ಸಾರ್ವಜನಿಕರ ಸಂಪರ್ಕ ರಸ್ತೆ ಸಂಪೂರ್ಣ ಹಾಳು, ಡಾ.ಬಿ.ಅರ್.ಅಂಬೇಡ್ಕರ್ ದಲಿತ ಸಂಘದ ವತಿಯಿಂದ ಮನವಿ

0
381

ಕಂಪ್ಲಿ ಫೆ: 24: ಬೆಳಗೋಡು ಹಾಳ್ ಗ್ರಾಮದಿಂದ ಕಂಪ್ಲಿಗೆ ಹೋಗುವ ನಾಲ್ಕು ಕಿಲೋಮೀಟರ್ ಸಾರ್ವಜನಿಕ ಮುಖ್ಯರಸ್ತೆ 20 ವರ್ಷದಿಂದ ಸಂಪೂರ್ಣ ಹಾಳಾಗಿದ್ದು ಅದನ್ನು ಹೊಸದಾಗಿ ಡಾಂಬರೀಕರಣ ಮಾಡಿಕೊಡಬೇಕೆಂದು ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘದ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ.

ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘದ ಅಧ್ಯಕ್ಷರು ಕೆ. ರಾಮಕೃಷ್ಣ ಹಾಗೂ ಕಾರ್ಯದರ್ಶಿ ದೊಡ್ಡ ಬಸವರಾಜ್ ಅವರು ಮಾತನಾಡಿ ಬೆಳಗೊಡು ಹಾಳ್ ಗ್ರಾಮ ಸುಮಾರು 1500 ಎಕರೆ ಕಂದಾಯ ಜಮೀನು ಹೊಂದಿದ್ದು,ಪಿ ಜಮೀನಿನಲ್ಲಿ ಕಬ್ಬು, ಭತ್ತ, ಮೆಕ್ಕೆಜೋಳ. ಇನ್ನು ಇತರೆ ಬೆಳೆ ಕೃಷಿ ಸಂಬಂಧಿಸಿದ ಬೆಳೆಗಳನ್ನು ಬೆಳೆದಿದ್ದು. ಇಲ್ಲಿ ಬೆಳೆದಂತಹ ಕೃಷಿ ದವಸಧಾನ್ಯಗಳು ಮತ್ತು ಕಬ್ಬು ಬಾಳೆ ಕೃಷಿ ಸಂಬಂಧಿಸಿದ ವಸ್ತುಗಳನ್ನು ಸರಕು ಸಾಗಾಟ ಮಾಡುವ ಸಂದರ್ಭದಲ್ಲಿ ಅಂದರೆ ಮಳೆಗಾಲದಲ್ಲಿ. ಮಳೆಯ ಪ್ರಭಾವದಿಂದ ರಸ್ತೆಯಲ್ಲಿ ದೊಡ್ಡ ದೊಡ್ಡ ತಗ್ಗುಗಳಾಗಿ. ಬೆಳಗೊಡುಹಾಳ್ ಗ್ರಾಮದಿಂದ ಕಂಪ್ಲಿಗೆ ಹೋಗುವ ಮುಖ್ಯರಸ್ತೆ ಸಂಪೂರ್ಣ ಹಾಳಗಿರುತ್ತದೆ. ಅಲ್ಲದೆ ಬೆಳಗೊಡು ಹಾಳ್ ಗ್ರಾಮದ ಸುಮಾರು ಐದು ಸಾವಿರ ಜನಸಂಖ್ಯೆ ಹೊಂದಿದ್ದು ಜನರು ತಮ್ಮ ಮೂಲಸೌಕರ್ಯಗಳನ್ನು ಪಡೆಯಬೇಕಾದರೆ ವ್ಯಾಪಾರ ಮಾಡುವುದಕ್ಕೆ ಆಸ್ಪತ್ರೆ ತುರ್ತು ಸೇವೆಗಾಗಿ ಗರ್ಭಿಣಿ ಮಹಿಳೆಯರು ಆಸ್ಪತ್ರೆ ಚಿಕಿತ್ಸೆ ಪಡೆಯುವುದಕ್ಕೆ ಮತ್ತು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವುದಕ್ಕೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿರುವುದರಿಂದ. ಜನರಿಗೆ ಕಂಪ್ಲಿಗೆ ಹೋಗುವುದಕ್ಕೆ ತುಂಬಾ ಕಷ್ಟವಾಗಿರುತ್ತದೆ.

