ಪ್ರತಿ ಆರು ತಿಂಗಳಿಗೊಮ್ಮೆ ಹೃದಯದ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ ಡಾ. ಗೋಪಾಲ್ ರಾವ್ ಸಲಹೆ,

0
184

ಸಂಡೂರು:ಸೆ:30:- ಸಂಡೂರು ತಾಲೂಕು ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಗೋಪಾಲ್ ರಾವ್ ಅವರು ವಿಶ್ವದಲ್ಲಿ 18 ಬಿಲಿಯನ್ ಗಿಂತ ಹೆಚ್ಚು ಜನರು ಹೃದಯ ರೋಗಗಳಿಂದ ಬಳಲುತ್ತಿದ್ದಾರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 40 ವರ್ಷಕ್ಕಿಂತ ಕೆಳ ಪಟ್ಟ ವಯಸ್ಸಿನವರು ಸುಮಾರು 17.9 ದಶ ಲಕ್ಷ ಜನರು ಪ್ರತಿ ವರ್ಷ ಹೃದಯ ಸಂಬಂಧಿಸಿದ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ, ಆರೋಗ್ಯ ಕರ ಜೀವನ ಶೈಲಿಯನ್ನು ಕೂಡಿಸಿಕೊಳ್ಳದಿದ್ದರೆ ಹೃದಯಾಘಾತ ಸಂಭವ ಖಚಿತ ಎಂದು ಈ ಸಂದರ್ಭದಲ್ಲಿ ತಿಳಿಸಿದರು,

ಇದೇ ಸಂದರ್ಭದಲ್ಲಿ ಡಾ.ವೆಂಕಟೇಶ ರೆಡ್ಡಿ ಅವರು ಮಾತನಾಡಿ ಯುವಕರಲ್ಲಿ ದೈಹಿಕ ಚಟುವಟಿಕೆ ಇಲ್ಲದಿರುವುದು,ತಂಬಾಕು ಉತ್ಪನ್ನಗಳನ್ನು ಸೇವನೆ, ಧೂಮಪಾನ, ಮದ್ಯಪಾನ, ಅನಾರೋಗ್ಯಕರ ಆಹಾರಗಳ ಸೇವೆನೆ ಮತ್ತು ಬೊಜ್ಜು ದೇಹ ಇರುವವರಿಗೆ, ಮಧುಮೇಹ ರೋಗಿಗಳಿಗೆ, ಅಧಿಕ ರಕ್ತದೊತ್ತಡ ಇರುವವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ, ಇವೆಲ್ಲದರ ಬಗ್ಗೆ ಜಾಗೃತಿ ಮೂಡಿಸುವುದೇ ಹೃದಯ ದಿನ ಆಚರಣೆಯ ಉದ್ದೇಶವಾಗಿದೆ, ಹಾಗೆ ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಬಿಡುವುದು, ಉತ್ತಮ ಪೌಷ್ಟಿಕ ಆಹಾರ ಸೇವಿಸುವುದರೊಂದಿಗೆ, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ 30 ನಿಮಿಷ ಬಿರುಸಿನ ನಡಿಗೆ, ದ್ಯಾನ, ಪ್ರಾಣಾಯಾಮ ಮಾಡುವುದರಿಂದ ರಕ್ತದೊತ್ತಡ, ಮಧುಮೇಹವನ್ನು ಹತೋಟಿಯಲ್ಲಿ ಇಟ್ಟುಕೊಂಡು ಆರೋಗ್ಯವಂತರಾಗಿರಬಹುದು
ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ 59 ಜನರ ಹೃದಯದ ಆರೋಗ್ಯ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ರ್ಯಾಂಡಮ್ ಬ್ಲಡ್ ಸುಗರ್ ಪರೀಕ್ಷೆ ಮಾಡಲಾಯಿತು, ಇದರಲ್ಲಿ 10 ಜನರು ಮಧುಮೇಹ, 7 ಜನರಗೆ ಅಧಿಕ ರಕ್ತದೊತ್ತಡ ಇರುವವರು ಪತ್ತೆಯಾದರು, ಇವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು, ಹಾಗೆ 33 ಜನರ ದಂತ ಪರೀಕ್ಷೆಯೂ ಮಾಡಲಾಯಿತು,

ಈ ಸಂದರ್ಭದಲ್ಲಿ ಡಾ.ಗೋಪಾಲ್ ರಾವ್, ಡಾ.ವೆಂಕಟೇಶ ರೆಡ್ಡಿ, ಡಾ.ದೀಪಾ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಎನ್.ಸಿ.ಡಿ ಟೀಮ್ ನ ಮಾರೇಶ್, ಇಮ್ರಾನ್, ವೆಂಕಪ್ಪ, ರೋಜಾ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here