ದಮನಿತರ,ಅನಾಥ ಮಕ್ಕಳ, ಮಂಗಳಮುಖಿಯರ ಸಮಸ್ಯೆಗೆ ಸ್ವಂದಿಸಲು ಜಿಲ್ಲಾಧಿಕಾರಿ ಸೂಚನೆ

0
123

ಯಾದಗಿರಿ: ಜುಲೈ, 02.20-21 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆಯಡಿ ಬಳಕೆಯಾದ ಅನುದಾನದಲ್ಲಿ ಉದ್ಯೋಗಿನಿ, ಸಮೃದ್ದಿ ಯೋಜನೆಯಡಿ ಆಯ್ಕೆ ಸಮಿತಿ ಸಭೆ ಹಾಗೂ ದಮನಿತ ಮಹಿಳೆಯರ ಜಿಲ್ಲಾ ಸಲಹ ಸಮಿತಿ ಕೋಶ ಹಾಗೂ ಮಂಗಳಮುಖಿಯರ ಸಮನ್ವಯ ಸಭೆಯು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಕಚೇರಿಯ ಸಭಾಂಗಣದಲ್ಲಿ ಜರುಗಿತು.
ಈ ವೇಳೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್ ಮಾತನಾಡಿ, ದಮನಿತರ , ಅನಾಥ ಮಕ್ಕಳ, ಮಂಗಳ ಮುಖಿಯರ ಸಮಸ್ಯೆಗೆ ಸ್ವಂದಿಸಿ ಸರ್ಕಾರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ ನಿಂದ 2 ಕುಟುಂಬದ ಪೋಷಕರು ಮರಣ ಹೊಂದಿದ್ದು, ಆ ಕುಟುಂಬದ ನಾಲ್ಕು ಮಕ್ಕಳು ಅನಾಥರಾಗಿದ್ದಾರೆ.ಅವರಿಗೆ ಪ್ರತಿ ತಿಂಗಳಿಗೆ 3500 ರೂಪಾಯಿಗಳನ್ನು ಮಕ್ಕಳ ಸಮಗ್ರ ರಕ್ಷಣೆ ಪಾಲನೆಗಾಗಿ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದರೆ “ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿಯಲ್ಲಿ ನೀಡುವುದಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಲ್ಲಣ್ಣ ದೇಸಾಯಿ ಸಭೆಯಲ್ಲಿ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅನುಮೋದನೆ ನೀಡಿದರು.

ಸಭೆಯಲ್ಲಿ ಫಲಾನುಭವಿಗಳನ್ನು (ಖಂಓಆAಒIZAಖಿIಔಓ ) ಯಾದೃಚ್ಚೀಕರಣ ಮುಖಾಂತರ ಎಲ್ಲರಿಗೂ ಸಮಾನವಕಾಶ ಕೊಡುವುದರ ಮುಖಾಂತರ ಆಯ್ಕೆ ಮಾಡಲಾಯಿತು.

ಉದ್ಯೋಗಿನಿ ಯೋಜನೆಯಡಿಯಲ್ಲಿ ಜಿಲ್ಲೆಗೆ ಭೌತಿಕ ಗುರಿ 33, ಆರ್ಥಿಕ 49.75 ಲಕ್ಷಗಳು ನಿಗದಿಯಾಗಿದ್ದು, ಅದರಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಗೆ 09, ಆರ್ಥಿಕ 13.57 ಲಕ್ಷ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಗೆ ಭೌತಿಕ 24, ಆರ್ಥಿಕ 36.18 ಲಕ್ಷ ನಿಗದಿಯಾಗಿದೆ. ಅದರಂತೆ ವಿಧಾನ ಸಭಾ ಕ್ಷೇತ್ರವಾರು ಗುರಿಯನ್ನು ಹಂಚಿಕೆ ಮಾಡಿದರು.

ಸಮೃದ್ದಿ ಯೋಜನೆಯ ಪರಿಶಿಷ್ಟ ಜಾತಿ ಉಪಯೋಜನೆಯಡಿ ಪ.ಜಾ ಮತ್ತು ಪ.ಪಂಗಡ ದ ಮಹಿಳಾ ಬೀದಿ- ಬದಿ ವ್ಯಾಪಾರಿಗಳಿಗೆ ನೇರವಾಗಿ ತಲಾ 10 ಸಾವಿರ ಸಹಾಯಧನ ಸೌಲಭ್ಯ ಒದಗಿಸಿ ಕೊಡಲು ಜಿಲ್ಲೆಗೆ ಭೌತಿಕ ಗುರಿ- 26 ಮತ್ತು ಪ.ಪಂಗಡಕ್ಕೆ ಭೌತಿಕ 338 ನಿಗದಿಯಾಗಿದ್ದು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿದರು.

ಕರ್ನಾಟಕ ರಾಜ್ಯ ಟ್ರಾನ್ಸ್ ಜೆಂಡರ್ಸ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅವರಿಂದ ಮೂಲ ಮಾಹಿತಿ ಪಡೆದು , ದಮನಿತ ಮಹಿಳೆಯರ ಜೀವನಮಟ್ಟವನ್ನು ಸಮಗ್ರವಾಗಿ ಸುಧಾರಿಸಲು ಅವರಿಗೆ ಇಲಾಖೆಗಳ ಯೋಜನೆಯ ಸೇವೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪ್ರಭಾಕರ್ ಎಸ್.ಕವಿತಾಳ, ನಗರಸಭೆ ಆಯುಕ್ತ ಭೀಮಣ್ಣನಾಯಕ, ಸಮಾಜ ಕಲ್ಯಾಣ ಅಧಿಕಾರಿ ರಾಮಚಂದ್ರಗೊಳಾ ಮತ್ತು ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here