ಬೇಜವಾಬ್ದಾರಿ ಅಧಿಕಾರಿಗಳಿಂದ ಸೇವೆ: ಪಡೆಯಲು ನಮಗೆ ನಾಚಿಕೆಯಾಗುತ್ತದೆ.

0
478

ವಿಜಯನಗರ: ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬೀದಿ ದೀಪಗಳು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಉರಿಯುತ್ತಿವೆ.ಇದರಿಂದ ವಿದ್ಯುತ್ ಸುಖಾ ಸುಮ್ಮನೆ ವ್ಯರ್ಥವಾಗಿ ಉರಿಯುವುದರಿಂದ ಯಾರಿಗೂ ಪ್ರಯೋಜನವಿಲ್ಲ ಹಾಗಾಗಿ ವಿದ್ಯುತ್ ಹಗಲು ವೇಳೆ ಉರಿಯದಂತೆ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿಗೆ ಗ್ರಾಮ ಸ್ವರಾಜ್ಯ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಾರ್ವಜನಿಕರು ಸೇರಿ ಹಗಲು ವೇಳೆ ಬಲ್ಪ್ ಗಳು ಬೆಳಗದಂತೆ ಕ್ರಮ ಕೈಗೊಳ್ಳಲು ಲಿಖಿತವಾಗಿ ಅನೇಕ ಸಲ ಮನವಿ ಮಾಡಿಕೊಂಡಿದ್ದರು.

ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಮನವಿ ಸ್ವೀಕರಿಸಿ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮಕೈಗೊಳ್ಳಲು ಮುಂದಾಗದೆ ನಿರ್ಲಕ್ಷ್ಯ ವಹಿಸುವುದನ್ನು ನೋಡಿದ ಸಾರ್ವಜನಿಕರು ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಸೇವೆ ಪಡೆಯಲು ನಮಗೆ ನಾಚಿಕೆಯಾಗುತ್ತದೆ.ಎಂದು ಹೆಸರು ಹೇಳಲು ಹಿಚ್ಚಿಸದ ವ್ಯಕ್ತಿಯೊರ್ವರು ಪತ್ರಿಕೆ ಜೊತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು ಆದರೆ ಏನೇ ಆಗಲೀ ಸಾರ್ವಜನಿಕರ ಮನವಿಗೆ ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಸ್ಪಂದಿಸೋದನ್ನ ಕಲಿಬೇಕು

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here