ಅಂಬಿಗರ ಚೌಡಯ್ಯರ ಸಾಮಾಜಿಕ ಕ್ರಾಂತಿ ಎಲ್ಲರಿಗೂ ಮೂಡಲಿ ಬಿ.ಎ. ಜಗದೀಶ್

0
103

ಹಾಸನ ಜ.21:- ಶಿವ ಶರಣಅಂಬಿಗರ ಚೌಡಯ್ಯ ಅವರು 12ನೇ ಶತಮಾನದಲ್ಲಿ ಮೌಢ್ಯಕ್ಕೆ ವಿರುದ್ದ ಹೋರಾಡಿ ಸಾಮಾಜಿಕ ಕ್ರಾಂತಿಗೆ ಶ್ರಮಿಸಿದರಲ್ಲದೆ ಎಲ್ಲಾರಿಗೂ ಮಾದರಿಯಾಗಿದ್ದಾರೆ ಎಂದು ಉಪವಿಭಾಗಧಿಕಾರಿ ಬಿ.ಎಬಿ.ಎ. ಜಗದೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿಂದು ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಶ್ರೇಷ್ಠ ವಚನಕಾರ ರಾಗಿದ್ದ ಚೌಡಯ್ಯ ಅವರು ಸಮಾಜದಲ್ಲಿ ಮೌಢ್ಯಗಳ ವಿರುಧ್ದ ಜಾಗೃತಿ ಮೂಡುಸಿತ್ತಿದರು ಚೌಡಯ್ಯನವರಿಂದ ವಚನಗಳಸಾರ ಅರಿತು ಅಸಮಾನತೆ ವಿರುದ್ಧ ಹೋರಾಡಬೇಕು ಎಂದರು.
ಸಮಾಜಗಳಲ್ಲಿ ಒಂದು ಕ್ರಾಂತಿ ಯಾಗಬೇಕಾದರೆ ಅದರ ಹಿಂದೆ ಅನ್ಯಾಯ ಶೋಷಣೆ ಹಿನ್ನಲೆ ಇರುತ್ತದೆ ಮಹನೀಯರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ತಿಳಿಸಿದರು

ಸಮಾಜದ ಪ್ರಮುಖರಾದ ಬಿ.ಟಿ. ಗೋಪಾಲಕೃಷ್ಣ ಅವರು ಮಾತನಾಡಿ ಅಂಬಿಗರ ಚೌಡಯ್ಯನವರು 12 ನೇ ಶತಮಾನದ ಶೇಷ್ಠ ವಚನಕಾರರಾಗಿದ್ದಾರೆ ಬಸವಣ್ಣನವರ ಸರಳತೆಯನ್ನು ನೋಡಿ ಆಕರ್ಷಣೆಗೆ ಒಳಗಾಗಿ ಅವರೊಂದಿಗೆ ಸೇರಿ ಸಮಾಜದಲ್ಲಿ ಅಸಮಾನತೆ, ಶೋಷಣೆಗಳ ವಿರುದ್ದ ಹೋರಾಟ ನಡೆಸಿದರು ಎಂದರು.
ಅಂಬಿಗರ ಚೌಡಯ್ಯನವರು ಸುಮಾರು ಹತ್ತು ಸಾವಿರದಿಂದ 12 ಸಾವಿರ ವರೆಗೆ ವಚನಗಳನ್ನು ರಚಿಸಿದ್ದಾರೆ ಆದರೆ 337 ವಚನಗಳು ಮಾತ್ರ ಲಭ್ಯವಿವೆ ತಿಳಿಸಿದರು.
ಗಂಗಾಮತ ಸಮಾಜದ ಮುಖಂಡರಾದ ನಾಗರಾಜು ಅವರು ಮಾತನಾಡಿ ಕೋವಿಡ್ ಹಿನ್ನಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತದೆ ಅಂಬಿಗರ ಚೌಡಯ್ಯನವರ ವಚನಗಳನ್ನು ಅರಿತು ಅಳವಡಿಸಿ. ಬರೆದವರು ನಮ್ಮ ಸಮಾಜದವರೇ ಆಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್ , ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ,ಸ್ವಾತಂತ್ರ ಹೋರಾಟಗಾರರಾದ ಹೆಚ್ .ಎಮ್ ಶಿವಣ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸುದರ್ಶನ್ ,ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here