ಅದು ಅಲ್ಲದೆ 2004-2005 ರಲ್ಲಿ ಕುಡುತಿನಿ ಕೆಪಿಟಿಸಿಎಲ್ ಅವರು ಕೂಡ ಬೆಳಗೊಡು ಹಾಳ್ ಗ್ರಾಮದಿಂದ ಕಂಪ್ಲಿವರೆಗೆ ಅಂದರೆ ತಮ್ಮ ನಿಗಮಕ್ಕೆ ನೀರಿನ ಪೈಪ್ ಲೈನ್ ಗಳನ್ನು ಅಳವಡಿಸಿಕೊಂಡು ಹೋಗಿರುತ್ತಾರೆ. ಅವರು ಈ ಕಾಮಗಾರಿಯನ್ನು ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಬೆಳಗೊಡು ಹಾಳ್ ಗ್ರಾಮದಿಂದ ಕಂಪ್ಲಿಗೆ ಹೋಗುವ ರಸ್ತೆಯನ್ನು ಗ್ರಾಮದಲ್ಲಿ ಸುಮಾರು ಹದಿನೈದು ವರ್ಷಗಳ ಹಿಂದೆ ಗ್ರಾಮದ ಸಾರ್ವಜನಿಕರ ರಸ್ತೆ ಓಡಾಡುವುದಕ್ಕೆ ತುಂಬಾ ಚೆನ್ನಾಗಿರುತ್ತದೆ ಆದರೆ ಕೆಪಿಟಿಸಿಎಲ್ ಕಂಪನಿಯವರು ನೀರಿನ ಪೈಪ್ ಲೈನ್ ಕಾಮಗಾರಿ ಮಾಡುವ ಸಂದರ್ಭದಲ್ಲಿ ತಮ್ಮ ಕಂಪನಿಯ ವಾಹನಗಳಾದಂತ ಲಾರಿಗಳು ಜೆಸಿಬಿಗಳು ಟ್ರ್ಯಾಕ್ಟರ್ ಗಳು ಮತ್ತು ಭಾರಿ ಸರಕು ದಾಸ್ತಾನು ವಾಹನಗಳು ಸಂಚಾರ ಮಾಡಿರುವುದರಿಂದ ರಸ್ತೆಯು ಸಂಪೂರ್ಣವಾಗಿ ಹದೆಗಟ್ಟು ಹೋಗಿರುತ್ತದೆ.

ಈ ರೀತಿಯಾಗಿ ಬೆಳಗೊಡು ಹಾಳ್ ಗ್ರಾಮದಿಂದ ಕಂಪ್ಲಿಗೆ ಹೋಗುವ ಮುಖ್ಯರಸ್ತೆಯನ್ನು,ಡಾಂಬರಿಕರಣ ಮಾಡಿ ಸಾರ್ವಜನಿಕರ ಪರವಾಗಿ ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘವು ಮನವಿ ಹಾಗೂ ದೂರನ್ನು ಸಂಬಂಧಪಟ್ಟ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕುಡತಿನಿ ಕೆಪಿಟಿಸಿಎಲ್ ಅಭಿಯಂತರರು ಜಿಲ್ಲಾ ತಾಲೂಕು ಲೋಕಪಯೋಗಿ ಇಲಾಖೆ ಅಭಿಯಂತರರು ಇವರಿಗೆ ಮನವಿ ಪತ್ರ ನೀಡಿದರು.

ಒಂದು ವೇಳೆ ಈ ಮನವಿ ಪತ್ರವನ್ನು ನೀಡಿದ ನಂತರವೂ ಇದೇ ತರಹ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ಧೋರಣೆ ವಹಿಸಿದರೆ ಸಾರ್ವಜನಿಕರು ಮತ್ತು ಊರಿನ ಜನರು ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘದ ವತಿಯಿಂದ ಉಗ್ರವಾದ ಹೋರಾಟವನ್ನು ಮಾಡುತ್ತೇವೆ. ಅದು ಅಲ್ಲದೆ ಮುಂದಿನ ದಿನಗಳಲ್ಲಿ ಬೆಳಗೊಡು ಹಾಳ್ ಕಂಪ್ಲಿಯ ರಸ್ತೆ ಮಧ್ಯೆ ಸರ್ವಜನಿಕರಿಗೆ ಮತ್ತು ವಾಹನಗಳಿಗೆ ಅಪಘಾತಗಳು ಉಂಟಾದರೆ ನೀವು ಮತ್ತು ನಿಮ್ಮ ಇಲಾಖೆ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ ಮತ್ತು ಸಾರ್ವಜನಿಕರಿಗೆ ವಾಹನಗಳಿಗೆ ಪರಿಹಾರ ನಷ್ಟ ತುಂಬಿ ಕೊಡಬೇಕಾಗುತ್ತದೆ ಒಂದು ವೇಳೆ ನಿರ್ಲಕ್ಷ್ಯವಹಿಸಿದ್ದಾರೆ ನಾವು ಮುಂದಿನ ದಿನಗಳಲ್ಲಿ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಎಂದು ಈ ಮನವಿ ಪತ್ರದ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ದಲಿತ ಸಂಘದ ವತಿಯಿಂದ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘದ ಅಧ್ಯಕ್ಷರು ಕೆ.ರಾಮಕೃಷ್ಣ, ಕಾರ್ಯದರ್ಶಿ, ದೊಡ್ಡ ಬಸವರಾಜ್ ಕ್ಯಾ ಬುಜಿ ರಾಜ, ಜಿ.ತಿಪ್ಪೇರುದ್ರ, ಎಚ್.ರೇಣುಕಪ್ಪ, ಇನ್ನು ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here