ಜೀವ ಸ್ಪಂದನ ಸೇವಾ ಸಂಸ್ಥೆ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ವತಿಯಿಂದ ನೇತಾಜಿ ಜಯಂತಿ

0
163

ಸಿಂಧನೂರಿನ ಬೇತಲ್ ಮಕ್ಕಳ ಅನಾಥಾಶ್ರಮದಲ್ಲಿ ಜೀವ ಸ್ಪಂದನ ಸೇವಾ ಸಂಸ್ಥೆ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತೋತ್ಸವ ಆಚರಣೆ ಮಾಡಿ, ಟ್ರಸ್ಟ್ ವತಿಯಿಂದ 5 ಕುರ್ಚಿಗಳನ್ನು ದೇಣಿಗೆ ನೀಡಿದರು. ಮಕ್ಕಳಿಗೆ ಸಿಹಿ ಹಂಚಿ ಘೋಷವಾಕ್ಯ ಕೂಗಿಸಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಸದಸ್ಯ ಖಾಜಾ ಹುಸೇನ್, ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಕುಮಾರ್ ಸ್ವಾಮಿ ಕಂಬಳಿಮಠ, ಯುವ ಮುಖಂಡ ಹನುಮೇಶ ಜಾಗೀರದಾರ, ಆಶ್ರಮದ ಮುಖ್ಯಸ್ಥ ಜೊಸೆಫ್ ಕ್ರಿಸ್ಟೋಫರ್ ಸೇರಿದಂತೆ ಮಕ್ಕಳಿದ್ದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here