆನ್ಸಿಗಳು ಮತ್ತು ಇಲಾಖೆಗಳ ನಡುವಿನ ಸಂವಹನವನ್ನು ಅವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತ ರಮೇಶ್ ಕೊನರೆಡ್ಡಿ ಅವರು ತುರ್ತು ಸಂದರ್ಭದಲ್ಲಿಯ ಹೊರ ವಲಯದ (ಆಫ್-ಸೈಟ್) ಸುರಕ್ಷತಾ ಅಣಕು ಪ್ರದರ್ಶನ ಪೂರ್ವಾಭ್ಯಾಸವನ್ನು ಮಾಡುವುದು ತುಂಬ ವಿರಳ. ಆದರೆ ಅದು ನಮ್ಮಲ್ಲಿ ಜಿಲ್ಲಾಧಿಕಾರಿಗಳಾದ ಎಸ್.ಎಸ್.ನಕುಲ್ ಅವರ ನಿರ್ದೇಶನದ ಮೆರೆಗೆ
ಹೊರ ವಲಯದ (ಆಫ್-ಸೈಟ್) ಸುರಕ್ಷತಾ ಅಣಕು ಪ್ರದರ್ಶನ ಮಾಡಿರುವುದರಿಂದ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಿಬ್ಬಂದಿಗಳಲ್ಲಿ ಅರಿವು ಮೂಡಿಸುವುದು. ಹಾಗೂ ಹೊರ ವಲಯದ (ಆಫ್-ಸೈಟ್) ಸುರಕ್ಷತಾ ಅಣಕು ಪ್ರದರ್ಶನ ಮಾಡಿರುವುದು ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಜೆ.ಟಿ ಕಾರಖಾನೆಗಳ ನಿರ್ದೇಶಕ ರವೀಂದ್ರನಾಥ್ ರಾಥೋಡ್, ಜಿಲ್ಲಾ ವಿಪತ್ತು ಪರಿಣಿತ ಪರಮೇಶ, ಕಾರಖಾನೆಗಳ ನಿರ್ದೇಶಕ ಕೃಷ್ಣಪ್ಪ, ಜೆ.ಎಸ್.ಡಬ್ಲ್ಯೂನ ರಾಜಶೇಖರ್ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here