ಸೂಕ್ತ ಸಮಯದಲ್ಲಿ ಕೋವಿಡ್-19ರ ಮುನ್ನೆಚ್ಚರಿಕೆ ಡೋಸ್ ಸರ್ಕಾರದ ಅತ್ಯುತ್ತಮ ನಿರ್ದಾರ; ಡಾ. ಗೋಪಾಲ್ ರಾವ್.

0
402

ಸಂಡೂರು ಜ 10 : ಸೂಕ್ತ ಸಮಯದಲ್ಲಿ ಕೋವಿಡ್-19 ರ ಮುನ್ನೆಚ್ಚರಿಕೆ ಡೋಸ್ ನೀಡುವ ಅತ್ಯುತ್ತಮ ನಿರ್ದಾರ ಸರ್ಕಾರ ಕೈಗೊಂಡಿದೆ : ಡಾ.ಗೋಪಾಲ್ ರಾವ್,

ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಲಸಿಕಾಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಭಾರತ ಸರ್ಕಾರದ ಆದೇಶದಂತೆ ಇಂದು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ವಯಸ್ಸಿನ ಸಹ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡುವ ಮಹತ್ವದ ಕಾರ್ಯ ಹಮ್ಮಿಕೊಳ್ಳಲಾಗಿದೆ,

ಇದು ಭಾರತದ ಮಹತ್ವದ ಮೈಲಿಗಲ್ಲು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮೂರನೇ ಅಲೆ ಅಥವಾ ರೂಪಾಂತರಿ ಒಮಿಕ್ರಾನ್ ಅಲೆ ಶುರುವಾಗಿದ್ದು ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುತ್ತಿರುವುದು ಪತ್ರಿಕೆ, ಟಿವಿಯಲ್ಲಿ ನೋಡಿ ಆರೋಗ್ಯ ಕಾರ್ಯಕರ್ತರು ಹಾಗೇ ಮುಂಚೂಣಿ ಕಾರ್ಯಕರ್ತರು ಭಯದ ಬೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಕಾರಣ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದು ಸುಮಾರು ಹನ್ನೊಂದು ತಿಂಗಳು ಕಳೆದು ಹೋಗಿತ್ತು ಲಸಿಕೆಯ ರಕ್ಷಣೆಯ ಪ್ರಭಾವ ಆರರಿಂದ ಎಂಟು ತಿಂಗಳು ಮಾತ್ರ ಎಂದು ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದರು,

ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಅಥವಾ ಬೂಷ್ಟರ್ ಡೋಸ್ ಕೊಟ್ಟಿರುವುದು ಎಲ್ಲರಿಗೂ ಸಂತಸ ತಂದಿದೆ ಎಲ್ಲರೂ ಮತ್ತಷ್ಟು ಹುರುಪಿನಿಂದ ಕರ್ತವ್ಯ ನಿರ್ವಹಿಸುವ ಆಸಕ್ತಿ ಹೊಂದಿದ್ದಾರೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಕೇಂದ್ರ ಸರ್ಕಾರ ಮತ್ತು ಭಾರತ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ, ಸರ್ಕಾರವು ನಮ್ಮ ಆರೋಗ್ಯದ ಕಾಳಜಿಯನ್ನು ತೋರಿಸುತ್ತಿದೆ ಇದು ಎಲ್ಲರಿಗೂ ಸಂತಸ ತಂದಿದೆ, ಎಲ್ಲರೂ ಲಸಿಕೆ ಪಡೆಯಲಿದ್ದೇವೆ ಎಂದು ತಿಳಿಸಿದರು, ಹಾಗೆ ಅಸ್ವಸ್ಥತೆಯ ಹಿರಿಯ ನಾಗರೀಕರು ಇಂದು ಲಸಿಕೆ ಪಡೆಯಲು ಆಗಮಿಸುತ್ತಿಲ್ಲ ಹಾಗೆ ಅವರನ್ನು ಕರೆತರುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯುತ್ತಿದ್ದಾರೆ ನಾಳೆಯಿಂದ ಮನೆಬೇಟಿ ಮಾಡಿ ಅಸ್ವಸ್ಥತೆಯ ನಾಗರೀಕರಿಗೆ ಮನವೊಲಿಸಿ ಲಸಿಕೆ ನೀಡಲಾಗುವುದು, ಹಾಗೆ ಆರೋಗ್ಯ ಕಾರ್ಯಕರ್ತರು ಸಹಾ ಎಲ್ಲರೂ ತಮ್ಮ ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ ಹಾಗೇ ಕೋವಿಡ್ ಲಸಿಕಾಕರಣದಲ್ಲಿ ತೊಡಗಿಕೊಂಡಿದ್ದಾರೆ ಮಧ್ಯಾಹ್ನ ಎಲ್ಲರೂ ಲಸಿಕೆ ಪಡೆಯಲಿದ್ದಾರೆ ಎಂದು ತಿಳಿಸಿದರು,
ಕೋವಿಡ್ ಹೋರಾಟವನ್ನು ಮುಂದುವರೆಸಲಿದ್ದೇವೆ ಎಂದು ತಿಳಿಸಿದರು,

ಒಂಬತ್ತು ತಿಂಗಳ ಅಪೂರ್ಣ ಗೊಂಡವರಿಗೆ ಇಂದು ಲಸಿಕೆ ನೀಡುತ್ತಿಲ್ಲ ಅವರವರ ಕೋವಿಡ್ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಆಧಾರದ ಮೇಲೆ ಯಾವ ದಿನ ಲಸಿಕೆ ಪಡೆಯಬೇಕು ಎಂಬ ದಿನಾಂಕವನ್ನು ತಿಳಿಸಲಾಗಿದೆ ಎಂದರು,

ಈ ಸಂದರ್ಭದಲ್ಲಿ ಡಾ.ಗೋಪಾಲ್ ರಾವ್, ಡಾ.ದೀಪಾ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಣಾಧಿಕಾರಿ ಶಕೀಲ್ ಅಹಮದ್, ಪಾರ್ಮಸಿ ಅಧಿಕಾರಿ ಮಂಜುನಾಥ್, ಶುಶ್ರೂಷಾಣಾಧಿಕಾರಿ ಮಮತಾ, ಲ್ಯಾಬ್ ತಂತ್ರಜ್ಞ ವೆಂಕಟೇಶ ನಾಯ್ಕ, ಇಮ್ರಾನ್, ಎನ್.ಸಿ.ಡಿ ರೋಜಾ, ಮಾಬುಸಾಬು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here